Viral Song: ಬಾಲಿವುಡ್‌ನಲ್ಲೂ ರಾಜ್ ಬಿ ಶೆಟ್ಟಿ ಕಮಾಲ್, 'ಪಿಂಜರ' ಸಾಂಗ್ ರಂಗು, ಇಡೀ ದೇಶಕ್ಕೇ ಕನ್ನಡಿಗನ ಗುಂಗು!

Published : May 29, 2026, 11:13 AM ISTUpdated : May 29, 2026, 11:14 AM IST
Raj B Shetty

ಸಾರಾಂಶ

ಬಂದರ್ ಚಿತ್ರದ 'ಪಿಂಜಾರ' (Pinjara) ಎಂಬ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅಮಿತ್ ತ್ರಿವೇದಿ ಮ್ಯೂಸಿಕ್ ಕಿಕ್ ಮತ್ತು ಸುದೀಪ್ ಶರ್ಮಾ ಬರಹದ ಈ ಹಾಡು ಈಗ ಪ್ರತಿಯೊಬ್ಬರ ಪ್ಲೇಲಿಸ್ಟ್ ಸೇರುತ್ತಿದೆ. ಇದರಲ್ಲಿ ರಾಜ್ ಬಿ ಶೆಟ್ಟಿ ಸ್ಟೆಪ್ಸ್ ಮಿಂಚಿದ್ದಾರೆ..

ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty) ಅವರ ಕ್ರೇಜ್ ಈಗ ಗಡಿ ದಾಟಿದೆ. ಹೌದು, ಬಾಲಿವುಡ್‌ನ ಖ್ಯಾತ ವಿವಾದಾತ್ಮಕ ಮತ್ತು ಕ್ರೈಮ್ ಕಥೆಗಳ ಮಾಂತ್ರಿಕ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಹಿಂದಿ ಸಿನಿಮಾ 'ಬಂದರ್' (Bandar) ನಲ್ಲಿ ನಮ್ಮ ಹೆಮ್ಮೆಯ ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕೇವಲ ಅತಿಥಿ ಪಾತ್ರವಷ್ಟೇ ಅಲ್ಲದೆ, ಒಂದು ಹೈ-ವೋಲ್ಟೇಜ್ ಡ್ಯಾನ್ಸ್ ಸೀಕ್ವೆನ್ಸ್ ಮೂಲಕ ಅವರು ಬಾಲಿವುಡ್ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ವೈರಲ್ ಆದ 'ಪಿಂಜಾರ' ಸಾಂಗ್!

ಇತ್ತೀಚೆಗಷ್ಟೇ ಈ ಚಿತ್ರದ 'ಪಿಂಜರ' (Pinjara) ಎಂಬ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅಮಿತ್ ತ್ರಿವೇದಿ ಅವರ ಮ್ಯೂಸಿಕ್ ಕಿಕ್ ಮತ್ತು ಸುದೀಪ್ ಶರ್ಮಾ ಅವರ ಬರಹವಿರುವ ಈ ಹಾಡು ಈಗ ಪ್ರತಿಯೊಬ್ಬರ ಪ್ಲೇಲಿಸ್ಟ್ ಸೇರುತ್ತಿದೆ. ಅನುರಾಗ್ ಕಶ್ಯಪ್ ಅವರ ಸಿನಿಮಾಗಳಲ್ಲಿ ಸದಾ ಇರುತ್ತಿದ್ದ ಆ ವಿಭಿನ್ನ ಶೈಲಿಯ ಮೇಕಿಂಗ್ ಈ ಹಾಡಿನಲ್ಲೂ ಎದ್ದು ಕಾಣುತ್ತಿದೆ.

ಬಾಬಿ ಡಿಯೋಲ್ ಅವರ ವಿಭಿನ್ನ ಅವತಾರ!

ಇನ್ನು ಈ ಚಿತ್ರದಲ್ಲಿ ಬಾಲಿವುಡ್‌ನ 'ಲಾರ್ಡ್' ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅತ್ಯಾಚಾರದ ಆರೋಪ ಹೊತ್ತಿರುವ ಒಬ್ಬ ವಯಸ್ಸಾದ ಟೆಲಿವಿಷನ್ ಸ್ಟಾರ್ ಆಗಿ ಬಾಬಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರ ಬಹಳ ಸವಾಲಿನಿಂದ ಕೂಡಿದೆ ಎನ್ನಲಾಗುತ್ತಿದೆ. 'ಅನಿಮಲ್' ಚಿತ್ರದ ನಂತರ ಬಾಬಿ ಡಿಯೋಲ್ ಅವರ ಮತ್ತೊಂದು ಕೌತುಕದ ಪಾತ್ರ ಇದಾಗಲಿದೆ.

ಕ್ರೈಮ್ ಥ್ರಿಲ್ಲರ್

ಈ ಚಿತ್ರದಲ್ಲಿ ಸನ್ಯಾ ಎಂ, ಸಪ್ನಾ, ಸಬಾ ಆಜಾದ್ ಮತ್ತು ನಿಖಿಲ್ ಡಿ ಅವರಂತಹ ಪ್ರತಿಭಾವಂತ ತಾರಾಗಣವಿದೆ. ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ಜೂನ್ 5, 2026 ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಾಜ್ ಬಿ ಶೆಟ್ಟಿ ಅವರ ವಿಭಿನ್ನ ನಟನೆ ಮತ್ತು ಅನುರಾಗ್ ಕಶ್ಯಪ್ ಅವರ ರಾ ಸ್ಟೈಲ್ ಮೇಕಿಂಗ್ ನೋಡಲು ಈಗಿನಿಂದಲೇ ಸಿನಿರಸಿಕರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟರೊಬ್ಬರು ಬಾಲಿವುಡ್‌ನ ಈ ಮಟ್ಟದ ದೊಡ್ಡ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಕನ್ನಡಿಗರಿಗೆ ನಿಜಕ್ಕೂ ಹೆಮ್ಮೆಯ ವಿಷಯ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚಾಮುಂಡೇಶ್ವರಿ ಮುಂದೆ ಕ್ಷಮೆ ಕೋರಿದ ಬೆನ್ನಲ್ಲೇ ಸಲ್ಮಾನ್ ಖಾನ್ ಮೂಲಕ ರಣವೀರ್-ಫರ್ಹಾನ್ 'ವಾರ್' ಎಂಡ್!?
Ohh My God: ಸುಳ್ಳು ಹೇಳಿ ಮುಂಬೈ ಲೋಕಲ್ ಟ್ರೇನ್‌ನಲ್ಲಿ ಸಾರಾ ಎಲ್ಲಿಗೆ ಹೋಗಿದ್ರು? ಅಮ್ಮ ಅಮೃತಾ ಸಿಂಗ್ ಕೈನಲ್ಲಿ ಸಿಕ್ಕಿಬಿದ್ದಿದ್ದು ಹೀಗೆ!