RRR ಸ್ಟಾರ್ ಈಗ 'ಗೇಮ್ ಚೇಂಜರ್'; ರಾಮ್ ಚರಣ್ ಮುಂದಿನ ಸಿನಿಮಾದ ಟೈಟಲ್ ಬಹಿರಂಗ

Published : Mar 27, 2023, 12:01 PM ISTUpdated : Mar 28, 2023, 04:06 PM IST
RRR ಸ್ಟಾರ್ ಈಗ 'ಗೇಮ್ ಚೇಂಜರ್'; ರಾಮ್ ಚರಣ್ ಮುಂದಿನ ಸಿನಿಮಾದ ಟೈಟಲ್ ಬಹಿರಂಗ

ಸಾರಾಂಶ

RRR ಸ್ಟಾರ್ ರಾಮ್ ಚರಣ್ 'ಗೇಮ್ ಚೇಂಜರ್' ಆಗಿದ್ದಾರೆ. ಟಾಲಿವುಡ್ ಸ್ಟಾರ್ ನಟನೆಯ ಬಹುನಿರೀಕ್ಷೆಯ ಸಿನಿಮಾದ ಟೈಟಲ್ ಬಹಿರಂಗಲಾಗಿದೆ. 

ಟಾಲಿವುಡ್ ಸ್ಟಾರ್ ರಾಮ್ ಚರಣ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ರಾಮ್ ಚರಣ್ ಹುಟ್ಟುಹಬ್ಬನ್ನು ಅಭಿಮಾನಿಗಳು, ಸ್ನೇಹಿತರು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಮೆಗಾಸ್ಟಾರ್ ಪುತ್ರನ ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ. ಹುಟ್ಟುಹಬ್ಬದದಿನವೇ ರಾಮ್ ಚರಣ್ ಗೇಮ್ ಚೇಂಜರ್ ಆಗಿ ಬದಲಾಗಿದ್ದಾರೆ. ರಾಮ್ ಚರಣ ಸದ್ಯ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ  RC15 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾತಂಡ ಒಂದು ದಿನ ಮುಂಚಿನವಾಗಿಯೇ ರಾಮ್ ಚರಣ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದರು. ಕೇಕ್ ಕತ್ತರಿಸಿ ಸಂಭ್ರಮಸಿದ್ದರು. ಇಂದು ಸಿನಿಮಾತಂಡ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ನೀಡಿದೆ. 

ರಾಮ್ ಚರಣ್ ನಟನೆಯ RC15 ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಅನೇಕ ದಿನಗಳೇ ಆಗಿತ್ತು. ಆದರೆ ಟೈಟಲ್ ರಿವೀಲ್ ಆಗಿರಲಿಲ್ಲ. ಸಿನಿಮಾದ ಶೀರ್ಷಿಕೆ ಏನಾಗಿರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇಂದು ಹುಟ್ಟುಹಬ್ಬದ ಪ್ರಯಕ್ತ ಬಹುನಿರೀಕ್ಷೆಯ ಸಿನಿಮಾದ ಟೈಟಲ್ ಬಹಿರಂಗ ಪಡಿಸಲಾಗೆ.  RC15ಚಿತ್ರಕ್ಕೆ ಗೇಮ್ ಚೇಂಜರ್ ಎಂದು ಹೆಸರಿಡಲಾಗಿದೆ. ಇಂದು ಪುಟ್ಟ ಟೀಸರ್ ರಿಲೀಸ್ ಮಾಡುವ ಮೂಲಕ ಟೈಟಲ್ ರಿವೀಲ್ ಮಾಡಿದೆ ಸಿನಿಮಾತಂಡ. ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 



ಅದ್ದೂರಿಯಾಗಿ ರಾಮ್ ಚರಣ್ ಹುಟ್ಟುಹಬ್ಬ ಆಚರಿಸಿದ ಬಾಲಿವುಡ್ ನಟಿ ಕಿಯಾರಾ: ಫೋಟೋ ವೈರಲ್

ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಮೂಡಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೇಮ್ ಚೇಂಜರ್ ತಯಾರಾಗುತ್ತಿದೆ. ಮತ್ತೊಂದು ವಿಶೇಷ ಎಂದರೆ 3ಡಿಯಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ರಾಮ್ ಚರಣ್ ಸದ್ಯ ಆರ್ ಆರ್ ಆರ್ ಸಕ್ಸಸ್ ಅನ್ನು ಸಂಭ್ರಮಿಸುತ್ತಿದ್ದರು. ಆರ್ ಆರ್ ಆರ್ ಸೂಪರ್ ಸಕ್ಸಸ್ ಬಳಿಕ ಮತ್ತೆ ಗೇಮ್ ಚೇಂಜರ್ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ. ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.


ರಾಕಿಂಗ್ ಸ್ಟಾರ್ ಹೊಗಳಿದ ಟಾಲಿವುಡ್‌ ಸ್ಟಾರ್‌...ಯಶ್‌ ಬಗ್ಗೆ ರಾಮ್ ಚರಣ್ ಹೇಳಿದ್ದೇನು ?

ರಾಮ್ ಚರಣ್ ನಟನೆಯ ಆರ್ ಆರ್ ಆರ್ ಸಿನಿಮಾ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಪ್ರಶಸ್ತಿ ಸಮಾರಂಭಕ್ಕೆ ಆರ್ ಆರ್ ಆರ್ ತಂಡದ ಜೊತೆ ರಾಮ್ ಚರಣ್ ಕೂಡ ಯುಎಸ್‌ಗೆ ಹಾರಿದ್ದರು. ಭಾರತಕ್ಕೆ ವಾಪಾಸ್ ಆಗಿರುವ ರಾಮ್ ಚರಣ್ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದ್ದು ಇದೀಗ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?