
ಶಿಲ್ಪಾ ಶೆಟ್ಟಿಯನ್ನು ಮದುವೆಯಾಗುವ ಮುನ್ನ ರಾಜ್ ಕುಂದ್ರಾ ಯುಕೆ ಮೂಲದ ಒಬ್ಬ ಉದ್ಯಮಿ ಅಷ್ಟೇ ಆಗಿದ್ದರು. ಆದರೆ ಬಾಲಿವುಡ್‌ನ ಟಾಪ್ ನಟಿ, ಕರಾವಳಿ ಚೆಲುವೆಯ ಕೈಹಿಡಿದ ಮೇಲೆ ರಾಜ್ ಕುಂದ್ರಾ ಫೇಮ್-ನೇಮ್ ಹೆಚ್ಚಾಯಿತು.
ಸದ್ಯ ಪೋರ್ನ್ ವಿಡಿಯೋ ದಂಧೆಯಲ್ಲಿ ಸಿಕ್ಕಿ ಹಾಕಿಕೊಂಡಿರುವ ರಾಜ್ ಕುಂದ್ರಾ ಮುಂಬೈನಲ್ಲಿ ಉಳಿದುಕೊಂಡಿದ್ದೇ ಶಿಲ್ಪಾಗೋಸ್ಕರ. ಭಾರತದಲ್ಲಿದ್ರೆ ಮಾತ್ರ ಮದುವೆಯಾಗೋದೆನ್ನುವ ಶಿಲ್ಪಾ ಕಂಡೀಷನ್‌ಗೆ ಒಪ್ಪಿ ಮುಂಬೈನ ಜುಹುವಿನಲ್ಲಿ ಮನೆ ಖರೀದಿಸಿದ್ದರು ರಾಜ್.
ನೀವು ನನಗೆ ನನ್ನ ತಂದೆಯನ್ನು ನೆನಪಿಸಿದ್ರಿ: ಸೋನು ಬಗ್ಗೆ ಐಶ್ ಹೇಳಿದ್ದಿಷ್ಟು
ಭಾರತದವರೇ ಆದ ರಾಜ್ ಕುಂದ್ರಾ ಯುಕೆಯಲ್ಲಿ ಹುಟ್ಟಿ ಬೆಳೆದಿದ್ದು ಹೇಗೆ ಎಂಬುದು ಕುತೂಹಲಕಾರಿ ವಿಚಾರ. ಅಂದ ಹಾಗೆ ರಾಜ್ ಕುಂದ್ರಾ ಅವರ ತಂದೆ ಬಸ್ ಕಂಡಕ್ಟರ್ ಆಗಿದ್ದರು. ಬಡತನ, ಕಷ್ಟದ ಜೀವನ ಹೇಟ್ ಮಾಡ್ತಿದ್ದ ರಾಜ್ ಉದ್ಯಮಿಯಾಗಿ ಸಕ್ಸಸ್ ಆದರು.
ಶಿಲ್ಪಾ ಅವರನ್ನು ಮದುವೆಯಾಗಬೇಕಾದರೂ ಜುಹುವಿನಲ್ಲಿ ಅಮಿತಾಭ್ ಮನೆಯ ಪಕ್ಕವೇ ಮನೆ ಕೂಡಾ ಖರೀದಿಸಿದ್ದರು ರಾಜ್. ಇದು ಶಿಲ್ಪಾ ಶೆಟ್ಟಿ ಕಂಡೀಷನ್ ಆಗಿತ್ತು ಎಂಬುದು ವಿಶೇಷ.
"
ಲಕ್ಷುರಿ ಜೀವನ ನಡೆಸುತ್ತಿದ್ದ ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ ಜೋಡಿ ಸದ್ಯ ಸಂಕಟಕ್ಕೆ ಸಿಲುಕಿದ್ದಾರೆ. ರಾಜ್ ಕುಂದ್ರಾ ನ್ಯಾಯಾಂಗ ಬಂಧನ ಮತ್ತೆ ವಿಸ್ತರಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.