'ಆದಿಪುರುಷ್' ರಿಲೀಸ್ ಬೆನ್ನಲ್ಲೇ ದೇಶ ಬಿಟ್ಟಿದ್ದ ಪ್ರಭಾಸ್ ಭಾರತಕ್ಕೆ ವಾಪಾಸ್: ಮತ್ತೆ ಶುರು 'ಸಲಾರ್' ಕೆಲಸ

Published : Jul 26, 2023, 04:45 PM IST
'ಆದಿಪುರುಷ್' ರಿಲೀಸ್ ಬೆನ್ನಲ್ಲೇ ದೇಶ ಬಿಟ್ಟಿದ್ದ ಪ್ರಭಾಸ್ ಭಾರತಕ್ಕೆ ವಾಪಾಸ್: ಮತ್ತೆ ಶುರು 'ಸಲಾರ್' ಕೆಲಸ

ಸಾರಾಂಶ

ಆದಿಪುರುಷ್ ರಿಲೀಸ್ ಆದ ಬೆನ್ನಲ್ಲೇ ಪ್ರಭಾಸ್ ವಿದೇಶಕ್ಕೆ ಹಾರಿದ್ದರು. ಇದೀಗ ಬರೋಬ್ಬರಿ 50 ದಿನಗಳ ಬಳಿಕ ಪ್ರಭಾಸ್ ಭಾರಾತಕ್ಕೆ ವಾಪಾಸ್ ಆಗಿದ್ದಾರೆ.  ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. 

ಟಾಲಿವುಡ್ ಸ್ಟಾರ್ ಪ್ರಭಾಸ್ ಆದಿಪುರುಷ್ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ವಿದೇಶಕ್ಕೆ ಹಾರಿದ್ದರು. ಆದಿಪುರುಷ್ ರಿಲೀಸ್ ಆಗಿ ದೊಡ್ಡ ವಿವಾದವಾದರೂ ಪ್ರಭಾಸ್ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಯಾವುದೇ ಪ್ರತಿಕ್ರಿಯೆ ಕೂಡ ನೀಡಿಲ್ಲ. ಸಿನಿಮಾ ರಿಲೀಸ್‌ಗೂ ಮೊದಲು ಪ್ರಮೋಷನ್‌ಗಳಲ್ಲಿ ಭಾಗಿಯಾಗಿದ್ದ ಪ್ರಭಾಸ್ ಬಳಿಕ ವಿದೇಶಕ್ಕೆ ಹಾರಿದ್ದರು. ಇದೀಗ ಬರೋಬ್ಬರಿ 50 ದಿನಗಳ ಬಳಿಕ ಭಾರತಕ್ಕೆ ವಾಪಾಸ್ ಆಗಿದ್ದಾರೆ. ಹೈದರಾಬಾದ್  ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. 

ಇಂದು (ಜುಲೈ 26) ಬೆಳಗ್ಗೆ ಹೈದರಾಬಾದ್‌ನ ವಿಮಾನ ನಿಲ್ದಾಣದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಸದ್ಯ ಪ್ರಭಾಸ್ ನಟನೆಯ ಸಲಾರ್ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. ಸಲಾರ್ ರಿಲೀಸ್‌ಗೆ ಎರಡು ತಿಂಗಳು ಮಾತ್ರ ಬಾಕಿ ಇದೆ. ಈ ಹಿನ್ನಲೆಯಲ್ಲಿ ಪ್ರಭಾಸ್ ಭಾರತಕ್ಕೆ ಮರಳಿದ್ದಾರೆ. ಇನ್ನೇನು ಸಲಾರ್ ಸಿನಿಮಾದ ಪ್ರಚಾರ ಕಾರ್ಯಗಳು ಭರ್ಜರಿಯಾಗಿ ನಡೆಯಲಿದೆ. ಪ್ರಭಾಸ್ ಯಾವಾಗ ಬರ್ತಾರೆ ಎನ್ನುವುದು ಸಿನಿಮಾತಂಡಕ್ಕೆ ದೊಡ್ಡ ತಲೆನೋವಾಗಿತ್ತು. ಇದಾಗ ವಾಪಾಸ್ ಆಗಿದ್ದು ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ. ಅಂದಹಾಗೆ ಪ್ರಭಾಸ್ ಅಮೆರಿಕಾದಲ್ಲಿ ಮೊಣಕಾಲಿನ ಸಣ್ಣ ಚಿಕಿತ್ಸೆಗೆ ಒಳಗಾಗಿದ್ದರು ಎನ್ನಲಾಗಿದೆ. ಇದೀಗ ಸಂಪೂರ್ಣ ವಿಶ್ರಾಂತಿ ಪಡೆದು ಭಾರತಕ್ಕೆ ಮರಳಿದ್ದಾರೆ.  

