ಮಗುವಾದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ರಾಖಿ ಸಾವಂತ್​! ಮಾಲ್​ ಒಳಗೆ ಲಗ್ಗೆ ಇಟ್ಟ ನಟಿ...

By Suchethana D  |  First Published Sep 9, 2024, 9:19 PM IST

 ಸೋಷಿಯಲ್​ ಮೀಡಿಯಾದಿಂದ ಕಣ್ಮರೆಯಾಗಿದ್ದ ನಟಿ ರಾಖಿ ಸಾವಂತ್​ ಈಗ ಚಿಕ್ಕಮ್ಮ ಆಗಿದ್ದಾರೆ. ಸಂತೋಷದಲ್ಲಿ ಕುಣಿದು ಕುಪ್ಪಳಿಸಿ ಮಾಲ್​ ಒಳಗೆ ಲಗ್ಗೆ ಇಟ್ಟ ನಟಿ ಹೇಳಿದ್ದೇನು? 
 


ಡ್ರಾಮಾ ಕ್ವೀನ್‌, ಕಾಂಟ್ರವರ್ಸಿ ಲೇಡಿ ಎಂದೇ ಖ್ಯಾತ ಆಗಿರೋರು ಎಂದರೆ ರಾಖಿ ಸಾವಂತ್‌. ಕೆಲ ತಿಂಗಳ ಹಿಂದೆ ರಾಖಿ ಸಾವಂತ್‌ ಮತ್ತು ಮೈಸೂರಿನ ಆದಿಲ್‌ ಖಾನ್‌ ದುರ್‍ರಾನಿ ಮದ್ವೆ ವಿಷಯ ಸಕತ್‌ ಚರ್ಚೆಯಲ್ಲಿತ್ತು. ಇನ್ನು ರಾಖಿ ಬಗ್ಗೆಯಂತೂ ಎಲ್ಲರಿಗೂ ತಿಳಿದದ್ದೇ. ರಾಖಿ ಸಾವಂತ್ ಇತ್ತೀಚೆಗಷ್ಟೇ ಧರ್ಮ ಬದಲಿಸಿ ಫಾತಿಮಾ ಆಗಿದ್ದಾರೆ. ನಿಜವಾಗಿ ರಾಖಿ ತಾನು ಆದಿಲ್ ನನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಹೇಳಿಕೊಂಡಿದ್ದರು. ಆದರೆ, ನಂತರ ಆದಿಲ್ ಮತ್ತು ರಾಖಿ ನಡುವೆ ಜಗಳ ಪ್ರಾರಂಭವಾಗಿತ್ತು. ರಾಖಿ ಆದಿಲ್‌ ಖಾನ್​ರನ್ನುಜೈಲಿಗೆ ತಳ್ಳಿದ್ದು, ಅವರೀಗ  ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಇದರ ನಡುವೆಯೇ, ರಾಖಿ ಮೆಕ್ಕಾಕ್ಕೆ ಹೋಗಿ ಉಮ್ರಾ  ನೆರವೇರಿಸಿದ್ದಾರೆ. ತಾವೀಗ ರಾಖಿ ಅಲ್ಲ, ಫಾತೀಮಾ (Phatima) ಎಂದು ಕರೆಯಿರಿ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದ್ದರು. ಅದಾದ ಬಳಿಕ ಇವರಿಬ್ಬರ ಡಿವೋರ್ಸ್ ಕೂಡ ಆಯಿತು ಎನ್ನಲಾಗಿತ್ತು. ಇದಾದ ಬಳಿಕ ಸೋಷಿಯಲ್​ ಮೀಡಿಯಾದಲ್ಲಿ ದಿನಕ್ಕೊಂದು ವೇಷದಲ್ಲಿ ಕಾಣಿಸಿಕೊಳ್ತಿದ್ದ ರಾಖಿ ಇದ್ದಕ್ಕಿದ್ದಂತೆಯೇ ಕಣ್ಮರೆಯಾದರು.

