ಉದ್ಯಮಿ ಸನ್ನಿ ಕಪೂರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಿರ್ಮಾಪಕಿ ಗುನೀತ್ ಮೊಂಗಾ

Published : Apr 11, 2022, 11:18 PM IST
ಉದ್ಯಮಿ ಸನ್ನಿ ಕಪೂರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಿರ್ಮಾಪಕಿ ಗುನೀತ್ ಮೊಂಗಾ

ಸಾರಾಂಶ

 ದಿ ಲಂಚ್‌ಬಾಕ್ಸ್ ಚಲನಚಿತ್ರದ ನಿರ್ಮಾಪಕಿ ಗುಣೀತ್ ಮೊಂಗಾ (Guneet Monga) ಸೋಮವಾರ ಫ್ಯಾಷನ್ ಉದ್ಯಮಿ ಸನ್ನಿ ಕಪೂರ್ (Sunny Kapoor) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಮುಂಬೈ(ಏ.11): ದಿ ಲಂಚ್‌ಬಾಕ್ಸ್ ಚಲನಚಿತ್ರದ ನಿರ್ಮಾಪಕಿ ಗುಣೀತ್ ಮೊಂಗಾ (Guneet Monga) ಸೋಮವಾರ ಫ್ಯಾಷನ್ ಉದ್ಯಮಿ ಸನ್ನಿ ಕಪೂರ್ (Sunny Kapoor) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿರ್ಮಾಪಕಿ ಗುಣೀತ್‌ ಮೊಂಗಾ ತಮ್ಮ ಇನ್ಸ್ಟಾಗ್ರಾಮ್‌ (Instagram)ನಲ್ಲಿ ದೆಹಲಿಯ ಹೆರಿಟೇಜ್ ಹೋಟೆಲ್‌ನಲ್ಲಿ ನಡೆದ ತಮ್ಮ ವಿವಾಹ ನಿಶ್ಚಿತಾರ್ಥ ಸಮಾರಂಭದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಸೆಲೆಬ್ರಿಟಿಗಳಾದ ದಿಯಾ ಮಿರ್ಜಾ, ರಾಕುಲ್ ಪ್ರೀತ್ ಸಿಂಗ್, ಕರಣ್ ಜೋಹರ್, ಕುಬ್ಬರಾಯ್ ಸೇಟ್ ಸೇರಿದಂತೆ ಅನೇಕರು ಈ ನವಜೋಡಿಗೆ ಶುಭ ಹಾರೈಸಿದ್ದಾರೆ.

ತನ್ನ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡ ಗುನೀತ್, 'ಕೆಲವೊಮ್ಮೆ ತಪ್ಪಾದ ರೈಲು ನಿಮ್ಮನ್ನು ಸರಿಯಾದ ನಿಲ್ದಾಣಕ್ಕೆ ಕರೆದೊಯ್ಯುತ್ತದೆ' ಎಂದು ಬರೆದಿದ್ದಾರೆ. ಮತ್ತು ಅಲ್ಲಿ ನಾನು ಸನ್ನಿಯನ್ನು ಕಂಡುಕೊಂಡೆ, ನಮ್ಮ ಜೀವನದ ಮುಂದಿನ ಪ್ರಯಾಣದಲ್ಲಿ ನನ್ನ ಒಡನಾಡಿ. ತನ್ನ ನಿಶ್ಚಿತಾರ್ಥದ ದಿನದಂದು ಅಮ್ಮ ತೊಟ್ಟಿದ್ದ ಈ ಸೀರೆಯನ್ನು ಧರಿಸಿ ಅಪ್ಪ ಅಮ್ಮನ ಆಶೀರ್ವಾದದೊಂದಿಗೆ ಎಂದು ಬರೆದುಕೊಂಡಿದ್ದಾರೆ.

ನಟ ಆದಿ ಪಿನಿಸೆಟ್ಟಿ ಜೊತೆ ನಿಶ್ಛಿತಾರ್ಥ ಮಾಡಿಕೊಂಡ ಕನ್ನಡದ ನಟಿ ನಿಕ್ಕಿ ಗಲ್ರಾನಿ!
 

ಗುನೀತ್ ಪೋಸ್ಟ್‌ಗೆ ನಟಿ ದಿಯಾ ಮಿರ್ಜಾ (Dia Mirza), ಅಭಿನಂದನೆಗಳು ಎಂದು ಪ್ರತಿಕ್ರಿಯಿಸಿದ್ದಾರೆ. ರಾಕುಲ್ ಪ್ರೀತ್ ಸಿಂಗ್(Rakul Preet Singh) ಓ ಮೈ ಗಾಡ್ ಅಭಿನಂದನೆಗಳು. ಈ ಹೊಸ ಪ್ರಯಾಣವು ಪ್ರೀತಿಯಿಂದ ತುಂಬಿರಲಿ ಎಂದಿದ್ದಾರೆ. ಹಾಗೆಯೇ ನಿರ್ಮಾಪಕ ಕರಣ್ ಜೋಹರ್ (Karan Johar)ಬರೆದಿದ್ದಾರೆ, ಅಭಿನಂದನೆಗಳು, ನಟ ಆಹಾನ್ ಕುಮ್ರಾ (Aahan Kumra), ಓ ಮೈ ಗಾಡ್ ಅಭಿನಂದನೆಗಳು @ಗುಣೀತ್‌ ಮೊಂಗಾ ನಿಮ್ಮಿಬ್ಬರನ್ನು ನೋಡಿ ತುಂಬಾ ಸಂತೋಷವಾಗಿದೆ, ಸಂತೋಷವಾಗಿರಿ ಎಂದು ಶುಭ ಹಾರೈಸಿದ್ದಾರೆ. ನಟ ರಿಧಿ ಡೋಗ್ರಾ (Ridhi Dogra) ಹೃದಯಪೂರ್ವಕ ಬೆಚ್ಚಗಿನ ಪ್ರೀತಿ ನಿಮಗಾಗಿ, ಅಭಿನಂದನೆಗಳು  ಎಂದು ಕಾಮೆಂಟ್ ಮಾಡಿದ್ದಾರೆ.

