ಪಾಕ್ ಮಾಜಿ ಅಧ್ಯಕ್ಷರನ್ನು ಭೇಟಿಯಾದ 'KGF-2' ನಟ ಸಂಜಯ್ ದತ್; ಫೋಟೋ ವೈರಲ್

By Suvarna News  |  First Published Mar 18, 2022, 4:55 PM IST

ಬಾಲಿವುಡ್ ನಟ ಸಂಜಯ್ ದತ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸಂಜಯ್ ದತ್ ಸದ್ದು ಮಾಡುತ್ತಿರುವುದು ಸಿನಿಮಾ ವಿಚಾರಕ್ಕೆ ಅಲ್ಲ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ಭೇಟಿಯಾಗಿ ಸುದ್ದಿಯಾಗಿದ್ದಾರೆ. ಸಂಜಯ್ ದತ್ ಮತ್ತು ಮುಷರಫ್ ಇಬ್ಬರು ಮಾತುಕತೆ ನಡೆಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಬಾಲಿವುಡ್ ನಟ ಸಂಜಯ್ ದತ್(Sanjay Dutt) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸಂಜಯ್ ದತ್ ಸದ್ದು ಮಾಡುತ್ತಿರುವುದು ಸಿನಿಮಾ ವಿಚಾರಕ್ಕೆ ಅಲ್ಲ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್(Pervez Musharraf) ಅವರನ್ನು ಭೇಟಿಯಾಗಿ ಸುದ್ದಿಯಾಗಿದ್ದಾರೆ. ಸಂಜಯ್ ದತ್ ಮತ್ತು ಮುಷರಫ್ ಇಬ್ಬರು ಮಾತುಕತೆ ನಡೆಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಲಿವುಡ್ ನಟ ಸಂಜಯ್ ದತ್ ಸದ್ಯ ದುಬೈನಲ್ಲಿದ್ದಾರೆ. ದತ್ ಆಗಾಗ ದುಬೈ ಪ್ರವಾಸಕ್ಕೆ ತೆರಳುತ್ತಿರುತ್ತಾರೆ. ಸದ್ಯ ದುಬೈನಲ್ಲಿರುವ ಸಂಜಯ್ ದತ್ ಅಲ್ಲಿನ ಜಿಮ್(Gym) ಒಂದರಲ್ಲಿ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ಭೇಟಿಯಾಗಿದ್ದಾರೆ(Sanjay Dutt meets Pervez Musharraf) ಎಂದು ವರದಿಯಾಗಿದೆ. ಪರ್ವೇಜ್ ಮುಷರಫ್ ಗಾಲಿ ಕುರ್ಚಿಯಲ್ಲಿ ಕುಳಿಸಿದ್ದಾರೆ. ಅವರ ಮುಂದೆ ನಿಂತಿರುವ ಸಂಜಯ್ ದತ್ ಏನನ್ನೋ ತೋರಿಸುತ್ತಾ ಮಾತನಾಡುತ್ತಿದ್ದಾರೆ. ಈ ಫೋಟೋ ಈಗ ಎಲ್ಲಾ ಕಡೆ ಹರಿದಾಡುತ್ತಿದೆ.

ಹೆಂಡತಿಯ ಪಾದ ಮಸಾಜ್‌ ಮಾಡುತ್ತಿರುವ Sanjay Dutt ವಿಡಿಯೋ ವೈರಲ್‌!

