
ನಟಿ ರಾಕುಲ್ ಪ್ರೀತ್ ಸಿಂಗ್‌ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ನಟಿ ಇದೀಗ ಕ್ವಾರೆಂಟೈನ್‌ನಲ್ಲಿರುವುದಾಗಿ ತಿಳಿಸಿದ್ದಾರೆ. ತನ್ನ ಕಾಂಟ್ಯಾಕ್ಟ್‌ಗೆ ಬಂದವರೆಲ್ಲ ಸ್ವಯಂ ಕ್ವಾರೆಂಟ್ ಆಗಿ ಎಂದು ನಟಿ ಕೇಳಿಕೊಂಡಿದ್ದಾರೆ.
ತನ್ನ ಕಾಂಟ್ಯಾಕ್ಟ್‌ಗೆ ಬಂದವರೆಲ್ಲ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ನಟಿ ರಾಕುಲ್ ಮನವಿ ಮಾಡಿದ್ದಾರೆ. ನಟಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಹಾಟ್ ಬೆಡಗಿ ಕೃತಿಗೆ ಕೊರೋನಾ ಕಾಟ... ಗೊತ್ತಾಗ್ತಿದ್ದಂತೆ ನಟಿ ಮಾಡಿದ್ದು ಒಂದೇ ಕೆಲಸ!
ಹೈದರಾಬಾದ್‌ನಲ್ಲಿ ಅಜಯ್ ದೇವಗನ್ ಅಭಿನಯದ ಮೇ ಡೇ ಸಿನಿಮಾದ ಶೂಟಿಂಗ್ ಮಾಡುತ್ತಿದ್ದರು ನಟಿ. ಇತ್ತೀಚೆಗಷ್ಟೇ ನಟಿ ತೆಲುಗು ಸಿನಿಮಾ ಒಂದರ ಶೂಟಿಂಗ್ ಮುಗಿಸಿದ್ದರು.
ಇತ್ತೀಚೆಗಷ್ಟೇ ಬಾಲಿವುಡ್ ಖ್ಯಾತ ನಟಿ ಕೃತಿ ಸನೋನ್‌ಗೂ ಕೊರೋನಾ ಪಾಸಿಟಿವ್ ಬಂದಿದ್ದು, ನಟಿ ಕ್ವಾರೆಂಟೈನ್‌ನಲ್ಲಿದ್ದರು. ಇದೀಗ ಪರೀಕ್ಷೆ ನೆಗೆಟಿವ್ ಬಂದಿದೆ. ಈ ಹಿಂದೆ ಐಶ್ವರ್ಯಾ ರೈ, ತಮನ್ನಾ,ಅಭಿಷೇಕ್ ಬಚ್ಚನ್ ಸೇರಿ ಹಲವರಿಗೆ ಕೊರೋನಾ ಪಾಸಿಟವ್ ಬಂದಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.