Ajay Devagn, Kajol: ಲವ್​ ಆಗಿದೆ ಎಂದು ತಿಳಿದಾಗ ಬೇರೆಯವ್ರ ಜೊತೆ ಡೇಟಿಂಗ್​ನಲ್ಲಿದ್ವಿ ಎಂದ ನಟ!

By Suvarna News  |  First Published Apr 3, 2023, 12:38 PM IST

ಅಜಯ್ ದೇವಗನ್​ ಅವರು ಇಂದು ತಮ್ಮ 54ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಕಾಜೋಲ್​ ಮತ್ತು ತಮ್ಮ ಲವ್​ ಸ್ಟೋರಿಯ ಕುರಿತು ಮಾತನಾಡಿದ್ದಾರೆ.
 


54ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅಜಯ್​, ನಟಿ ಕಾಜೋಲ್​ ಜೊತೆಗಿನ ತಮ್ಮ ಲವ್​ಸ್ಟೋರಿ ಶೇರ್​ ಮಾಡಿಕೊಂಡಿದ್ದಾರೆ. 1999ರಲ್ಲಿ ಈ ಕ್ಯೂಟ್​ ಜೋಡಿ ಸತಿ-ಪತಿಗಾಗಿದ್ದು, 23 ವರ್ಷಗಳ ಖುಷಿಯ ಸಂಸಾರಿಕ ಜೀವನ ನಡೆಸುತ್ತಿದ್ದಾರೆ. ಹಲವು ತಾರಾ ಜೋಡಿಗಳು ಮದುವೆಯಾಗಿ ಕೆಲ ವರ್ಷಗಳಲ್ಲಿಯೇ ಹಂಗಾಮಾ ಸೃಷ್ಟಿಸಿಕೊಂಡು ಬೇರೆಯಾಗುತ್ತಿರುವ ನಡುವೆ ಅಜಯ್​ ಮತ್ತು ಕಾಜೋಲ್​ ದಂಪತಿ ಸುಮಾರು ಎರಡೂವರೆ ದಶಕಗಳಿಂದ ಒಟ್ಟಿಗೇ ಸುಖಿ ಸಂಸಾರ ನಡೆಸುತ್ತಿದ್ದಾರೆ. 1975 ಆಗಸ್ಟ್​ 5ರಂದು ಜನಿಸಿರುವ ಕಾಜೋಲ್​ ಅವರಿಗೆ ಈಗ 47 ವರ್ಷ ಪೂರ್ಣಗೊಂಡಿದೆ. 23 ವರ್ಷಗಳ ಈ ದಾಂಪತ್ಯ ಜೀವನದಲ್ಲಿ  ಒಬ್ಬ ಮಗ ಮತ್ತು ಮಗಳು ಇದ್ದಾರೆ. ಮಗನ ಹೆಸರು ಯುಗ್, ಮಗಳ ಹೆಸರು ನ್ಯಾಸಾ. ಮಾರ್ಚ್ 30 ರಂದು ಬಿಡುಗಡೆಯಾದ ಅವರ ಹೊಸ ಚಿತ್ರ 'ಭೋಲಾ' ಕಾರಣದಿಂದಾಗಿ ಅಜಯ್ ದೇವಗನ್ ಈ ದಿನಗಳಲ್ಲಿ ಸುದ್ದಿಯಲ್ಲಿ ಇರುವ ನಡುವೆಯೇ ತಮ್ಮ ಮತ್ತು ಕಾಜೋಲ್​ ಲವ್​ ಸ್ಟೋರಿ ಕುರಿತು ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ ಇವರದ್ದೇನೂ ಲವ್​ ಆ್ಯಟ್​ ಫಸ್ಟ್​ ಸೈಟ್​ ಅಲ್ವಂತೆ. ಹಾಗೆಂದು ಅಜಯ್​ ದೇವಗನ್​ ಹೇಳಿದ್ದಾರೆ.  ನಮ್ಮದು ಮೊದಲ ನೋಟದಲ್ಲೇ ಪ್ರೀತಿಯೇನಲ್ಲ. 'ಇಷ್ಕ್', 'ಪ್ಯಾರ್ ತೋ ಹೋನಾ ಹಿ ಥಾ', 'ರಾಜು ಚಾಚಾ' ಮತ್ತು 'ದಿಲ್ ಕ್ಯಾ ಕರೇ' ಚಿತ್ರಗಳಲ್ಲಿ ಒಟ್ಟಿಗೇ ಕೆಲಸ ಮಾಡಿದರೂ ಪ್ರೀತಿಯೇನೂ ಹುಟ್ಟಿರಲಿಲ್ಲ. ಆದರೆ ನಮ್ಮ ಮಧ್ಯೆ ಪ್ರೀತಿ ಇದೆ ಎಂದು ತಿಳಿದದ್ದು 'ಹಲ್​ಚಲ್​' ಚಿತ್ರದ ಸೆಟ್​ನಲ್ಲಿ (Hulchul Set) ಎಂದಿದ್ದಾರೆ ಅಜಯ್​.  ಇಬ್ಬರೂ ಮೊದಲ ಬಾರಿಗೆ 'ಹಲ್ಚಲ್' (1995) ಚಿತ್ರದ ಸೆಟ್‌ನಲ್ಲಿ ಭೇಟಿಯಾದರು. ಆಗ ಚಿತ್ರದ ಕಥೆಯ ಬಗ್ಗೆ ಇಬ್ಬರೂ ಡಿಸ್​ಕಸ್​ ಮಾಡುತ್ತಿದ್ದಾಗ ಲವ್​ ಆಯಿತಂತೆ. ಆದರೆ ಕುತೂಹಲದ ಸಂಗತಿ ಎಂದರೆ ಈ ಸಮಯದಲ್ಲಿ  ಇಬ್ಬರೂ ಬೇರೊಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದರಂತೆ!  ಹಲ್​ಚಲ್​ ಚಿತ್ರದ ಸೆಟ್​ನಲ್ಲಿ ತುಂಬಾ ಡಿಸ್​ಕಷನ್​ ಮಾಡುತ್ತಾ ಒಟ್ಟಿಗೆ ಕಳೆದಾಗಲೇ ನಮ್ಮ ನಡುವೆ ಪ್ರೀತಿ ಹುಟ್ಟಿದ್ದು ತಿಳಿಯಿತು. ಆಗ ಡೇಟಿಂಗ್​ ಮರೆತು  ಹೃದಯ ಮಾತನ್ನು ಕೇಳಿದ್ವಿ ಎಂದಿದ್ದಾರೆ ಅಜಯ್​.

