ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅಪರೂಪದ ಫೋಟೋ ಶೇರ್ ಮಾಡಿದ್ದಾರೆ. ತನ್ನ ತಾಯಿ ಮಧು ಚೋಪ್ರಾ ಮತ್ತು ಅಜ್ಜಿಯ ಜೊತೆ ಇರುವ ಬಾಲ್ಯದ ಫೋಟೋವನ್ನು ಶೇರ್ ಮಾಡಿ ಪ್ರೀತಿಯ ಅಜ್ಜಿಗೆ ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಸದ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಅಮೆರಿಕಾದ ಖ್ಯಾತ ಗಾಯಕ ನಿಕ್ ಜೋನಸ್ ಮದುವೆಯಾದ ಬಳಿಕ ಪ್ರಿಯಾಂಕಾ ಅಲ್ಲೇ ಸೆಟಲ್ ಆಗಿದ್ದಾರೆ. ಇತ್ತೀಚಿಗಷ್ಟೆ ಬಾಡಿಗೆ ತಾಯಿ(Surrogacy) ಮೂಲಕ ಮೊದಲ ಮಗುವನ್ನು ಬರಮಾಡಿಕೊಂಡಿರುವ ಪ್ರಿಯಾಂಕಾ ಸದ್ಯ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಅಮೆರಿಕಾದ ಸೊಸೆಯಾಗಿದ್ದರು ಪ್ರಿಯಾಂಕಾ ತನ್ನ ಸಂಸ್ಕೃತಿ ಹಾಗೂ ತನ್ನವರನ್ನು ಮರೆತಿಲ್ಲ. ಭಾರತೀಯಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಪ್ರಿಯಾಂಕಾ ಭಾರತದ ಸಂಸ್ಕೃತಿಯನ್ನು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ. ಭಾರತದ ಹಬ್ಬ, ಪೂಜೆಗಳನ್ನು ಮಾಡುವ ಚಾಚು ತಪ್ಪದೆ ಮಾಡುವ ಪ್ರಿಯಾಂಕಾಗೆ ಪತಿ ನಿಕ್ ಜೋನಸ್ ಕೂಡ ಸಾಥ್ ನೀಡುತ್ತಾರೆ. ಈ ವಿಚಾರವಾಗಿ ಪ್ರಿಯಾಂಕಾ ಭಾರತೀಯ ಅಭಿಮಾನಿಗಳ ಮನಗೆಲ್ಲುತ್ತಿರುತ್ತಾರೆ.
ಇದೀಗ ಪ್ರಿಯಾಂಕಾ ತನ್ನ ಅಪರೂಪದ ಫೋಟೋವನ್ನು ಹಂಚಿಕೊಂಡಿದ್ದಾರೆ. ಬಾಲ್ಯದ ಫೋಟೋ ಶೇರ್ ಮಾಡಿರುವ ಪ್ರಿಯಾಂಕಾ ತನ್ನ ಪ್ರೀತಿಯ ಅಜ್ಜಿಯ ನೆನಪು ಮಾಡಿಕೊಂಡಿದ್ದಾರೆ. ಅಮ್ಮನ ತಾಯಿ ಅಜ್ಜಿ ಹುಟ್ಟುಹಬ್ಬದ ಪ್ರಯುಕ್ತ ಪ್ರಿಯಾಂಕಾ ಅಜ್ಜಿ ಜೊತೆಗಿರುವ ಫೋಟೋ ಶೇರ್ ಮಾಡಿ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಪ್ರಿಯಾಂಕಾ ಶೇರ್ ಮಾಡಿರುವ ಫೋಟೋದಲ್ಲಿ ತಾಯಿ ಮಧು ಚೋಪ್ರಾ ಕೂಡ ಇದ್ದಾರೆ. ಈ ಫೋಟೋಗೆ ನನ್ನ ಜೀವನದ ತಾಯಿ ಶಕ್ತಿ ಎಂದು ಹೇಳಿದ್ದಾರೆ. ಜೊತೆ ದೀರ್ಘವಾಗಿ ಬರೆದುಕೊಂಡಿದ್ದಾರೆ.
