
ತೆಲುಗು ಸ್ಟಾರ್ ಪ್ರಭಾಸ್(Prabhas) ಬಾಹುಬಲಿ(bahubali) ಸಿನಿಮಾ ಬಳಿಕ ದೊಡ್ಡ ಮಟ್ಟದ ಸಕ್ಸಸ್ ಕಂಡಿಲ್ಲ. ಬಾಹುಬಲಿ ಮೂಲಕ ವಿಶ್ವದ ಗಮನ ಸೆಳೆದಿದ್ದ ಪ್ರಭಾಸ್ ನಂತರದ ಚಿತ್ರಗಳು ಮುಗ್ಗರಿಸಿವೆ. ಸಾಹೋ ಸೋಲಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದ ಪ್ರಭಾಸ್ ಈಗ ರಾಧೆ ಶ್ಯಾಮ್ ಮೂಲಕ ಮತ್ತೊಮ್ಮೆ ಸೋಲುಂಡಿದ್ದಾರೆ(Radhe Shyam disaster). ರಾಧೆ ಶ್ಯಾಮ್ ಸಿನಿಮಾ ನಿರೀಕ್ಷಿತ ಗೆಲವು ಕಾಣುವಲ್ಲಿ ವಿಫಲವಾಗಿದೆ.
ಸಾಹೋ ಮೂಲಕ ಆಕ್ಷನ್ ಹೀರೋ ಆಗಿ ಅಭಿಮಾನಿಗಳ ಮುಂದೆ ಬಂದಿದ್ದ ಪ್ರಭಾಸ್ ರಾಧೆ ಶ್ಯಾಮ್ ನಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ತೆರೆಮೇಲೆ ಬಂದಿದ್ದರು. ನಿರ್ದೇಶಕ ರಾಧ ಕೃಷ್ಣ ಸಾರಥ್ಯದಲ್ಲಿ ಮೂಡಿಬಂದ ಈ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿತ್ತು. ಚಿತ್ರದ ಪೋಸ್ಟರ್ ಮತ್ತು ಟೀಸರ್ ಮೂಲಕ ಗಮನ ಸೆಳೆದಿತ್ತು. ಆದರೆ ರಾಧೆ ಶ್ಯಾಮ್ ಬಿಡುಗಡೆ ಬಳಿಕ ಭಾರಿ ನಿರಾಸೆ ಮೂಡಿಸಿದೆ.
ಬಾಹುಬಲಿ ಅಂತಹ ಸೂಪರ್ ಹಿಟ್ ಸಿನಿಮಾವನ್ನು ನೀಡಿರುವ ಪ್ರಭಾಸ್ ಗೆ ಮುಂದಿನ ಸಿನಿಮಾಗಳ ಆಯ್ಕೆ ದೊಡ್ಡ ಚಾಲೆಂಜಿಂಗ್ ಆಗಿತ್ತು. ಆದರೆ ಸಾಹೋ(Saaho) ಮತ್ತು ರಾಧೆ ಶ್ಯಾಮ್ ಎರಡೂ ಸಿನಿಮಾಗಳು ಪ್ರೇಕ್ಷಕರಿಗೆ ನಿರಾಸೆ ಮೂಡಿಸಿವೆ. ರಾಧೆ ಶ್ಯಾಮ್ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದೆ. ಆದರೆ ಉತ್ತಮ ಪ್ರತಿಕ್ರಿಯೆ ಪಡೆಯಲು ವಿಫಲವಾಗಿದೆ. ಅದರಲ್ಲೂ ಹಿಂದಿಯಲ್ಲಿ ರಾಧೆ ಶ್ಯಾಮ್ ಧೂಳಿಪಟವಾಗಿದೆ(Radhe Shyam failur in north). ಉತ್ತರ ಭಾರತದಲ್ಲೂ ಪ್ರಭಾಸ್ ಗೆ ಭಾರಿ ಬೇಡಿಕೆ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ರಾಧೆ ಶ್ಯಾಮ್ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿಲ್ಲ. ಹಾಗಾಗಿ ಉತ್ತರದಲ್ಲಿ ಪ್ರಭಾಸ್ ಸಿನಿಮಾ ಹೀನಾಯವಾಗಿ ಸೋಲು ಕಂಡಿದೆ ಎನ್ನುತ್ತಿವೆ ಮೂಲಗಳು.
