ಬಿಡುಗಡನೇ ಆಗಿಲ್ಲ, ಆಗ್ಲೇ ಸಾವಿರ ಕೋಟಿ ಬಾಚಿದ ಪುಷ್ಪ-2: ಶೀಘ್ರದಲ್ಲೇ 3! ಏನಿದು ವಿಷಯ?

By Suvarna News  |  First Published Apr 18, 2024, 11:06 AM IST

ಬರುವ ಆಗಸ್ಟ್​ನಲ್ಲಿ ಬಿಡುಗಡೆಯಾಗಲಿರುವ ಪುಷ್ಪ-2 ಬಿಡುಗಡೆಗೂ ಮುನ್ನವೇ ದಾಖಲೆ ಬರೆದು ಹಲವು ಚಿತ್ರಗಳ ದಾಖಲೆಗಳನ್ನು ಉಡೀಸ್​ ಮಾಡಿದೆ. 
 


ಸುಕುಮಾರ್ ನಿರ್ದೇಶನದ ಪುಷ್ಪಾ-2 (Pushpa-2) ಮೂವಿಯಿಂದ ಅಲ್ಲು ಅರ್ಜುನ್ ಇಡೀ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರು ಮಾಡಿದ್ದಾರೆ. ಪುಷ್ಪಾ ಸಿನಿಮಾ ತಗ್ಗೇದೇಲೆ ಡೈಲಾಗ್ ಹೇಳ್ತಾ ತನ್ನ ಮ್ಯಾನರಿಸಂನನ್ನೇ ಬದಲಾಯಿಸಿಕೊಂಡ ಅಲ್ಲು ಅರ್ಜುನ್ (Allu Arjun) ನಟನೆಗೆ ಇಡೀ ಭಾರತೀಯ ಚಿತ್ರರಂಗ ಫಿದಾ ಆಗಿದೆ. ಅಲ್ಲು ಅರ್ಜುನ್ ಪುಷ್ಪಾ-1 ಸಿನಿಮಾಕ್ಕಾಗಿ ಕೇವಲ 50 ಕೋಟಿ ರೂಪಾಯಿಗಳನ್ನು ಮಾತ್ರ ಪಡೆದಿದ್ದರು. ಆದರೆ ಭಾಗ ಒಂದು ಸೂಪರ್ ಹಿಟ್ ಆದ ನಂತರ ಭಾಗ-2ಗೆ ದೊಡ್ಡ ಮಟ್ಟದಲ್ಲಿ ನಿರ್ದೇಶಕ ಪ್ಲಾನ್ ಮಾಡಿದ್ದರು. ಪುಷ್ಪ-2  ಸಿನಿಮಾಕ್ಕಾಗಿ   330 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.  ಅಷ್ಟಕ್ಕೂ ಪುಷ್ಪ-2   ಸಿನಿಮಾ ನಿರ್ಮಾಣ ಮಾಡಲು ಒಟ್ಟು 1,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಇದರಲ್ಲಿ ಶೇ.33 ರಷ್ಟು ಅಲ್ಲು ಅರ್ಜುನ್ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.  ಇದು ಸೂಪರ್ ಸ್ಟಾರ್ ರಜಿನಿಕಾಂತ್ ಸಂಭಾವನೆಯನ್ನೂ ಹಿಂದಿಕ್ಕಿದೆ. ಮಾತ್ರವಲ್ಲದೇ ಬ್ಲಾಕ್​ಬಸ್ಟರ್​ ಸಿನಿಮಾ ಎನಿಸಿಕೊಂಡಿರೋ ಅನಿಮಲ್​, ಪಠಾಣ್​, ಗದರ್​-2 ಹಿಂದಿಕ್ಕಿದೆ. 

