ನನ್ನದೇ ಕುಟುಂಬ ಹೊಂದಲು ಬಯಸುತ್ತೇನೆ, ಮದ್ವೆ ಆಗಬೇಕು ಆದರೆ...; ಮದುವೆ ಬಗ್ಗೆ ಮೌನ ಮುರಿದ ನಟಿ ಕಂಗನಾ

Published : Jun 17, 2023, 01:29 PM ISTUpdated : Jun 17, 2023, 01:32 PM IST
ನನ್ನದೇ ಕುಟುಂಬ ಹೊಂದಲು ಬಯಸುತ್ತೇನೆ, ಮದ್ವೆ ಆಗಬೇಕು ಆದರೆ...; ಮದುವೆ ಬಗ್ಗೆ ಮೌನ ಮುರಿದ ನಟಿ ಕಂಗನಾ

ಸಾರಾಂಶ

ನನ್ನದೇ ಕುಟುಂಬ ಹೊಂದಲು ಬಯಸುತ್ತೇನೆ, ಮದ್ವೆ ಆಗಬೇಕು ಎಂದು ನಟಿ ಕಂಗನಾ ರಣಾವತ್ ಮೊದಲ ಬಾರಿಗೆ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. 

ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ವಿವಾದಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಬೋಲ್ಡ್ ಹೇಳಿಕೆಗಳ ಮೂಲಕ ಸದ್ದು ಮಾಡುವ ಕಂಗನಾ ಆಗಾಗ ಸಿನಿಮಾರಂಗದ ವಿರುದ್ಧವೂ ಸಿಡಿದೇಳುತ್ತಿರುತ್ತಾರೆ. ತನಗನಿಸಿದ್ದನ್ನು ನೇರವಾಗಿ ಹೇಳುತ್ತಾರೆ ಕಂಗನಾ. ವಿವಾದ, ಬೋಲ್ಡ್ ಸ್ಟೇಟ್ಮೆಂಟ್ ಮೂಲಕ ಸುದ್ದಿಯಲ್ಲಿರುವ ಕಂಗನಾ ಇದೀಗ ಮೊದಲ ಬಾರಿಗೆ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ಸಂದರ್ಶವೊಂದರಲ್ಲಿ ಮಾತನಾಡಿದ ಕಂಗನಾ ಮದುವೆ ಯೋಜನೆ ಇದೆ ಎಂದು ಹೇಳಿದ್ದಾರೆ. 

ಕಂಗನಾ ಸದ್ಯ ಟಿಕು ವೆಡ್ಸ್ ಶೇರು ಸಿನಿಮಾದ ಪ್ರಮೋಷನ್ ನಲ್ಲಿ ನಿರತರಾಗಿದ್ದಾರೆ. ಟಿಕು ವೆಡ್ಸ್ ಶೇರು ಕಂಗನಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಅನೇಕ ವಾಹಿನಿಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಕಂಗನಾ ಮದುವೆ ಬಗ್ಗೆ ಪ್ರಸ್ತಾಪ ಆಗಿದೆ. ಎಲ್ಲದಕ್ಕೂ ಸಮಯ ಬರಬೇಕು ಎಂದು ಕಂಗನಾ ಹೇಳಿದ್ದಾರೆ. 'ಪ್ರತಿಯೊಂದಕ್ಕೂ ಒಂದು ಸಮಯವಿದೆ ಮತ್ತು ಆ ಸಮಯ ನನ್ನ ಜೀವನದಲ್ಲಿ ಬರಬೇಕಾದಾಗ ಅದು ಬರುತ್ತದೆ. ನಾನು ಮದುವೆಯಾಗಲು ಮತ್ತು ನನ್ನ ಸ್ವಂತ ಕುಟುಂಬವನ್ನು ಹೊಂದಲು ಬಯಸುತ್ತೇನೆ. ಆದರೆ ಸರಿಯಾದ ಸಮಯದಲ್ಲಿ ಅದು ಸಂಭವಿಸುತ್ತದೆ' ಎಂದು ಹೇಳಿದರು. 

