ಪ್ರಶಾಂತ್ ನೀಲ್- ಜೂ.ಎನ್‌ಟಿಆರ್ ಚಿತ್ರಕ್ಕೆ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ನಾಯಕಿ?

Published : Jun 07, 2023, 05:27 PM IST
ಪ್ರಶಾಂತ್ ನೀಲ್- ಜೂ.ಎನ್‌ಟಿಆರ್ ಚಿತ್ರಕ್ಕೆ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ನಾಯಕಿ?

ಸಾರಾಂಶ

ಪ್ರಶಾಂತ್ ನೀಲ್ ಮತ್ತು ಜೂ.ಎನ್‌ಟಿಆರ್ ಚಿತ್ರಕ್ಕೆ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ನಾಯಕಿ ಎನ್ನುವ ಸುದ್ದಿ ವೈರಲ್ ಆಗಿದೆ. 

ಇತಿಹಾಸ ನಿರ್ಮಿಸಿದ RRR ಸಿನಿಮಾದ ನಂತರ ಜೂ. ಎನ್‌ಟಿಆರ್ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ NTR31 ತಾತ್ಕಾಲಿಕ ಟೈಟಲ್ ಇಡಲಾಗಿದೆ. ಈಗಾಗಲೇ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಅಂದಹಾಗೆ NTR31 ಸಿನಿಮಾ ಅನೌನ್ಸ್ ಆಗಿ ವರ್ಷವೆ ಆಗಿದೆ. ಬಳಿಕ ಯಾವುದೇ ಅಪ್ ಡೇಟ್ ನೀಡಿಲ್ಲ ಸಿನಿಮಾತಂಡ. ಪ್ರಶಾಂತ್ ನೀಲ್ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾದರೆ ಜೂ.ಎನ್ ಟಿ ಆರ್ ಆರ್ ಆರ್ ಆರ್ ಚಿತ್ರದಲ್ಲಿ ಬ್ಯುಸಿಯಾಗಿದ್ದರು. ಇದೀಗ ಇಬ್ಬರ ಸಿನಿಮಾದ ಬಗ್ಗೆ ಹೊಸ ಸುದ್ದಿ ಕೇಳಿ ಬಂದಿದ್ದು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. 

ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಬರುತ್ತಿರುವ ಜೂ.ಎನ್ ಟಿ ಆರ್ ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನುವ ಮಾತು ವೈರಲ್ ಆಗಿದೆ. ಹೌದು ಪ್ರಿಯಾಂಕಾ, ಟಾಲಿವುಡ್ ಸ್ಟಾರ್ ಜೂ.ಎನ್ ಟಿ ಆರ್‌ಗೆ ನಾಯಕಿಯಾಗ್ತಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.  ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸಿದ್ಧವಾಗುತ್ತಿದ್ದು ದೊಡ್ಡ ಬಜೆಟ್‌ನಲ್ಲಿ ಜೂ.ಎನ್ ಟಿ ಆರ್ 31ನೇ ಮೂಡಿಬರುತ್ತಿದೆ. ಸಿಕ್ಕಾಪಟ್ಟೆ ಆಕ್ಷನ್ ಹೊಂದಿರುವ ಈ ಚಿತ್ರಕ್ಕೆ ಪ್ರಿಯಾಂಕಾ ನಾಯಕಿ ಎನ್ನಲಾಗುತ್ತಿದೆ. 

'ಡಾರ್ಲಿಂಗ್ ಫ್ರೆಂಡ್' ಪ್ರಶಾಂತ್ ನೀಲ್ ಹುಟ್ಟುಹಬ್ಬ ಆಚರಿಸಿದ ಪ್ರಭಾಸ್: ಇಲ್ಲಿವೆ ಸುಂದರ ಫೋಟೋಗಳು

ಪ್ರಿಯಾಂಕಾ ಈಗಾಗಲೇ ಗ್ಲೋಬಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಬಾಲಿವುಡ್ ನಿಂದ ದೂರ ಆಗಿರುವ ಪ್ರಿಯಾಂಕಾ ಹಾಲಿವುಡ್ ಸಿನನಿಮಾಗಳನ್ನು ವೆಬ್ ಸೀರಿಸ್‌ಗಳನ್ನು ಮಾಡುತ್ತಿದ್ದಾರೆ. ಈ ನಡುವೆ ತೆಲುಗು ಸಿನಿಮಾರಂಗಕ್ಕೆ ಬರ್ತಾರಾ, ಜೂ.ಎನ್ ಟಿ ಆರ್ ಜೊತೆ ತೆರೆಹಂಚಿಕೊಳ್ಳುತ್ತಾರಾ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಅಂದಹಾಗೆ ಪ್ರಿಯಾಂಕಾ ಹೆಸರು ಮಾತ್ರವಲ್ಲ ಈ ಮೊದಲು ದೀಪಿಕಾ ಪಡುಕೋಣೆ ಮತ್ತು ಮೃಣಾಲ್ ಠಾಕೂರ್ ಹೆಸರು ಸಹ ವೈರಲ್ ಆಗಿತ್ತು. ದೊಡ್ಡ ದೊಡ್ಡ ನಟಿಯರ ಹೆಸರು ಪ್ರಶಾಂತ್ ನೀಲ್ ಮುಂದಿನ ಚಿತ್ರಕ್ಕೆ ಕೇಳಿಬರುತ್ತಿದೆ. ಆದರೆ ಯಾವ ನಟಿ ಜೂ.ಎನ್ ಟಿ ಆರ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.

ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ನಾಟಿಕೋಳಿ ಸಾರನ್ನು ಗಿಫ್ಟ್ ನೀಡಿದ Jr.NTR: ಫೋಟೋ ವೈರಲ್

NTR31

ಸದ್ಯ ಸಿನಿಮಾಗೆ NTR31 ಎಂದು ತಾತ್ಕಾಲಿಕ ಹೆಸರಿಡಲಾಗಿದೆ. ಇದು ದಕ್ಷಿಣ ಭಾರತದ ಬಹುನಿರೀಕ್ಷೆಯ ಚಿತ್ರಗಳಲ್ಲಿ ಒಂದಾಗಿದೆ. ಜೂ.ಎನ್ ಟಿ ಆರ್ ಹುಟ್ಟುಹಬ್ಬದ ಸಮಯದಲ್ಲಿ ಫಸ್ಟ್ ಲುಕ್ ರಿಲೀಸ್ ಆಗಿದೆ. ಜೂ.ಎನ್ ಟಿ ಆರ್ ಈ ಸಿನಿಮಾದಲ್ಲಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸಿಕ್ಕಾಪಟ್ಟೆ ಆಕ್ಷನ್ ದೃಶ್ಯಗಳನ್ನು ಹೊಂದರಲಿದೆ ಎಂದು ಹೇಳಲಾಗುತ್ತಿದೆ. ಜೂ.ಎನ್ ಟಿ ಆರ್ ಸದ್ಯ 30ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ಸಲಾರ್ ನಲ್ಲಿ ನಿರತರಾಗಿದ್ದಾರೆ. ಇಬ್ಬರೂ ಸದ್ಯ ಕೈಯಲ್ಲಿರುವ ಸಿನಿಮಾ ಮುಗಿಸಿ 31ನೇ ಸಿನಿಮಾಗೆ ಸೇರಿಕೊಳ್ಳಲಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?