ಆನಂದ್ ಮಹೀಂದ್ರಾಗೆ 'ನಾಟು ನಾಟು..' ಡಾನ್ಸ್ ಹೇಳಿಕೊಟ್ಟ ತೆಲುಗು ಸ್ಟಾರ್ ರಾಮ್ ಚರಣ್; ವಿಡಿಯೋ ವೈರಲ್

By Shruthi Krishna  |  First Published Feb 12, 2023, 11:40 AM IST

ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾಗೆ ಆರ್ ಆರ್ ಆರ್ ಸಿನಿಮಾದ 'ನಾಟು ನಾಟು..' ಡಾನ್ಸ್ ಅನ್ನು ತೆಲುಗು ಸ್ಟಾರ್ ರಾಮ್ ಚರಣ್ ಹೇಳಿಕೊಟ್ಟಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಬಂದ ಆರ್ ಆರ್ ಆರ್ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ನಾಟು ನಾಟು...ಹಾಡು ಮತ್ತು ಸ್ಟೆಪ್ ಎಲ್ಲರ ಹೃದಯ ಗೆದ್ದಿದೆ. ಈ ಹಾಡಿಗೆ ಹೆಜ್ಜೆ ಹಾಕದವರೇ ಇಲ್ಲ. ಅನೇಕರು ನಾಟು ನಾಟು... ಎಂದು ಹೆಜ್ಜೆ ಹಾಕಿ ಸಂಭ್ರಮಿಸುತ್ತಿದ್ದಾರೆ. ಇದೀಗ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಕೂಡ ನಾಟು ನಾಟು ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಅದು ಆರ್ ಆರ್ ಆರ್ ಸ್ಟಾರ್ ರಾಮ್ ಚರಣ್ ಅವರೇ ಹೇಳಿಕೊಟ್ಟಿರುವುದು ವಿಶೇಷ. ಹೌದು ಆನಂದ್ ಮಹೀಂದ್ರಾ ಅವರಿಗೆ ತೆಲುಗು ಸ್ಟಾರ್ ರಾಮ್ ಚರಣ್ ನಾಟು ನಾಟು ಸ್ಟೆಪ್ ಹೇಳಿಕೊಟ್ಟಿದ್ದಾರೆ. ಆನಂದ್ ಮಹೀಂದ್ರಾ ಅವರು ಅದ್ಬುತವಾಗಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಅಷ್ಟಕ್ಕೂ ಇಬ್ಬರೂ ಖ್ಯಾತ ವ್ಯಕ್ತಿಗಳು ಭೇಟಿಯಾಗಿದ್ದು ಎಲ್ಲಿ ಅಂತೀರಾ? ಇಬ್ಬರೂ ಹೈದರಾಬಾದ್ ನಲ್ಲಿ ಭೇಟಿಯಾಗಿದ್ದಾರೆ. ಈವೆಂಟ್ ಒಂದರಲ್ಲಿ ಭಾಗಿಯಾಗಿದ್ದ ರಾಮ್ ಚರಣ್ ಮತ್ತು ಆನಂದ್ ಮಹೀಂದ್ರಾ ಇಬ್ಬರೂ ಉತ್ತಮ ಸಮಯ ಕಳೆದಿದ್ದಾರೆ. ಆಗ ನಾಟು ನಾಟು ಡಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ಸ್ವತಃ ಆನಂದ್ ಮಹೀಂದ್ರಾ ಅವರೇ ಶೇರ್ ಮಾಡಿದ್ದಾರೆ. ವಿಡಿಯೋ ಹಂಚಿಕೊಂಡು ರಾಮ್ ಚರಣ್ ಜೊತೆ ನಾಟು ನಾಟು ಹಾಡಿನ ಬೇಸಿಕ್ ಸ್ಟೆಪ್ ಕಲಿತೆ. ಧನ್ಯವಾದಗಳು ಮತ್ತುಆಸ್ಕರ್ ಗೆ ಶಭವಾಗಲಿ ನನ್ನ ಗೆಳೆಯ' ಎಂದು ಹೇಳಿದ್ದಾರೆ. 

