2016ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಅಂಕಿತಾ ಲೋಖಂಡೆ ಬ್ರೇಕಪ್ | ಇದಾದ್ಮೇಲೂ ಮನೆಯಲ್ಲಿ ಮಾಜಿ ಪ್ರಿಯತಮನ ಫೋಟೋ
2016ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಅಂಕಿತಾ ಲೋಖಂಡೆ ಬ್ರೇಕಪ್ | ಇದಾದ್ಮೇಲೂ ಮನೆಯಲ್ಲಿ ಮಾಜಿ ಪ್ರಿಯತಮನ ಫೋಟೋ
ಅಂಕಿತಾ ಲೋಖಂಡೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ನ ಮಾಜಿ ಗೆಳತಿ ಎಂಬುದು ಎಲ್ಲರಿಗೂ ಗೊತ್ತು. ಈ ಜೋಡಿ 2016ರಲ್ಲಿ ಬ್ರೇಕಪ್ ಮಾಡಿಕೊಂಡಿದ್ದರು.
ಬ್ರೇಕಪ್ ಆದಾಗ ಬಹಳಷ್ಟು ಜನ ಬಂದು ಆಕೆಯಲ್ಲಿ ಬ್ರೇಕಪ್ ಬಗ್ಗೆ ಪ್ರಶ್ನಿಸುತ್ತಿದ್ದರು. ಆದರೆ ಈ ಸಂದರ್ಭದಿಂದ ತಪ್ಪಿಸಿಕೊಳ್ಳುವುದು ಸರಿಯಲ್ಲ ಎಂದುಕೊಂಡಿದ್ದೆ ಎಂದಿದ್ದಾರೆ ಅಂಕಿತಾ.
ಮಗುವಾದ ತಿಂಗಳಲ್ಲಿಯೇ ಮತ್ತೆ ಶೂಟಿಂಗ್ ಆರಂಭಿಸಿದ ಕರೀನಾ ಕಪೂರ್!
ನನ್ನ ಬದುಕಲ್ಲಿ ಇನ್ನೊಬ್ಬ ವ್ಯಕ್ತಿ ಬರಲು ಸಾಧ್ಯ ಎನ್ನುವಷ್ಟರವರೆಗೂ ನಾನು ಸುಶಾಂತ್ ಸಿಂಗ್ ಫೋಟೋ ಮನೆಯಲ್ಲಿ ಇಟ್ಟುಕೊಂಡಿದ್ದೆ ಎಂದಿದ್ದಾರೆ ನಟಿ. ನಂತರ ವಿಕ್ಕಿ ಜೈನ್ ಜೊತೆ ಪರಿಚಯವಾಗಿ ಸದ್ಯ ಇಬ್ಬರು ರಿಲೇಷನ್ಶಿಪ್ನಲ್ಲಿದ್ದಾರೆ.
ಮನೆಗೆ ಬಂದ ಜನ ಸುಶಾಂತ್ ಸಿಂಗ್ ಫೋಟೋ ಆಕೆಯ ಮನೆಯಿಂದ ತೆಗೆಯುವಂತೆ ಕೇಳುತ್ತಿದ್ದರು. ನನಗೆ ಸಮಯಕೊಡಿ. ನನಗೆ ನನ್ನದೇ ಆದ ಸಮಯಾವಕಾಶ ಬೇಕು. ನಾನು ಎರಡೂವರೆ ವರ್ಷ ಅವನೊಂದಿಗಿದ್ದೆ, ಅವನ ಫೋಟೋಗಳ ಜೊತೆ ಆ ದಿನಗಳನ್ನು ಕಳೆದಿದ್ದೇನೆ ಎಂದಿದ್ದಾರೆ ಅಂಕಿತಾ.
ಹಸೆಮಣೆ ಏರಿದ ಪ್ರಿಯಾಂಕಾ ಚೋಪ್ರಾ ಮೊದಲ ಬಾಯ್‌ಫ್ರೆಂಡ್!
ಸುಶಾಂತ್ ಮತ್ತೊಮ್ಮೆ ಸಿಕ್ಕಿದರೆ ಆತನನ್ನು ಎದುರಿಸಲು ಸಾಧ್ಯವಾಗಬೇಕೆಂದೇ ನಟಿ ಆತನ ಫೋಟೋ ಮನೆಯಲ್ಲಿಟ್ಟಿದ್ದಾಗಿ ಹೇಳಿದ್ದಾರೆ. ನಂತರ ಮನಸು ಸಾಮಾಧಾನಗೊಂಡಾ ಫೋಟೋಗಳನ್ನು ಮನೆಯಿಂದ ತೆಗೆದಿದ್ದರು.