ಈಗ ಸೂಪರ್ಸ್ಟಾರ್ ಎನಿಸಿಕೊಂಡಿರುವ ನಟ ರಜನಿಕಾಂತ್ ಹಿಂದೊಮ್ಮೆ ಕೆಟ್ಟಭ್ಯಾಸಗಳ ದಾಸನಾಗಿದ್ದ ಕುರಿತು ತಿಳಿಸಿದ್ದಾರೆ. ಅವರು ಹೇಳಿದ್ದೇನು?
ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಕುರಿತು ಏನೂ ಹೇಳಬೇಕಾಗಿದ್ದಿಲ್ಲ. ಅತ್ಯಂತ ಯಶಸ್ವಿ ನಟರಲ್ಲಿ ಒಬ್ಬರು ಎನಿಸಿಕೊಂಡವರು. ಭಾರತೀಯ ಚಿತ್ರರಂಗದ ದೊಡ್ಡ ತಾರೆಗಳಲ್ಲಿ ಒಬ್ಬರಾಗಿರುವ ನಟ, ಭಾರತದಾದ್ಯಂತ ಮಾತ್ರವಲ್ಲದೇ ಜಾಗತಿಕವಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ತಮ್ಮ ವಿಶಿಷ್ಟ ಶೈಲಿ, ವರ್ಚಸ್ಸು ಮತ್ತು ವ್ಯಕ್ತಿತ್ವಕ್ಕೆ ಹೆಸರುವಾಸಿಯಾದವರು. ರಜನಿ ಸ್ಟೈಲ್ ಎಂದೇ ಕೆಲವೊಂದು ಸ್ಟೈಲ್ಗಳೂ ಇವೆ. ತಮ್ಮ ಯುನಿಕ್ ಸ್ಟೈಲ್ ಹಾಗೂ ಪರ್ಸನಾಲಿಟಿಯಿಂದ ಅವರು ಪ್ರೇಕ್ಷಕರನ್ನು ಇಂಪ್ರೆಸ್ ಮಾಡುತ್ತಾರೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ 72 ನೇ ಜನ್ಮದಿನವನ್ನು ಆಚರಿಸಿಕೊಂಡಿರುವ ಈ ನಟ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರೂ ಹೌದು. ರಜನಿ ಅವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್. ಅಲ್ಲಿಂದ ಶಿವಾಜಿ ರಜನಿಯಾಗಿ ಬೆಳೆದದ್ದರ ಹಿಂದೆ ತುಂಬಾ ಪರಿಶ್ರಮವಿದೆ. ಮರಾಠಿ ಮತ್ತು ಕನ್ನಡದಲ್ಲಿಯೂ (Kannada) ಪರಿಣತರಾಗಿದ್ದಾರೆ ಇವರು.
ಇಂತಿಪ್ಪ ರಜನಿಕಾಂತ್ ಜೀವನ ಹೂವಿನ ಹಾಸಿಗೆಯಾಗಿರಲಿಲ್ಲ. ಅತ್ಯಂತ ಕಠಿಣ ಶ್ರಮದಿಂದ ಬಂದವರು. ಸಿನಿ ಲೋಕಕ್ಕೆ ಪ್ರವೇಶಿಸುವ ಮೊದಲು, ಕೂಲಿ, ಕಾರ್ಪೆಂಟರ್ ಮತ್ತು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿರುವುದು ಬಹುತೇಕರಿಗೆ ತಿಳಿದ ವಿಷಯವೇ. ಅದೇ ರೀತಿ, ರಜನಿಕಾಂತ್ ಈಗ ತಮ್ಮ ಹಿಂದಿನ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅದು ಅವರ ಕೆಟ್ಟ ಚಟ (Bad Habbits) ಕುರಿತು. ತಾನು ಬಸ್ ಕಂಡಕ್ಟರ್ ಆಗಿದ್ದಾಗ ಪ್ರತಿನಿತ್ಯ ಮಟನ್, ಆಲ್ಕೋಹಾಲ್ ಮತ್ತು ಸಿಗರೇಟ್ ತಿನ್ನುತ್ತಿದ್ದೆ ಎಂದು ರಜನಿಕಾಂತ್ ಹೇಳಿದ್ದಾರೆ. ನಂತರ ತಾವು ಚಿತ್ರರಂಗಕ್ಕೆ ಸೇರಿದಾಗ ಕೆಟ್ಟ ಚಟಗಳಿಗೆ ಮತ್ತಷ್ಟು ಹೇಗೆ ದಾಸನಾದೆ ಎನ್ನುವುದನ್ನೂ ತಿಳಿಸಿದ್ದಾರೆ. ತಮ್ಮ ಲೈಫ್ಸ್ಟೈಲ್ ಬಗ್ಗೆ ರಿವೀಲ್ ಮಾಡಿರೋ ರಜನೀಕಾಂತ್, ತಾವು ಬಸ್ ಕಂಡಕ್ಟರ್ ಆಗಿದ್ದಾಗ ಪ್ರತಿದಿನ ಮಟನ್ ತಿನ್ನುತ್ತಿದ್ದೆ. ಲೆಕ್ಕವಿಲ್ಲದಷ್ಟು ಸಿಗರೇಟ್ ಸೇದುವುದು ಮದ್ಯ ಸೇವನೆಯನ್ನೂ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಆದರೆ ನಂತರ ಚಿತ್ರರಂಗದಲ್ಲಿ ತೊಡಗಿಸಿಕೊಂಡಾಗ ಈ ಅಭ್ಯಾಸ ತಮಗೆ ತೊಂದರೆಯಾಯಿತು ಎಂದಿದ್ದಾರೆ.