Tap to resize

Latest Videos

ಅಜಯ್​ ದೇವಗನ್ ಈ ಮೂವಿ​ ರಿಜೆಕ್ಟ್​ ಮಾಡಿದ್ರು, ಶಾರುಖ್​ ಸೂಪರ್​ಸ್ಟಾರ್​ ಆದ್ರು!

ಆರಂಭದಲ್ಲಿ,  ಕಾಜೋಲ್ (Kajol) ಅವರಿಗೆ ಅಜಯ್ ಅಷ್ಟೇನೂ ಇಷ್ಟವಾಗಿರಲಿಲ್ಲವಂತೆ. ಇದಕ್ಕೆ  ಕಾರಣ, ಅವರು ತುಂಬಾ ಕಡಿಮೆ ಮಾತನಾಡುತ್ತಿದ್ದರು ಎನ್ನುವುದಕ್ಕೆ. ಇದನ್ನು ನೋಡಿ ನನಗೆ  ವಿಚಿತ್ರವೆನಿಸಿತು. ಅವನು ಒಂದು ಕಡೆ ಒಬ್ಬಂಟಿಯಾಗಿ ಕುಳಿತುಕೊಳ್ಳಲು ಇಷ್ಟಪಡುತ್ತಿದ್ದ. ಆದರೆ ನಿಧಾನವಾಗಿ ನಮ್ಮಿಬ್ಬರ ನಡುವೆ ಸಂಭಾಷಣೆ ಪ್ರಾರಂಭವಾಯಿತು, ಅದು ಯಾವಾಗ ಸ್ನೇಹಕ್ಕೆ ತಿರುಗಿತು ಎಂದು ತಿಳಿಯಲೇ ಇಲ್ಲ ಎಂದಿದ್ದಾರೆ ಕಾಜೋಲ್​. ಅಂದಹಾಗೆ ಈ ಜೋಡಿ  ಅಂತಿಮವಾಗಿ,  999 ರಲ್ಲಿ ವಿವಾಹವಾಯಿತು. 

ಸ್ವಲ್ಪ ಸಮಯದ ನಂತರ ಕಾಜೋಲ್ ಜೀವನದಲ್ಲಿ ಸೆಟಲ್ ಆಗಲು ಬಯಸಿದ್ದರು, ಆದ್ದರಿಂದ ಮದುವೆಯಾಗಲು ನಿರ್ಧರಿಸಿದರು, ಆದರೆ ಆಗ ಅವರ ವಯಸ್ಸು ಇನ್ನೂ 25 ಆಗಿತ್ತು. ಇಷ್ಟು ಬೇಗ ಮಗಳಿಗೆ ಮದುವೆ ಮಾಡಲು ಕಾಜೋಲ್​ ತಂದೆಯವರಿಗೆ ಇಷ್ಟವಿರಲಿಲ್ಲವಂತೆ. ಮಗಳು ತನ್ನ ವೃತ್ತಿಜೀವನದತ್ತ ಗಮನ ಹರಿಸಬೇಕೆಂದು ತಂದೆ ಬಯಸಿದ್ದರು, ಆದರೆ ತಾಯಿ ತನುಜಾ ಮಗಳ ಪರವಾಗಿದ್ದರು, ಇದರಿಂದಾಗಿ ಅಜಯ್ ದೇವಗನ್ ಅವರ ಮದುವೆ ಸಾಧ್ಯವಾಯಿತು. ಇಂದು ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಮಗನ ಹೆಸರು ಯುಗ್ (Yug Devgan), ಮಗಳ ಹೆಸರು ನ್ಯಾಸಾ (Nysa Devgan).

Neetu Shetty: 'ಮದುವೆ ವಿಡಿಯೋ' ಶೇರ್​ ಮಾಡಿ ಅಭಿಮಾನಿಗಳ ತಬ್ಬಿಬ್ಬು ಮಾಡಿದ ನಟಿ

ಸದ್ಯ  'ಭೋಲಾ' (Bhola) ಚಿತ್ರದ ಬಿಜಿಯಲ್ಲಿದ್ದಾರೆ ಅಜಯ್​.  ಚಿತ್ರವು ಮೊದಲ ದಿನ 11.20 ಕೋಟಿ ರೂ ಕಲೆಕ್ಷನ್ ಮಾಡಿದ್ದರೆ, ಚಿತ್ರವು ಎರಡನೇ ದಿನ ರೂ 7.40 ಕೋಟಿ ಗಳಿಸಿದೆ. ಮೊದಲ ಎರಡು ದಿನದಲ್ಲಿ ಚಿತ್ರ 18.60 ಕೋಟಿ ಕಲೆಕ್ಷನ್ ಮಾಡಿದೆ. ಇಂದು ಏಪ್ರಿಲ್ 2 ರಂದು ಅಜಯ್ ದೇವಗನ್ 54 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮುಂದೆ ಅವರು 'ಮೈದಾನ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

click me!