Troll: ರಾಮ್ ಚರಣ್ ಎಡವಟ್ಟಿಗೆ 'ಯಶ್' ಎಳೆದುತಂದಿದ್ದು ಯಾಕೆ? 'RRR' ಸ್ಟಾರ್ ನಟನೀಗ ಫುಲ್ ರೋಸ್ಟ್!

Published : May 25, 2026, 09:38 PM IST
Yash Ram Charan

ಸಾರಾಂಶ

ಚರಣ್​ ಕ್ಷಮೆ ಕೇಳಿದ ಮೇಲೆ ಅದಕ್ಕೆ ಉತ್ತರ ಭಾರತದ ಫ್ಯಾನ್ಸ್ ಓಕೆ ಯಶ್ ಬಾಸ್ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ. ಅಷ್ಟಕ್ಕೂ ಚರಣ್​ನ ಯಶ್ ಅಂತಿರೋದ್ಯಾಕೆ ಗೊತ್ತಾ,.? ಅದರ ಹಿಂದೆನೂ ಭಾರೀ ದೊಡ್ಡದೊಂದು ಕಥೆ ಇದೆ… ಏನದು ನೋಡಿ..

ಜಸ್ಪ್ರೀತ್ ಬುಮ್ರಾ ಫುಟ್​ಬಾಲ್ ಆಟಗಾರ ಆಗಿದ್ಯಾವಾಗ..?

ರಾಮ್​ಚರಣ್ (Ram Charan) ನಟನೆಯ ಪೆದ್ದಿ (Peddi) ಸಿನಿಮಾ ರಿಲೀಸ್​ಗೆ ಸಜ್ಜಾಗಿದ್ದು, ರಾಮ್ ಚರಣ್ ಪ್ಯಾನ್ ಇಂಡಿಯಾ ಸುತ್ತಿ ಈ ಸಿನಿಮಾವನ್ನ ಪ್ರಚಾರ ಮಾಡ್ತಾ ಇದ್ದಾರೆ. ಈ ನಡುವೆ ಭೋಪಾಲ್​ನಲ್ಲಿ ನಡೆದ ಇವೆಂಟ್​ನಲ್ಲಿ ರಾಮ್​ಚರಣ್ ಮಾಡಿದ ಒಂದು ಎಡವಟ್ಟು ಸಖತ್ ಟ್ರೋಲ್ ಆಗ್ತಾ ಇದೆ. ಜಸ್ಪ್ರೀತ್ ಬುಮ್ರಾನ (Jasprit Bumrah) ಫುಟ್​​ಬಾಲ್ ಆಟಗಾರ ಅಂದಿದ್ರು ಚರಣ್. ಅದಕ್ಕೆ ಪ್ರತಿಯಾಗಿ ರಾಮ್​ಚರಣ್​ನ ಯಶ್ ಅಂತಿದ್ದಾರೆ ನಾರ್ತ್​ ಇಂಡಿಯಾ ಮಂದಿ. ಅದ್ಯಾಕೆ ಅಂತೀರಾ,,? ಈ ಸ್ಟೋರಿ ನೋಡಿ.

ಪೆದ್ದಿ ಪ್ರಚಾರದಲ್ಲಿ ಪೆದ್ದು ಪೆದ್ದಾಗಿ ಮಾತನಾಡಿದ ಚರಣ್..!

ಜಸ್ಪ್ರೀತ್ ಬುಮ್ರಾ ಫುಟ್​ಬಾಲ್ ಆಟಗಾರ ಆಗಿದ್ಯಾವಾಗ..?

ಯೆಸ್ ರಾಮ್​ಚರಣ್ ತೇಜಾ ನಟನೆಯ ಪೆದ್ದಿ ಸಿನಿಮಾ ರಿಲೀಸ್​ಗೆ ಸಜ್ಜಾಗಿರೋ ಮ್ಯಾಟರ್ ನಿಮಗೆ ಗೊತ್ತೇ ಇದೆ. ಇತ್ತೀಚಿಗಷ್ಟೇ ಈ ಪ್ಯಾನ್ ಇಂಡಿಯಾ ಸಿನಿಮಾದ ಟ್ರೈಲರ್ ರಿಲೀಸ್ ಆಗಿ, ಸಖತ್ ಟ್ರೆಂಡಿಂಗ್​ನಲ್ಲಿದೆ.