ಕುರ್ಚಿಯಿಂದ ಎದ್ದು ಕುಣಿಬೇಕು ಎನಿಸುತ್ತಿದೆ; ಹಾಲಿವುಡ್ ದಿಗ್ಗಜ ಸ್ಪೀಲ್ಬರ್ಗ್ ಮಾತಿಗೆ ರಾಜಮೌಳಿ ಫುಲ್ ಖುಷ್

Tap to resize

Latest Videos

ಆನಂದ್ ಮಹೀಂದ್ರಾ ಅವರ ಟ್ವೀಟ್‌ಗೆ ರಾಮ್ ಚರಣ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 'ಆನಂದ್ ಮಹೀಂದ್ರಾ ಅವರೇ ನೀವು ನನಗಿಂತ ವೇಗವಾಗಿ ಡಾನ್ಸ್ ಮಾಡುತ್ತೀರಿ. ಅದ್ಭುತವಾದ ಫನ್ ಕ್ಷಣವಾಗಿತ್ತು. ಆರ್ ಆರ್ ಆರ್ ತಂಡಕ್ಕೆ ಶುಭಕೋರಿದ್ದಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ.  ಇಬ್ಬರ ಮಾತುಕತೆ, ಡಾನ್ಸ್ ವಿಡಿಯೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Well apart from the race, one real bonus at the was getting lessons from on the basic steps. Thank you and good luck at the Oscars, my friend! pic.twitter.com/YUWTcCvCdw

— anand mahindra (@anandmahindra)

ರಿಹಾನ್ನಾ, ಲೇಡಿ ಗಾಗಾ ಸೇರಿ 4 ಹಾಡುಗಳ ಜೊತೆ ನಾಟು..ನಾಟು..ಸ್ಪರ್ಧೆ; ಆಸ್ಕರ್ ರೇಸ್‌ನಲ್ಲಿವೆ 2 ಸಾಕ್ಷ್ಯಚಿತ್ರ

RRR ಬಗ್ಗೆ

ಆರ್ ಆರ್ ಆರ್ ಸಿನಿಮಾ ಸದ್ಯ ಅಂತಾರಾಷ್ಟ್ರೀಯ ಮಾಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಗೆದ್ದು ಬೀಗುತ್ತಿರುವ ಆರ್ ಆರ್ ಆರ್ ಈಗ ಆಸ್ಕರ್ ಮೇಲೆ ಕಣ್ಣಿದೆ. ಬ್ಲಾಕ್‌ಬಸ್ಟರ್‌ ಆರ್‌ಆರ್‌ಆರ್‌ ಚಿತ್ರದಲ್ಲಿ ಜೂನಿಯರ್ ಮತ್ತು ರಾಮ್ ಚರಣ್ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಮತ್ತು ಅಲಿಯಾ ಭಟ್ ಕೂಡ ನಟಿಸಿದ್ದಾರೆ. ಸದ್ಯ ಆಸ್ಕರ್ ಅಂಗಳದಲ್ಲಿರುವ ಆರ್ ಆರ್ ಆರ್ ಚಿತ್ರದ ‘ನಾಟು ನಾಟು..' ಹಾಡು  ನಾಮಿನೇಷನ್ ಆಗಿದೆ. 95ನೇ ಅಕಾಡೆಮಿ ಅವಾರ್ಡ್​ ಕಾರ್ಯಕ್ರಮ ಮಾರ್ಚ್​ 12ರಂದು ಲಾಸ್ ಏಂಜಲೀಸ್​ನಲ್ಲಿ ನಡೆಯಲಿದೆ.  ಗೋಲ್ಡನ್ ಗ್ಲೋಬ್ಸ್ ಗೆದ್ದಿರುವ ಆರ್ ಆರ್ ಆರ್ ಆಸ್ಕರ್ ಗೆಲ್ಲುತ್ತಾರಾ ಎಂದು ಭಾರತೀಯರು ಕಾಯುತ್ತಿದ್ದಾರೆ.  

click me!