ಕರ್ನಾಟಕದ ವ್ಯಕ್ತಿಗೆ ತನ್ನ ದುಬಾರಿ ಕಾರನ್ನ ಮಾರಿದ ಪ್ರಿಯಾಂಕಾ ಚೋಪ್ರಾ

Suvarna News   | Asianet News
Published : Mar 18, 2022, 07:26 PM ISTUpdated : Mar 18, 2022, 07:40 PM IST
ಕರ್ನಾಟಕದ ವ್ಯಕ್ತಿಗೆ ತನ್ನ ದುಬಾರಿ ಕಾರನ್ನ ಮಾರಿದ ಪ್ರಿಯಾಂಕಾ ಚೋಪ್ರಾ

ಸಾರಾಂಶ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತನ್ನ ಬಳಿ ಇರುವ ದುಬಾರಿ ಕಾರುಗಳಲ್ಲಿ ಒಂದಾಗಿರುವ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಕರ್ನಾಟಕ ಮೂಲದ ಉದ್ಯಮಿಗೆ ಮಾರಾಟ ಮಾಡಿದ್ದಾರೆ.

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಸದಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಪತಿ ನಿಕ್ ಜೋನಸ್(Nick Jonas) ಜೊತೆ ವಿದೇಶದಲ್ಲೇ ನೆಲೆಸಿರುವ ಪ್ರಿಯಾಂಕಾ ಆಗಾಗ ಭಾರತೀಯ ಅಭಿಮಾನಿಗಳ ಮನಗೆಲ್ಲುತ್ತಿರುತ್ತಾರೆ. ಇತ್ತೀಚಿಗೆ ಬಾಡಿಗೆ ತಾಯಿ ಮೂಲಕ ಮಗು ಪಡೆದುಕೊಂಡು ಸುದ್ದಿಯಾಗಿದ್ದ ಪ್ರಿಯಾಂಕಾ ಇದೀಗ ಪ್ರಿಯಾಂಕಾ ತನ್ನ ದುಬಾರಿ ಕಾರನ್ನು(Priyanka Chopra Luxury car) ಕರ್ನಾಟಕ ಮೂಲದ ವ್ಯಕ್ತಿಗೆ ಮಾರಾಟ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೌದು, ಪ್ರಿಯಾಂಕಾ ತನ್ನ ಬಳಿ ಇದ್ದ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಬೆಂಗಳೂರು ಮೂಲಕ ಉದ್ಯಮಿಗೆ ಮಾರಾಟ ಮಾಡಿದ್ದಾರೆ. ರೋಲ್ಸ್ ರಾಯ್ಸ್ ಕಾರು ಬ್ರಿಟಿಷ್ ಐಷಾರಾಮಿ ಕಾರಾಗಿದೆ, ಇದು ಬಎಂಬ್ಲ್ಯೂ ಒಡೆತನದಲ್ಲಿದೆ.

ಅಂದಹಾಗೆ ಪ್ರಿಯಾಂಕಾ ಬೆಂಗಳೂರು ಮೂಲದ ಯಾವ ವ್ಯಕ್ತಿಗೆ ಕಾರ್ ಮಾರಾಟ ಮಾಡಿದ್ದಾರೆ, ಎಷ್ಟು ಬೆಲೆಗೆ ನೀಡಿದ್ದಾರೆ ಎನ್ನು ಬಗ್ಗೆ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಆದರೆ ಅವರ ದುಬಾರಿ ಕಾರು ಮಾರಾಟವಾಗಿರುವ ಸುದ್ದಿ ಚರ್ಚೆಯಾಗುತ್ತಿದೆ. ಪ್ರಿಯಾಂಕಾ ಬಳಿ ಅನೇಕ ದುಬಾರಿ ಕಾರುಗಳಿಗೆ. ಮದುವೆಯಾಗಿ ವಿದೇಶಕ್ಕೆ ಹಾರಿದ ಪ್ರಿಯಾಂಕಾ ಪತಿ ನಿಕ್ ಜೋನಸ್ ಜೊತೆ ಅಲ್ಲೆ ನೆಲೆಸಿದ್ದಾರೆ. ಮುಂಬೈ ಮನೆಯಲ್ಲಿದ್ದ ಕಾರುಗಳು ಹಾಗೆ ಉಳಿದುಕೊಂಡಿದ್ದವು. ತನ್ನ ಮನೆಯ ಕಾರ್ ಶೆಡ್ ನಲ್ಲಿ ಹಾಗೆ ಉಳಿದಿದ್ದ ಕಾರಣ ಮಾರಾಟ ಮಾಡಿದ್ದಾರೆ ಎನ್ನುವ ಮಾತುಗಳು ಬಾಲಿವುಡ್ ವಲಯದಲ್ಲಿ ಚರ್ಚೆಯಾಗುತ್ತಿದೆ. 