ಬಾಲಿವುಡ್ ಬೆಡಗಿ, ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಪೆದ್ದಿಯಲ್ಲಿ ಚರಣ್ ಜೋಡಿಯಾಗಿ ನಟಿಸಿದ್ದಾರೆ. ನಮ್ಮ ಶಿವರಾಜ್​ಕುಮಾರ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನ ಮಾಡಿದ್ದಾರೆ.

ಸೋ ದೊಡ್ಡ ಸ್ಟಾರ್ ಕಾಸ್ಟ್ ಇರೋ ಈ ಸಿನಿಮಾ ದೊಡ್ಡ ಬಜೆಟ್​ನಲ್ಲಿ ಕೂಡ ಸಿದ್ದವಾಗಿದೆ. ಬರೊಬ್ಬರಿ 300 ಕೋಟಿ ಬಜೆಟ್​ನ ಈ ಮೂವಿ ಜೂನ್ 4ಕ್ಕೆ ಪ್ಯಾನ್ ಇಂಡಿಯಾ ತೆರೆಗೆ ಬರ್ತಾ ಇದೆ. ಸೋ ಚರಣ್ ಪ್ಯಾನ್ ಇಂಡಿಯಾ ಸುತ್ತಿ ಪ್ರಚಾರ ಮಾಡ್ತಾ ಇದ್ದಾರೆ.

ಎಡವಟ್ಟು ಮಾಡಿ ಕ್ಷಮೆ ಕೇಳಿದ ರಾಮ್​ ಚರಣ್ ..!

ಇತ್ತೀಚಿಗೆ ಭೋಪಾಲ್​ನಲ್ಲಿ ಪೆದ್ದಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಡೀತು. ರಾಮ್​ಚರಣ್ ಅಷ್ಟೇ ಅಲ್ಲದೇ ಎ.ಆರ್ ರೆಹಮಾನ್, ಜಾಹ್ನವಿ ಕಪೂರ್ ಹಾಗೂ ಸಿನಿಮಾ ತಂಡ ಇವೆಂಟ್​ನಲ್ಲಿ ಪಾಲ್ಗೊಂಡಿತ್ತು.

ಈ ಸಿನಿಮಾದಲ್ಲಿ ರಾಮ್​ಚರಣ್ ಸ್ಪೋರ್ಟ್ಸ್ ಮ್ಯಾನ್ ಪಾತ್ರ ಮಾಡಿದ್ದಾರೆ. ಸೋ ಈ ಇವೆಂಟ್​ನಲ್ಲಿ ನಿರೂಪಕರು, ಭಾರತೀಯ ಆಟಗಾರರ ಬಗ್ಗೆ ಚರಣ್​ಗೆ ಎಷ್ಟು ಗೊತ್ತು ಅಂತ ಪ್ರಶ್ನೆ ಮಾಡಿದ್ರು. ಕ್ರಿಕೆಟರ್ಸ್ ಬಗ್ಗೆ ನಿಮ್ಮದೇ ರೀತಿಯಲ್ಲಿ ಬಣ್ಣಿಸಿ ಅಂತ ಕೇಳಿಕೊಂಡರು. ಒಬ್ಬೊಬ್ಬ ಕ್ರಿಕೆಟಿಗರ ಬಗ್ಗೆ ರಾಮ್ ಚರಣ್ ತನ್ನದೇ ಆದ ವ್ಯಾಖ್ಯಾನ ಮಾಡಿದರು.

ಬುಮ್ರಾ ಫುಟ್​ಬಾಲ್ ಆಟದ ಅಭಿಮಾನಿ ಎಂದ ಚರಣ್..!

