
ಬಾಲಿವುಡ್ ಡಿಂಪಲ್ ಹುಡುಗಿ ಪ್ರೀತಿ ಜಿಂಟಾ 2016ರಲ್ಲಿ ಅಮೆರಿಕಾದಲ್ಲಿ ಜೀನಿ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪತಿ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಮದುವೆ ನಂತರ ಪ್ರೀತಿ ಲಾಸ್ ಏಂಜಲ್ಸ್ ಕಡೆ ಪ್ರಯಾಣ ಮಾಡಿದ್ದರು. ಆಗಾಗ ಭಾರತಕ್ಕೆ ಭೇಟಿ ನೀಡುತ್ತಿದ್ದರು. ಇದಾದ ಮೇಲೆ ಫ್ಯಾಮಿಲಿ ಪ್ಲಾನಿಂಗ್ ಮಾಡಿದ್ದಾರೆ..ಎಷ್ಟೇ ಪ್ರಯತ್ನ ಪಟ್ಟರೂ ಮಕ್ಕಳಾಗದ ಕಾರಣ ಐವಿಎಫ್ ಚಿಕಿತ್ಸೆ ಪಡೆಯಲು ಮುಂದಾಗುತ್ತಾರೆ. ಐವಿಎಫ್ ಕೂಡ ವಿಫಲವಾದ ಕಾರಣ ಸೆರೋಗೆಸಿ ಮೂಲಕ ಮಗು ಮಾಡಿಕೊಳ್ಳುತ್ತಾರೆ ಪ್ರೀತಿ. 2021ರಲ್ಲಿ ಅವಳಿ-ಜವಳಿ ಮಕ್ಕಳನ್ನು ಬರ ಮಾಡಿಕೊಳ್ಳುತ್ತಾರೆ.
ಈ ಸಮಯದಲ್ಲಿ ಪ್ರೀತಿ ಜಿಂಜಾ ವೈಯಕ್ತಿಕ ಜೀವನ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ವರ್ಕೌಟ್ ಡಯಟ್ ಮಾಡುವ ನಟಿಯರು ಯಾಕೆ ಐವಿಎಫ್ ಮತ್ತು ಸೆರೋಗೆಸಿ ಆಯ್ಕೆ ಮಾಡುತ್ತಿದ್ದಾರೆ ಎಂದು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮಗ ಮತ್ತು ಮಗಳ ಜೊತೆ ಚೆನ್ನಾಗಿ ಸಮಯ ಕಳೆದು ಆನಂತರ ಮತ್ತೆ ಸಿನಿಮಾ ಕೆಲಸ ಶುರು ಮಾಡುತ್ತಾರೆ. ಈ ನಡುವೆ ಐಪಿಎಲ್ ಸಮಯದಲ್ಲೂ ಭಾರತಕ್ಕೆ ಬರುತ್ತಿದೆ. ಜನರಿಗೆ ಕಾಡುತ್ತಿದ್ದ ಪ್ರಶ್ನೆ ಹೇಗಿತ್ತು ಐವಿಎಫ್ ಟ್ರೀಟ್ಮೆಂಟ್ ಎಂದು ಪ್ರಶ್ನಿಸಿದ್ದಕ್ಕೆ ಉತ್ತರ ಇಲ್ಲಿದೆ....
ನನ್ನ ಮದುವೆ ಜೀವನ ತುಂಬಾ ಚೆನ್ನಾಗಿದೆ ಯಾಕೆ ಎಲ್ಲರೂ ಪದೇ ಪದೇ ಪ್ರಶ್ನೆ ಮಾಡ್ತಿದ್ದೀರಾ?: ದೀಪಿಕಾ ದಾಸ್ ಗರಂ
'ಪ್ರತಿಯೊಬ್ಬರಿಗೂ ವೃತ್ತಿ ಜೀವನ ಮುಖ್ಯವಾಗುತ್ತದೆ ಆದರೆ ಹೆಣ್ಣು ಮಕ್ಕಳು ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು, ಏನೆಂದರೆ ಯಾವತ್ತೂ ನಮ್ಮ ಬಯಾಲಾಜಿಕಲ್ ಕ್ಲಾಕ್ ಜೊತೆ ಆಟವಾಡಬಾರದು. ಅದರಲ್ಲೂ ನಾಯಕಿಯರು ತಮ್ಮ ಬ್ಯೂಟಿ ಮತ್ತು ಫಿಟ್ನೆಸ್ ಮೇಲೆ ಹೆಚ್ಚಿನ ಕಾಳಹಿ ವಹಿಸುತ್ತಾರೆ ಆದರೆ ಫ್ಯಾಮಿಲಿ ಕೂಡ ಮುಖ್ಯ ಎಂದು ತಿಳಿದುಕೊಳ್ಳಬೇಕು. ನನ್ನ ಮಕ್ಕಳಿಗೆ ಎರಡು ವರ್ಷ ತುಂಬುತ್ತಿದ್ದಂತೆ ನಾನು ಮತ್ತೆ ಕೆಲಸ ಶುರು ಮಾಡಬಹುದು ಎಂದು ಗೊತ್ತಾಗಿತ್ತು. ಎಲ್ಲರಂತೆ ನನಗೂ ಒಳ್ಳೆಯ ಹಾಗೂ ಕೆಟ್ಟ ದಿನಗಳು ಇದೆ. ಜೀವನದಲ್ಲಿ ತುಂಬಾ ಕಷ್ಟಗಳನ್ನು ನೋಡುತ್ತಿರುವಾಗ ನಗು ಮುಖ ಇಟ್ಟುಕೊಂಡು ದಿನ ಸಾಗಿಸುವುದು ತುಂಬಾನೇ ಕಷ್ಟ. ನಾನು ಐವಿಎಫ್ ಚಿಕಿತ್ಸೆ ಪಡೆಯುವ ಸಮಯದಲ್ಲಿ ಈ ರೀತಿ ಫೀಲ್ ಆಗುತ್ತಿತ್ತು. ಸದಾ ನಗುತ್ತಾ ಕಿರಿಕಿರಿ ಮಾಡಿಕೊಳ್ಳದೆ ಒಳ್ಳೆಯವರಂತೆ ಇರುವುದು ಕಷ್ಟ. ಕೆಲವೊಮ್ಮೆ ನನ್ನ ತಲೆಯನ್ನು ಚಚ್ಚಿಕೊಳ್ಳಬೇಕು ಅನಿಸುತ್ತದೆ ಇಲ್ಲವಾದರೆ ಯಾರೊಟ್ಟಿಗೂ ಮಾತನಾಡಬಾರದು ಅನಿಸುತ್ತದೆ. ನಿಜಕ್ಕೂ ಈ ಫೇಸ್ ಯಾರಿಗೇ ಆದರೂ ಕಷ್ಟವಾಗುತ್ತದೆ' ಎಂದು ಖಾಸಗಿ ವೆಬ್ ಸಂದರ್ಶನದಲ್ಲಿ ಪ್ರೀತಿ ಮಾತನಾಡಿದ್ದಾರೆ.
ಬಲವಂತದಿಂದ ಮದುವೆಯಾಗಲು ಇಷ್ಟವಿಲ್ಲ,ಕರೆಕ್ಟ್ ಟೈಮ್‌ಗೆ ಮಗು ಮಾಡ್ಕೋತ್ತೀನಿ: ಅನುಷ್ಕಾ ಶೆಟ್ಟಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.