ಮಾಜಿ ಪತ್ನಿಗೆ 'ನನ್ನ ಗೆಳತಿ' ಎಂದ ಧನುಷ್; ಐಶ್ವರ್ಯಾ Replay ಇದು

Suvarna News   | Asianet News
Published : Mar 18, 2022, 05:35 PM ISTUpdated : Mar 18, 2022, 06:46 PM IST
ಮಾಜಿ ಪತ್ನಿಗೆ 'ನನ್ನ ಗೆಳತಿ' ಎಂದ ಧನುಷ್; ಐಶ್ವರ್ಯಾ Replay ಇದು

ಸಾರಾಂಶ

ತಮಿಳು ನಟ ಧನುಷ್ ಮಾಜಿ ಪತ್ನಿ ಐಶ್ವರ್ಯಾ ಧನುಷ್ ಅವರಿಗೆ ನನ್ನ ಗೆಳತಿ ಎಂದಿದ್ದಾರೆ. ಐಶ್ವರ್ಯಾ ಬಿಡುಗಡೆ ಮಾಡಿರುವ ವಿಡಿಯೋ ಹಾಡಿಗೆ ಶುಭಹಾರೈಸಿರುವ ಧನುಷ್ ಮೈ ಫ್ರೆಂಡ್ ಎಂದಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ, ನಟ ಧನುಷ್(Dhanush) ಅವರ ಮಾಜಿ ಪತ್ನಿ ಐಶ್ವರ್ಯಾ ರಜನಿಕಾಂತ್(Aishwaryaa Rajinikanth) ಇತ್ತೀಚಿಗೆ ಕೋವಿಡ್ ಪಾಸಿಟಿವ್ ಗೆ ತುತ್ತಾಗಿದ್ದರು. ಇದೀಗ ಚೇತರಿಸಿಕೊಂಡಿರುವ ಐಶ್ವರ್ಯಾ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಅಲ್ಲದೆ ಇತ್ತೀಚಿಗಷ್ಟೆ ಒಂದು ವಿಡಿಯೋ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡಿಗೀಗ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಐಶ್ವರ್ಯಾಗೆ ಮಾಜಿ ಪತಿ ಧನುಷ್ ಕೂಡ ಶುಭಹಾರೈಸಿದ್ದಾರೆ.

ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಧನುಷ್, ಐಶ್ವರ್ಯಾ ಹಾಡಿನ ಲಿಂಕ್ ಶೇರ್ ಮಾಡಿದ್ದಾರೆ. ಅಷ್ಟೆಯಲ್ಲ ನನ್ನ ಗೆಳತಿ ಎಂದು ಪತ್ನಿಯನ್ನು ಕರೆದಿದ್ದಾರೆ. 'ಮ್ಯೂಸಿಕ್ ವಿಡಿಯೋಗೆ ಒಳ್ಳೆಯದಾಗಲಿ ನನ್ನ ಗೆಳತಿ ಐಶ್ವರ್ಯಾ, ಅಭಿನಂದನೆಗಳು' ಎಂದು ಹೇಳಿದ್ದಾರೆ.

ಧನುಷ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಐಶ್ವರ್ಯಾ ಧನ್ಯವಾದ ತಿಳಿಸಿದ್ದಾರೆ. ಅಂದಹಾಗೆ ಐಶ್ವರ್ಯಾ ಟ್ವಿಟ್ಟರ್ ಖಾತೆಯಲ್ಲಿ ತನ್ನ ಹೆಸರಿನ ಜೊತೆ ಧನುಷ್ ಹೆಸರನ್ನು ಹಾಗೆ ಉಳಿಸಿಕೊಂಡಿದ್ದಾರೆ. ಗಂಡ-ಹೆಂಡತಿ ಸಂಬಂಧ ಕಡಿದುಕೊಂಡು ಇಬ್ಬರು ದೂರ ದೂರ ಆಗಿದ್ದರೂ ಐಶ್ವರ್ಯಾ ಪತಿಯ ಹೆಸರನ್ನು ಹಾಗೆ ಉಳಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ರಜನಿಕಾಂತ್ - ಧನುಷ್: ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾನ ಮಾಡಲೇ ಇಲ್ಲ!

ಧನುಷ್ ಮತ್ತು ಐಶ್ವರ್ಯಾ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಬರುತ್ತಿದೆ. ವಿಚ್ಛೇದನದ ಬಳಿಕವೂ ಐಶ್ವರ್ಯಾ ತನ್ನ ಹೆಸರಿನ ಜೊತೆ ಧನುಷ್ ಹೆಸರನ್ನು ಹಾಗೆ ಉಳಿಸಿಕೊಂಡಿದ್ದಾರೆ, ತುಂಬಾ ಪ್ರಬುದ್ಧರಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನು ಮಗಳ ವಿಡಿಯೋ ಸಾಂಗ್ ಬಗ್ಗೆ ತಂದೆ ರಜನಿಕಾಂತ್(Rajinikanth) ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. '9 ವರ್ಷಗಳ ಬಳಿಕ ನ್ನನ ಮಗಳು ಐಶ್ವರ್ಯಾ ನಿರ್ದೇಶನದ ಪಯಣಿ ಹಾಡನ್ನು ಬಿಡುಗಡೆ ಮಾಡಲು ಸಂತೋಷ ವಾಗುತ್ತಿದೆ. ನಾನು ನಿನಗೆ ಸದಾ ಶುಭಹಾರೈಸುತ್ತೇನೆ' ಎಂದು ಟ್ವೀಟ್ ಮಾಡಿ ಮಗಳ ಹಾಡನ್ನು ಬಿಡುಗಡೆ ಮಾಡಿದ್ದರು.