ಸಚಿನ್‌ ತೆಂಡೂಲ್ಕರ್‌ ಅವರನ್ನ ʻಲೆಜೆಂಡ್‌ʼ , ಎಂಎಸ್‌ ಧೋನಿ ಅವರನ್ನ ʻಕೂಲ್‌ʼ , ಹಾಗೂ ವಿರಾಟ್‌ ಕೊಹ್ಲಿ ಅವರನ್ನ ʻಬೆಂಕಿʼ ಅಂತ ಹೊಗಳಿದ್ರು ಚರಣ್. ಆದರೆ, ಜಸ್ಪ್ರೀತ್‌ ಬುಮ್ರಾ ಅವರ ಹೆಸರು ಬಂದಾಗ, ರಾಮ್‌ ಚರಣ್‌ ಅತಿಯಾದ ಉತ್ಸಾಹದಲ್ಲಿ ಬುಮ್ರಾ ಅವರನ್ನ ಓರ್ವ ʻಫುಟ್‌ಬಾಲ್‌ ಆಟಗಾರʼ ಅಂತ ಕರೆದರು. ಹೌದು.. ನಾನು ಬುಮ್ರಾ ಅವರ ದೊಡ್ಡ ಅಭಿಮಾನಿ, ಅವರೊಬ್ಬ ಅದ್ಭುತ ಫುಟ್‌ಬಾಲರ್ ಅಂದುಬಿಟ್ರು.

ಜಸ್ಪ್ರೀತ್‌ ಬುಮ್ರಾ ವಿಶ್ವದ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರು ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರ. ಅಂತಹ ಆಟಗಾರನನ್ನ ರಾಮ್‌ ಚರಣ್‌ ಫುಟ್‌ಬಾಲರ್‌ ಅಂತ ಕರೆದಿದ್ದು ನೆಟ್ಟಿಗರಿಗೆ ಅಚ್ಚರಿ ಮೂಡಿಸಿದ್ದು ನಿಜ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಕ್ಷಣಾರ್ಧದಲ್ಲಿ ವೈರಲ್‌ ಆಯ್ತು. ಕೆಲವರು ಇದನ್ನ ಲಘುವಾಗಿ ಪರಿಗಣಿಸಿದರೆ, ಇನ್ನೂ ಕೆಲವರು ರಾಮ್‌ ಚರಣ್‌ ಅವರ ಸಾಮಾನ್ಯ ಜ್ಞಾನದ ಬಗ್ಗೆ ಹಾಸ್ಯ ಮಾಡತೊಡಗಿದ್ರು. ಯಾವಾಗ ಇದು ಸಿಕ್ಕಾಪಟ್ಟೆ ವೈರಲ್ ಆಗೋಯ್ತೋ ಚರಣ್ , ಸೋಷಿಯಲ್ ಮಿಡಿಯಾದಲ್ಲಿ ಕ್ಷಮೆ ಯಾಚಿಸಿದ್ದಾರೆ.

ಜಸ್ಪ್ರೀತ್‌ ಬುಮ್ರಾ ಅವರಿಗೆ ಕ್ಷಮೆಯಾಚಿಸುತ್ತೇನೆ.. ಗೊಂದಲಕ್ಕೆ, ಎಲ್ಲಾ ಉತ್ಸಾಹ ಮತ್ತು ಜನಸಮೂಹದ ಮಧ್ಯದಲ್ಲಿ ಇದು ನಿಜವಾದ ಮಾನವ ತಪ್ಪು . ನಾನು ನಿಮ್ಮನ್ನು ನಿಜವಾಗಿಯೂ ಗೌರವಿಸುತ್ತೇನೆ ಮತ್ತು ನಾನು ನಿಮ್ಮ ಆಟದ ದೊಡ್ಡ ಅಭಿಮಾನಿ. ನೀವು ನಿರಂತರವಾಗಿ ಬ್ಯಾಟ್ಸ್‌ಮನ್‌ಗಳನ್ನು ಬ್ಯಾಕ್‌ಫೂಟ್‌ನಲ್ಲಿ ಇರಿಸಿದಾಗ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವಂತೆ ಮಾಡುತ್ತೀರಿ

