* ಪತಿ ನಿಕ್ ಹೆಸರು ಕೈ ಬಿಟ್ಟ ಪ್ರಿಯಾಂಕಾ ಚೋಪ್ರಾ
* ಮಗಳ ಸಂಸಾರ ನೆಟ್ಟಗಿದೆ, ಏನೂ ತೊಂದರೆ ಇಲ್ಲ
* ಪ್ರಿಯಾಂಕಾ ಅಮ್ಮನಿಂದ ಸರ್ಟಿಫಿಕೇಟ್
* ಅಭಿಮಾನಿಗಳು ವದಂತಿಗೆ ತಲೆ ಕೆಡಿಸಿಕೊಳ್ಳಬಾರದು
ನ್ಯೂಯಾರ್ಕ್(ನ. 22) ಮಗಳ ಸಂಸಾರ ನೆಟ್ಟಗಿದೆ.. ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ (Madhu Chopra)ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಮೂಲಕ ಹಲವು ವದಂತಿಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.
ಇಬ್ಬರ ಮಧ್ಯೆ ಬಿರುಕು ಉಂಟಾಗಿದೆ ಎಂಬ ವದಂತಿಗಳನ್ನು (Rumours) ತಳ್ಳಿಹಾಕಿದ್ದಾರೆ. ಪ್ರಿಯಾಂಕಾ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಹೆಸರು ಬದಲಾವಣೆ ಮಾಡಿಕೊಂಡಿದ್ದು ಇಷ್ಟೆಲ್ಲ ಹಲ್ ಚಲ್ ಸೃಷ್ಟಿಗೆ ಕಾರಣವಾಗಿತ್ತು. ಇಂಥ ವದಂತಿಗಳಿಗೆ ಅಭಿಮಾನಿಗಳನ್ನು ಒಳಗೊಂಡಂತೆ ಯಾರೂ ತಲೆ ಕೆಡಿಸಿಕೊಳ್ಳಬಾರದು ಎಂದು ಮಧು ಚೋಪ್ರಾ ತಿಳಿಸಿದ್ದಾರೆ.
Priyanka Chopra; ತಾರಾ ದಾಂಪತ್ಯದಲ್ಲಿ ಬಿರುಕು? ಗಂಡನ ಹೆಸರು ಕೈಬಿಟ್ಟ ಪ್ರಿಯಾಂಕಾ,
ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಜೋನಾಸ್( Nick Jonas) ತಮ್ಮ ಇನ್ ಸ್ಟಾಗ್ರಾಂ (Social Media) ಖಾತೆಯಲ್ಲಿ ತಮ್ಮ ಹೆಸರಿನ ಜೊತೆಯಿದ್ದ ಪತಿಯ ಹೆಸರನ್ನು ತೆಗೆದುಹಾಕಿದ್ದು ವದಂತಿ ಏಳುವುದಕ್ಕೆ ಕಾರಣವಾಗಿತ್ತು. ಸಮಂತಾ ಮತ್ತು ನಾಗಚೈತನ್ಯ ಸಂಸಾರ ಒಡೆದು ಹೋಗುವ ಕೆಲವು ದಿನಗಳ ಮುನ್ನ ಸಮಂತಾ ಪತಿ ಹೆಸರನ್ನು ಕೈಬಿಟ್ಟಿದ್ದರು.
ಇತ್ತೀಚಿಗಷ್ಟೆ ಹೊಸ ಮನೆಗೆ ಸ್ಥಳಾಂತರಗೊಂಡಿದ್ದ ಪ್ರಿಯಾಂಕಾ ದೀಪಾವಳಿಯನ್ನು ಅಲ್ಲಿಯೇ ಆಚರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಪತಿಯ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಈ ಬಾರಿಯ ದೀಪಾವಳಿ ತುಂಬಾ ಸ್ಪೆಷಲ್ ಎಂದು ತಿಳಿಸಿದ್ದರು. ಮದುವೆಯ ನಂತರ ಪ್ರಿಯಾಂಕಾ ಚೋಪ್ರಾ ಇನ್ ಸ್ಟಾಗ್ರಾಂನಲ್ಲಿ ತಮ್ಮ ಹೆಸರಿನ ಜೊತೆಗೆ ಜೋನಾಸ್ ಎಂದು ಸೇರಿಸಿಕೊಂಡಿದ್ದರು.
ಡಿಸೆಂಬರ್ 1 ಕ್ಕೆ ಪ್ರಿಯಾಂಕಾ ಮತ್ತು ನಿಕ್ ಮದುವೆಯಾಗಿ ಮೂರು ವರ್ಷ. ಅವರ ಮದುವೆ ಆನಿವರ್ಸರಿ ಚರ್ಚೆಯಾಗಬೇಕಿದ್ದ ಸಂದರ್ಭವೇ ಹೆಸರು ತೆಗೆದು ಹಾಕಿರುವುದು ಸಹಜವಾಗಿ ಚರ್ಚೆಗೆ ವೇದಿಕೆ ಮಾಡಿತ್ತು. ನಿಕ್ ಮದುವೆಯಾದ ನಂತರ ಪ್ರಿಯಾಂಕಾ ಭಾರತವನ್ನು ಬಹುತೇಕ ತೊರೆದಿದ್ದರು. ವಿದೇಶಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ಪ್ರಿಯಾಂಕಾ ಪತಿ ಜತೆ ಹಾಲಿವುಡ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಪತಿ ನಿಜ್ ಜೋನಾಸ್ ಜತೆ ಪ್ರಿಯಾಂಕಾ ಶೇರ್ ಮಾಡಿಕೊಳ್ಳುತ್ತಿದ್ದ ಪ್ರತಿಯೊಂದು ಪೋಟೋಗಳು ವೈರಲ್ ಐಟಮ್ ಗಳಾಗುತ್ತಿದ್ದವು. ಮೇಲುಡುಗೆ ಮೇಲೆ ಪ್ರಿಯಾಂಕಾ ಅವರಿಗೆ ತಾತ್ಸಾರ ಬಂದಿದೆ ಎಂಬ ಕಮೆಂಟ್ ಗಳು ಬಂದಿದ್ದವು.
3 ವರ್ಷಗಳ ಹಿಂದೆ, ಆಕೆ ತನಗಿಂತ 10 ವರ್ಷ ಕಿರಿಯ ಅಮೆರಿಕನ್ ಗಾಯಕ ನಿಕ್ ಜೊನಾಸ್ ಅವರನ್ನು (Marriage(ವಿವಾಹವಾಗಿದ್ದರು. ಉದಯಪುರದಲ್ಲಿನಲ್ಲಿ ಮೂರು ದಿನಗಳ ನೆಡೆದ ಅವರ ಮದುವೆಗೆ ಎಷ್ಟು ಖರ್ಚು ಮಾಡಲಾಗಿದೆ ಮತ್ತು ವಿವಾಹ ವೆಚ್ಚ ಎಷ್ಟಾಗಿತ್ತು ಎಂಬ ಅಚ್ಚರಿಗಳು ಕಾಡಿದ್ದವು.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಉದಯಪುರದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಪದ್ಧತಿಗಳ ಪ್ರಕಾರ ವಿವಾಹವಾಗಿದ್ದರು. ಸಪ್ತಪದಿ ತುಳಿಯುವಾಗ ಪ್ರಿಯಾಂಕಾ ಕೆಂಪು ಲೆಹೆಂಗಾ ಧರಿಸಿದ್ದ ಪೋಟೋಗಳು ಇಂದಿಗೂ ಲೈಕ್ ಗಿಟ್ಟಿಸುತ್ತಿವೆ.