ಇನ್ನೊಂದು ಸಿನಿಮಾ ಸೋತರೆ ಈ ಖ್ಯಾತ ಬಾಲಿವುಡ್ ನಟ-ನಟಿಯರ ಕರೀಯರ್ ಟುಸ್!
ದಿನಕ್ಕೆ ಎರಡು ಹೊತ್ತೂ ಮಟನ್, ಚಿಕನ್ ತಿನ್ನುತ್ತಿದ್ದೆ. ಸಿಗರೆಟ್ (Smoking) ದಾಸನಾಗಿದ್ದೆ. ನಾನು ಬಸ್ ಕಂಡಕ್ಟರ್ ಆಗಿದ್ದಾಗ ಕೆಲವು ತಪ್ಪಾದ ಗೆಳೆತನದಿಂದಾಗಿ ನನಗೆ ಬಹಳಷ್ಟು ಕೆಟ್ಟ ಅಭ್ಯಾಸಗಳಿದ್ದವು. ನಾವು ಪ್ರತಿದಿನ ಎರಡು ಬಾರಿ ಮಟನ್ ತಿನ್ನುತ್ತಿದ್ದೆ. ಪ್ರತಿ ದಿನ ಕುಡಿಯುತ್ತಿದ್ದೆ. ಎಷ್ಟು ಸಿಗರೇಟ್ ಸೇದುತ್ತಿದ್ದೆ ಎಂದು ನನಗೇ ಗೊತ್ತಿಲ್ಲ. ಸಿನಿಮಾಗೆ ಬಂದ ನಂತರ ಹಣ, ಖ್ಯಾತಿಯ ಜೊತೆ ಈ ಚಟ ಹೇಗೆ ಮುಂದುವರಿಯುತ್ತಿತ್ತು ಎಂದಿದ್ದಾರೆ. ಪ್ರತಿದಿನ ಬೆಳಗ್ಗೆ ನನಗೆ ಮಟನ್, ಅಪ್ಪಂ, ಚಿಕನ್ ಬೇಕಾಗಿತ್ತು. ನನಗೆ ಸಸ್ಯಾಹಾರಿಗಳನ್ನು ನೋಡಿದಾಗ ಅಚ್ಚರಿಯಾಗುತ್ತಿತ್ತು. ಇವರು ನಿಜಕ್ಕೂ ಏನು ತಿನ್ನುತ್ತಾರೆ ಎಂದುಕೊಳ್ಳುತ್ತಿದ್ದೆ. ಸಿಗರೇಟ್, ಮಟನ್ ಹಾಗೂ ಮದ್ಯ ಡೇಂಜರಸ್ ಕಾಂಬಿನೇಷನ್ ಎಂದಿದ್ದಾರೆ ನಟಿ.
ಇದರಿಂದ ಹೊರಕ್ಕೆ ಬರಲು ಸಾಧ್ಯವಾಗದಿದ್ದಾಗ ನನ್ನನ್ನು ಸರಿದಾರಿಗೆ ತಂದವರು ವೈಜಿ ಮಹೇಂದ್ರ. ಅವರಿಗೆ ನಾನು ಅಭಾರಿಯಾಗಿದ್ದೇನೆ ಎಂದಿದ್ದಾರೆ ನಟ. ಅವರೇ ನನಗೆ ಲತಾರನ್ನು ಪರಿಚಯಿಸಿ ಆಕೆಯನ್ನು ಮದುವೆಯಾಗುವಂತೆ ಹೇಳಿದರು. ಅಂದಿನಿಂದ ನನ್ನ ಲೈಫ್ಸ್ಟೈಲ್ (Life style) ಬದಲಾಯಿತು. ನನ್ನನ್ನು ನಿಯಂತ್ರಿಸಿಕೊಂಡು ಒಂದಷ್ಟು ಸಮಯ ತುಂಬಾ ಕಠಿಣವಾದ ಡಯೆಟ್ ಫಾಲೋ ಮಾಡಿದೆ. ಲತಾಳ (Latha) ಪ್ರೀತಿ ಹಾಗೂ ಅಗತ್ಯ ವೈದ್ಯಕೀಯ ಚಿಕಿತ್ಸೆ ಮೂಲಕ ನಾನು ಈ ಹವ್ಯಾಸ ಬದಲಾಯಿಸಲು ಸಾಧ್ಯವಾಯಿತು. ನಂತರ ನಾನು ಚಟದಿಂದ ಮುಕ್ತನಾದೆ. ನನಗೆ ಈಗ 73 ವರ್ಷ ವಯಸ್ಸು. ನನ್ನ ಆರೋಗ್ಯಕ್ಕೆ ನನ್ನ ಪತ್ನಿಯೇ ಕಾರಣ ಎಂದಿದ್ದಾರೆ. ಅಂದಹಾಗೆ ರಜನಿ ಅವರು, ತಮ್ಮ ಸಂದರ್ಶನಕ್ಕೆ ಬಂದಿದ್ದ ಯುವತಿಯನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ. ಅವರ ಪತ್ನಿ ಲತಾ ಜೊತೆ ಸುಖೀ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.
ಆಮೀರ್ ಖಾನ್ ಚಿತ್ರ ರಿಜೆಕ್ಟ್ ಮಾಡಿದ ಸಲ್ಲು! ಮಿಡ್ನೈಟ್ ಪಾರ್ಟಿಯಲ್ಲೇನಾಯ್ತು ಅಂತಿದ್ದಾರೆ ಫ್ಯಾನ್ಸ್!