ಚಿತ್ರ ಬಿಡುಗಡೆ ದಿನ ನಾಯಕಿಯ ಬೆಡ್​ರೂಂ ದೃಶ್ಯಗಳೇ ಮಾಯ! ನಿರ್ಮಾಪಕರಿಗೆ ಶಾಕ್​- ದೂರು ದಾಖಲು

By Suvarna News  |  First Published Feb 5, 2024, 5:57 PM IST

ಟಿಕ್​ ಟಾಕ್​ ಚಿತ್ರದಲ್ಲಿ ಏಕಾಏಕಿ ಬೆಡ್​ರೂಂ ದೃಶ್ಯಗಳು ಮಾಯ ಆಗಿದ್ದರ ಕುರಿತು ನಿರ್ಮಾಪಕ ಮದನ್​ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.
 


ಸೌತ್ ಫಿಲ್ಮ್ ಇಂಡಸ್ಟ್ರಿಯ ಜನಪ್ರಿಯ ನಟಿ, ಪ್ರಿಯಾಂಕಾ ಮೋಹನ್ 'ಡಾಕ್ಟರ್' ಮೂಲಕ ತಮಿಳಿಗೆ ಪದಾರ್ಪಣೆ ಮಾಡಿದರು ಮತ್ತು 2021 ರಲ್ಲಿ ಬಿಡುಗಡೆಯಾದ ಶಿವಕಾರ್ತಿಕೇಯನ್ ಎದುರು ನಟಿಸಿದ್ದಾರೆ. ಆದರೆ ಪ್ರಿಯಾಂಕಾ ಮೋಹನ್ ಅವರು 2017 ರಲ್ಲಿ 'ಟಿಕ್ ಟಾಕ್' ಎಂಬ ತಮಿಳು ಚಿತ್ರಕ್ಕೆ ಸಹಿ ಹಾಕಿದ್ದರು. ಇದೇ ಚಿತ್ರ ಈಗ ವಿವಾದಕ್ಕೆ ಗುರಿಯಾಗಿದೆ. ಟಿಕ್​ಟಾಕ್​ ಚಿತ್ರಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ಮಾಪಕ ಮದನ್​ ಪೊಲೀಸರಲ್ಲಿ ಪ್ರಕರಣ ದಾಖಲಿಸಿದ್ದಾರೆ. ಟಿಕ್ ಟಾಕ್ ನಿರ್ಮಾಪಕ  ಚೆನ್ನೈನಲ್ಲಿರುವ ಪೊಲೀಸ್ ಕಮಿಷನರ್ ಕಚೇರಿಗೆ ದೂರು ನೀಡಿದ್ದಾರೆ. 

ಅಷ್ಟಕ್ಕೂ ನಿರ್ಮಾಪಕರು ಇಷ್ಟೊಂದು ಈ ಚಿತ್ರದ ಬಗ್ಗೆ ವಿರುದ್ಧ ಗರಂ ಆಗಲು ಕಾರಣ, ಈ ಚಿತ್ರದಲ್ಲಿ ಕೆಲವು ದೃಶ್ಯಗಳನ್ನು ತೆಗೆದು ಹಾಕಿರುವುದು ಹಾಗೂ ಉದ್ದೇಶಪೂರ್ವಕವಾಗಿ ಡಿಲೀಟ್​ ಮಾಡಿರುವುದು. ಹೀಗೆಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.   ನಟಿ ಪ್ರಿಯಾಂಕಾ ಮೋಹನ್ ಅವರೊಂದಿಗೆ 'ಟಿಕ್ ಟಾಕ್' ಚಿತ್ರವನ್ನು 3.5 ಕೋಟಿ ರೂ.ಗೆ ಮಾಡಿದ್ದೇನೆ. ಈ ಚಿತ್ರದ ಮೂಲಕವೇ ಅವರು ಇಷ್ಟೊಂದು ಖ್ಯಾತಿ ಪಡೆದರು. ಆದರೆ ಆಮೇಲೆ ನೋಡಿದರೆ ಇದರಲ್ಲಿರುವ ಕೆಲವು ದೃಶ್ಯಗಳೇ ಮಾಯವಾಗಿದ್ದು, ಇದಕ್ಕೆ ಚಿತ್ರತಂಡ ಕಾರಣ ಎಂದು ಅವರು ಆರೋಪಿಸಿದ್ದಾರೆ.

