ದಿ ಕಾಶ್ಮೀರ್ ಫೈಲ್ಸ್‌ ಸಿನಿಮಾ ನೋಡಿ ತಮ್ಮ ಜೀವನದ ನಿಜ ಘಟನೆ ತೆರೆದಿಟ್ಟ ನಟಿ ಸಂದೀಪ ಧರ್!

By Suvarna News  |  First Published Mar 18, 2022, 9:59 AM IST

ವಿವೇಕ್‌ ಸಿನಿಮಾದಲ್ಲಿ ತೋರಿಸಿರುವ ಘಟನೆಗಳು ಸತ್ಯ ನನ್ನ ಜೀವನದಲ್ಲಿ ಇದೇ ರೀತಿ ಆಗಿದೆ. ತವರಿಗೆ ಹೋಗಲು ಅಜ್ಜಿ ಕಾದು ಕಾದು ಪ್ರಾಣ ಬಿಟ್ಟಳು ಎಂದು ಸಂದೀಪ. 


ದಿ ಕಾಶ್ಮೀರ್ ಫೈಲ್ಸ್‌ ಸಿನಿಮಾ ವೀಕ್ಷಿಸಿ ಚಿತ್ರಮಂದಿರದಿಂದ ಹೊರ ಬರುವ ಪ್ರತಿಯೊಬ್ಬ ಭಾರತೀಯನ ಕಣ್ಣೀರು ಮನಸ್ಸು ಮುಟ್ಟುತ್ತದೆ. ಇಂಥದೊಂದು ಘಟನೆ ನಡೆದಿರ ಬಹುದು ಎನ್ನುವ ಕಲ್ಪನೆ ಕೂಡ ಯಾರಿಗೂ ಸಾಧ್ಯವಿಲ್ಲ ಅಷ್ಟುರ ಮಟ್ಟಕ್ಕೆ ಸತ್ಯವನ್ನು ಈ ಸಿನಿಮಾದಲ್ಲಿ ವಿವೇಕ್ ಅಗ್ನಿಹೋತ್ರಿ ತೋರಿಸಿದ್ದಾರೆ. ಈ ಭಾರತದಲ್ಲಿ ಗಟ್ಟಿ ಗುಂಡಿಗೆ ಇರುವ ವ್ಯಕ್ತಿ ಅಂದ್ರೆ ನೀವೇ ಅದಿಕ್ಕೆ ಎಷ್ಟೇ ಕಷ್ಟ ಎದುರಾದರೂ ಸತ್ಯವನ್ನು ಜನರಿಗೆ ತಿಳಿಸಬೇಕು ಎಂದು ಸಿನಿಮಾ ಮಾಡಿದ್ದೀರಾ ನೀವು ಗ್ರೇಟ್ ಎಂದು ವಿವೇಕ್‌ರನ್ನು ಭಾರತೀಯರು ಹೊಗಳುತ್ತಿದ್ದಾರೆ. 

2010ರಲ್ಲಿ ಇಸಿ ಲೈಫ್ ಮೇ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ (Bollywood) ಕಾಲಿಟ್ಟ ನಟಿ ಸಂದೀಪ ಧರ್ ಹುಟ್ಟಿದ್ದು ಬೆಳೆದದ್ದು ಕಾಶ್ಮೀರದ ಶ್ರೀನಗರದಲ್ಲಿ. ಹೀಗಾಗಿ ತಪ್ಪದೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಕುಟುಂಬದ ಜೊತೆ ವೀಕ್ಷಿಸಿದ್ದಾರೆ. 30 ವರ್ಷಗಳ ಹಿಂದೆ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಬರೆದುಕೊಂಡಿದ್ದಾರೆ. ನನ್ನ ಕುಟುಂಬ ಕೂಡ ಈ ಸಂಕಷ್ಟದಲ್ಲಿ ಸಿಲುಕಿಕೊಂಡಿತ್ತು ಎಂದು ಹೇಳಿಕೊಂಡಿದ್ದಾರೆ.

