ಎಸ್.ಎಸ್.ರಾಜಮೌಳಿ ನಿರ್ದೇಶನದ ಜ್ಯೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಕಾಂಬಿನೇಷನ್‌ನ ಬಹು ನಿರೀಕ್ಷಿತ 'ಆರ್‌ಆರ್‌ಆರ್' ಸಿನಿಮಾದ ಮತ್ತೊಂದು ಹಾಡು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಇದೇ ಮಾರ್ಚ್ 14ರಂದು 'ಎತ್ತುವ ಜಂಡಾ' ಸಾಂಗ್ ಬಿಡುಗಡೆಯಾಗಲಿದೆ.
ಎಸ್.ಎಸ್.ರಾಜಮೌಳಿ (SS Rajamouli) ನಿರ್ದೇಶನದ ಜ್ಯೂ.ಎನ್‌ಟಿಆರ್ (Jr.NTR) ಮತ್ತು ರಾಮ್ ಚರಣ್ (Ram Charan) ಕಾಂಬಿನೇಷನ್‌ನ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್' (RRR) (ರೌದ್ರ-ರಣ-ರುಧಿರ) ಟ್ರೇಲರ್ (Trailer), ಟೀಸರ್ (Teaser) ಹಾಗೂ ಹಾಡುಗಳಿಂದಲೇ (Songs) ಈಗಾಗಲೇ ಸಿನಿಮಂದಿಯಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಸದ್ಯ 'ಆರ್‌ಆರ್‌ಆರ್' ಸಿನಿಮಾದ ಮತ್ತೊಂದು ಹಾಡು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಇದೇ ಮಾರ್ಚ್ 14ರಂದು 'ಎತ್ತುವ ಜಂಡಾ' ಸಾಂಗ್ ಬಿಡುಗಡೆಯಾಗಲಿದೆ.
ಹೌದು! ಈಗಾಗಲೇ ಬಿಡುಗಡೆಯಾಗಿರುವ 'ಜನನಿ', 'ದೋಸ್ತಿ' ಹಾಗೂ 'ಹಳ್ಳಿನಾಟು' ಹಾಡುಗಳು ಟಾಪ್ ಲಿಸ್ಟ್‌ನಲ್ಲಿದ್ದು, ಇದೀಗ 'ಎತ್ತುವ ಜಂಡಾ' ಹಾಡು ರಿಲೀಸ್ ಆಗಲಿದ್ದು, ಚಿತ್ರತಂಡದ ಕಡೆಯಿಂದ ಅಧಿಕೃತವಾಗಿ ಘೋಷಣೆಯಾಗಿದೆ. ಈ ಹಾಡಿನ ವಿಶೇಷತೆ ಅಂದರೆ, ಸ್ಫೂರ್ತಿ ತುಂಬುವಂತಹ ಸಾಹಿತ್ಯವನ್ನು ಒಳಗೊಂಡಿದೆ. ಅಲ್ಲದೇ, ಹಲವು ಅಪರೂಪದ ವಾದ್ಯಗಳನ್ನೂ ಈ ಹಾಡಿಗೆ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ (MM Keeravaani) ಬಳಸಿಕೊಂಡಿದ್ದಾರಂತೆ. ಹಾಗಾಗಿ ಬೇರೆ ರೀತಿಯ ಸೌಂಡ್ ಈ ಹಾಡಿನಲ್ಲಿದೆ. ಈ ಸಾಂಗ್‌ನಲ್ಲಿ ಮುಖ್ಯ ಪಾತ್ರಧಾರಿಗಳಾದ ರಾಮ್ ಚರಣ್, ಜ್ಯೂ. ಎನ್‌ಟಿಆರ್, ಆಲಿಯಾ ಭಟ್ (Alia Bhatt) ಕಾಣಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಪೋಸ್ಟರ್ನಲ್ಲಿ ಝಲಕ್ ತೋರಿಸಲಾಗಿದ್ದು, ಇದೊಂದು ಸೆಲೆಬ್ರೇಷನ್ ಸಾಂಗ್ ಆಗಿರಲಿದೆ.
