ಮಾಮ್ ಹನುಮಾನ್ ಎಂದಿತು ಮಗು, ಇಲ್ಲ ಬಾ ನೀನು ಅಂದ್ರು ಅಮ್ಮ; ನಟ ತೇಜಾ ಸಜ್ಜು ಹೇಳಿದ್ದೇನು?

Published : Apr 17, 2024, 01:32 PM IST
ಮಾಮ್ ಹನುಮಾನ್ ಎಂದಿತು ಮಗು, ಇಲ್ಲ ಬಾ ನೀನು ಅಂದ್ರು ಅಮ್ಮ; ನಟ ತೇಜಾ ಸಜ್ಜು ಹೇಳಿದ್ದೇನು?

ಸಾರಾಂಶ

ತೆಲುಗು ಚಿತ್ರರಂಗದಲ್ಲಿ ಸದ್ಯ ಎಂಟ್ರಿ ಕೊಟ್ಟು ಮಿಂಚುತ್ತಿರುವ ನಟರಲ್ಲಿ ಈ ತೇಜಾ ಸಜ್ಜಾ ಕೂಡ ಒಬ್ಬರು. ಅವರ ನಟನೆಯ ಹನುಮಾನ್ ಚಿತ್ರವು ಈ ವರ್ಷದ ಬ್ಲಾಕ್‌ ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿದೆ. 40 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು..

ನಟ ತೇಜಾ ಸಜ್ಜಾ (Teja Sajja)ಅವರು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರರೂಪವಾಗಿ ತಮ್ಮದೊಂದು ಸ್ವೀಟ್ ಮೆಮರಿ ಹಂಚಿಕೊಂಡಿದ್ದಾರೆ. ತೇಜಾ ಸಜ್ಜಾ ಈ ಬಗ್ಗೆ ಮಾತನಾಡುತ್ತ 'ನಾನು ನನ್ನ ಹನುಮಾನ್ (Hanuman Movie)ಸಿನಿಮಾ ನೋಡಲು ಹೈದ್ರಾಬಾದ್‌ ಥೀಯೇಟರ್‌ ಒಂದಕ್ಕೆ ಹೋಗಿದ್ದೆ. ಅಲ್ಲಿ ಕೊನೆಯ 10 ನಿಮಿಷ ಮಾತ್ರ ನಾನು ಸಿನಿಮಾ ನೋಡಲು ಥಿಯೇಟರ್‌ ಒಳಕ್ಕೆ ಹೋಗಬೇಕೆಂದು ಬಯಸಿದೆ. ಆದರೆ ನನಗೆ ಪ್ರೇಕ್ಷಕರಿಗೆ ಡಿಸ್ಟರ್ಬ್‌ ಮಾಡುವುದು ಇಷ್ಟವಿರಲಿಲ್ಲ. ಅದಕ್ಕಾಗಿ ನಾನು ನಿಧಾನವಾಗಿ ಸ್ವಲ್ಪವೇ ಡೋರ್ ತೆಗದು ಒಳಕ್ಕೆ ಹೋದೆ. ನನ್ನ ಉದ್ದೇಶ, ಥಿಯೇಟರ್‌ ಒಳಗೆ ಬೆಳಕು ಹೋಗಿ ಪ್ರೇಕ್ಷಕರಿಗೆ ಕಿರಿಕಿರಿ ಉಂಟಮಾಡಬಾರದು ಎಂಬುದಾಗಿತ್ತು. 

