ಮಗಳಿಗೆ 'ಅರಿಯಾನ' ಎಂದು ನಾಮಕರಣ ಮಾಡಿದ ನಟ ಆರ್ಯ, ಸುಯೇಷಾ!

Suvarna News   | Asianet News
Published : Sep 28, 2021, 05:22 PM ISTUpdated : Sep 29, 2021, 11:47 AM IST
ಮಗಳಿಗೆ  'ಅರಿಯಾನ' ಎಂದು ನಾಮಕರಣ ಮಾಡಿದ ನಟ ಆರ್ಯ, ಸುಯೇಷಾ!

ಸಾರಾಂಶ

ಪುತ್ರಿಗೆ ಡಿಫರೆಂಟ್ ಆಗಿರುವ ಹೆಸರಿಟ್ಟ ಯುವರತ್ನ ನಟಿ ಸುಯೇಷಾ. ಮಗು ಮುಖ ರಿವೀಲ್ ಮಾಡಿ ಎಂದು ಡಿಮ್ಯಾಂಡ್ ಮಾಡಿದ ನೆಟ್ಟಿಗರು... 

'ಯುವರತ್ನ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ಸುಯೇಷಾ (Sayyeshaa) ತಮ್ಮ ಪುತ್ರಿಗೆ ನಾಮಕರಣ (Naming Ceremony) ಮಾಡಿದ್ದಾರೆ. ಸುಯೇಷಾ ಹಾಗೂ ಆರ್ಯನ್ (Arya) ಹೆಸರಿನಲ್ಲಿ ನಾನಾ ರೀತಿ ಕಾಂಬಿನೇಷನ್‌ ಹೆಸರು ಕ್ರಿಯೇಟ್ ಮಾಡುತ್ತಿದ್ದ ಅಭಿಮಾನಿಗಳಿಗೆ ಈ ಹೆಸರು ಶಾಕ್ ತಂದುಕೊಟ್ಟಿದೆ. 

'ತಂದೆಯಾಗಿ ಎರಡು ತಿಂಗಳು. ಬೇಬಿ ಗರ್ಲ್. #Ariana' ಎಂದು ಆರ್ಯ ಇನ್‌ಸ್ಟಾಗ್ರಾಂ (Instagram) ಸ್ಟೋರಿ ಬರೆದುಕೊಂಡಿದ್ದಾರೆ.  'ನನ್ನ ಮೊಮ್ಮಗಳಿಗೆ ಎರಡು ತಿಂಗಳು. ನೀವು ನನ್ನ ಆಪ್ತ ಸ್ನೇಹಿತರು ಆಕೆ ಹೆಸರನ್ನು ತಿಳಿದುಕೊಳ್ಳಬೇಕು. ಆರಿಯಾನ ಎಂದು ಹೆಸರಿಟ್ಟಿದ್ದೀವಿ. ಹೆಸರಿನ ಅರ್ಥ 'ಶುದ್ಧ' (Pure) ಎಂದು. ನಾವೆಲ್ಲರೂ ಇಷ್ಟ ಪಟ್ಟು ಆಯ್ಕೆ ಮಾಡಿದ್ದೀವಿ. ಆಕೆಯ ತಂದೆಯ ಹೆಸರನ್ನು ಹೋಲುತ್ತದೆ ಎಂಬುದೇ ನಮಗೆ ಖುಷಿ. ತಾಯಿ ಸುಯೇಷಾ ಫೆವರೆಟ್ ಹೆಸರು ಇದು. ಶೀಘ್ರದಲ್ಲಿಯೇ ಆಕೆಯ ಫೋಟೋದೊಂದಿಗೆ ನಿಮಗೆ ಪರಿಚಯ ಮಾಡಿ ಕೊಡುತ್ತೇವೆ. ಆಕೆ ಇನ್ನೂ ಪುಟ್ಟ ಗೊಂಬೆ. ನಿಮಗೆ ಗೊತ್ತಲ್ಲ ಹಿರಿಯರು ಎಷ್ಟು ರಕ್ಷಣೆ ನೀಡುತ್ತಾರೆಂದು? ದಯವಿಟ್ಟು ನೀವೆಲ್ಲರೂ ಆಕೆಗೆ ಆಶೀರ್ವಾದ ಮಾಡಬೇಕು,' ಎಂದು ನಟಿ ಸುಯೇಷಾ ತಾಯಿ ಶಾಹೀನ್ (Shaheen) ಬರೆದುಕೊಂಡಿದ್ದಾರೆ. 

