Priyanka Chopra: ಮಗುವಿಗೆ ತಾಯಿಯಾದ ಪ್ರಿಯಾಂಕಾ ಚೋಪ್ರಾ!

Published : Jan 22, 2022, 07:26 AM ISTUpdated : Jan 22, 2022, 08:51 AM IST
Priyanka Chopra: ಮಗುವಿಗೆ ತಾಯಿಯಾದ ಪ್ರಿಯಾಂಕಾ ಚೋಪ್ರಾ!

ಸಾರಾಂಶ

* ಪುಟ್ಟ ಕಂದನ ಸ್ವಾಗತಿಸಿದ ಪ್ರಿಯಾಂಕಾ, ನಿಕ್ ದಂಪತಿ * ಸರೋಗೆಸಿ ಮೂಲಕ ತಂದೆ, ತಾಯಿಯಾದ ಖುಷಿ ಹಂಚಿಕೊಂಡ ದಂಪತಿ * ಸೋಶಿಯಲ್ ಮೀಡಿಯಾ ಮೂಲಕ ವಿಚಾರ ಶೇರ್ ಮಾಡಿಕೊಂಡ ಪಿಗ್ಗಿ

ನ್ಯೂಯಾರ್ಕ್(ಜ.22): ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ತಂದೆ, ತಾಯಿಯಾಗಿದ್ದಾರೆ. ಸರೋಗೆಸಿ ಅಂದರೆ ಬಾಡಿಗೆ ತಾಯ್ತನದ ಮೂಲಕ ಇಬ್ಬರ ಬಾಳಿಗೆ ಪುಟ್ಟ ಕಂದನ ಆಗಮನವಾಗಿದೆ. ಖುದ್ದು ಪಿಗ್ಗಿ ಈ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ತಮ್ಮ ಪ್ರೈವೆಸಿಗೆ ಯಾವುದೇ ಧಶಕ್ಕೆಯುಂಟು ಮಾಡದಿರುವಂತೆಯೂ ಮನವಿ ಮಾಡಿದ್ದಾರೆ. 

ಹೀಗಿದೆ ಪ್ರಿಯಾಂಕಾ, ನಿಕ್ ಸೋಶಿಯಲ್ ಮೀಡಿಯಾ ಪೋಸ್ಟ್‌

'ಸರೋಗೆಸಿ ಮೂಲಕ ನಾವು ಮಗುವನ್ನು ಸ್ವಾಗತಿಸಿದ್ದೇವೆ. ಕುಟುಂಬದ ಕಡೆ ಈ ವಿಶೇಷ ಸಮಯದಲ್ಲಿ ಹೆಚ್ಚಿನ ಗಮನ ಕೊಡಬೇಕಾಗಿದೆ. ಹೀಗಾಗಿ ನಮಗೆ ಪ್ರೈವಸಿ ಬೇಕಿದೆ. ಧನ್ಯವಾದಗಳು ಎಂದು ಇಬ್ಬರೂ ಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಪ್ರಿಯಾಂಕಾಗೆ ಶುಭಾಶಯ ತಿಳಿಸಿದ್ದಾರೆ.

ಇನ್ನು ಈ ಗುಡ್‌ನ್ಯೂಸ್‌ ಹಂಚಿಕೊಂಡಿರುವ ದಂಪತಿ ಯಾವ ಮಗು ಎಂಬುವುದನ್ನು ಇನ್ನೂ ಬಹಿರಂಗಪಡಿಸಿಲ್ಲ. ಶೀಘ್ರದಲ್ಲೇ ಈ ವಿಚಾರವನ್ನೂ ಹಂಚಿಕೊಳ್ಳುವ ಸಾಧ್ಯತೆ ಇದೆ.

ಇನ್ನು ಕೆಲ ಸಮಯದ ಹಿಂದೆ ಈ ವಿಚಾರದ ಬಗ್ಗೆ ಪ್ರಿಯಾಂಕಾ ಚೋಪ್ರಾ ಸಣ್ಣ ಸುಳಿವು ಕೊಟ್ಟಿದ್ದರು. ತಾವಿಬ್ಬರೂ ನಿರೀಕ್ಷೆ ಮಾಡುತ್ತಿದ್ದೇವೆಂದು ಅವರು ಹೇಳಿದ್ದ ಮಾತು ಅನೇಕ ಊಹಾಪೋಹಗಳಿಗೆ ಕಾರಣವಾಗಿತ್ತು. ಅನೇಕ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದವು. ಆದರೆ ಪ್ರಿಯಾಖಮಾ ಅಷ್ಟರಲ್ಲೇ ಮಾತುಗಳನ್ನು ಬದಲಾಯಿಸಿದ್ದರು.

