ರಜನೀಕಾಂತ್​ ಮೊಮ್ಮಗನಿಂದ ಇಷ್ಟೆಲ್ಲಾ ತಪ್ಪು? ಮನೆಗೆ ಹುಡುಕಿ ಬಂದು ದಂಡ ವಿಧಿಸಿದ ಪೊಲೀಸರು!

Published : Nov 20, 2023, 05:41 PM ISTUpdated : Nov 21, 2023, 09:26 AM IST
ರಜನೀಕಾಂತ್​ ಮೊಮ್ಮಗನಿಂದ ಇಷ್ಟೆಲ್ಲಾ ತಪ್ಪು? ಮನೆಗೆ ಹುಡುಕಿ ಬಂದು ದಂಡ ವಿಧಿಸಿದ ಪೊಲೀಸರು!

ಸಾರಾಂಶ

ರಜನೀಕಾಂತ್​ ಮೊಮ್ಮಗನಿಂದ ಇಷ್ಟೆಲ್ಲಾ ತಪ್ಪು? ಮನೆಗೆ ಹುಡುಕಿ ಬಂದು ದಂಡ ವಿಧಿಸಿದ ಪೊಲೀಸರು!  

ಸೆಲೆಬ್ರಿಟಿಗಳ ಮಕ್ಕಳು ಏನು ತಪ್ಪು ಮಾಡಿದರೂ ಸುಲಭದಲ್ಲಿ ತಪ್ಪಿಸಿಕೊಳ್ಳಬಹುದು ಎಂದುಕೊಳ್ಳುತ್ತಾರೆ. ಇದು ಹಲವು ಬಾರಿ ನಿಜವೂ ಆಗಿರುತ್ತದೆ. ಆದರೆ ಗ್ರಹಚಾರ ಕೆಟ್ಟರೆ ಅವರಿಗೆ ಮಾಡಿದ ತಪ್ಪಿಗೆ ದಂಡವೂ ಬೀಳುತ್ತದೆ. ಅದೇ ಘಟನೆ ಈಗ ಸೂಪರ್​ ಸ್ಟಾರ್​ ರಜನೀಕಾಂತ್​ ಅವರ ಮೊಮ್ಮಗ ಹಾಗೂ ನಟ ಧನುಷ್​ ಅವರ ಪುತ್ರ ಯಾತ್ರಾಗೂ ಆಗಿದೆ.  ಬೈಕ್​ ಬಗ್ಗೆ ಕ್ರೇಜ್​ ಹೊಂದಿರೋ ಯಾತ್ರಾ ಅವರಿಗೆ ಟ್ರಾಫಿಕ್​ ನಿಯಮ ಉಲ್ಲಂಘಿಸಿದ ಕಾರಣ, ದಂಡ ಬಿದ್ದಿದೆ.  ಇತ್ತೀಚೆಗೆ ಅವರು ಸೂಪರ್​ಬೈಕ್​ ಓಡಿಸಿದ ವಿಡಿಯೋ ವೈರಲ್​ ಆಗಿತ್ತು. ಅವರಿಗೆ ಇನ್ನೋರ್ವ ವ್ಯಕ್ತಿ ಬೈಕ್​ ಕಲಿಸಿಕೊಡುತ್ತಿದ್ದರು. ಈ ಸಂದರ್ಭದಲ್ಲಿ ಯಾತ್ರಾ ಹೆಲ್ಮೆಟ್​ ಧರಿಸಿರಲಿಲ್ಲ. ವೈರಲ್​ ಆದ ಈ ವಿಡಿಯೋ ನೋಡಿದ ಪೊಲೀಸರು ವಿಚಾರಣೆ ಕೈಗೊಂಡರು.

ಹೆಲ್ಮೆಟ್​ ಇಲ್ಲದೇ ಮಾತ್ರವಲ್ಲದೇ, ಪರವಾನಗಿ ಇಲ್ಲದೆ ಬೈಕ್​ ಸವಾರಿ ಮಾಡಿದ್ದವರು ಇವರು.  ಯಾತ್ರಾ ಬೈಕ್​ ಚಾಲನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು  ದಾಖಲಿಸಿ ಕ್ರಮ ತೆಗೆದುಕೊಂಡಿದ್ದಾರೆ. ಅಲ್ಲದೆ, ಯಾತ್ರಾಗೆ ತಮಿಳುನಾಡು ಪೊಲೀಸರು ಬುದ್ಧಿ ಮಾತು ಸಹ ಹೇಳಿದ್ದಾರೆ. ವೈರಲ್ ವಿಡಿಯೋದಲ್ಲಿ ಯಾತ್ರಾ ಅವರು ಮಾಸ್ಕ್​ ಧರಿಸಿದ್ದರು. ಆದ್ದರಿಂದ ಅವರ ಗುರುತು ಪೊಲೀಸರಿಗೆ ಸಿಕ್ಕಿರಲಿಲ್ಲ. ಬಳಿಕ ಬೈಕ್​ ನಂಬರ್​ ಪತ್ತೆ ಹಚ್ಚಿದ ಬಳಿಕ ಅದು ರಜನೀಕಾಂತ್ ಅವರ ಪುತ್ರಿ   ಐಶ್ವರ್ಯಾ ಮನೆಗೆ ಸೇರಿದ್ದು ಎಂದು ತಿಳಿಯಿತು. ನಂತರ ಅಲ್ಲಿಗೆ ಪೊಲೀಸರು ದೌಡಾಯಿಸಿದ್ದಾಗ ಐಶ್ವಯಾ ಅವರು ತಮ್ಮ ಮಗ ಎಂದು ಹೇಳಿದ್ದಾರೆ.  ಆ ಬಳಿಕ ಪೊಲೀಸರು ದಂಡ ಹಾಕಿದ್ದಾರೆ ಎಂದು ವರದಿ ಆಗಿದೆ. 

