ಆಸ್ಕರ್ ಪ್ರಶಸ್ತಿಗಾಗಿ ರಾಮ್ ಚರಣ್ ಅಮೆರಿಕಾಗೆ ಹಾರಿದರು. ಬರಿಗಾಲಿನಲ್ಲೇ ಫ್ಲೈಟ್ ಹತ್ತಿದ ರಾಮ್ ಚರಣ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾತಂಡ ಆಸ್ಕರ್ ಎತ್ತಿಹಿಡಿಯಲು ಕಾತರರಾಗಿದ್ದಾರೆ. ಮಾರ್ಚ್ 12 ರಂದು ನಡೆಯಲಿರುವ ಆಸ್ಕರ್ ಪ್ರಶಸ್ತಿ 2023 ಗಾಗಿ ಆರ್ ಆರ್ ಆರ್ ಸ್ಟಾರ್ ರಾಮ್ ಚರಣ್ ಈಗಾಗಲೇ ಅಮೆರಿಕಾಗೆ ಹಾರಿದರು. ರಾಮ್ ಚರಣ್ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ವಿಡಿಯೋಗಳು, ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಂದು (ಫೆಬ್ರವರಿ 21) ಬೆಳಗ್ಗೆಯೇ ರಾಮ್ ಚರಣ್ ಯು ಎಸ್ ಫ್ಲೈಟ್ ಹತ್ತಿದರು. ವಿಶೇಷ ಎಂದರೆ ರಾಮ್ ಚರಣ್ ಬರಿಗಾಲಿನಲ್ಲೇ ವಿದೇಶಕ್ಕೆ ಹಾರಿದ್ದಾರೆ.
ರಾಮ್ ಚರಣ್ ಅಯ್ಯಪ್ಪ ಸ್ವಾಮಿಯ ಅಪ್ಪಟ ಭಕ್ತ. ಸದ್ಯ ಮಾಲೆ ಧರಿಸಿರುವ ಚರಣ್ ಕಪ್ಪು ಉಡುಪಿನಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಸಮಯಕ್ಕೆ ನಾಟು ನಾಟು... ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ಗೆ ನಾಮನಿರ್ದೇಶನಗೊಂಡಿದೆ. ಹಾಗಾಗಿ ವಿದೇಶಕ್ಕೆ ಹೋಗುತ್ತಿರುವಾಗಲೂ ಕಪ್ಪು ಉಡುಪು ಧರಿಸಿ ಬರಿಗಾಲಿನಲ್ಲೇ ರಾಮ್ ಚರಣ್ ಪ್ರಯಾಣ ಬೆಳೆಸಿದರು. ಏರ್ಪೋರ್ಟ್ ನಲ್ಲಿ ಬರಿಗಾಲಿನಲ್ಲಿ ಕಾಣಿಸಿಕೊಂಡಿರುವ ರಾಮ್ ಚರಣ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅಂದಹಾಗೆ ಆಸ್ಕರ್‌ಗೂ ಅನೇಕ ದಿನಗಳ ಮೊದಲೇ ರಾಮ್ ಚರಣ್ ಅಮೆರಿಕಾಗೆ ಹಾರಿದ್ದಾರೆ. ಆದರೆ ಇನ್ನೂ ಎಸ್ ಎಸ್ ರಾಜಮೌಳಿ, ಜೂ.ಎನ್ ಟಿ ಆರ್, ಕೀರವಾಣಿ ಯಾರು ಕೂಡ ಕಾಣಿಸಿಕೊಂಡಿಲ್ಲ. ಇವರೆಲ್ಲ ಶೀಘ್ರದಲ್ಲೇ ಅಮೆರಿಕಾಗೆ ಹೋಗುವ ಸಾಧ್ಯತೆ ಇದೆ. ಅಂದಹಾಗೆ ಜೂ.ಎನ್ ಟಿ ಆರ್ ತೆರಳುವುದು ಮತ್ತಷ್ಟು ತಡವಾಗಬಹುದು ಎನ್ನಲಾಗುತ್ತಿದೆ. ತಾರಕರತ್ನ ಅವರನ್ನು ಕಳೆದುಕೊಂಡು ಜೂ.ಎನ್ ಟಿ ಆರ್ ಕುಟುಂಬ ಇನ್ನೂ ದುಃಖದಲ್ಲಿದೆ. ಕುಟುಂಬದಲ್ಲಿ ಸೂತಕದ ಛಾಯೆ ಇರುವ ಕಾರಣ ಅಮೆರಿಕಾಗೆ ಹೋಗುವುದು ತಡವಾಗಲಿದೆ ಎನ್ನಲಾಗುತ್ತಿದೆ.
Naatu Naatu...ಕ್ರೆಡಿಟ್ ಎಲ್ಲಾ ನೀವೆ ತಗೊಂಡ್ರಾ; ನೆಟ್ಟಿಗರ ಆಕ್ರೋಶಕ್ಕೆ ರಾಜಮೌಳಿ ರಿಯಾಕ್ಷನ್ ಹೀಗಿತ್ತು
ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾಗೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಇತ್ತೀಚೆಗಷ್ಟೆ ಆರ್ ಆರ್ ಆರ್ ಸಿನಿಮಾದ ನಾಟು..ನಾಟು.. ಹಾಡು ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ನಲ್ಲಿ ಪ್ರಶಸ್ತಿ ಗೆದ್ದಿದೆ. ಇದೀಗ ಆಸ್ಕರ್‌ನ ಅಂತಿಮ ರೇಸ್ ನಲ್ಲಿದೆ. ನಾಟು ನಾಟು...ಈಗಾಗಲೇ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಇದೀಗ ಆಸ್ಕರ್ ಗೆಲ್ಲುವತ್ತಾ ಸಾಗಿದೆ.
ರಜನಿಕಾಂತ್ 'ಮುತ್ತು' ಸಿನಿಮಾದ ದಾಖಲೆ ಬ್ರೇಕ್ ಮಾಡಿ ಜಪಾನ್‌ನಲ್ಲಿ ಇತಿಹಾಸ ಸೃಷ್ಟಿಸಿದ 'RRR'
ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್ ಚಿತ್ರದಲ್ಲಿ ಜೂನಿಯರ್ ಮತ್ತು ರಾಮ್ ಚರಣ್ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಮತ್ತು ಅಲಿಯಾ ಭಟ್ ಕೂಡ ನಟಿಸಿದ್ದಾರೆ. 95ನೇ ಅಕಾಡೆಮಿ ಅವಾರ್ಡ್ ಕಾರ್ಯಕ್ರಮ ಮಾರ್ಚ್ 12ರಂದು ಲಾಸ್ ಏಂಜಲೀಸ್ನಲ್ಲಿ ನಡೆಯಲಿದೆ. ಗೋಲ್ಡನ್ ಗ್ಲೋಬ್ಸ್ ಗೆದ್ದು ಬೀಗಿರುವ ಆರ್ ಆರ್ ಆರ್ ಆಸ್ಕರ್ ಗೆಲ್ಲುತ್ತಾರಾ ಎಂದು ಭಾರತೀಯರು ಕಾಯುತ್ತಿದ್ದಾರೆ.