undefined
RRR In Trouble: ರಾಜಮೌಳಿ ಸಿನಿಮಾಗೆ ಸ್ಟೇ ? ಬಿಗ್‌ಬಜೆಟ್ ಸಿನಿಮಾಗೆ ಕಾನೂನು ಸಂಕಟ
ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಯಾದ ಡಿವಿವಿ ಎಂಟರ್‌ಟೈನ್ಮೆಂಟ್ (DVV Entertainment) ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಬಿಗ್ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಕನ್ನಡ, ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ ಈ ಚಿತ್ರ ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಆಗಲಿದೆ ಎಂಬುದು ವಿಶೇಷ. ಮಾರ್ಚ್ 25ರಂದು ವಿಶ್ವದಾದ್ಯಂತ 'ಆರ್‌ಆರ್‌ಆರ್' ತೆರೆಕಾಣಲಿದೆ. ಕನ್ನಡದಲ್ಲಿ ಈ ಸಿನಿಮಾದ ವಿತರಣೆಯನ್ನು ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ವಹಿಸಿಕೊಂಡಿದೆ.
'ಆರ್‌ಆರ್‌ಆರ್' ಸಿನಿಮಾದ ಟ್ರೇಲರ್ ಕಂಡು ಅಭಿಮಾನಿಗಳು ಈಗಾಗಲೇ ವಾವ್ ಎಂದಿದ್ದಾರೆ. ನಿರ್ದೇಶಕ ರಾಜಮೌಳಿ ಶೈಲಿ ಸಿನಿಮಾದ ಅದ್ದೂರಿತನ ಟ್ರೇಲರ್‌ನಲ್ಲಿ ರಾರಾಜಿಸಿದ್ದು, ಭಾವುಕ ಅಂಶಗಳು ಸಹ ಇತ್ತು. ಜೊತೆಗೆ ನಾಯಕಿಯರಾದ ಆಲಿಯಾ ಭಟ್, ಒಲಿವಿಯಾ ಮೋರಿಸ್, ಶ್ರೇಯಾ ಶಿರಿನ್ ಅವರುಗಳ ಅಂದವೂ ಇದೆ. ಆಕ್ಷನ್ ದೃಶ್ಯಗಳು ಎಲ್ಲಕ್ಕಿಂತಲೂ ಹೆಚ್ಚಾಗಿ ಗಮನ ಸೆಳೆಯುತ್ತವೆ. ಹಾಗೂ ಟ್ರೇಲರ್ನ ಪ್ರತಿಯೊಂದು ಫ್ರೇಮ್ ಕೂಡ ಅದ್ಭುತವಾಗಿದೆ. ಅದಕ್ಕೆ ತಕ್ಕಂತೆ ಹಿನ್ನಲೆ ಸಂಗೀತ ಕೂಡ ಇದ್ದು, ಎಲ್ಲಾ ಪಾತ್ರಗಳ ಪರಿಚಯವಾಗಿದೆ. ಸಿನಿಮಾ ಎಷ್ಟು ಅದ್ದೂರಿಯಾಗಿ ಇರಲಿದೆ ಎನ್ನುವುದರ ಸಣ್ಣ ಝಲಕ್ ಟ್ರೇಲರ್‌ನಲ್ಲಿ ಕಾಣಬಹುದಾಗಿದ್ದು, ಸಿನಿಮಾ ಬಗ್ಗೆ ಇದ್ದ ನಿರೀಕ್ಷೆ ದುಪ್ಪಟ್ಟಾಗಿತ್ತು.
Jr NTR Depression: ವೃತ್ತಿ ಜೀವನ ಕುಸಿದಾಗ, ಖಿನ್ನತೆಗೊಳಗಾಗಿದ್ರು ಈ ಸ್ಟಾರ್ ನಟ!
'ಆರ್‌ಆರ್‌ಆರ್' ಚಿತ್ರವು 1920ನೇ ಇಸವಿಯ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ. ಈ ಚಿತ್ರದಲ್ಲಿ ರಾಮ್ ಚರಣ್ ರಾಮರಾಜು ಪಾತ್ರದಲ್ಲಿ, ಜೂನಿಯರ್ ಎನ್‌ಟಿಆರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಬಾಲಿವುಡ್ ನಟರಾದ ಅಜಯ್ ದೇವ್‌ಗನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಒಲಿವಿಯಾ ಮೋರಿಸ್, ಸಮುದ್ರಕನಿ, ಶ್ರೇಯಾ ಶಿರಿನ್, ಅಲಿಸನ್ ಡೂಡಿ ಹಾಗೂ ರೇ ಸ್ಟೀವನ್ಸನ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಿನಿಮಾ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್ ವಿಳಂಬ ಆಯಿತು.
Song out on March 14th! ✨⚡️ pic.twitter.com/UOHnsNW9dL