'ಕೃಷ್ಣ ಸುಂದರಿ' ಧಾರಾವಾಹಿ ನಟಿ ಐಶ್ವರ್ಯ ಮತ್ತು ಡಾ.ರೋಹಿತ್ ನಿಶ್ಚಿತಾರ್ಥ
ನಟಿ ಅನನ್ಯಾ ಪಾಂಡೆ (Ananya Panday) ಹೃದಯದ ಎಮೋಜಿಯನ್ನು ಕಳುಹಿಸಿದರೆ, ರಾಧಿಕಾ ಮದನ್ (Radhika Madan) ತುಂಬಾ ಸೊಗಸಾಗಿದೆ ಅಭಿನಂದನೆಗಳು ಎಂದು ಬರೆದಿದ್ದಾರೆ. ನೀನಾ ಗುಪ್ತಾ (Neena Gupta), ಹನ್ಸಲ್ ಮೆಹ್ತಾ (Hansal Mehta), ನಿವೇದಿತಾ ಬಸು (Nivedita Basu), ಏಕ್ತಾ ಕಪೂರ್ (Ekta Kapoor), ಸಬಾ ಆಜಾದ್ (Saba Azad), ತಾಹಿರ್ ಕಶ್ಯಪ್ (Tahir Kashyap), ಅಭಿಮನ್ಯು ದಸ್ಸಾನಿ (Abhimanyu Dassani), ಸಯಾನಿ ಗುಪ್ತಾ (Sayani Gupta) ಮತ್ತು ಇತರ ಅನೇಕ ಪ್ರಸಿದ್ಧ ವ್ಯಕ್ತಿಗಳು ಕಾಮೆಂಟ್‌ಗಳ ವಿಭಾಗದಲ್ಲಿ ಈ ನವ ಜೋಡಿಗೆ ಶುಭಾ ಹಾರೈಸಿದ್ದಾರೆ.

ತನ್ನ ನಿರ್ಮಾಣ ಸಂಸ್ಥೆಯಾದ ಸಿಖ್ಯ ಎಂಟರ್‌ಟೈನ್‌ಮೆಂಟ್ (Sikhya Entertainment) ಮೂಲಕ, ಗುಣೀತ್ ಮೊಂಗಾ ಅವರು ಗ್ಯಾಂಗ್ಸ್ ಆಫ್ ವಾಸ್ಸೇಪುರ್, ದಿ ಲಂಚ್‌ಬಾಕ್ಸ್, ಮಸಾನ್, ಜುಬಾನ್ ಮತ್ತು ಪಾಗ್ಲೈಟ್‌ನಂತಹ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳ ನಿರ್ಮಾಣಕ್ಕೆ ಸಹಕರಿಸಿದ್ದಾರೆ. ಅವರು ಸಾಕ್ಷ್ಯಚಿತ್ರದ ಅವಧಿಯಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 2019 ರಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರು ವಿಷಯಕ್ಕಾಗಿ ಅಕಾಡೆಮಿ ಪ್ರಶಸ್ತಿಯನ್ನು ಅವರು ಗೆದ್ದಿದ್ದರು.

ಕಳೆದ ಮಾರ್ಚ್‌ನಲ್ಲಿ ನಟ ಆದಿ ಪಿನಿಸೆಟ್ಟಿ ಜೊತೆ  ಕನ್ನಡದ ನಟಿ ನಿಕ್ಕಿ ಗಲ್ರಾನಿ ನಿಶ್ಛಿತಾರ್ಥ ಮಾಡಿಕೊಂಡಿದ್ದರು. 2014ರಲ್ಲಿ ಅಜಿತ್‌ ಮತ್ತು ಜಂಬೂ ಸವಾರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಾಡೆಲ್ ನಿಕ್ಕಿ ಗಲ್ರಾನಿ. 2015ರಲ್ಲಿ ಸಿದ್ಧಾರ್ಥ್‌ ಮತ್ತು 2018ರಲ್ಲಿ ಓ ಪ್ರೇಮವೇ ಸಿನಿಮಾದಲ್ಲಿ ನಟಿಸಿದ್ದಾರೆ. ತಾನು ಪ್ರೀತಿಸಿದ ನಟ ಆದಿ ಪಿನಿಸೆಟ್ಟಿ ಜೊತೆ ಮಾರ್ಚ್‌ 24, 2022ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಪ್ತರು ಮಾತ್ರ ಭಾಗಿಯಾಗಿದ್ದರು. ಪರಸ್ಪರ ಒಬ್ಬರನ್ನೊಬ್ಬರು ಹೀಗೆ ಹಿಡಿದುಕೊಂಡು ಜೀವನಪೂರ್ತಿ ಜೊತೆಯಾಗಿರಬೇಕು. ಕೆಲವು ವರ್ಷಗಳ ಹಿಂದೆ ನಾವಿಬ್ಬರು ಪರಿಚಯವಾಗಿದ್ದು. ಈಗ ಅಫೀಶಿಯಲ್ ಆಗಿದೆ' ಎಂದು ನಿಕ್ಕಿ ಬರೆದುಕೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?