ಈ ಹಿಂದೆ ಕಂಗನಾ ಮದುವೆ ಬಗ್ಗೆ ಮಾತಾನಾಡಿ ತನ್ನನ್ನು ಮದುವೆ ಆಗಲು ಯಾರು ಮುಂದೆ ಬರ್ತಿಲ್ಲ ಎಂದು ಹೇಳಿದ್ದರು. ನಿಜ ಜೀವನದಲ್ಲೂ ದಾಕಢ್ ಆಗಿದ್ದೀರಾ? ಎಂದು ಹೇಳಿದ ಪ್ರಶ್ನೆಗೆ ಉತ್ತರಿಸಿದ ಕಂಗನಾ, ಅದು ಹಾಗಲ್ಲ, ನಿಜ ಜೀವನದಲ್ಲಿ ನಾನು ಯಾರಿಗೆ ಹೊಡೆಯುತ್ತೇನೆ? ನಿಮ್ಮಂತಹವರು ಹೀಗೆ ವದಂತಿಗಳನ್ನು ಹಬ್ಬಿಸುತ್ತಿರುವುದರಿಂದ ನಾನು ಮದುವೆಯಾಗಲು ಸಾಧ್ಯವಾಗುತ್ತಿಲ್ಲ' ಎಂದು ಹೇಳಿದ್ದರು. 

ಹೆಣ್ಣುಬಾಕ-ಮಾದಕ ವ್ಯಸನಿ ರಾಮ, ಸೆಲ್ಫ್‌ಮೇಡ್ ಸ್ಟಾರ್‌ ರಾವಣ, ಇದೆಂತ ಕಲಿಯುಗ? ರಣಬೀರ್ ತೆಗಳಿ ಯಶ್ ಹೊಗಳಿದ ಕಂಗನಾ

2021 ರಲ್ಲಿ ಟೈಮ್ಸ್ ನೌ ಜೊತೆ ಮಾತನಾಡುತ್ತಾ ಕಂಗನಾ, 'ನಾನು ಖಂಡಿತವಾಗಿಯೂ ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಬಯಸುತ್ತೇನೆ. ನಾನು ಐದು ವರ್ಷಗಳಲ್ಲಿ ತಾಯಿಯಾಗಿ ಮತ್ತು ಹೆಂಡತಿಯಾಗಿ ನನ್ನನ್ನು ನೋಡುತ್ತೇನೆ. ಪ್ರೀತಿಯಲ್ಲಿ ಅಂತಹ ಸ್ಥಳವಿಲ್ಲ. ನಿಮಗೆ ತಿಳಿಯುತ್ತದೆ. ಶೀಘ್ರದಲ್ಲೇ' ಎಂದು ಹೇಳಿದ್ದರು. 

ಕಂಗನಾ ಸದ್ಯ ಟಿಕು ವೆಡ್ಸ್ ಶೇರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಸಾಯಿ ಕಬೀರ್ ಶ್ರೀವಾಸ್ತವ್ ನಿರ್ದೇಶಿಸಿದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಮತ್ತು ಅವನೀತ್ ಕೌರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಜೂನ್ 23 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. 

21ರ ಅವನೀತ್ ಜೊತೆ 49ರ ನವಾಜುದ್ದೀನ್ ಸಿದ್ದಿಕ್ಕಿ ಲಿಪ್‌ ಕಿಸ್; ಕಂಗನಾ ಸಿನಿಮಾ ವಿರುದ್ಧ ನೆಟ್ಟಿಗರ ಆಕ್ರೋಶ

ಕಂಗನಾ ಸದ್ಯ ಎಮರ್ಜೆನ್ಸಿ ಸಿನಿಮಾ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ.  ಈಗಾಗಲೇ ಫಸ್ಟ್ ಲುಕ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತಾಗಿದೆ. ಚಿತ್ರದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ವಿಶಾಕ್ ನಾಯರ್ ಮತ್ತು ಶ್ರೇಯಸ್ ತಲ್ಪಾಡೆ ಸೇರಿದಂತೆ ಅನೇಕರು ನಟಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?