Tap to resize

Latest Videos

ಗೋಧ್ರಾ ಹತ್ಯಾಕಾಂಡದ ಹಿಂದಿರುವ ಕೈ ಯಾರದ್ದು? ಭಯಾನಕ ಸತ್ಯ ಬಿಚ್ಚಿಟ್ಟ ಚಿತ್ರದ ಟೀಸರ್​ ರಿಲೀಸ್​
 
ಅಷ್ಟಕ್ಕೂ ಈ ಚಿತ್ರ ಡಿಸೆಂಬರ್ 2023 ರಲ್ಲಿ ಡಿಎಸ್ಆರ್ ಫಿಲ್ಮ್ಸ್ ಮೂಲಕ ಚಿತ್ರ ಬಿಡುಗಡೆಯಾಗಿತ್ತು. ಆಗ ಈ ಸಿನಿಮಾ ನೋಡಿದಾಗ  ನಿರ್ಮಾಪಕರು ಶಾಕ್​ ಆಗಿದ್ದರು. ಏಕೆಂದರೆ ಚಿತ್ರದಲ್ಲಿ ಪ್ರಿಯಾಂಕಾ ಮೋಹನ್ ಅವರ ಪ್ರಮುಖ 20 ನಿಮಿಷಗಳ ದೃಶ್ಯವನ್ನು ಅವರಿಗೆ ತಿಳಿಸದೇ  ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿತ್ತು! ಅದನ್ನು ತೆಗೆದುಹಾಕಿದ್ದರಿಂದ ಚಿತ್ರವು ಥಿಯೇಟರ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿರ್ಮಾಪಕರು 3.5 ಕೋಟಿ ನಷ್ಟ ಅನುಭವಿಸಿದ್ದು, ಚಿತ್ರದ ಸೋಲಿಗೆ ಡಿಎಸ್ ಆರ್ ಫಿಲಂಸ್ ಕಾರಣ ಎಂದು ಹೇಳಿದ್ದಾರೆ. ಇದಾದ ಬಳಿಕ ನಿರ್ಮಾಪಕರಿಗೆ ಹಾನಿ ಮಾಡಿದ ಡಿಎಸ್ ಆರ್ ಫಿಲ್ಮ್ ಹಾಗೂ ಸಂಸ್ಥೆಯ ಮಾಸ್ಟರ್ ಇಂಜಿನಿಯರ್ ದಿನೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ಮಾಪಕರು ಪೊಲೀಸರಿಗೆ ಸೂಚಿಸಿದ್ದಾರೆ.

ಅಷ್ಟಕ್ಕೂ ಡಿಲೀಟ್​ ಆಗಿರುವ ದೃಶ್ಯಗಳು ಏನು ಎಂದು  ಪೊಲೀಸರು ನಿರ್ಮಾಪಕರನ್ನು ಪ್ರಶ್ನಿಸಿದ್ದಾರೆ. ಆಗ ನಿರ್ಮಾಪಕರು,  ಪ್ರಿಯಾಂಕಾ ಮೋಹನ್ ಅವರ ಬೆಡ್​ರೂಂ ಸೀನ್​ಗಳು ಅದರಲ್ಲಿ ಇದ್ದವು, ಕೆಲವು ಹಸಿಬಿಸಿ ದೃಶ್ಯಗಳು ಇದ್ದವು. ಇಂಟಿಮೇಟ್ ಪ್ರೇಮ ದೃಶ್ಯಗಳನ್ನು ಒಳಗೊಂಡ 2 ಹಾಡುಗಳೂ ಇದ್ದವು. ಈಗ ನೋಡಿದ್ರೆ ಎಲ್ಲವನ್ನೂ ಡಿಲೀಟ್​ ಮಾಡಲಾಗಿದೆ ಎಂದಿದ್ದಾರೆ. ಇದೀಗ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ನಟಿ ಪ್ರಿಯಾಂಕಾ ಮೋಹನ್ ಅವರು ಚಲನಚಿತ್ರ ಪ್ರಕಾಶನ ಸಂಸ್ಥೆಯನ್ನು ಸಂಪರ್ಕಿಸಿ ಆರಂಭಿಕ ದಿನಗಳಲ್ಲಿ ನಟಿಸಿದ 'ಟಿಕ್ ಟಾಕ್' ಚಿತ್ರದ ಗ್ಲಾಮರ್ ದೃಶ್ಯಗಳನ್ನು ತೆಗೆದುಹಾಕಿರಬಹುದು ಎಂದು ನಿರ್ಮಾಪಕ ಶಂಕಿಸಿರುವ ಕಾರಣ ಪೊಲೀಸರು ದೂರಿನ ತನಿಖೆ ನಡೆಸುತ್ತಿದ್ದಾರೆ. ಕುಟುಂಬದ ನಾಯಕಿಯ ಚಿತ್ರ ಮತ್ತು ಅದಕ್ಕಾಗಿಯೇ ಅಂತಹ ದೃಶ್ಯಗಳನ್ನು ಚಿತ್ರದಿಂದ ತೆಗೆದುಹಾಕಲಾಗಿದೆ.

ಬಿಗ್​ಬಾಸ್​ನಲ್ಲಿ ಸಂಗೀತಾ-ಕಾರ್ತಿಕ್​ ದೂರವಾಗಿದ್ದೇಕೆ? ಹೊರಬಂದ್ಮೇಲೆ ಹೇಗಿದೆ ಸಂಬಂಧ? ವಿನ್ನರ್​ ಹೇಳಿದ್ದೇನು ಕೇಳಿ...

click me!