
ಹಿಂದಿಯ ಜನಪ್ರಿಯ ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ ಅಗಲಿಕೆ ಕುಟುಂಬಕ್ಕೆ, ಅಭಿಮಾನಿಗಳಿಗೆ ಆಘಾತ ತಂದಿದೆ. ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ರಾಜುಶ್ರೀವಾತ್ಸವ್ ಸೆಪ್ಟಂಬರ್ 21ರಂದು ಕೊನೆಯುಸಿರೆಳೆದರು. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆ ದೆಹಲಿಯಲ್ಲಿ ರಾಜು ನಿಧನರಾದರು. ರಾಜು ಶ್ರೀವಾತ್ಸವ್ ಆಗಸ್ಟ್ 10ರಂದು ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಹೃದಯಘಾತವಾಗಿದೆ ಎಂದು ತಿಳಿದು ಬಂದಿತ್ತು. ಬಳಿಕ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ರಾಜು ಅವರ ನಿಧನಕ್ಕೆ ಸಿನಿಮಾರಂಗದ ಗಣ್ಯರು, ಆಪ್ತರು ಕಂಬನಿ ಮಿಡಿದಿದ್ದಾರೆ. ಸದಾ ನಗಿಸುತ್ತಿದ್ದ ರಾಜು ಮೊದಲ ಬಾರಿಗೆ ಅಳಿಸಿದ್ದೀರಾ ಎಂದು ಸ್ನೇಹಿತರು ಕಣ್ಣೀರಾಕಿದ್ದಾರೆ. ಇದೀಗ ಮೊದಲ ಬಾರಿಗೆ ಮಗಳು ಅಂತರ ಅಪ್ಪನ ಬಗ್ಗೆ ಮೌನ ಮುರಿದಿದ್ದಾರೆ. ಅಪ್ಪ ಮಾತೆ ಆಡಿಲ್ಲ ಎಂದು ಬಾವುಕರಾಗಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಅಂತರ, ಒಂದು ತಿಂಗಳಿಂದ ಆಸ್ಪತ್ರೆಯಲ್ಲಿದ್ದಾಗ ಅಪ್ಪ ಏನುನ್ನೂ ಮಾತನಾಡಿಲ್ಲ ಎಂದಿದ್ದಾರೆ. ಇದು ನನ್ನ ಕುಟುಂಬಕ್ಕೆ ತುಂಬಾ ಕಠಿಣ ಸಮಯವಾಗಿದೆ. ನನ್ನ ತಾಯಿಯ ಆರೋಗ್ಯ ಕೂಡ ಸರಿಯಾಗಿಲ್ಲ' ಎಂದು ಹೇಳಿದ್ದಾರೆ.
ರಾಜು ಶ್ರೀವಾಸ್ತವ ಅವರ ಶ್ರದ್ದಾಂಜಲಿ ಸಭೆ ಮುಂಬೈನಲ್ಲಿ ಸೆಪ್ಟೆಂಬರ್ 25 ರಂದು ನಡೆಯುತ್ತಿದೆ. ಇಸ್ಕಾನ್ ಜುಹುವಿನಲ್ಲಿ ನಡೆಯಲಿದೆ. ಮುಂಬೈ ಬಳಿಕ ಕಾನ್ಪುರದಲ್ಲಿ ಮತ್ತೊಂದು ಪೂಜೆ ನಡೆಯಲಿದೆ ಎಂದು ರಾಜು ಶ್ರೀವಾಸ್ತವ್ ಮಗಳು ಬಹಿರಂಗ ಪಡಿಸಿದರು. 'ನಾವು ಶೀಘ್ರದಲ್ಲೇ ದೆಹಲಿಗೆ ಹಿಂತಿರುಗುತ್ತೇವೆ. ಸಾಕಷ್ಟು ಆಚರಣೆಗಳು ಬಾಕಿ ಇದೆ. ಕಾನ್ಪುರ ಅಪ್ಪನ ಮನೆಯಾಗಿತ್ತು. ಹಾಗಾಗಿ ಅಲ್ಲಿಯೂ ಪೂಜೆ ಮಾಡಬೇಕು’ ಎಂದು ಬಹಿರಂಗಪಡಿಸಿದರು.
Raju Srivastava: ಹಾಸ್ಯ ನಟ ರಾಜು ಶ್ರೀವಾಸ್ತವ ಇನ್ನಿಲ್ಲ
ಗಜೋಧರ ಪಾತ್ರದಲ್ಲಿ ರಾಜು
ಗಜೋಧರ ಪಾತ್ರದ ಮೂಲಕ ರಾಜು ಶ್ರೀವಾಸ್ತವ ಅಪಾರ ಜನಮನ್ನಣೆ ಗಳಿಸಿದ್ದರು. ಈ ಪಾತ್ರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಮನಸ್ಸಿನಿಂದ ನಗುವಂತೆ ಮಾಡುತ್ತಿದ್ದ ಕಾರಣ ಜನರಗೆ ಬಲು ಬೇಗ ಹತ್ತಿರವಾದರು. ಅವಾರ್ಡ್ ಕಾರ್ಯಕ್ರಮದಲ್ಲಿ ರಾಜು ಮಾಡಿದ ಸಣ್ಣದೊಂದು ಕಾಮಿಡಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟಿತ್ತು.
ದುಡ್ಡಿಲ್ಲದೆ ಮುಂಬೈನ ಬೀದಿಗಳಲ್ಲಿ ಆಟೋ ಓಡಿಸ್ತಿದ್ರು ಖ್ಯಾತ ಕಾಮಿಡಿಯನ್ !
ರಾಜು ಪರ್ಸನಲ್ ಲೈಫ್
1993ರ ಜುಲೈ 1ರಂದು ರಾಜು ಶ್ರೀವಾಸ್ತವ್ ಮತ್ತು ಶಿಖಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ, ಅಂತರಾ ಮತ್ತು ಆಯುಷ್ಮಾನ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.