Tap to resize

Latest Videos

ಅಂದಹಾಗೆ ಸಂಜಯ್ ದತ್ ಮತ್ತು ಮುಷರಫ್ ಅವರದ್ದು ಆಕಸ್ಮಿಕ ಭೇಟಿ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ದತ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮಾಜಿ ಮಿಲಿಟರಿ ಆಡಳಿತಗಾರ ಮುಷರಫ್ ಸದ್ಯ ಹಲವಾರು ಕಾನೂನು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಸದ್ಯ ನಡೆಯಲಾಗದ ಪರಿಸ್ಥಿತಿಯಲ್ಲಿರುವ ಮುಷರಫ್ ದುಬೈನಲ್ಲೆ ನೆಲೆಸಿದ್ದಾರೆ. 2016ರಲ್ಲಿ ಮುಷರಫ್ ಚಿಕಿತ್ಸೆಗೆಂದು ದುಬೈಗೆ ತೆರಳಿದ್ದರು. ಆದರೆ ನಂತರ ಅವರು ಪಾಕಿಸ್ತಾನಕ್ಕೆ ವಾಪಸ್ ಆಗದೆ ಅಲ್ಲೇ ನೆಲೆಸಿದ್ದಾರೆ.

ಮುಷರಫ್ 1999ರಲ್ಲಿ ಭಾರತದೊಂದಿಗೆ ಕಾರ್ಗಿಲ್ ವಾರ್(Kargil War) ಸಂಭವಿಸಿದಾಗ ಪಾಕಿಸ್ತಾನ ಸೇನಾ ಮುಖ್ಯಸ್ಥರಾಗಿದ್ದರು(army chief). ಇದೀಗ ಭಾರತದ ಖ್ಯಾತ ನಟ ನಟ ಸಂಜಯ್ ದತ್ ಅವರ ಜೊತೆ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ನಟ ಸಂಜಯ್ ದತ್ ಕೂಡ ಕ್ಯಾನ್ಸರ್ ಗೆ ತುತ್ತಾಗಿ ಸದ್ಯ ಗುಣಮುಖರಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಂಜಯ್ ದತ್ ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಮತ್ತೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Three Dimension Motion Picture; ಹೊಸ ನಿರ್ಮಾಣ ಸಂಸ್ಥೆ ತೆರೆದ ಸಂಜಯ್ ದತ್!

ಇನ್ನು ಸಂಜಯ್ ದತ್ ಸಿನಿಮಾ ವಿಚಾರಕ್ಕೆ ಬರುವುದಾದರೆ, ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ಕನ್ನಡದ ಕೆಜಿಎಫ್-2 ಸಿನಿಮಾ. ರಾಕಿಂಗ್ ಸ್ಟಾರ್ ಯಶ್(Yash) ನಾಯಕನಾಗಿ ಕಾಣಿಸಿಕೊಂಡಿರುವ ಕೆಜಿಎಫ್-2ನಲ್ಲಿ ದತ್ ಖಳನಟನಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ದತ್ ಕನ್ನಡದಲ್ಲಿ ಬಣ್ಣ ಹಚ್ಚಿದ್ದು, ಅಧೀರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸಂಜಯ್ ದತ್ ಲುಕ್ ರಿವೀಲ್ ಆಗಿದ್ದು, ಭಯಾನಕ ಖಳನಟನಾಗಿ ಮಿಂಚಿದ್ದಾರೆ. ಸಂಜಯ್ ದತ್ ಅವರನ್ನು ಅಧೀರ ಪಾತ್ರದಲ್ಲಿ ನೋಡಲು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬಂದಿರುವ ಕೆಜಿಎಫ್-2ನಲ್ಲಿ ಸಂಜಯ್ ದತ್ ಜೊತೆ ಬಾಲಿವುಡ್ ನ ಮತ್ತೋರ್ವ ಖ್ಯಾತ ನಟಿ ರವೀನಾ ಟಂಡನ್ ಕೂಡ ನಟಿಸಿದ್ದಾರೆ. ಯಶ್ ಮತ್ತು ಸಂಜಯ್ ದತ್ ಕಾಳಗ ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಇನ್ನು ದತ್ ಈ ಸಿನಿಮಾ ಜೊತೆಗೆ ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್, ಶಂಶೇರಾ, ದಿ ಗುಡ್ ಮಹಾರಾಜ ಸೇರಿದಂತೆ ಅನೇಕ ಸಿನಮಾಗಳಲ್ಲಿ ನಟಿಸುತ್ತಿದ್ದಾರೆ.

click me!