ಮುಂಬೈ(ಜು.19): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಬಾರಿ ಪ್ರಕರಣ ಗಂಭೀರ ಸ್ವರೂಪವಾಗಿರುವ ಕಾರಣ ಪೊಲೀಸರ ಅತಿಥಿಯಾಗಿದ್ದಾರೆ. ಅಶ್ಲೀಲ ಆಲ್ಬಂ, ಚಲನ ಚಿತ್ರ ಶೂಟಿಂಗ್ ಹಾಗೂ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ ಕುಂದ್ರಾರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ರಾಜ್ ಕುಂದ್ರಾ ಪೊರ್ನ್ ಚಿತ್ರಗಳನ್ನು ರಚಿಸಿ, ಕೆಲ ಮೊಬೈಲ್ ಆ್ಯಪ್ ಮೂಲಕ ಪ್ರಕಟಿಸುವ ಹಾಗೂ ಹಂಚಿಕೆ ಮಾಡುವ ಕುರಿತು ಕುಂದ್ರಾ ವಿರುದ್ಧ 2021ರ ಫೆಬ್ರವರಿ ತಿಂಗಳಲ್ಲಿ ಪ್ರಕರಣ ದಾಖಲಾಗಿತ್ತು.
ಪತಿ ರಾಜ್ ಕುಂದ್ರಾ ಮೇಲೆ ಬೇಜಾರಾದ ನಟಿ ಶಿಲ್ಪಾ ಶೆಟ್ಟಿ; ಮದುವೆ ಮುರಿದಿದ್ದು ಈ ಕಾರಣಕ್ಕೆ!
ಪ್ರಕರಣ ದಾಖಲಿಸಿಕೊಂಡ ಮುಂಬೈ ಅಪರಾಧ ದಳ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಕುಂದ್ರಾ ವಿರುದ್ಧ ಸಾಕಷ್ಟು ಪುರಾವೆಗಳು ಲಭ್ಯವಾಗಿದೆ. ಹೀಗಾಗಿ ಇಂದು(ಜು.19) ಕುಂದಾರನ್ನು ಬಂಧಿಸಿದ್ದಾರೆ.
ವರದಿಯ ಪ್ರಕಾರ, ಅಶ್ಲೀಲ ಚಿತ್ರಕ್ಕಾಗಿ ರಾಜ್ ಕುಂದ್ರಾ ನಟಿಯನ್ನು ಒತ್ತಾಯಪೂರ್ವಕವಾಗಿ ಬಳಸಿಕೊಳ್ಳುತ್ತಿದ್ದರು. ಬಳಿಕ ಈ ಚಿತ್ರಗಳನ್ನು ಮೊಬೈಲ್ ಆ್ಯಪ್ಲೀಕೇಶನ್ ಮೂಲಕ ಹಂಚಿಕೆ ಮಾಡಲಾಗುತ್ತಿತ್ತು. ಕೆಲ ಪೋರ್ನ್ ಚಿತ್ರಗಳನ್ನು ಲೈವ್ ಸ್ಟ್ರೀಮ್ ಮಾಡಲಾಗಿದೆ ಎಂಬ ಆರೋಪ ರಾಜ್ ಕುಂದ್ರಾ ಮೇಲಿದೆ. ಈ ಪ್ರಕರಣ ಸಂಬಂಧ ರಾಜ್ ಕುಂದ್ರಾ ಹಾಗೂ ಇತರ 9 ಮಂದಿಯನ್ನು ಬಂಧಿಸಲಾಗಿದೆ.