ಡೈವೋರ್ಸ್‌ ವದಂತಿ:

ಇನ್ನು ಕೆಲ ದಿನಗಳ ಹಿಂದಷ್ಟೇ ಪ್ರಿಯಾಂಕಾ ಹಾಗೂ ನಿಕ್ ಜೋನಾಸ್ ಡೈವೋರ್ಸ್‌ ಪಡೆಯಲಿದ್ದಾರೆಂಬ ವಿಚಾರ ಬೆಂಕಿಯಂತೆ ಹರಡಿತ್ತು. ಆದರೆ ತಾಮ್ಮಿಬ್ಬರ ಸಂಸಾರದಲ್ಲಿ ಯಾವುದೇ ಬಿರುಕಿಲ್ಲ ಎಂದು ಪ್ರಿಯಾಂಕಾ ಸ್ಪಷ್ಟನೆ ನೀಡಿದ್ದರು. ಹೀಗಿದ್ದರೂ ಈ ಊಹಾಪೋಹಗಳಿಗೆ ತೆರೆ ಬಿದ್ದಿರಲಿಲ್ಲ. ಅಷ್ಟರಲ್ಲಿ ಪ್ರಿಯಾಂಕಾ ತಮ್ಮ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ನಿಕ್ ಜೊತೆಗಿನ ಫೋಟೋ ಒಂದನ್ನು ಶೇರ್ ಮಾಡಿದ್ದರು. ಈ ಮೂಲಕ ಸುಳ್ಳು ಸುದ್ದಿ ಹರಡಿದವರ ಬಾಯಿ ಮುಚ್ಚಿಸಿದ್ದರು.

ನಿಕ್ ಜೋನಾಸ್, ಪ್ರಿಯಾಂಕಾ ಚೋಪ್ರಾ ನಡುವೆ 10 ವರ್ಷ ವಯಸ್ಸಿನ ಅಂತರ

2018ರಲ್ಲಿ ನಿಕ್ ಜೋನಾಸ್, ಪ್ರಿಯಾಂಕಾ ಚೋಪ್ರಾ ರಾಜಸ್ಥಾನದ ಜೋಧಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅನೇಕ ವರ್ಷಗಳ ಕಾಲ ಈ ಜೋಡಿ ತಮ್ಮ ಪ್ರೀತಿಯನ್ನು ಗೌಪ್ಯವಾಗಿ ಇಟ್ಟಿತ್ತು. ನಿಕ್ ಜೋನಾಸ್‌ ಹಾಗೂ ಪ್ರಿಯಾಂಕಾ ಚೋಪ್ರಾ ನಡುವೆ 10 ವರ್ಷಗಳ ವಯಸ್ಸಿನ ಅಂತರವಿದೆ, ನಿಕ್‌ಗಿಂತ ಪ್ರಿಯಾಂಕಾ 10 ವರ್ಷ ದೊಡ್ಡವರು. ಮದುವೆ ನಂತರ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ, ಇತ್ತೀಚೆಗೆ ಹಿಂದಿಯ ಯಾವುದೇ ಪ್ರಾಜೆಕ್ಟ್ ಒಪ್ಪಿಕೊಳ್ಳುತ್ತಿಲ್ಲ. ಪತಿ ಜೊತೆ ಅಮೆರಿಕದಲ್ಲಿ ನೆಲೆಸಿರುವ ಪ್ರಿಯಾಂಕಾ ಚೋಪ್ರಾ ಅಲ್ಲಿಯೇ ಭಾರತೀಯ ರೆಸ್ಟೋರೆಂಟ್ ಕೂಡ ಆರಂಭಿಸಿದ್ದಾರೆ, ಮುಂಬೈನಲ್ಲಿರುವ ಕೆಲ ಆಸ್ತಿಯನ್ನೂ ಮಾರಾಟ ಮಾಡಿದ್ದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!
ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!