ಪ್ರಭಾಸ್‌ ಜತೆಗಿದ್ದರೂ ಪ್ರಶಾಂತ್‌ ನೀಲ್‌ಗೆ ಕಾಡುತ್ತಿದೆಯಂತೆ ಭಯ: ಪ್ರಶಾಂತ್ ಹಿಂದೆ ಬಿದ್ದಿರುವ ಅಭಿಮಾನಿಗಳು ಯಾರು?

ಅಂದಹಾಗೆ ಅಮೆರಿಕಾದಲ್ಲಿ ಪ್ರಭಾಸ್ ನಟನೆಯ ಬಹುನಿರೀಕ್ಷೆಯ ಕಲ್ಕಿ ಸಿನಿಮಾದ ಟ್ರೇಲರ್ ರಿಲೀಸ್ ಮಾಡಲಾಗಿದೆ. ಅಮೆರಿಕಾದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ಕಲ್ಕಿ 2898 AD ಟ್ರೈಲರ್ ರಿಲೀಸ್ ಮಾಡಲಾಗಿದ್ದು ಆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕಾಲಿವುಡ್ ಸ್ಟಾರ್ ಕಮಲ್ ಹಾಸನ್ ಕೂಡ ಭಾಗಿಯಾಗಿದ್ದರು. ಈ ಸಿನಿಮಾದಲ್ಲಿ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಭಾರತಕ್ಕೆ ಮರಳಿರುವ ಪ್ರಭಾಸ್ ಶೀಘ್ರದಲ್ಲೇ ಕಲ್ಕಿ 2898 AD ಚಿತ್ರೀಕರಣವನ್ನು ಪುನರಾರಂಭಿಸಲಿದ್ದಾರೆ. 

ಪ್ರಭಾಸ್ ಸಿನಿಮಾಗೆ ‘ಕಲ್ಕಿ 2898-ಎಡಿ’ ಟೈಟಲ್ ಫಿಕ್ಸ್: ಟೀಸರ್ ನೋಡಿ ಪ್ರಶ್ನೆ ಕೇಳಿದ ರಾಜಮೌಳಿ

ಕುತೂಹಲ ಹೆಚ್ಚಿಸಿದ ಕಲ್ಕಿ 

ಈಗಾಗಲೇ ರಿಲೀಸ್ ಆಗಿರುವ ಕಲ್ಕಿ ಟ್ರೇಲರ್ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಈ ಸಿನಿಮಾಗೆ ಮಹಾನಟಿ ಖ್ಯಾತಿಯ ತೆಲುಗು ಖ್ಯಾತ ನಿರ್ದೇಶಕ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಇದೆ. ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಈ ಸಿನಿಮಾದಲ್ಲಿದ್ದಾರೆ. ಸದ್ಯ ರಿಲೀಸ್ ಆಗಿರುವ ಟೀಸರ್ ಅಭಿಮಾನಿಗಳ ಹೃದಯ ಗೆದ್ದಿದ್ದು ಕುತೂಹಲ ಹೆಚ್ಚಿಸಿದೆ. ಕಲ್ಕಿ ಮತ್ತು ಸಲಾರ್ ಈ ಎರಡು ಸಿನಿಮಾಗಳ ಭಾರಿ ನಿರೀಕ್ಷೆ ಮೂಡಿಸಿದ್ದು ಪ್ರಭಾಸ್ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳುತ್ತಾರಾ ಎಂದು ಕಾದು ನೋಡಬೇಕಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಲ್ಮಾನ್ ಖಾನ್ ಸೂಪರ್‌ಹೀರೋ ಸಿನಿಮಾಗೆ ಹಾಲಿವುಡ್ ಟಚ್: ವಿಶ್ವದ ನಂ.1 VFX ಕಂಪನಿ ಎಂಟ್ರಿ?
Vijay Trisha: ತೆರೆ ಜೋಡಿಯಿಂದ ವೈರಲ್ ವದಂತಿವರೆಗೆ.. ವಿಜಯ್-ತ್ರಿಶಾ ಸಂಬಂಧದ ಅಸಲಿಯತ್ತೇನು?