ಸೆಲೆಬ್ರಿಟಿಗಳಿಗೆ ಬ್ರ್ಯಾಂಡ್ ಇದ್ರೆ ಕಸದ ಕವರ್ ಕೂಡ ಮಾರಾಟ ಮಾಡ್ಬಹುದು. ಇದಕ್ಕೆ ಓರಿ ಹಿಡಿದ ಬ್ಯಾಗ್ ಉತ್ತಮ ನಿದರ್ಶನ. ಓರಿ ಹಿಡಿದಿರುವ ಚಿಪ್ಸ್ ಪ್ಯಾಕೆಟ್ ನಂತೆ ಕಾಣುವ ಈ ಬ್ಯಾಗ್ ಬೆಲೆ ಎಷ್ಟು ಗೊತ್ತಾ?
ಫ್ಯಾಷನ್ ಟ್ರೆಂಡ್ (Fashion trend) ಬದಲಾಗ್ತಾನೆ ಇರುತ್ತೆ. ಕೆಲ ದಿನಗಳ ಹಿಂದೆ ಅಮೆರಿಕಾದಲ್ಲಿ ಬಾಸ್ಮತಿ ರೈಸ್ ಬ್ಯಾಗ್ (basmati rice bag) ಹಿಡಿದ ಮಹಿಳೆಯೊಬ್ಬಳ ಫೋಟೋ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಬಳಕೆದಾರರು ಕಸದಿಂದ ರಸ ತೆಗೆಯೋದು ಹೀಗೆ, ದುಬಾರಿ ಬೆಲೆಗೆ ಬ್ಯಾಗ್ ಖರೀದಿ ಮಾಡುವ ಬದಲು ಇಂಥ ಫ್ಯಾಷನ್ ಫಾಲೋ ಮಾಡಿ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈಗ ಒರ್ಹಾನ್ ಅವತಾರ್ಮಾನಿ ಅಲಿಯಾಸ್ ಓರಿ (orry) ಬ್ಯಾಗ್ ಎಲ್ಲರ ಗಮನ ಸೆಳೆದಿದೆ. ಮುಖೇಶ್ ಅಂಬಾನಿ ಸೊಸೆ ರಾಧಿಕಾ ಜೊತೆ ಕ್ರಿಸ್ಮಸ್ ಆಚರಿಸಿ ಸುದ್ದಿ ಮಾಡಿದ್ದ ಓರಿ, ಸೆಲೆಬ್ರಿಟಿ ಮಕ್ಕಳ ಫೆವರೆಟ್. ಸೆಲೆಬ್ರಿಟಿ ಕಿಡ್ಸ್ ಜೊತೆ ಫೋಟೋಕ್ಕೆ ಪೋಸ್ ನೀಡೋದು ಓರಿ ಕೆಲಸ. ಫ್ಯಾಷನ್ ವಿಷ್ಯದಲ್ಲೂ ಓರಿ ಹಿಂದೆ ಬಿದ್ದಿಲ್ಲ. ಪಾರ್ಟಿಗಳಲ್ಲಿ ಅವರು ಧರಿಸುವ ಡ್ರೆಸ್ ಚರ್ಚೆ ಮಾಡ್ತಿರುತ್ತದೆ. ಈಗ ಓರಿ ಬ್ಯಾಗ್ ಸುದ್ದಿಯಾಗಿದೆ.
ಓರಿ ವಿಚಿತ್ರ ಬ್ಯಾಗ್ ಹಿಡಿದು ಬರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಓರಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಓರಿ ಚಿಪ್ಸ್ ಪ್ಯಾಕೆಟ್ (chips packet) ಹಿಡಿದು ಬರ್ತಿಲ್ಲ. ಚಿಪ್ಸ್ ಪ್ಯಾಕೆಟ್ ಹೋಲುವ ಬ್ಯಾಗ್ ಹಿಡಿದಿದ್ದಾರೆ. ಜನ ಚಿಪ್ಸ್ ಕವರ್ ಕೂಡ ಬಿಡಲ್ಲ. ನಾವು ಇಂಥ ಬ್ಯಾಗ್ ಹಿಡಿದು ಫ್ಯಾಷನ್ ಮಾಡ್ಬಹುದು ಅಂತ ನೀವು ಅಂದ್ಕೊಳ್ತಿದ್ರೆ ಅದ್ರ ಬೆಲೆ ತಿಳಿದ್ಕೊಳ್ಳಿ. ಜನಸಾಮಾನ್ಯರಿಗೆ ಕೈಗೆಟುಕದ ಬೆಲೆಯ ಈ ಬ್ಯಾಗ್ ಓರಿ ಕೈನಲ್ಲಿದೆ.