ತನ್ನ ಗರ್ಲ್ ಗ್ಯಾಂಗ್ ಮತ್ತು ಮುದ್ದಿನ ನಾಯಿಗಳ ಜತೆ Priyanka Chopra ಔಟಿಂಗ್
ನನ್ನ ನಾನಿ (ತಾಯಿಯ ಅಮ್ಮ)ಯ ಹುಟ್ಟುಹಬ್ಬ. ನನ್ನ ತಂದೆ ಮತ್ತು ತಾಯಿ ಅಧ್ಯಯನ ಮತ್ತು ವೈದ್ಯಕೀಯ ವೃತ್ತಿಯಲ್ಲಿ ಬ್ಯುಸಿಯಾಗಿದ್ದಾಗ ನನ್ನನ್ನು ಜೊತೆಗಿದ್ದು ನನ್ನ ಬೆಳೆಸಿದವರು. ನನ್ನ ಪಾಲನೆಯ ಅತ್ಯಂತ ಪ್ರಮುಖವಾದ ವ್ಯಕ್ತಿ. ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ನನ್ನ ಜೀವನದಲ್ಲಿ ನಾನು ಅನೇಕ ಶಕ್ತಿಯುತ ತಾಯಿಯನ್ನು ಹೊಂದಿದ್ದೇನೆ. ನಿಮ್ಮಲ್ಲರಿಗೂ ಕೃತಜ್ಞಳಾಗಿರುತ್ತೇನೆ. ಮಿಸ್ ಯು ನಾನಿ. ಮತ್ತು ಪ್ರಿಯಮ್ ಮಾಥುರ್ ತುಂಬಾ ಮುದ್ದಾಗಿ ಕಾಣಿಸುತ್ತಿದ್ದಿಯಾ ಎಂದು ಹೇಳಿದ್ದಾರೆ.
ದೀರ್ಘವಾದ ಸಾಲುಗಳನ್ನು ಬರೆದು ಪ್ರಿಯಾಂಕಾ ಎರಡು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮೊದಲ ಫೋಟೋದಲ್ಲಿ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಮತ್ತು ಅಜ್ಜಿ ಹಾಗೂ ಅವರ ಸೋದರ ಸಂಬಂಧಿ ಪ್ರಿಯಮ್ ಮಾಥುರ್ ಜೊತೆ ಕುಳಿತಿದ್ದಾರೆ. ಎರಡನೇ ಫೋಟೋದಲ್ಲಿ ಅಜ್ಜಿಗೆ ಏನೋ ತಿನಿಸುತ್ತಿದ್ದಾರೆ. ಫೋಟೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಮೊದಲ ಚಿತ್ರದಲ್ಲಿ ನಾನ್ಯಾಕೆ ಭಯಾನಕವಾಗಿ ಕಾಣಿಸುತ್ತಿದ್ದೀನಿ? ನಿಮಗೂ ಹಾಗೆ ಅನಿಸಿತಾ? ಎಂದು ಅಭಿಮಾನಿಗಳನ್ನು ಪ್ರಶ್ನೆ ಮಾಡಿದ್ದಾರೆ.
'ಉಕ್ರೇನ್ ನಿರಾಶ್ರಿತರಿಗೆ ಸಹಾಯ ಮಾಡುತ್ತೀರಾ..'ವಿಶ್ವನಾಯಕರಿಗೆ ಪ್ರಿಯಾಂಕ ಚೋಪ್ರಾ ಮನವಿ
ಪ್ರಿಯಾಂಕಾ ಅವರ ಈ ಅಪರೂಪದ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ಪ್ರಿಯಾಂಕಾ ಸದ್ಯ ಹಾಲಿವುಡ್ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿಟಾಡೆಲ್ ಎನ್ನುವ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ರಿಚರ್ಡ್ ಮ್ಯಾಡೆನ್ ಸಹ ನಟಿಸಿದ್ದಾರೆ. ಕೊನೆಯದಾಗಿ ಪ್ರಿಯಾಂಕಾ ವೈಟ್ ಟೈಗರ್ ಸಿನಿಮಾ ಮೂಲಕ ಭಾರತೀಯ ಅಭಿಮಾನಿಗಳ ಮುಂದೆ ಬಂದಿದ್ದರು. ಕೊನೆಯದಾಗಿ ಮ್ಯಾಟ್ರಿಕ್ಸ್ 4ನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಹಾಲಿವುಡ್ ಕಡೆ ಗಮನ ಹರಿಸಿರುವ ಪ್ರಿಯಾಂಕಾ ಮತ್ತೆ ಬಾಲಿವುಡ್ ಸಿನಿಮಾ ಯಾವಾಗ ಮಾಡ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.