ಪ್ರೈವೇಟ್‌ ಜೆಟ್‌ನಲ್ಲಿ ದೇಸಿ ಗರ್ಲ್, ದೇಸಿ ಸ್ಟೈಲ್: ಇಂಡಿಯಾವಾಲೆ ಎಂದ ನೆಟ್ಟಿಗರು

Published : Sep 29, 2021, 10:13 AM ISTUpdated : Sep 29, 2021, 11:44 AM IST
ಪ್ರೈವೇಟ್‌ ಜೆಟ್‌ನಲ್ಲಿ ದೇಸಿ ಗರ್ಲ್, ದೇಸಿ ಸ್ಟೈಲ್: ಇಂಡಿಯಾವಾಲೆ ಎಂದ ನೆಟ್ಟಿಗರು

ಸಾರಾಂಶ

ಪ್ರೈವೆಟ್ ಜೆಟ್‌ನಲ್ಲಿ ಪ್ರಿಯಾಂಕ ಚೋಪ್ರಾ ಫೋಟೋ ವೈರಲ್ ದೇಸೀ ಗರ್ಲ್ ದೇಸಿ ಸ್ಟೈಲ್ ನೋಡಿ ನೆಟ್ಟಿಗರೇನಂದ್ರು ನೋಡಿ

ಕೆಲವೊಂದು ದೇಸಿ ಸ್ಟೈಲ್‌ಗಳನ್ನು ಬದಲಾಯಿಸುವುದು ಕಷ್ಟ, ಕೈಯಲ್ಲಿ ಉಣ್ಣುವ ಸ್ವಾದ, ಚಕ್ಕಳಮಕ್ಕಳ ಕೂರುವ ಸ್ವಭಾವ ಇದೆಲ್ಲವೂ ಭಾರತೀರೆಲ್ಲರ ಕಂಫರ್ಟ್ ಲೈಫ್‌ ಭಾಗಗಳು. ಉಳಿದೆಲ್ಲವೂ ಅಳವಡಿಸಿಕೊಂಡು ಅನುಸರಿಸುವುದಷ್ಟೇ. ಆದರೆ ತಮ್ಮ ಖಾಸಗಿತನಕ್ಕೆ ಬಂದಾಗ ದೇಸಿ ಸ್ಟೈಲ್ ಬಿಡುವುದಿಲ್ಲ. ಇದಕ್ಕೆ ನಟಿ ಪ್ರಿಯಾಂಕ ಚೋಪ್ರಾ(Priyanka chopra) ಹೊರಾಗಿಲ್ಲ.

ಬಾಲಿವುಡ್(Bollywood) ಹಾಲಿವುಡ್‌ನಲ್ಲಿಯೂ(Hollywood) ಮಿಂಚುತ್ತಿರುವ ನಟಿ ಪ್ರಿಯಾಂಕ ಚೋಪ್ರಾ ಜೋನಸ್ ಕ್ಯೂಟ್ & ಸ್ಟೈಲಿಷ್. ನಟಿ ಇತ್ತೀಚೆಗೆ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುವಾಗ ದೇಸಿ ಸ್ಟೈಲ್‌ ಫಾಲೋ ಮಾಡಿದ್ದಾರೆ. ಪ್ರೈವೇಟ್ ಜೆಟ್, ಸ್ವಲ್ಪ ಖಾಸಗಿತನವನ್ನು ಎಂಜಾಯ್ ಮಾಡಿದ ನಟಿ ಗಟ್ಟಿ ಚಕ್ಕಳಮಕ್ಕಳ ಹಾಕಿ ಕೂತುಬಿಟ್ಟಿದ್ದಾರೆ. ನಟಿಯ ಸಾದಾ ಸೀದಾ ಫೋಟೋ ನೋಡಿ ಮೆಚ್ಚಿಕೊಂಡಿದ್ದಾರೆ ನೆಟ್ಟಿಗರು.

ಪ್ರಿಯಾಂಕಾ - ದೀಪಿಕಾ: ಯಾರು ಎಷ್ಟು ಹಿಟ್‌ ಸಿನಿಮಾ ನೀಡಿದ್ದಾರೆ?

ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತನ್ನ ಮುಂಬರುವ ಸಿರೀಸ್ ಸಿಟಾಡೆಲ್‌ನ ಮುಂದಿನ ಚಿತ್ರೀಕರಣಕ್ಕಾಗಿ ಸ್ಪೇನ್‌ಗೆ ಖಾಸಗಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ತನ್ನ ತಂಡದ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ, ಪ್ರಿಯಾಂಕಾ ಕಾಲು ಮೇಲಿಟ್ಟು ಚಕ್ಕಳಮಕ್ಕಳ ಹಾಕಿ  ವಿಮಾನದಲ್ಲಿ ಕುಳಿತಿರುವುದು ಕಂಡುಬರುತ್ತದೆ.