ಕೆಲ ದಿನಗಳ ಹಿಂದಷ್ಟೇ ರಶ್ಮಿಕಾ ಹುಟ್ಟುಹಬ್ಬಕ್ಕೆ ಇದರ ಪೋಸ್ಟರ್​ ರಿಲಿಸ್​ ಮಾಡಲಾಗಿತ್ತು.  ಇದರಲ್ಲಿ ಹಸಿರು ಸೀರೆ, ಭಾರಿ ಚಿನ್ನದ ಒಡವೆಗಳಲ್ಲಿ  ನಟಿ ಮಿರಮಿರ ಮಿಂಚುತ್ತಿದ್ದಾರೆ.  ಒಂದು ಕಣ್ಣಿಗೆ ಬೆರಳನ್ನು ಇಟ್ಟು ವಿಭಿನ್ನವಾಗಿ ರಶ್ಮಿಕಾ ಪೋಸ್‌ ನೀಡಿದ್ದಾರೆ.   ಮುಗ್ಧ ಹುಡುಗಿಯಂತಿದ್ದ ಶ್ರೀವಲ್ಲಿ ಇದೀಗ ರೆಬೆಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮೊದಲ ಭಾಗದಲ್ಲಿ ಕೇವಲ ಕಾರ್ಮಿಕನಂತಿದ್ದ ಪುಷ್ಪರಾಜ್ ಈಗ ರಕ್ತಚಂದನದ ಕಳ್ಳಸಾಗಣೆಯಲ್ಲಿ ಆತನೇ ಕಿಂಗ್‌ಪಿನ್ ಆಗಿ ಬೆಳೆದಿರುತ್ತಾನೆ. ಮೊದಲ ಭಾಗದಲ್ಲಿ ವಿದೇಶದ ರೆಫರೆನ್ಸ್ ನೀಡಲಾಗಿತ್ತು. ರಕ್ತಚಂದನ ಜಪಾನ್‌ಗೆ ರಫ್ತಾಗಲಿದೆ ಎಂದು ತೋರಿಸಲಾಗಿತ್ತು. ಈಗ ಎರಡನೇ ಭಾಗದಲ್ಲಿ ಸಿನಿಮಾದ ಒಂದಷ್ಟು ಕಥೆ ವಿದೇಶದಲ್ಲೇ ನಡೆದಿದೆ ಎನ್ನಲಾಗಿದೆ. ಮೊದಲ ಭಾಗಕ್ಕಿಂತ 2ನೇ ಭಾಗ ದೊಡ್ಡದಾಗಿ ಇರಲಿದೆ ಎಂದು ಚಿತ್ರತಂಡ ತಿಳಿಸಿದೆ. 

Tap to resize

Latest Videos

ಅವನು ದೇವತೆ, ಮದ್ವೆನೂ ಆಗ್ಲಿಲ್ಲ, ಪ್ಲೀಸ್​ ಅವನಿಗೆ ಹೀಗೆಲ್ಲಾ ಮಾಡ್ಬೇಡಿ... ಲೈವ್​ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ರಾಖಿ!

ಇದೀಗ ಹೊಸ ವಿಷಯ ಏನಪ್ಪಾ ಎಂದರೆ,  ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಆಗಲೇ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಇದೇ ಕಾರಣಕ್ಕೆ  ಸಿನಿಮಾ ಬಿಡುಗಡೆಗೂ ಮುನ್ನವೇ  ಸಾಕಷ್ಟು ಹಕ್ಕುಗಳು ಮಾರಾಟ ಆಗಿದ್ದು,  1000 ಕೋಟಿ ರೂಪಾಯಿ ಬಿಜಿನೆಸ್​  ಮಾಡಿದೆ ಎನ್ನಲಾಗುತ್ತಿದೆ.  ಈ ಚಿತ್ರಕ್ಕೆ ಮೂರನೇ ಪಾರ್ಟ್ ಕೂಡ ಬರಲಿದೆ ಎಂಬ ಸುದ್ದಿ ಕೂಡ ಹರಡಿದೆ. ಸಿನಿಮಾ ಕುರಿತು ನಿರೀಕ್ಷೆಗಳು ಗಗನಕ್ಕೇರುತ್ತಿವೆ. ಬನ್ನಿ ಎಂದು ಕರೆಯಲ್ಪಡುವ ಅಲ್ಲು ಅರ್ಜುನ್ ಅವರ ಪುಷ್ಪಾ ಪಾತ್ರವನ್ನು ಮತ್ತೆ ತೆರೆಯ ಮೇಲೆ ನೋಡಲು ಹಾಗೂ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಅಭಿನಯವನ್ನು ನೋಡಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಸುಕುಮಾರ್ ಅವರು ‘ಪುಷ್ಪ 2’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಚಿತ್ರದ ನಾಯಕಿ. ಅಲ್ಲು ಅರ್ಜುನ್ ಜನ್ಮದಿನದ ಪ್ರಯುಕ್ತ ಈ ಚಿತ್ರದ ಟೀಸರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಆಗಸ್ಟ್ 15ರಂದು ತೆಲುಗು, ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.