- ರಾಮ್​ಚರಣ್, ನಟ

ಆದ್ರೆ ಚರಣ್ ಕ್ಷಮೆ ಕೇಳಿದ ಮೇಲೂ ಅವರನ್ನ ಟ್ರೋಲ್ ಮಾಡೋದನ್ನ ಬಿಟ್ಟಿಲ್ಲ. ಅದ್ರಲ್ಲೂ ಉತ್ತರ ಭಾರತದ ಮಂದಿ ಚೆರ್ರಿನ ರೋಸ್ಟ್ ಮಾಡ್ತಾ ಇದ್ದಾರೆ. ಈ ನಡುವೆ ಇನ್​ಟ್ರೆಸ್ಟಿಂಗ್ ವಿಷ್ಯ ಅಂದ್ರೆ Iಈ ವಿವಾದಕ್ಕೆ ಯಶ್ ಹೆಸರು ಬೇರೆ ಎಂಟ್ರಿಯಾಗಿದೆ.

ಚರಣ್​ಗೆ ಯಶ್ ಬಾಸ್ ಅಂದಿದ್ದೇಕೆ ನಾರ್ಥ್ ಫ್ಯಾನ್ಸ್..?

ಹೌದು ಚರಣ್​ ಕ್ಷಮೆ ಕೇಳಿದ ಮೇಲೆ ಅದಕ್ಕೆ ಉತ್ತರ ಭಾರತದ ಫ್ಯಾನ್ಸ್ ಓಕೆ ಯಶ್ ಬಾಸ್ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ. ಅಷ್ಟಕ್ಕೂ ಚರಣ್​ನ ಯಶ್ ಅಂತಿರೋದ್ಯಾಕೆ ಗೊತ್ತಾ,.? ಅದರ ಹಿಂದೆನೂ ಒಂದು ಕಥೆ ಇದೆ. ಅಸಲಿಗೆ ಪೆದ್ದಿ ಸಿನಿಮಾದಲ್ಲಿ ಚರಣ್ ಲುಕ್ ಕೆಜಿಎಫ್ ಯಶ್​ರನ್ನ ಹೋಲುವಂತೆ ಇದೆ.

ಹಿಂದೊಮ್ಮೆ ಮುಂಬೈನಲ್ಲಿ ಪಾಪಾರಾಜಿಗಳು ರಾಮ್​ಚರಣ್​ನ ಯಶ್ ಅಂತ ಭಾವಿಸಿ ರಾಕಿ ರಾಕಿ ಅಂತ ಕರೆದಿದ್ರು. ಅದನ್ನೇ ನೆನಪಿಟ್ಟುಕೊಂಡು ಈಗ ನೆಟ್ಟಿಗರು ಚರಣ್​ನ ಟ್ರೋಲ್ ಮಾಡ್ತಾ ಇದ್ದಾರೆ.

ಒಟ್ಟಾರೆ ಪೆದ್ದಿ ರಿಲೀಸ್ ಹೊಸ್ತಿಲಲ್ಲಿ ಚರಣ್ ಪೆದ್ದು ಪೆದ್ದಾಗಿ ಮಾತನಾಡಿದ ಮ್ಯಾಟರ್ ಸಖತ್ ಸದ್ದು ಮಾಡ್ತಾ ಇದೆ. ಅಷ್ಟೇ ಅಲ್ಲ ಇದರ ನಡುವೆ ಯಶ್ ಎಂಟ್ರಿ ಬೇರೆ ಆಗಿಬಿಟ್ಟಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದಿನಕ್ಕೆ 2 ಪಿಜ್ಜಾ, 3 ಬ್ರೌನಿ ತಿಂತಿದ್ರು ಈ ಬಾಲಿವುಡ್ ನಟಿ: ಇದ್ದಕ್ಕಿದ್ದ ಹಾಗೆ 45 ಕೆಜಿ ತೂಕ ಇಳಿಸಿದ್ದು ಹೇಗೆ?
Kantara - Ranveer Singh: 'ಕಾಂತಾರ' ದೈವಕ್ಕೆ ಅಪಮಾನ ಮಾಡಿದ್ದೇ ಶಾಪವಾಯ್ತಾ? ಅದಕ್ಕೇ Top Star ಆಗಿರುವಾಗಲೇ ಬ್ಯಾನ್!?