ಪತ್ನಿ ಗೌರಿಯ ತಂದೆ ನೀಡಿದ ಕತ್ತಿಯಿಂದ ಪತ್ರಕರ್ತರ ಮೇಲೆ ಶಾರುಖ್ ಖಾನ್ ಹಲ್ಲೆ, ಜೈಲು ಶಿಕ್ಷೆ!
ವೈರಲ್ ವಿಡಿಯೋದಲ್ಲಿ ಓರಿ, ಹಳದಿ ಬಣ್ಣದ ಕವರ್ ಹಿಡಿದು ಬರ್ತಿದ್ದಾರೆ. ಪಾಪರಾಜಿಗಳ ಫೋಟೋ ಕ್ಲಿಕ್ಕಿಸುತ್ತ, ಕೈನಲ್ಲಿರೋದು ಏನು, ಚಿಪ್ಸಾ ಅಂತ ಕೇಳ್ತಾರೆ. ಅದಕ್ಕೆ ಉತ್ತರಿಸುವ ಓರಿ, ಬ್ಯಾಗ್ ಜಪ್ ತೆಗೆದು ಅಲ್ಲ ಬ್ಯಾಗ್ ಎನ್ನುತ್ತಾರೆ. ಈರುಳ್ಳಿ ಕವರ್ ತರ ಇದೆ ಎಂದು ಪಾಪರಾಜಿಗಳು ಹೇಳಿದ್ದಕ್ಕೆ ನಗ್ತಾರೆ ಓರಿ.
ಓರಿ ಚಿಪ್ಸ್ ಕವರ್ ರೀತಿ ಇರುವ ಈ ಬ್ಯಾಗ್ ಬೆಲೆ ಕಡಿಮೆ ಏನಿಲ್ಲ. ಮಾಧ್ಯಮಗಳ ವರದಿ ಪ್ರಕಾರ ಈ ಬ್ಯಾಗ್ ಬೆಲೆ 1,60,000 ರೂಪಾಯಿ. ಈ ಬ್ಯಾಗ್ ಜೊತೆ ಓರಿ ಕಪ್ಪು ಬಣ್ಣದ ಮುದ್ರಿತ ಟೀ ಶರ್ಟ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ರು. ಓರಿ ಈ ವಿಡಿಯೋಕ್ಕೆ ಬಳಕೆದಾರರು ನಾನಾ ಕಮೆಂಟ್ ಮಾಡಿದ್ದಾರೆ. ಇಷ್ಟು ಬೆಲೆಯ ಬ್ಯಾಗ್ ಹಿಡಿದು ಬಂದ ಓರಿಗೆ ದೃಷ್ಟಿ ಬೀಳದಿರಲಿ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಹಣ ಬರ್ತಿದ್ದಂತೆ ಬುದ್ಧಿ ಕೈನಲ್ಲಿ ಇರೋದಿಲ್ಲ ಎಂದು ಇನ್ನೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಪ್ಯಾಕೆಟ್ ಓರಿಗಿಂತ ದೊಡ್ಡದಾಗಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಬೇರೆ ಗ್ರಹದಿಂದ ಬಂದ ಅನನ್ಯ ವ್ಯಕ್ತಿ, ಬ್ರ್ಯಾಂಡ್ ಇದ್ರೆ ಸಾಕು, ಕಸದ ಚೀಲವನ್ನೂ ಶ್ರೀಮಂತ ವ್ಯಕ್ತಿಗಳಿಗೆ ಟ್ರಾವೆಲ್ ಬ್ಯಾಗ್ ಮಾಡಿ ಮಾರಾಟ ಮಾಡಬಹುದು ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಪುಟ್ನಂಜನ ಮನದರಸಿ ಮೀನಾಳ ಬೆಂಬಲಕ್ಕೆ ನಿಂತ ಕ್ಯಾಪ್ಟನ್ ವಿಜಯಕಾಂತ್!
ಕಷ್ಟಪಡದೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ಓರಿ : ಓರಿ ಕೆಲಸ ಅದ್ಭುತವಾಗಿದೆ. ಯಾವುದೇ ದೈಹಿಕ ಅಥವಾ ಮಾನಸಿಕ ಪರಿಶ್ರಮದ ಕೆಲಸವನ್ನು ಓರಿ ಮಾಡೋದಿಲ್ಲ. ಸೆಲೆಬ್ರಿಟಿ ಕಿಡ್ಸ್ ಜೊತೆ ಫೋಟೋಕ್ಕೆ ಪೋಸ್ ನೀಡೋದು, ಕಾರ್ಯಕ್ರಮದಲ್ಲಿ ಸ್ನೇಹಿತರಂತೆ ಗೆಸ್ಟ್ ಗಳಿಗೆ ಮನರಂಜನೆ ನೀಡೋದು ಓರಿ ಕೆಲಸ. ಇದಕ್ಕೆ 15 ರಿಂದ 20 ಲಕ್ಷ ರೂಪಾಯಿ ಪಡೆಯುತ್ತಾರೆ ಓರಿ.