ಇದರ ಜೊತೆಗೆ ಟಿಕೆಟ್ ಬೆಲೆ ಕೂಡ ಏರಿಕೆ ಆಗಿದೆ. ಹೀಗಾಗಿ, ಸಿನಿಮಾದ ಗೆಲುವನ್ನು ಈಗ 500 ಕೋಟಿ ರೂಪಾಯಿ, 1000 ಕೋಟಿ ರೂಪಾಯಿ ಬೆಂಚ್​ ಮಾರ್ಕ್​ನಲ್ಲಿ ಅಳೆಯಲಾಗುತ್ತಿದೆ. ಶಾರುಖ್ ಖಾನ್ ನಟನೆಯ ಎರಡು ಸಿನಿಮಾಗಳು 2023ರಲ್ಲಿ ರಿಲೀಸ್ ಆಗಿ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿವೆ. ಈಗ ‘ಪುಷ್ಪ 2’ ಸಿನಿಮಾ ರಿಲೀಸ್​ಗೂ ಮೊದಲೇ 1000 ಕೋಟಿ ರೂಪಾಯಿ ಒಟ್ಟುಗೂಡಿಸಿಕೊಂಡಿರುವುದಾಗಿ ವರದಿಯಾಗಿದೆ. ಈ ಚಿತ್ರದ ಆಂಧ್ರ ಹಾಗೂ ತೆಲಂಗಾಣ ಭಾಗದ ಹಂಚಿಕೆ ಹಕ್ಕು 200 ಕೋಟಿ ರೂಪಾಯಿಗೆ ಮಾರಾಟ ಆಗಿದೆ. ಹಿಂದಿಯಲ್ಲಿ ಈ ಸಿನಿಮಾ ದೊಡ್ಡ ಗೆಲುವು ಕಂಡಿದೆ. ಹೀಗಾಗಿ, ಆ ಭಾಗದಲ್ಲೂ ಸಿನಿಮಾದ ಹಂಚಿಕೆ ಹಕ್ಕು ದೊಡ್ಡ ಮಟ್ಟಕ್ಕೆ ಮಾರಾಟ ಆಗಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಟಿವಿ ಹಕ್ಕು, ಒಟಿಟಿ ಹಕ್ಕು, ಹಾಡುಗಳ ಹಕ್ಕುಗಳು ಕೂಡ ದೊಡ್ಡ ಮಟ್ಟಕ್ಕೆ ಮಾರಾಟ ಆಗಿದೆ ಎಂಬ ವರದಿ ಬಂದಿದೆ.

ಮಲೈಕಾ ಅರೋರಾ ಹೊಟೆಲ್‌ನಲ್ಲಿ ಡ್ರೆಸ್‌ ಸರಿಪಡಿಸಿಕೊಳ್ತಿರೋ ಖಾಸಗಿ ವಿಡಿಯೋ ಲೀಕ್‌: ಫ್ಯಾನ್ಸ್‌ ಗರಂ
 

click me!