ಸೂಪರ್ ಸ್ಟಾರ್ ಪ್ರಭಾಸ್ ಫ್ಯಾಮಿಲಿ ಬ್ಯಾಕ್‌ಗ್ರ್ಯಾಂಡ್ ಬಗ್ಗೆ ನಿಮಗೆಷ್ಟು ಗೊತ್ತು?
ಇದಕ್ಕೆ ಪ್ರಮುಖ ಕಾರಣ ಉತ್ತರ ಭಾರತದಲ್ಲಿ ಪ್ರಚಾರ ಮಾಡದೆ ಇರುವುದು ಎನ್ನಲಾಗಿತ್ತಿದೆ. ಸಾಹೋ ಸಿನಿಮಾದ ಬಗ್ಗೆ ವಿಮರ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರದಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಆದೇ ಧೈರ್ಯದಲ್ಲಿ ರಾಧೆ ಶ್ಯಾಮ್ ಸಿನಿಮಾವನ್ನು ಹೆಚ್ಚು ಪ್ರಚಾರವಿಲ್ಲದೆ ಬಿಡುಗಡೆ ಮಾಡಿರುವುದೇ ದೊಡ್ಡ ಮಟ್ಟದ ಸೋಲಿಗೆ ಕಾರಣ ಎಂದು ಲೆಕ್ಕಾಚಾರ ಹಾಕುತ್ತಿದೆ ಸಿನಿಮಾತಂಡ.
ಪ್ರಭಾಸ್ ಸಿನಿಮಾ 100 ಕೋಟಿ ಕಲೆಕ್ಷನ್ ಕ್ಲಬ್ ಇನ್ನೂ ಸೇರಿಲ್ಲ ಎನ್ನುವುದೇ ಅಚ್ಚರಿಯ ವಿಚಾವಾಗಿದೆ. ದಿನದಿಂದ ದಿನಕ್ಕೆ ರಾಧೆ ಶ್ಯಾಮ್ ಕಲೆಕ್ಷನ್ ಭಾರಿ ಹಿನ್ನಡೆ ಕಂಡಿರುವುದು ನಿರ್ಮಾಪಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಂದಹಾಗೆ ರಾಧೆ ಶ್ಯಾಮ್ ಮಾರ್ಚ್ 11 ರಂದು ದೇಶ ವಿದೇಶಗಳಲ್ಲಿ ತೆರೆಗೆ ಬಂದಿತ್ತು.
Radhe Shyam ಚಿತ್ರದ ಬಗ್ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ಹಂಚಿಕೊಂಡ ನಟ ಪ್ರಭಾಸ್!
ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದರು. ದಕ್ಷಿಣ ಭಾರತದಲ್ಲಿ ಭಾರಿ ಬೇಡಿಕೆ ಹೊಂದಿರುವ ನಟಿ ಪೂಜಾ ಮೊದಲ ಬಾರಿಗೆ ಪ್ರಭಾಸ್ ಜೊತೆ ತೆರೆಹಂಚಿಕೊಂಡಿದ್ದರು. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ಪೂಜಾಗೆ ರಾಧೆ ಶ್ಯಾಮ್ ಸೋಲುಣಿಸಿದೆ.
ಸದ್ಯ 2 ಸೋಲು ಕಂಡಿರುವ ಪ್ರಭಾಸ್ ಗೆ ಮುಂದಿನ ಸಿನಿಮಾದ ಗೆಲವು ಅನಿವಾರ್ಯವಾಗಿದೆ. ಪ್ರಭಾಸ್ ಬಳಿ ಅನೇಕ ಸಿನಿಮಾಗಳಿವೆ. ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಜೊತೆಗೆ ಆದಿಪುರುಷ ಮತ್ತು ಇನ್ನೊಂದು ಸಿನಿಮಾವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.