
ನೈಟ್ ಕ್ಲಬ್ ಮೇಲೆ ದಾಳಿ ನಡೆದಿದ್ದು ಹೃತಿಕ್ ರೋಷನ್ ಮಾಜಿ ಪತ್ನಿ ಸುಸೇನ್ ಖಾನ್ ಸೇರಿ ಹಲವು ಸೆಲೆಬ್ರಿಟಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅಂಧೇರಿಯ ಡ್ರ್ಯಾಗನ್ ಫ್ಲೈ ಕ್ಲಬ್ ಮೇಲೆ ದಾಳಿ ನಡೆದಿದೆ.
ಸಹರ್ ಪೊಲೀಸರು ಕ್ರಿಕೆಟಿಗ ಸುರೇಶ್ ರೈನಾ, ಗಾಯಕ ಗುರು ರಾಂಧವ, ಹೃತಿಕ್ ರೋಷನ್ ಮಾಜಿ ಪತ್ನಿ ಸುಸೇನ್ ಖಾನ್ ಸೇರಿ ಹಲವು ಹೋಟೆಲ್ ಸ್ಟಾಫ್‌ಗಳನ್ನು ಬಂಧಿಸಿದ್ದಾರೆ. ಕೊರೋನಾ ನಿಯಮಗಳ ಉಲ್ಲಂಘನೆ ಆರೋಪದಲ್ಲಿ ಎಫ್‌ಐಆರ್ ಕೂಡಾ ದಾಖಲಾಗಿದ್ದು, ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ.
ರೂಪಾಂತರ ಕೊರೋನಾ ಅಲರ್ಟ್, ಯಶ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್: ಡಿ.22ರ ಟಾಪ್ 10 ಸುದ್ದಿ!
ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ಕ್ಲಬ್ ತೆರೆದಿದ್ದು ಮಾತ್ರವಲ್ಲದೆ, ಕೊರೋನಾ ನಿಯಮಗಳನ್ನು ಉಲ್ಲಂಘಿಸಲಾಗಿತ್ತು. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 188 ಹಾಗೂ 269ರಡಿ ಎಫ್‌ಐಆರ್ ದಾಖಲಿಸಲಾಗಿದೆ. ಡ್ರಾಗನ್ ಫ್ಲೈ ಕ್ಲಬ್‌ನ ಪಾರ್ಟ್‌ನರ್ ಸಿಂಗರ್ ಬಾದ್ ಶಾ ಹಿಂಬಾಗಿಲಿನಲ್ಲಿ ತಪ್ಪಿಸಿಕೊಂಡಿದ್ದರು ಎನ್ನಲಾಗಿದೆ.
ಕೊರೋನಾ ಎರಡನೇ ಅಲೆಯ ಬಗ್ಗೆ ಈಗಾಗಲೇ ಹಲವು ಕಡೆ ಜಾಗೃತಿ ಮೂಡಿದ್ದು, ಕೊರೋನಾ ವೈರಸ್ ನಿಬಂಧನೆಗಳು ಮತ್ತೆ ಕಠಿಣವಾಗಿವೆ. ಹಲವು ಕಡೆ ನೈಟ್ ಕರ್ಫ್ಯೂ ಹೇರಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.