ಪ್ರಿಯಾಂಕಾ ಕಪ್ಪು ಮತ್ತು ಬಿಳಿ ಪಟ್ಟಿ ಶರ್ಟ್, ಬೀಜ್ ಪ್ಯಾಂಟ್ ಮತ್ತು ಕಂದು ಬಣ್ಣದ ಜಾಕೆಟ್ ಧರಿಸಿದ್ದರು. ಇದೆಲ್ಲಕ್ಕಿಂತ ಎಲ್ಲರ ಗಮನ ಸೆಳೆದದ್ದು ನಟಿಯ  ದೇಸಿ ಭಂಗಿ. ಇಂಡಿಯಾ ವಾಲೆ ಎಂದು ಒಬ್ಬರು ಬರೆದಿದ್ದಾರೆ. ನಟಿ ಕುಳಿತುಕೊಳ್ಳುವ ಶೈಲಿ ಇಷ್ಟವಾಯಿತು ಎಂದು ಮತ್ತೊಬ್ಬರು ಬರೆದಿದ್ದಾರೆ. ಭಾರತೀಯ ಸ್ಟೈಲ್‌ನಲ್ಲಿ ಕುಳಿತುಕೊಳ್ಳುವುದು. ಅತ್ಯಂತ ಆರಾಮದಾಯಕ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಕುಳಿತುಕೊಳ್ಳಲು ಇದು ಅತ್ಯಂತ ಆರಾಮದಾಯಕವಾದ ಸ್ಟೈಲ್. ಪ್ರಿಯಾಂಕಾ ನಿಮಗೆ ಅಭಿನಂದನೆಗಳು. ನೀವು ಇನ್ನೂ ನಮ್ಮ ದೇಸಿ ಹುಡುಗಿ ಎಂದು ಕಾಮೆಂಟ್ ಮಾಡಿದ್ದಾರೆ.

ಚಿತ್ರವನ್ನು ಪ್ರಿಯಾಂಕಾ ಚೋಪ್ರಾ ಅವರ ತಾಯಿ ಡಾ ಮಧು ಚೋಪ್ರಾ ಕ್ಲಿಕ್ಕಿಸಿದ್ದಾರೆ. ಈ ಹಿಂದೆ ಪ್ರಿಯಾಂಕಾ ಸಿಟಾಡೆಲ್ ನ ಸಹನಟ ಒಸಿ ಇಖಿಲೆ ಕೂಡ ತಮ್ಮ ಖಾಸಗಿ ವಿಮಾನದ ಇನ್‌ಸ್ಟಾಗ್ರಾಮ್ ರೀಲ್ ಅನ್ನು ಹಂಚಿಕೊಂಡಿದ್ದಾರೆ. ಇದು ಪ್ರಿಯಾಂಕಾ ನಾಯಿ ಡಯಾನಾ ಮತ್ತು ಅವರ ಷಾಂಪೇನ್ ಅನ್ನು ಒಳಗೊಂಡಿತ್ತು.

ಪ್ರಿಯಾಂಕಾ ಇತ್ತೀಚೆಗೆ ಗ್ಲೋಬಲ್ ಸಿಟಿಜನ್ ಲೈವ್‌ಗಾಗಿ ಪ್ಯಾರಿಸ್‌ನಲ್ಲಿದ್ದರು. ಅವರು ಸಮಾರಂಭವನ್ನು ಆಯೋಜಿಸಿದ್ದರು. ಇದರಲ್ಲಿ ಎಲ್ಟನ್ ಜಾನ್ ಮತ್ತು ಇತರ ಪ್ರದರ್ಶನಕಾರರೂ ಇದ್ದರು. ಗ್ಲೋಬಲ್ ಸಿಟಿಜನ್ ಈವೆಂಟ್‌ನಲ್ಲಿ ಭಾಗವಹಿಸುವ ಮುನ್ನ ಪ್ರಿಯಾಂಕಾ ತನ್ನ ಕಾರ್ಯಕ್ರಮವಾದ ದಿ ಆಕ್ಟಿವಿಸ್ಟ್‌ನಿಂದಾಗಿ ವಿವಾದಕ್ಕೆಡೆಯಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?