ಹೆಣ್ಣಿನ ಮೇಲೆರಗಲು ಬಂದವನಿಗೆ ಒದ್ದು ಬುದ್ಧಿ ಕಲಿಸಿದ ಸಹನಾ, ಅತ್ತೆಗೂ ಹಿಂಗೆ ಬುದ್ಧಿ ಕಲಿಸೆಂದ ನೆಟ್ಟಿಗರು!

ಸೆಲೆಬ್ರಿಟಿಗಳ ಮಕ್ಕಳು ತಪ್ಪು ಮಾಡಿದಾಗ ಪೊಲೀಸರು ಸುಮ್ಮನೆ ಬಿಟ್ಟುಬಿಡುತ್ತಾರೆ ಎಂದು ಹಲವರು ಟ್ರೋಲ್​ ಮಾಡಿದ್ದರು. ಆದ್ದರಿಂದ ಇದನ್ನು ಗಂಭೀರವಾಗಿ ಪರಿಣಿಸಿದ ಪೊಲೀಸರು 1 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಅಷ್ಟೇ ಅಲ್ಲದೇ ಯಾತ್ರಾ ಇನ್ನೂ ಅಪ್ರಾಪ್ತ. ಅವರಿಗೆ 17 ವರ್ಷ ವಯಸ್ಸು. ಅಪ್ರಾಪ್ತರಿಗೆ ಬೈಕ್ ಓಡಿಸಲು ನಿರ್ಬಂಧವಿದೆ. ಆದರೆ, 17 ವರ್ಷದ ಧನುಷ್​ ಪುತ್ರ ಆರಾಮಾಗಿ ಬೈಕ್​ ಚಲಾಯಿಸಿಕೊಂಡು ಹೋಗಿದ್ದಕ್ಕೆ ನೆಟ್ಟಿಗರು ಟೀಕೆ ಮಾಡಿ, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು. ಎಷ್ಟೊಂದು ಟ್ರಾಫಿಕ್​ ನಿಯಮವನ್ನು ಒಟ್ಟಿಗೇ ಉಲ್ಲಂಘನೆ ಮಾಡಲಾಗಿದ್ದರೂ ಪೊಲೀಸರು ಮೌನ ಧರಿಸಿದ್ದಾರೆ ಎಂದಿದ್ದರು. 

ಅಂದಹಾಗೆ ಯಾತ್ರಾ ಅವರು ರಜನಿಕಾಂತ್​ ಪುತ್ರಿ ಐಶ್ವರ್ಯಾ ಮತ್ತು  ಧನುಷ್​​ ಅವರ ಪುತ್ರ. ಇವರ ಮದುವೆ  2004ರಲ್ಲಿ ನಡೆದಿತ್ತು.  ಯಾತ್ರಾ ರಾಜ ಸೇರಿದಂತೆ ದಂಪತಿಗೆ ಲಿಂಗ ರಾಜ ಎನ್ನುವ ಇನ್ನೋರ್ವ ಪುತ್ರನೂ ಇದ್ದಾರೆ. ಆದರೆ ದಂಪತಿ ನಡುವೆ ಸಾಮರಸ್ಯ ಮೂಡದೇ ಇಬ್ಬರೂ 2022ರಲ್ಲಿ  ವಿಚ್ಛೇದನ ಪಡೆದರು. ಇಬ್ಬರೂ ಕೂಡ ತಮಿಳು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ನಿರ್ದೇಶಕಿಯಾಗಿ ಐಶ್ವರ್ಯಾ ರಜನಿಕಾಂತ್​ ಗುರುತಿಸಿಕೊಂಡಿದ್ದಾರೆ. ಅವರು ನಿರ್ದೇಶನ ಮಾಡಿರುವ ‘ಲಾಲ್​ ಸಲಾಂ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ.

ವಿಶ್ವ ಕಪ್​ ಸೋಲಲು ಅಮಿತಾಭ್​ ಬಚ್ಚನ್​ ಕಾರಣವಂತೆ! ನಟನ ಕಾಲೆಳೆಯುತ್ತಿದ್ದಾರೆ ಫ್ಯಾನ್ಸ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
Sonali Bendre: 'ಅಡುಗೆಮನೆಗೆ ಹೋಗ್ಬೇಡ ನೀನು'.. ಅಂತ ಖಡಕ್ ಆಗಿ ಹೇಳಿದ್ರು ನನ್ ಅತ್ತೆ!