Tap to resize

Latest Videos

1990ರಲ್ಲಿ ತಮ್ಮ ಕಾಶ್ಮೀರದ ಮನೆ ಹೇಗಿತ್ತು, ಈ ಘಟನೆ ನಡೆಯುವಾಗ ತಮ್ಮ ಮನೆ ಸುತ್ತ ಮುತ್ತ ಹೇಗಿತ್ತು ಎಂದು ಫೋಟೋ ಹಂಚಿಕೊಂಡಿದ್ದಾರೆ. 'ಕಾಶ್ಮೀರಿ ಪಂಡಿತರು ತಮ್ಮ ಹೆಂಡತಿ ಮಕ್ಕಳನ್ನು ಬಿಟ್ಟು ಹೊರಡಬೇಕು ಎಂದು ಘೋಷಣೆ ಮಾಡಿದಾಗ ನನ್ನ ಕುಟುಂಬ ನಮ್ಮ ನೆಲೆ ಬಿಟ್ಟು ಹೋಗುವುದಕ್ಕೆ ನಿರ್ಧರಿಸಿದ್ದರು. ಟ್ರಕ್‌ಗಳಲ್ಲಿ ಬಚ್ಚಿಟಿಕೊಳ್ಳುವ ಪ್ರಯತ್ನ ಮಾಡಿದ್ದರು ನನ್ನ ಪುಟ್ಟ ತಂಗಿಯನ್ನು ನನ್ನ ತಂದೆ ಸೀಟ್‌ ಕೆಳಗೆ ಕೂರಿಸಿಕೊಂಡು ಕರೆದುಕೊಂಡು ಹೋದರು. ನಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಬೇಕು ಎಂದು ನಾವು ಮಧ್ಯರಾತ್ರಿ ಈ ರೀತಿ ಮಾಡಿಬೇಕಿತ್ತು. ಸಿನಿಮಾದಲ್ಲಿ ನಾನು ಅದೇ ದೃಶ್ಯಗಳನ್ನು ನೋಡಿದೆ. ಆ ಮನಸ್ಸು ಮುಟ್ಟುವ ಸನ್ನಿವೇಶಗಳು ನನ್ನ ಕುತ್ತಿಗೆ ಹಿಸುಕಿದಂತೆ ಆಯ್ತು. ನನ್ನ ಕಾಶ್ಮೀರ ನನ್ನ ತವರು ಮನೆ ಎಂದು ಹೇಳುತ್ತಿದ್ದ ಅಜ್ಜಿ ಕೊನೆಗೂ ಹಿಂತಿರುಗಲಾಗದೆ ಪ್ರಾಣ ಬಿಟ್ಟಳು' ಎಂದು Sandeepa Dhar  ಬರೆದುಕೊಂಡಿದ್ದಾರೆ. 

The Kashmir Files; ನಾನು ಮದುವೆಯಾಗಿದ್ದು ಕಾಶ್ಮೀರಿ ಪಂಡಿತನನ್ನು, ಅವರ ನೋವು ನನಗೆ ಗೊತ್ತು- ಯಾಮಿ ಗೌತಮ್

'ದಿ ಕಾಶ್ಮಿರಿ ಫೈಲ್ಸ್‌ ಸಿನಿಮಾ ನೋಡಿ ನನ್ನ ಕರಳು ಹಿಂಡಿದಂತೆ ಆಯ್ತು. ನನ್ನ ಪೋಷಕರಿಗೆ ಇನ್ನೂ ವರ್ಸ್ಟ್‌ ಆಗಿತ್ತು. ಇದರಿಂದ ನನ್ನ ಇಡೀ ಕುಟುಂಬ PTSD ಅನುಭವಿಸುತ್ತಿದ್ದಾರೆ. ಇಂಥ ಸತ್ಯವಾದ ಘಟನೆ ಹೊರ ಬರಲು ಇಷ್ಟು ವರ್ಷಗಳು ಬೇಕಿತ್ತು. ಎಲ್ಲರೂ ನೆನಪಿಟ್ಟುಕೊಳ್ಳಿ ಇದು ಕೇವಲ ಸಿನಿಮಾ ಮಾತ್ರವಲ್ಲ ಕಾಶ್ಮೀರದಿಂದ ಹೊರ ಬಂದಿರುವ ಪಂಡಿತರಿಗೆ ನ್ಯಾಯ ಕೊಡಿಸಬೇಕು. ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಧನ್ಯವಾದಗಳು. ನಮ್ಮ ದೇಶದಲ್ಲಿ ಯಾರೂ ತೋರಿಸದ ಸತ್ಯವನ್ನು ತೋರಿಸಿದಕ್ಕೆ. ಅನುಪಮ್‌ ಜೀ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್' ಎಂದು ಸಂದೀಪ ಧರ್ ಹೇಳಿದ್ದಾರೆ.

The Kashmir Files: 4 ಲಕ್ಷ ಕುಟುಂಬಗಳ ನೋವಿನ ಕಥೆ, ತೆರೆ ಮೇಲೆ ಬಂತು ಕರಾಳ ಇತಿಹಾಸ

'ನಾನು ಗುಲಾಬಿ ಹೂವನ್ನು ಕೇಳಿದೆ ನಿನ್ನ ಪರಿಮಳ ಎಲ್ಲಿದೆ? ವಸಂತ ಮಾಸ ಅದನ್ನು ತೆಗೆದುಕೊಂಡಿತ್ತು ಎಂದು ಹೇಳಿತ್ತು. ಮತ್ತೆ ನಾನು ವಸಂತ ಮಾಸಕ್ಕೆ ಕೇಳಿದೆ ನಿನ್ನ ಹಣೆ ಮೇಲೆ ಗೆರೆಗಳು ಬಂದಿರುವುದು ಯಾಕೆಂದು? ಆಗ ಅದು 'ನನ್ನ ಗಾಯಗಳಿಗೆ ಉಪ್ಪು ಹಾಕಲಾಗಿದೆ' ಎಂದು ಹೇಳಿತು. ಹೀಗಾಗಿ ಒಮ್ಮೆ ಅರಳಿದ ತೋಟವನ್ನು ನಾನು ಬಿಟ್ಟುಬಿಟ್ಟೆ ಮತ್ತು ಅಂದಿನಿಂದ ನಾನು ಗುರಿಯಿಲ್ಲದೆ ಅಲೆದಾಡುತ್ತಿದ್ದೇನೆ' ಎಂದಿದ್ದಾರೆ ಸಂದೀಪ ಧರ್.

 

click me!