ಈಗ ಮತ್ತ ಪ್ರತ್ಯಕ್ಷರಾಗಿದ್ದಾರೆ. ನಾನು ಮಾಂಸಿ ಅಂದ್ರೆ ಚಿಕ್ಕಮ್ಮ ಆಗಿರೋ ವಿಷಯವನ್ನು ತಿಳಿಸುತ್ತಲೇ ಕುಣಿದು ಕುಪ್ಪಳಿಸಿದ್ದಾರೆ. ಅಷ್ಟಕ್ಕೂ ಇವರು ತಾನು ಚಿಕ್ಕಮ್ಮ ಆಗಿದ್ದೇನಂತ ಹೇಳ್ತಿರೋದು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್​ ಅವರಿಗೆ ಮಗು ಆಗಿದ್ದರ ಬಗ್ಗೆ. ನಾವಿಬ್ಬರೂ ಜೊತೆಯಲ್ಲಿಯೇ ಕೆಲ್ಸ ಮಾಡಿದ್ವಿ, ಜೊತೆಯಲ್ಲಿಯೇ ಬೆಳೆದ್ವಿ. ಈಗ ನೀನು ಮದ್ವೆಯಾದೆ, ಮಗುವಿಗೆ ಅಮ್ಮನೂ ಆದೆ ಎನ್ನುತ್ತಲೇ ಕುಣಿದು ಕುಪ್ಪಳಿಸಿದ್ದಾರೆ ರಾಖಿ. ಜೊತೆಯಲ್ಲಿಯೇ ಮಾಲ್​ ಒಂದಕ್ಕೆ ಲಗ್ಗೆ ಇಟ್ಟಿದ್ದು, ಅಲ್ಲಿ ಗೊಂಬೆ ಸೇರಿದಂತೆ ಮಗುವಿಗೆ ಬಗೆಬಗೆ ಗಿಫ್ಟ್​ ತೆಗೆದುಕೊಂಡಿದ್ದಾರೆ. ಗಿಫ್ಟ್​ ನಿಜಕ್ಕೂ ತೆಗೆದುಕೊಂಡ್ರಾ, ಪೋಸ್​ ಕೊಟ್ಟು ಅಲ್ಲೇ ಇಟ್ಟು ಬಂದ್ರಾ ಎಂದು ಟ್ರೋಲಿಗರು ಕೇಳುತ್ತಿದ್ದಾರೆ.

Tap to resize

Latest Videos

undefined

ದೀಪಿಕಾ ವಿಷ್ಯದಲ್ಲಿ ಸುಳ್ಳಾಯ್ತು ಸೆಲೆಬ್ರಿಟಿ ಜ್ಯೋತಿಷಿ ಭವಿಷ್ಯ! ರಾಜಯೋಗದ ಕಥೆಯೇನು ಕೇಳ್ತಿರೋ ಫ್ಯಾನ್ಸ್​...

ಕೆಲ ದಿನಗಳ ಹಿಂದಷ್ಟೇ,  ಏಕಾಏಕಿ ಆಸ್ಪತ್ರೆಗೆ ಅಡ್ಮಿಟ್​ ಆಗಿದ್ದರು.  ದಿಢೀರ್​ ಎಂದು ಆಸ್ಪತ್ರೆಗೆ ದಾಖಲಾಗಿದ್ದರಿಂದ ಸೋಷಿಯಲ್​  ಮೀಡಿಯಾಗಳಲ್ಲಿ ನಟಿಯನ್ನು ಟ್ರೋಲ್​ ಮಾಡಿದವರೇ ಹೆಚ್ಚು. ಸುಪ್ರೀಂಕೋರ್ಟ್​ ತೀರ್ಪಿನ ಹಿನ್ನೆಲೆಯಲ್ಲಿ, ನಟಿ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇರುವ ಕಾರಣ, ಈಕೆ ನಾಟಕ ಮಾಡುತ್ತಿದ್ದಾರೆ ಎಂದು ಎರಡನೆಯ ಮಾಜಿ ಪತಿ ಆದಿಲ್​ ಖಾನ್​ ದುರ್ರಾನಿ ಕೂಡ ಸೋಷಿಯಲ್​ ಮೀಡಿಯಾದಲ್ಲಿ ತಿಳಿಸಿದ್ದರು. ಮಾತ್ರವಲ್ಲದೇ ಹಲವಾರು ಮಂದಿ ಇದನ್ನೇ ಹೇಳಿದ್ದರು. ಅವರ ಬಾಯಿ ಮುಚ್ಚಿಸಿದ್ದ ಮೊದಲ ಮಾಜಿ ಪತಿ ರಿತೇಶ್​, ತಮ್ಮ ಮೊಬೈಲ್​ ಫೋನ್​ನಲ್ಲಿ ತೆಗೆದಿರುವ ಗಡ್ಡೆಯನ್ನು ತೋರಿಸಿದ್ದಾರೆ. ಗರ್ಭಕೋಶದಲ್ಲಿ ತುಂಬಾ ದೊಡ್ಡದಾದ ಗಡ್ಡೆ ಇತ್ತು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ರಾಖಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ರಿತೇಶ್​ ಹೇಳಿದ್ದರು. ಮೂರು ಗಂಟೆ ಶಸ್ತ್ರ ಚಿಕಿತ್ಸೆ ನಡೆಯಿತು. ರಾಖಿಗೆ ಇನ್ನೂ ಎಚ್ಚರವಾಗಿಲ್ಲ ಎಂದಿದ್ದರು.