ತಮಿಳು (Tamil) ಸಿನಿಮಾವೊಂದರ ಚಿತ್ರೀಕರಣದಲ್ಲಿ ಸುಯೇಷಾ ಭಾಗಿಯಾದಾಗ ಆರ್ಯರನ್ನು ಪ್ರೀತಿಸಲು ಆರಂಭಿಸಿದ್ದರು. ಇಬ್ಬರ ನಡುವೆ 12 ವರ್ಷಗಳ ವಯಸ್ಸಿನ ಅಂತರವಿದ್ದರೂ, ಪ್ರೀತಿಸಿ, (Love) 2019ರಲ್ಲಿ ವೈವಾಹಿಕ ಜೀವನಕ್ಕೆ (Wedding) ಕಾಲಿಟ್ಟರು. ಇವರಿಬ್ಬರಿಗೆ ಹೆಣ್ಣು ಮಗು (Baby Girl) ಹುಟ್ಟಿರುವ ಸಂತಸವನ್ನು ನಿರ್ಮಾಪಕ ವಿಶಾಲ್ (Vishal) ಅನೌನ್ಸ್ ಮಾಡಿದ್ದರು. ಪ್ರೀತಿ, ಮದುವೆ ಹಾಗೂ ಮಗುವಿನ ವಿಚಾರ ಗೌಪ್ಯವಾಗಿಟ್ಟಿದ್ದಕ್ಕೆ ನೆಟ್ಟಿಗರು ನಿರಾಸೆ ಹುಸಿಗೋಪ ತೋರಿದ್ದರು. ನಿಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದಕ್ಕೆ ಏನು ಕಷ್ಟ ಎಂದು ಪ್ರಶ್ನೆ ಮಾಡಿದ್ದರು. 

ಹೆಣ್ಣು ಮಗುವಿಗೆ ತಾಯಿಯಾದ 'ಯುವರತ್ನ' ಚಿತ್ರದ ನಟಿ ಸಯೇಷಾ ಸೈಗಲ್!

ಸುಯೇಷಾ ಚಿತ್ರರಂಗಕ್ಕೆ ಕಾಲಿಡುವ ಮುನ್ನವೂ ತಮ್ಮ ಫಿಟ್ನೆಸ್‌ (Fitness) ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. 'ನಾನು 9 ವರ್ಷದವಳಿದ್ದಾಗ ನೃತ್ಯ (Dance) ಮಾಡಲು ಪ್ರಾರಂಭಿಸಿದೆ. ಅಂದಿನಿಂದ ನಾನು ಮಾಡುತ್ತಿರುವ ಇತರೆ ರೀತಿ ವ್ಯಾಯಾಮಗಳು ಎಂದು ಲಾಕ್‌ಡೌನ್‌ (Lockdown) ಸಮಯದಲ್ಲಿ ಅಭಿಮಾನಿಗಳೊಂದು ತಮ್ಮ ಫಿಟ್ನೆಸ್ ಸಿಕ್ರೇಟ್ ಹಂಚಿಕೊಳ್ಳುತ್ತಿದ್ದರು. 

ಇನ್ನು ತಿಂಗಳ ಹಿಂದೆ ಆರ್ಯನ ಹೆಸರು ಬಳಸಿ ಜರ್ಮನಿ (Germany) ಹುಡುಗಿಗೆ ವಂಚನೆ (Fraud) ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಜರ್ಮನಿ ಹುಡುಗಿಯನ್ನು ಮದುವೆ ಆಗುವುದಾಗಿ ಹೇಳಿ ಲಕ್ಷಗಟ್ಟಲೆ ಹಣ ಪಡೆದುಕೊಂಡಿದ್ದರು. ಸುಯೇಷಾಗೆ ವಿಚ್ಛೇದನ ನೀಡುವುದಾಗಿಯೂ ವಿದೇಶಿ ಹುಡುಗಿಗೆ ನಂಬಿಸಿದ್ದರು. ಆರ್ಯ ತಂದೆ ಆದ ವಿಚಾರ ತಿಳಿಯುತ್ತಿದ್ದಂತೆ, ಜರ್ಮನಿ ಹುಡುಗಿ ಭಾರತದಲ್ಲಿರುವ ವಕೀಲರನ್ನು ಸಂಪರ್ಕಿಸಿ ಎಲ್ಲಾ ಕೂನೂನು (Law) ಪರ ಹೋರಾಟ ಮಾಡಿದಾಗ ಇದೊಂದು ವಂಚನೆ ಪ್ರಕರಣವೆಂದು ತಿಳಿದಿತ್ತು. ಅಲ್ಲದೇ ಆರ್ಯ ಹೆಸರಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಯೋರಾ ವಿದೇಶಿ ಹುಡುಗಿಗೆ ವಂಚಿಸಲು ಯತ್ನಿಸಿದ್ದು ಬೆಳಕಿಗೆ ಬಂದಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!