ಅಂದಹಾಗೆ ಈ ಹಾಡಿಗೆ ಅನೇಕ ಸ್ಟಾರ್ ಕಲಾವಿದರು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲು ಅರ್ಜುನ್(allu arjun), ಮಹೇಶ್ ಬಾಬ(Mahesh Babu), ಮೋಹನ್ ಲಾಲ್(Mohanlal), ರಾಘವ್ ಲಾರೆನ್ಸ್, ಅನಿರುದ್ಧ್ ರವಿಚಂದ್ರನ್ ಸೇರಿದಂತೆ ಅನೇಕ ಸ್ಟಾರ್ಸ್ ಹಾಡಿನ ಲಿಂಕ್ ಶೇರ್ ಮಾಡಿ ವಿಶ್ ಮಾಡುತ್ತಿದ್ದಾರೆ.

ಹೊಸ ಗರ್ಲ್‌ ಫ್ರೆಂಡ್ ಜೊತೆ ಹೋಟೆಲ್‌ನಲ್ಲಿ ಕಾಣಿಸಿಕೊಂಡ Dhanush

ಅಂದಹಾಗೆ ಐಶ್ವರ್ಯಾ ಪಯಣಿ ಹಾಡನ್ನು ನಾಲ್ಕು ಭಾಷೆಯಲ್ಲಿ ಬಿಡುಗಡೆ ಮಾಡಿದ್ದಾರೆ. ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಡಿಸೆಂಬರ್ ನಲ್ಲಿ ಧನುಷ್ ಮತ್ತು ಐಶ್ವರ್ಯಾ ಇಬ್ಬರೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇಬ್ಬರು ಬೇರೆ ಬೇರೆ ಆಗುತ್ತಿದ್ದೀವಿ ಎಂದು ಬಹಿರಂಗ ಪಡಿಸುವ ಮೂಲಕ ಸಂಚಲನ ಮೂಡಿಸಿದ್ದರು.

'18 ವರ್ಷಗಳ ಸ್ನೇಹ, ದಾಂಪತ್ಯ, ಪೋಷಕರು ಮತ್ತು ಹಿತೈಶಿಗಳಾಗಿ ಒಟ್ಟಿಗೆ ಪಯಣ ಮಾಡಿದ್ದೇವೆ. ನಮ್ಮ ಪಯಣ ಹೊಂದಾಣಿಕೆಯಿಂದ ಕೂಡಿತ್ತು. ಆದರೆ ಇಂದು ನಾವು ಬೇರೆ ಬೇರೆ ಮಾರ್ಗದಲ್ಲಿ ಸಾಗಲು ನಿರ್ಧರಿಸಿದ್ದೇವೆ. ಐಶ್ವರ್ಯಾ ಮತ್ತು ನಾನು ಬೇರೆ ಆಗುತ್ತಿದ್ದೇವೆ. ನಮ್ಮ ನಿರ್ಧಾರಕ್ಕೆ ಗೌರವ ನೀಡಿ. ನಮ್ಮ ಖಾಸಗಿತನಕ್ಕೆ ಸಮಯ ನೀಡಿ' ಎಂದು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಬಳಿಕ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಐಶ್ವರ್ಯಾ ಮತ್ತು ಧನುಷ್ ಇದೀಗ ಟ್ವಿಟ್ಟರ್ ನಲ್ಲಿ ಮಾತುಕತೆ ನಡೆಸುವ ಮೂಲಕ ಎಲ್ಲರ ಮಗನ ಸೆಳೆದಿದ್ದಾರೆ. ಇಬ್ಬರ ನಡೆ ಅಭಿಮಾನಿಗಳ ಮೆಚ್ಚುಗೆ ಪಾತ್ರವಾಗಿದೆ.

ಇನ್ನು ಧನುಷ್ ಸಿನಿಮಾ ವಿಚಾರಕ್ಕೆ ಬರುವುದಾದರೆ, ಧನುಷ್ ಕೊನೆಯದಾಗಿ ಅತ್ತ್ರಂಗಿ ರೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದಿ ಬಂದಿದ್ದರು. ಹಿಂದಿ ಸಿನಿಮಾವಾಗಿದ್ದು, ಚಿತ್ರದಲ್ಲಿ ಅಕ್ಷಯ್ ಕುಮಾರ್ ಕೂಡ ನಟಿಸಿದ್ದರು. ನಾಯಕಿಯಾಗಿ ಸಾರಾ ಅಲಿ ಖಾನ್ ಕಾಣಿಸಿಕೊಂಡಿದ್ದರು. ಸದ್ಯ ಧನುಷ್ ಬಳಿ ಮಾರನ್, ದಿ ಗ್ರೇ ಮೆನ್, ನಾನೆ ವರುವೆನ್, ವಾತಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!