 ಎದೆ ಮತ್ತು ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ಹಲವಾರು ಪರೀಕ್ಷೆಗಳನ್ನು ನಡೆಸಿದ ನಂತರ ವೈದ್ಯರು ರಾಖಿಯ ಗರ್ಭಾಶಯದಲ್ಲಿ ಗಡ್ಡೆಯನ್ನು ಪತ್ತೆ ಮಾಡಿದ್ದಾರೆ. ಇದು ಕ್ಯಾನ್ಸರ್ ಇರಬಹುದೆಂಬ ಶಂಕೆಗಳಿವೆ, ಆದರೆ ದೃಢೀಕರಿಸಲು ಹೆಚ್ಚಿನ ಪರೀಕ್ಷೆಯ ಫಲಿತಾಂಶಗಳು ಕಾಯುತ್ತಿವೆ. ರಾಖಿ ಶೀಘ್ರ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುವಂತೆ ರಿತೇಶ್ ಈ ಹಿಂದೆ ಕೋರಿದ್ದರು. ಇದರ ಹೊರತಾಗಿಯೂ ರಾಖಿ ಸಕತ್​ ಟ್ರೋಲ್​ಗೆ ಒಳಗಾಗಿದ್ದರು. ಈಗ ರಿತೇಶ್​ ಪುನಃ ಫೋಟೋ ತೋರಿಸುತ್ತಾ, ಇನ್ನಾದರೂ ಟ್ರೋಲ್​ ಮಾಡುವುದನ್ನು ನಿಲ್ಲಿಸಿ, ಡ್ರಾಮಾ ಎಂದು ಹೇಳಬೇಡಿ ಎಂದಿದ್ದಾರೆ. ಇದೇ ವೇಳೆ ಆದಿಲ್​ ಖಾನ್​ ದುರ್ರಾನಿ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿರುವ ಅವರು ರಾಖಿ ವಿರುದ್ಧ ಸುಳ್ಳು ಆಪಾದನೆ ಮಾಡಿದವರಿಗೆ ಸರಿಯಾದ ಶಿಕ್ಷೆಯಾಗುತ್ತದೆ. ಸಮಯ ಒಂದೇ ರೀತಿ ಇರುವುದಿಲ್ಲ. ತಕ್ಕ ಶಿಕ್ಷೆ ಆಗಿಯೇ ಆಗುತ್ತದೆ ಎಂದಿದ್ದರು. ಅದಾದ ಬಳಿಕ ನಾಪತ್ತೆಯಾಗಿದ್ದ ನಟಿ, ಮತ್ತೆ ಈಗ ಕಾಣಿಸಿಕೊಂಡಿದ್ದಾರೆ. 

ಕನ್ಯಾ ರಾಶಿಯಲ್ಲಿ ಹುಟ್ಟಿರೋ ದೀಪಿಕಾ-ರಣವೀರ್‌ ಪುತ್ರಿ ಭವಿಷ್ಯ ಹೀಗಿರಲಿದೆಯಂತೆ!

click me!