
ದಕ್ಷಿಣದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್‌ನಲ್ಲಿ ಬಾಹುಬಲಿ ನಟ ಪ್ರಭಾಸ್ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಪ್ರಭಾಸ್ ಜೊತೆ ರೊಮ್ಯಾನ್ಸ್ ಮಾಡೋಕೆ ರೆಡಿಯಾಗಿದ್ದಾರೆ ಕಾಲಿವುಡ್ ನಟಿ ಶ್ರುತಿ ಹಾಸನ್.
ಪ್ರಶಾಂತ್ ಮತ್ತು ಪ್ರಭಾಸ್ ಒಂದಾಗುತ್ತಿರುವುದು ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಪ್ಯಾನ್ ಇಂಡಿಯಾ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿದೆ. ಪ್ರಭಾಸ್‌ನ ಸಲಾರ್ ಸಿನಿಮಾದ ಕಿಲ್ಲರ್ ಲುಕ್ ವೈರಲ್ ಆಗಿತ್ತು.
ಸಲಾರ್ ಮುಹೂರ್ತದಲ್ಲಿ ಪ್ರಭಾಸ್, ಯಶ್;ಹೈದರಾಬಾದ್‌ನಲ್ಲಿ ಸಲಾರ್ ಶುರು!
ಹೈವೋಲ್ಟೇಜ್ ಆಕ್ಷನ್ ಸಿನಿಮಾದಲ್ಲಿ ಪ್ರಭಾಸ್‌ಗೆ ಜೋಡಿಯಾಗಲಿರೋದು ಕಮಲ್ ಹಾಸನ್ ಮಗಳು ಶ್ರುತಿ ಹಾಸನ್. ಹಿಂದಿಯಲ್ಲೂ ಪರಿಚಿತ ಮುಖವಾಗಿರೋ ಶ್ರುತಿ ಹಾಸನ್‌ನನ್ನು ತಮ್ಮ ಸಿನಿಮಾ ನಾಯಕಿಯಾಗಿ ಆರಿಸ್ಕೊಂಡಿದ್ದಾರೆ ಪ್ರಶಾಂತ್ ನೀಲ್.
ಸಿನಿಮಾ ಶೂಟಿಂಗ್ ಪೂರ್ತಿಯಾಗಿ ಹೈದರಾಬಾದ್‌ನಲ್ಲಿಯೇ ನಡೆಯಲಿದೆ. ಶ್ರುತಿ ಮಾತ್ರವಲ್ಲದೆ, ತಮಿಳಿನ ವಿಜಯ್ ಸೇತುಪತಿ ಕೂಡಾ ನಟಿಸ್ತಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಬೇಕಷ್ಟೆ. ಹೈಬಜೆಟ್ ಪ್ಯಾನ್ ಇಂಡಿಯಾ ಸಿನಿಮಾವನ್ನು ಹೊಂಬಾಳೆ ಫಿಲಮ್‌ಸ್ ನಿರ್ಮಿಸುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.