ಸರಣಿ ಸೋಲು, ಒಟಿಟಿಯಲ್ಲಿ ಸಿನಿಮಾ ರಿಲೀಸ್‌ಗೆ ಮುಂದಾದ್ರ ಅಕ್ಷಯ್ ಕುಮಾರ್? ನಿರ್ಮಾಪಕರ ಸ್ಪಷ್ಟನೆ

Published : Aug 29, 2022, 12:53 PM IST
ಸರಣಿ ಸೋಲು, ಒಟಿಟಿಯಲ್ಲಿ ಸಿನಿಮಾ ರಿಲೀಸ್‌ಗೆ ಮುಂದಾದ್ರ ಅಕ್ಷಯ್ ಕುಮಾರ್? ನಿರ್ಮಾಪಕರ ಸ್ಪಷ್ಟನೆ

ಸಾರಾಂಶ

ಚಿತ್ರಮಂದಿರಗಳಲ್ಲಿ ಸಿನಿಮಾಗಳು ವರ್ಕೌಟ್ ಆಗದ ಕಾರಣ ಒಟಿಟಿಯಲ್ಲಿ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ ಅಕ್ಷಯ್ ಕುಮಾರ್ ಎನ್ನುವ ಮಾತು ಕೇಳಿಬರುತ್ತಿದೆ. ಅಕ್ಷಯ್ ಸದ್ಯ ತಮಿಳಿನ ಸೂಪರ್ ಹಿಟ್ ಸೂರರೈ ಪೊಟ್ರು ಸಿನಿಮಾದ ರಿಮೇಕ್‌ನಲ್ಲಿ ಬ್ಯುಸಿಯಾಗಿದ್ದಾರೆ. 

ಬಾಲಿವುಡ್‌ ಸರಣಿ ಸೋಲಿನ ಸುಳಿಯಲ್ಲಿ ಸಿಲುಕಿದೆ. ಸಾಲು ಸಾಲು ಸಿನಿಮಗಳು ನೆಲಕಚ್ಚಿವೆ. ಸ್ಟಾರ್ ಕಲಾವಿದರು, ಬಿಗ್ ಬಜೆಟ್ ಸಿನಿಮಾಗಳು, ನಿರೀಕ್ಷೆಯ ಸಿನಿಮಾಗಳು ಸೋಲು ಕಾಣುತ್ತಿವೆ. ಅಕ್ಷಯ್ ಕುಮಾರ್ ನಟನೆಯ ಸಾಮ್ರಾಟ್ ಪೃಥ್ವಿರಾಜ್, ರಕ್ಷಾಬಂಧನ್ ಸಿನಿಮಾ ಗಳು ಸಹ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋತಿವೆ. ಚಿತ್ರಮಂದಿರಗಳಲ್ಲಿ ಸಿನಿಮಾಗಳು ವರ್ಕೌಟ್ ಆಗದ ಕಾರಣ ಒಟಿಟಿಯಲ್ಲಿ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ ಅಕ್ಷಯ್ ಕುಮಾರ್ ಎನ್ನುವ ಮಾತು ಕೇಳಿಬರುತ್ತಿದೆ. ಅಕ್ಷಯ್ ಸದ್ಯ ತಮಿಳಿನ ಸೂಪರ್ ಹಿಟ್ ಸೂರರೈ ಪೊಟ್ರು ಸಿನಿಮಾದ ರಿಮೇಕ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸನಿಮಾವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಅಲ್ಲದೆ ತಮಿಳಿನ ಸೂರರೈ ಪೊಟ್ರು ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆದ ಸಿನಿಮಾ. ಆ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗಾಗಿ ಹಿಂದಿ ಸೂರರೈ ಪೊಟ್ರು ಚಿತ್ರವನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. 

