
ಪ್ರಿಯಾಂಕಾ ಚೋಪ್ರಾ 2021 ರ ವರ್ಷವನ್ನು ಸೂಪರ್ ಆಗಿ ಆರಂಭಿಸಿದ್ದಾರೆ. ನಟಿಯ ವೈಟ್ ಟೈಗರ್ ಚಿತ್ರದಿಂದ ಅವರಪುಸ್ತಕ ಅನ್‌ಫಿನಿಶ್ಡ್ ಮತ್ತು ಸೌಂದರ್ಯ ಬ್ರಾಂಡ್ ವರೆಗೆ ಹಲವಾರು ಯೋಜನೆಗಳಲ್ಲಿ ನಿರತರಾಗಿದ್ದಾರೆ ಮತ್ತು ಅದಕ್ಕಾಗಿ ಸಂದರ್ಶನಗಳನ್ನು ನೀಡುತ್ತಾರೆ.
ಇತ್ತೀಚೆಗೆ ಅವರು ಟಿವಿ ಹೋಸ್ಟ್ ಓಪ್ರಾ ವಿನ್ಫ್ರೇ ಅವರೊಂದಿಗೆ ಮಾತನಾಡಿದ್ದಾರೆ. ಕ್ಯಾಂಡಿಡ್ ಸಂದರ್ಶನವು ವೀಕ್ಷಕರಿಗೆ ಕ್ವಾಂಟಿಕೋ ನಟಿಯ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಬಗ್ಗೆ ಒಂದು ಸೂಕ್ಷ್ಮ ನೋಟವನ್ನು ಕೊಟ್ಟಿದೆ.
ದಿನಕ್ಕೆ ಕನಿಷ್ಠ 4 ಸ್ಕೂಪ್ ಐಸ್‌ಕ್ರೀಂ ತಿಂತಾರೆ ಈ ನಟಿ: ಇದೇನಾ ಜಾಹ್ನವಿ ಬ್ಯೂಟಿ ಸೀಕ್ರೆಟ್
ತಮ್ಮ ಪುಸ್ತಕ, ಪತಿ ನಿಕ್ ಜೊನಸ್ ಅವರೊಂದಿಗಿನ ಸಂಬಂಧ ಮತ್ತು ಇತರರ ವೃತ್ತಿಜೀವನ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ. ಆದ್ರೆ ಎಲ್ಲರ ಕಣ್ಣಿರುವುದು ಪ್ರಿಯಾಂಕ ಧರಿಸಿದ ಒಂದು ತೋಳಿನ ಆ ಲ್ಯಾವೆಂಡರ್ ಕಲರ್ ಉಡುಪಿನ ಮೇಲೆ.
ಸಂದರ್ಶನಕ್ಕಾಗಿ, ಪ್ರಿಯಾಂಕಾ ಪೌಡರ್ ಬ್ಲೂ ಒನ್ ಹೆಲ್ಡರ್ ಫ್ರೆನ್ಸೊ ಜಂಪ್‌ಸೂಟ್‌ನಲ್ಲಿ ಕಾಣಿಸಿಕೊಂಡಿದ್ದರು. ರೋಲ್ಯಾಂಡ್ ಮೌರೆಟ್‌ನ ಎಸ್‌ಎಸ್ 21 ಕಲೆಕ್ಷನ್‌ನಿಂದ ಈ ಕ್ರೆಪ್ ಜಂಪ್‌ಸೂಟ್ ಆರಿಸಲಾಗಿದೆ.
ಜೀನ್ಸ್‌ಗೆಷ್ಟು ಕೊಟ್ರೋ, ಮಲೈಕಾ ಕ್ರಾಪ್ ಟಾಪ್‌ಗೆ ಹತ್ರತ್ರ ಅರ್ಧ ಲಕ್ಷ
ಸೊಂಟದ ಭಾಗದಲ್ಲಿ ಸ್ವಲ್ಪ ಗ್ಯಾಪ್ ತೋರಿಸೋ ಈ ಉಡುಪಿನ ಬೆಲೆ ಎಷ್ಟು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ ಇದರ ಬೆಲೆ ಹೀಗಿದೆ ನೋಡಿ. ಬ್ರಾಂಡ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇದರ ಬೆಲೆ 1,49,921.62 ರೂಪಾಯಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.