ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಕಾಂತಾರ ಸಿನಿಮಾ ನೋಡಿ ಹೊಗಳಿದ್ದಾರೆ. ಈ ಸಿನಿಮಾ ನೋಡಿ ತುಂಬಾ ಕಲಿತೆ ಎಂದು ಹೇಳಿದ್ದಾರೆ.
ಕಾಂತಾರ ಒಂದು ಅದ್ಭುತ ಸೃಷ್ಟಿಸಿದ ಸಿನಿಮಾ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾಗೆ ಫಿದಾ ಆದವರು ಅದೆಷ್ಟೊ ಮಂದಿ ಇದ್ದಾರೆ. ಅಭಿಮಾಗಳು, ಬೇರೆ ಬೇರೆ ಭಾಷೆಯ ಸ್ಟಾರ್ಸ್ ಹೀಗೆ ಅನೇಕ ಮಂದಿ ಕಾಂತಾರ ನೋಡಿ ಮೆಚ್ಚಿಕೊಂಡಿದ್ದಾರೆ, ಹಾಡಿಹೊಗಳಿದ್ದಾರೆ. ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನಕ್ಕೆ ಮನಸೋತಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಧನುಷ್, ಪ್ರಭಾಸ್, ಅನುಷ್ಕಾ ಶೆಟ್ಟಿ, ಕಾರ್ತಿ, ಕಂಕನಾ, ಹೀಗೆ ಅನೇಕ ದೊಡ್ಡ ದೊಡ್ಡ ಕಲಾವಿದರು ಸಹ ಕಾಂತಾರ ನೋಡಿ ಇಷ್ಟಪಟ್ಟಿದ್ದಾರೆ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್ ಕಾಂತಾರ ಸಿನಿಮಾ ನೋಡಿ ಇಷ್ಟಪಟ್ಟಿದ್ದಾರೆ. ಅಷ್ಟೆಯಲ್ಲದೇ ಸಿನಿಮಾದಿಂದ ತುಂಬಾ ಕಲಿತೆ ಎಂದು ಹೇಳಿದ್ದಾರೆ.
ರಿಷಬ್ ಶೆಟ್ಟಿ ಕಾಂತಾರ ನೋಡಿ ಟ್ವೀಟ್ ಮಾಡಿರುವ ಹೃತಿಕ್ ರೋಷನ್, 'ಕಾಂತಾರ ಸಿನಿಮಾ ನೋಡಿ ತುಂಬಾ ಕಲಿತೆ. ಅದ್ಭುತವಾದ ನಿರ್ದೇಶ, ನಿರೂಪಣೆ ಮತ್ತು ನಟನೆ. ಕ್ಲೈಮ್ಯಾಕ್ಸ್ ನೋಡಿ ಗೂಸ್‌ಬಮ್ಸ್ ಬಂತು. ಇಡೀ ತಂಡಕ್ಕೆ ಅಭಿನಂದನೆಗಳು' ಎಂದು ಹೇಳಿದ್ದಾರೆ. ಹೃತಿಕ್ ರೋಷನ್ ಟ್ವೀಟ್‌ಗೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಕಾಂತಾರ ಸಕ್ಸಸ್
ಕಾಂತಾರ ಕಡಿಮೆ ಬಜೆಟ್ ನಲ್ಲಿ ತಯಾರಾದ ಸಿನಿಮಾವಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿರುವ ಕಾಂತಾರ ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಯಲ್ಲೂ ರಿಲೀಸ್ ಆಗಿದೆ. ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ಕಾಂತಾರ ಬಳಿಕ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಯಿತು. ಕನ್ನಡದಲ್ಲಿ ಸಕ್ಸಸ್ ಕಾಣುತ್ತಿದ್ದಂತೆ ಬೇರೆ ಬೇರೆ ಭಾಷೆಯಲ್ಲೂ ರಿಲೀಸ್ ಮಾಡುವಂತೆ ಒತ್ತಾಯದ ಮೇರೆಗೆ ರಿಲೀಸ್ ಆದ ಸಿನಿಮಾ. ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ಕಾಂತಾರ ಬರೋಬ್ಬರಿ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ಚಿತ್ರಕ್ಕೆ ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಗಣ್ಯರು ಸಹ ಹಾಡಿಹೊಗಳಿದ್ದರು.
'ಸೈರಾಟ್' ಮರಾಠಿ ಸಿನಿರಂಗವನ್ನೇ ನಾಶಪಡಿಸಿತು, ಆ ತಪ್ಪು ಮಾಡಬೇಡಿ; ರಿಷಬ್ ಶೆಟ್ಟಿಗೆ ಅನುರಾಗ್ ಕಶ್ಯಪ್ ಎಚ್ಚರಿಕೆ
ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಸಪ್ತಮಿ ಗೌಡ ನಾಯಕಿಯಾಗಿ ಮಿಂತಿದ್ದಾರೆ. ಕಿಶೋರ್ ಕುಮಾರ್, ಅಚ್ಯುತ್ ಸೇರಿದಂತೆ ಅನೇಕರು ಕಲಾವಿದರು ಬಣ್ಣ ಹಚ್ಚಿದ್ದಾರೆ. ಅನೇರ ರಂಗಭೂಮಿ ಕಲಾವಿದರು ನಟಿಸಿರುವುದು ವಿಶೇಷ. ಹೊಂಬಾಳೆ ಫಿಲ್ಸ್ಮ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬಂದಿದೆ.
ನಾವೇನು ಮಾಡ್ತಿದ್ದೀವಿ ಅಂತ ಯೋಚಿಸಬೇಕಿದೆ; 'ಕಾಂತಾರ' ಸಕ್ಸಸ್ ಬಗ್ಗೆ ನಿರ್ದೇಶಕ ರಾಜಮೌಳಿ ಅಚ್ಚರಿ ಹೇಳಿಕೆ
ಕಾಂತಾರ-2
ಕಾಂತಾರ ಸಕ್ಸಸ್ ಆದ ಬಳಿಕ ಕಾಂತಾರ ಪಾರ್ಟ್-2ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ರಿಷಬ್ ಮತ್ತು ತಂಡ. ಈಗಾಗಲೇ ಪಂಜುರ್ಲಿ ಬಳಿ ಅನುಮತಿ ಕೂಡ ಕೇಳಿರುವ ರಿಷಬ್ ಶೆಟ್ಟಿ ಮುಂದಿನ ವರ್ಷದಿಂದ ಪಾರ್ಟ್-2 ಪ್ರಾರಂಭಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಮುಂದಿನ ವರ್ಷಾರಂಭದಲ್ಲಿ ಕಾಂತಾರ ಚಿತ್ರೀಕರಣ ಪ್ರಾರಂಭವಾಗಲಿದ್ದು 2024 ಫೆಬ್ರವರಿಗೆ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿದೆ. ಮೊದಲ ಭಾಗ ನೋಡಿದ ಪ್ರೇಕ್ಷಕರಿಗೆ ಪಾರ್ಟ್-2 ಮೇಲಿನ ಕುತೂಹಲ ಹೆಚ್ಚಾಗಿದೆ.