ಆದರೀಗ ಈ ಬಗ್ಗೆ ನಿರ್ಮಾಣ ಸಂಸ್ಥೆ ಪ್ರತಿಕ್ರಿಯೆ ನೀಡಿದ್ದು ಒಟಿಟಿ ರಿಲೀಸ್ ವಿಚಾರವನ್ನು ತಳ್ಳಿ ಹಾಕಿದೆ.  ಈ ಸಿನಿಮಾ ಚಿತ್ರಮಂದಿರಗಳಲ್ಲೇ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ.  ಈ ಬಗ್ಗೆ ವರದಿಗೆ ಪ್ರತಿಕ್ರಿಯೆ ನೀಡಿರುವ ನಿರ್ಮಾಣ ಸಂಸ್ಥೆ ಈ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ. ನಮ್ಮ ಸಿನಿಮಾ ದೊಡ್ಡ ಪರದೆ ಮೇಲೆ ರಿಲೀಸ್ ಆಗಿದೆ' ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಒಟಿಟಿ ರಿಲೀಸ್ ಗೊಂದಲಕ್ಕೆ ತೆರೆ ಎಳೆದಿದ್ದಾರೆ. 

ವಿಶೇಷ ಅಭಿಮಾನಿ ಜೊತೆ ಅಕ್ಷಯ್ ಕುಮಾರ್ ಮಸ್ತ್ ಡಾನ್ಸ್; ವಿಡಿಯೋ ವೈರಲ್

ಹಿಂದಿಯಲ್ಲಿ ತಯಾರಾಗುತ್ತಿರುವ ಸೂರರೈ ಪೊಟ್ರು ಸಿನಿಮಾಗೆ ಮೂಲ ನಿರ್ದೇಶಕಿ ಸುಧಾ ಕೊಂಗಾರ ಅವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಯಕಿ ಪಾತ್ರದಲ್ಲಿ ರಾಧಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಪರೇಶ್ ರಾವೆಲ್ ನಿರ್ವಹಿಸಿದ ಪಾತ್ರವನ್ನು ಹಿಂದಿಯಲ್ಲೂ ಅವರೇ ಮಾಡುತ್ತಿದ್ದಾರೆ. ಅಂದಹಾಗೆ ಸೂರರೈ ಪೊಟ್ರು ಸಿನಿಮಾ ಏರ್ ಡೆಕ್ಕನ್ ಸಂಸ್ಥಾಪಕ ಕನ್ನಡಿಗ ಗೋಪಿನಾಥ್ ಅವರ ಬಯೋಪಿಕ್ ಆಗಿದೆ. ತಮಿಳಿನಲ್ಲಿ ದೊಡ್ಡ ಮಟ್ಟದ ಸಕ್ಸಸ್ ಕಂಡಿರುವ ಈ ಸಿನಿಮಾ ಬಾಲಿವುಡ್ ಮಂದಿಯ ಹೃದಯ ಗೆಲ್ಲುತ್ತಾ ಎಂದು ಕಾದುನೋಡಬೇಕಿದೆ.

ಅಕ್ಷಯ್ ಕುಮಾರ್ ನೋಡಿದ ಖುಷಿಗೆ ಕೆನ್ನೆಗೆ ಮುತ್ತಿಟ್ಟ ಅಭಿಮಾನಿ; ವಿಡಿಯೋ ವೈರಲ್

ಅಂದಹಾಗೆ ತಮಿಳಿನಲ್ಲಿ ನಟ ಸೂರ್ಯ, ಗೋಪಿನಾಥ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪತ್ನಿಯ ಪಾತ್ರದಲ್ಲಿ ಅಪರ್ಣ ಮಿಂಚಿದ್ದರು. ಈ ಸಿನಿಮಾ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ, ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಗೆದ್ದು ಬೀಗಿತ್ತು. ಹಿಂದಿಯಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದು ತಮಿಳು ಸಿನಿಮಾದಷ್ಟೆ ಯಶಸ್ಸು ಕಾಣುತ್ತಾ ಕಾದುನೋಡಬೇಕಿದೆ. ಅಕ್ಷಯ್ ಕುಮಾರ್ ಕೊನೆಯದಾಗಿ ರಕ್ಷಾಬಂಧನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಮಾಯಿ ಮಾಡಲು ಸೋತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Salman Khan Birthday: ಬ್ರೇಸ್ಲೆಟ್‌ನಿಂದ ಸಲ್ಮಾನ್ ಖಾನ್ ಅದೃಷ್ಟ ಬದಲಾಗಿದ್ದು ಹೇಗೆ, ಏನಿದರ ರಹಸ್ಯ?
ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!