ಅಲ್ಲಿ ಚೇರ್‌ನಲ್ಲಿ ಕುಳಿತಿದ್ದ ಪ್ರೇಕ್ಷಕರ ಮುಂದೆ ಒಂದು ಮಗು ಆಟವಾಡುತ್ತಿತ್ತು. ಸುಮಾರು ಮೂರು ವರ್ಷದ ಆ ಮಗು ನನ್ನನ್ನು ನೋಡಿ 'ಮಾಮ್, ಹನುಮಾನ್ ಅಂದುಬಿಟ್ಟಿತು. ಆದರೆ, ಆ ಕಂದನ ತಾಯಿ ನನ್ನನ್ನು ನೋಡಿರಲಿಲ್ಲ. ಆದ್ದರಿಂದ, ಇಲ್ಲ ಇಲ್ಲ ಬಾ ಎಂದು ಮಗುವನ್ನು ಕರೆದು ಸುಮ್ಮನಾದರು. ಆ ಕ್ಷಣವನ್ನು ನಾನೆಂದಿಗೂ ಮರೆಯಲಾಗದು. ಕೇವಲ ಮೂರು (3) ವರ್ಷದ ಕಂದಮ್ಮ ನನ್ನನ್ನು ನೋಡಿ ಗುರುತು ಹಿಡಿಯಿತು ಎಂದರೆ ನನಗೆ ಅಚ್ಚರಿ ಹಾಗೂ ಖುಷಿ ಎರಡೂ ಒಮ್ಮೆಗೇ ಆಯಿತು. ಅಂತಹ ಕ್ಷಣ ನಿಜವಾಗಿಯೂ ಅವಿಸ್ಮರಣೀಯ ಎನ್ನಬಹುದು' ಎಂದಿದ್ದಾರೆ ನಟ ತೇಜಾ ಸಜ್ಜಾ. 

ತೆಲುಗು ಚಿತ್ರರಂಗದಲ್ಲಿ ಸದ್ಯ ಎಂಟ್ರಿ ಕೊಟ್ಟು ಮಿಂಚುತ್ತಿರುವ ನಟರಲ್ಲಿ ಈ ತೇಜಾ ಸಜ್ಜಾ ಕೂಡ ಒಬ್ಬರು. ಅವರ ನಟನೆಯ ಹನುಮಾನ್ ಚಿತ್ರವು ಈ ವರ್ಷದ ಬ್ಲಾಕ್‌ ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿದೆ. 40 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ಬರೋಬ್ಬರಿ 330 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ದಾಖಲಿಸಿ ಸೂಪರ್ ಹಿಟ್ಎನಿಸಿದೆ. ಈ ಯಶಸ್ಸಿನ ಮೂಲಕ ನಟ ತೇಜ ಸಜ್ಜಾ ತೆಲುಗು ಚಿತ್ರರಂಗದ ಹೊಸ ಹೀರೋ ಆಗಿ ಉದಯಿಸಿದ್ದು, ಸ್ಟಾರ್ ನಟರಾಗುವ ಹಾದಿಯಲ್ಲಿದ್ದಾರೆ ಎನ್ನಬಹುದು. 

ಅಂದಹಾಗೆ, ನಟ ತೇಜಾ ಸಜ್ಜು ನಟನೆಯ ಹನುಮಾನ್ ಚಿತ್ರವನ್ನು ಪ್ರಶಾಂತ್ ವರ್ಮಾ ನಿರ್ದೇಶನ ಮಾಡಿದ್ದಾರೆ. 12 ಜನವರಿ 2024ರಂದು ಬಿಡುಗಡೆ ಕಂಡಿರುವ ಈ ಚಿತ್ರವು ಸೂಪರ್ ಹಿಟ್ ಆಗಿ ತೆಲುಗು ಚಿತ್ರರಂಗಕ್ಕೆ ಈ ವರ್ಷದ ಮೊಟ್ಟಮೊದಲ ಯಶಸ್ಸು ತಂದುಕೊಟ್ಟಿದೆ. ನಟ ತೇಜಾ ಸಜ್ಜು ಅವರಿಗಂತೂ ತುಂಬಾ ಖುಷಿ ಕೊಟ್ಟ ಈ ಚಿತ್ರವು ಚಿಕ್ಕಮಕ್ಕಳಿಂದ ಮುದುಕರವರೆಗೂ ರೀಚ್ ಆಗಿರುವ ಸಿನಿಮಾ ಎನ್ನಬಹುದು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