
ಸೂಪರ್ ಸ್ಟಾರ್, ತಲೈವ ರಿಜನಿಕಾಂತ್ ಅವರಿಗೆ ಇಂದು (ಡಿಸೆಂಬರ್ 12) ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳ ಪಾಲಿಗೆ ಈ ದಿನ ದೊಡ್ಡ ಹಬ್ಬ. ಈಗಾಗಲೇ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ, ಸಂಭ್ರಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ರಜನಿಕಾಂತ್ ಫೋಟೋ, ವಿಡಿಯೋ ಶೇರ್ ಮಾಡಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ನಾನಾರೀತಿಯಲ್ಲಿ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಅನೇಕ ಸಿನಿಮಾ ಗಣ್ಯರು ಸಹ ರಜನಿಕಾಂತ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಎಂದರೆ ಎಲ್ಲರಿರೂ ಇಷ್ಟ, ಪ್ರೀತಿ, ಗೌರವ. ಅವರ ವ್ಯಕ್ತಿತ್ವವೇ ಹಾಗೆ. ಅನೇಕ ಕಾರಣಗಳಿಗೆ ರಜನಿಕಾಂತ್ ಅವರನ್ನು ಇಷ್ಟವಾಗುತ್ತಾರೆ. ಅದರಲ್ಲಿ ಸೂಪರ್ ಸ್ಟಾರ್ ಜಾಹೀರಾತುಗಳ ವಿಚಾರದಲ್ಲಿ ತೆಗೆದುಕೊಂಡ ನಿಲುವು ಕೂಡ ಒಂದು. ಹೌದು ಸೂಪರ್ ಸ್ಟಾರ್ ಇದುವರೆಗೂ ಕಾಣಿಸಿಕೊಂಡಿದ್ದು ಒಂದೇ ಒಂದು ಜಾಹೀರಾತಿನಲ್ಲಿ. ಅಚ್ಚರಿ ಎನಿಸಿದ್ದರೂ ಇದು ನಿಜ.
ರಜನಿಕಾಂತ್ ಸ್ಟಾರ್‌ಗಿರಿಗೆ, ಖ್ಯಾತಿಗೆ ಅದೆಷ್ಟೋ ಜಾಹೀರಾತುಗಳಲ್ಲಿ ಮಿಂಚಬಹುದಿತ್ತು, ಅದನ್ನು ತಗೊಳ್ಳಿ ಇದನ್ನ ತಗೊಳ್ಳಿ ಎಂದು ಅಭಿಮಾನಿಗಳಿಗೆ ಹೇಳಬಹುದಿತ್ತು. ಆದರೆ ಸೂಪರ್ ಸ್ಟಾರ್ ಹಾಗೆ ಮಾಡಿಲ್ಲ. ಅಭಿಮಾನಿಗಳನ್ನು ದಾರಿ ತಪ್ಪಿಸಿ ಹಣ ಮಾಡುವ ಕೆಲಸಕ್ಕೆ ಇಳಿದಿಲ್ಲ. ಬಹುತೇಕ ಸ್ಟಾರ್ ಕಲಾವಿದರಂತೆ ರಜನಿಕಾಂತ್ ತನ್ನನ್ನು ತಾನು ವಾಣಿಜ್ಯೀಕರಿಸುವ ಕಲ್ಪನೆಗೆ ವಿರೋದಿ. ವಿಶೇಷ ಎಂದರೆ ಪ್ರಾರಂಭದ ದಿನಗಳಲ್ಲಿ ರಜನಿಕಾಂತ್ ಒಂದೇ ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಕೂಲ್ ಡ್ರಿಂಕ್ಸ್ ಜಾಹೀರಾತು ಅದಾಗಿತ್ತು. ಬಾಟೆಲ್ ಕ್ಯಾಪ್ ಓಪನ್ ಮಾಡಿ ಮುತ್ತಿಟ್ಟು ಕುಡಿಯುವ ದೃಶ್ಯದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದರು. ಇದೀಗ ಆ ಹಳೆಯ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Rajinikanth: ಮತ್ತೆ ಮರು ಬಿಡುಗಡೆ ಆಗುತ್ತಿದೆ ಬಾಬಾ: ಹೊಸ ಟ್ರೈಲರ್ ರಿಲೀಸ್
ರಜನಿಕಾಂತ್ ತಮ್ಮ 4 ದಶಕಗಳಿಗೂ ಅಧಿಕ ವೃತ್ತಿ ಜೀವನದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಒಂದು ಜಾಹೀರಾತು ಬಿಟ್ಟರೆ ಮತ್ತೆ ಯಾವುದರಲ್ಲೂ ಕಾಣಿಸಿಕೊಂಡಿಲ್ಲ. ಅನೇಕ ಸ್ಟಾರ್ ಕಲಾವಿದರು ಸಿನಿಮಾಗಿಂತ ಹೆಚ್ಚಾಗಿ ಜಾಹೀರಾತುಗಳ ಮೂಲಕವೇ ಹೆಚ್ಚು ಸಂಪಾದನೆ ಮಾಡುತ್ತಿದ್ದಾರೆ. ಕೋಟಿ ಕೋಟಿ ಗಳಿಸುತ್ತಿದ್ದಾರೆ. ಆದರೆ ರಜನಿಕಾಂತ್ ಮಾತ್ರ ಅದರಿಂದ ತುಂಬಾ ದೂರ. ಅದೆಷ್ಟೆ ಜಾಹೀರಾತು ಕಂಪನಿಗಳು ಅವರನ್ನು ಭೇಟಿ ಮಾಡಿವೆ, ತಮ್ಮ ಬ್ರಾಂಡ್ ಪ್ರಚಾರ ಮಾಡುವಂತೆ ಕೇಳಿಕೊಂಡಿದ್ದುಂಟು, ಕೋಟಿ ಕೋಟಿ ಸುರಿಯುವುದಾಗಿ ಹೇಳಿದ್ದರು. ಆದರೆ ರಜನಿಕಾಂತ್ ಉತ್ತರ ಮಾತ್ರ ನೋ.. ಹಾಗಾಗಿಯೇ ರಜನಿಕಾಂತ್ ಎಲ್ಲಿರಿಗೂ ಇಷ್ಟವಾಗುವುದು.
Jailer; ಮಾಸ್ ಅಂಡ್ ಕ್ಲಾಸ್ ಲುಕ್‌ನಲ್ಲಿ ರಜನಿಕಾಂತ್ ಮಿಂಚಿಂಗ್; ಫೋಟೋ ವೈರಲ್
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸೂಪರ್ ಸ್ಟಾರ್ ಸದ್ಯ ಜೈಲರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಫಸ್ಟ್ ಲುಕ್ ಕೂಡ ವೈರಲ್ ಆಗಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಕನ್ನಡದ ಸ್ಟಾರ್ ಶಿವರಾಜ್ ಕುಮಾರ್ ಕೂಡ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಶಿವಣ್ಣ ರಜನಿಕಾಂತ್ ಜೊತೆ ನಟಿಸುತ್ತಿದ್ದಾರೆ. ಇಂದು ಹುಟ್ಟುಹಬ್ಬದ ಪ್ರಯುಕ್ತ ಜೈಲರ್ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ಸಿಗುವ ಸಾಧ್ಯತೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.