ಅಭಿಷೇಕ್ ಬಚ್ಚನ್‌ ಫೋನ್‌ ಕದ್ದು, ಗುಟ್ಟಾಗಿ 'ಆ' ನಟಿಗೆ ಮೆಸೇಜ್ ಮಾಡಿದ Priyanka Chopra!

ಪ್ರಿಯಾಂಕಾ ಚೋಪ್ರಾ ಸದ್ಯ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಪ್ರಿಯಾಂಕಾ ಬಾಡಿಗೆ ತಾಯಿ(Surrogacy) ಮೂಲಕ ಮಗು ಪಡೆದಿರುವ ಸುದ್ದಿಯನ್ನು ಬಹಿರಂಗ ಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದ ಪ್ರಿಯಾಂಕ 'ನಾವು ಬಾಡಿಗೆ ತಾಯಿ ಮೂಲಕ ಮಗುವನ್ನು ಸ್ವಾಗತಿಸಿದ್ದೇವೆ ಎಂದು ಹೇಳಲು ಸಂತೋಷವಾಗುತ್ತದೆ. ನಮ್ಮ ಖಾಸಗಿತನಕ್ಕೆ ಗೌರವ ನೀಡಬೇಕು' ಎಂದು ಹೇಳಿದ್ದರು.

ಪ್ರಿಯಾಂಕಾ ಚೋಪ್ರಾ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ದಿ ವೈಟ್ ಟೈಗರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬಾಲಿವುಡ್ ನಿಂದ ದೂರ ಉಳಿದಿರುವ ಪ್ರಿಯಾಂಕಾ ವೈಟ್ ಟೈಗರ್ ಬಳಿಕ ಮತ್ತೆ ಬಂದಿಲ್ಲ. ಹಿಂದಿರಂಗದಿಂದ ದೂರ ಆಗಿರುವ ಪ್ರಿಯಾಂಕಾ ದಿ ಮ್ಯಾಟ್ರಿಕ್ಸ್ ಮತ್ತು ಟೆಕ್ಸ್ಟ ಫಾರ್ ಯೂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಮೊಮ್ಮಗು ಬಗ್ಗೆ ಮೌನ ಮುರಿದ Priyanka Chopra ತಾಯಿ ಮಧು ಚೋಪ್ರಾ!

ಸಿನಿಮಾದಲ್ಲಿ ನಟನೆ ಮಾಡುವ ಜೊತೆಗೆ ಪ್ರಿಯಾಂಕಾ ನಿರ್ಮಾಣದಲ್ಲಿಯೂ ಬ್ಯುಸಿಯಾಗಿದ್ದಾರೆ. ಅಲ್ಲದೆ ವೆಬ್ ಸರಣಿಯಲ್ಲೂ ನಟಿಸುತ್ತಿದ್ದಾರೆ. ಹಾಲಿವುಡ್ ಚಿತ್ರಗಳ ಕಡೆ ಗಮನ ಹರಿಸುತ್ತಿರುವ ಪ್ರಿಯಾಂಕಾ ಬಾಲಿವುಡ್ ಕಡೆ ಯಾವಾಗ ಮುಖ ಮಾಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಇತ್ತೀಚಿಗಷ್ಟೆ ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಸದ್ಯದಲ್ಲೇ ಬಾಲಿವುಡ್ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಯಾವುದೇ ಸಿಮಿಮಾಗೆ ಗ್ರೀನ್ ಸಿಗ್ನಲ್ ನೀಡಿಲ್ಲ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!
Actor Dileep Case: ಖ್ಯಾತ ನಟಿ ಮೇಲಿನ ಅ*ತ್ಯಾಚಾರ ಆರೋಪ; 8 ವರ್ಷಗಳ ಹೋರಾಟ, ನಟ ದಿಲೀಪ್‌ಗೆ ನಿರಾಳ!