ಇಟೆಲಿಯ ಪೋರ್ನ್ ಕಂಪನಿಯೊಂದು ಗ್ರಾಹಕರಿಗೆ ಹೀಗೆ ಪೋರ್ನ್ ನೋಡಿದವರಿಗೆ ಹಣ ಕೊಡಲು ಮುಂದಾಗಿದೆ. ಅದು ಹಣ ಕೊಡುತ್ತಿರುವುದು ಮಾತ್ರ ಕೈಗೆ ಕರೆನ್ಸಿಯಲ್ಲಿ ಅಲ್ಲ. ಡಾಲರ್‌ಗಳಲ್ಲೂ ಅಲ್ಲ. ಬದಲಾಗಿ ಕ್ರಿಪ್ಟೊಕರೆನ್ಸಿಯಲ್ಲಿ.
ಕೆಲವು ಡಿಜಿಟಲ್ ಕಂಪನಿಗಳು ನೀವು ಅವುಗಳಲ್ಲಿ ವ್ಯವಹಾರ ನಡೆಸಿದಾಗ ಒಂದಿಷ್ಟು ಗಿಫ್ಟ್ ಕೂಪನ್‌ಗಳನ್ನು ಕೊಡುವುದನ್ನು ನೀವು ಗಮನಿಸಿರಬಹುದು. ಹಾಗೇ ಇಟೆಲಿಯ ಪೋರ್ನ್ ಕಂಪನಿಯೊಂದು ಗ್ರಾಹಕರಿಗೆ ಹೀಗೆ ಪೋರ್ನ್ ನೋಡಿದವರಿಗೆ ಹಣ ಕೊಡಲು ಮುಂದಾಗಿದೆ. ಅದು ಹಣ ಕೊಡುತ್ತಿರುವುದು ಮಾತ್ರ ಕೈಗೆ ಕರೆನ್ಸಿಯಲ್ಲಿ ಅಲ್ಲ. ಡಾಲರ್‌ಗಳಲ್ಲೂ ಅಲ್ಲ. ಬದಲಾಗಿ ಕ್ರಿಪ್ಟೊಕರೆನ್ಸಿಯಲ್ಲಿ. ನೀವು ಬಿಟ್‌ಕಾಯಿನ್‌ನ ಹೆಸರು ಕೇಳಿರಬಹುದು. ಇದೊಂದು ಜನಪ್ರಿಯ ಕ್ರಿಪ್ಟೊಕರೆನ್ಸಿ. ಅಂದರೆ ಇದು ಗಣಕಲೋಕದಲ್ಲಿ ಮಾತ್ರ ನೀವು ಚಲಾವಣೆ ಮಾಡಬಹುದಾದ, ನಗದಿಗೆ ಪರಿವರ್ತನೆ ಮಾಡಲಾಗದ ಕರೆನ್ಸಿ. ಹೀಗೆ ಕ್ರಿಪ್ಟೊಕರೆನ್ಸಿಯಲ್ಲಿ ಹಣ ಕೊಡಲು ಮುಂದಾಗಿರುವ ಇಟಲಿಯ ಕಂಪನಿಯ ಹೆಸರು ಪೋರ್ನ್‌ವಿಸರಿ.
ಸ್ಮಾರ್ಟ್‌ಫೋನಲ್ಲೇ ಈಗ ಸೆಕ್ಸ್ ವರ್ಕರ್ಸ್ ಕಾರ್ಯಾರಂಭ!
ಇತ್ತೀಚೆಗೆ ಲಾಕ್‌ಡೌನ್ ಸಂದರ್ಭದಲ್ಲಿ ಪೋರ್ನ್ ನೋಡುವಿಕೆ ಹೆಚ್ಚಾಗಿದೆ. ಭಾರತದಂಥ ದೇಶಗಳಲ್ಲೇ ಶೇ.೯೫ರಷ್ಟು ಪೋರ್ನ್ ಫಿಲಂಗಳ ವೀಕ್ಷಣೆ ಹೆಚ್ಚಾಗಿದೆಯಂತೆ. ಅಂದರೆ ಹತ್ತಿರ ಹತ್ತಿರ ದುಪ್ಪಟ್ಟು. ಈ ವೀಕ್ಷಣೆಯ ಹೆಚ್ಚಳವನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಪೋರ್ನ್ ಕಂಪನಿಗಳು ಮಂದಾಗಿದೆ. ಆದರೆ ಕಳೆದ ಎರಡು ತಿಂಗಳಿನಿಂದ ನಿಷೇಧದಿಂದಾಗಿ ಯಾವುದೇ ಹೊಸ ಪೋರ್ನ್ ಫಿಲಂ ಶೂಟಿಂಗ್ ಮಾಡಲು ಆಗುತ್ತಿಲ್ಲ. ಹೀಗಾಗಿ ಅನೇಕ ದೊಡ್ಡ ಪ್ರೊಡಕ್ಟಿವ್ ಹೌಸ್‌ಗಳಿಗೆ ನಷ್ಟವೂ ಆಗಿದೆ. ಈ ನಷ್ಟವನ್ನು ಸರಿದೂಗಿಸಿಕೊಳ್ಳಲು ಹಳೆ ವೀಕ್ಷಕರನ್ನು ಉಳಿಸಿಕೊಳ್ಳುವುದು ಮತ್ತು ಹೊಸ ವೀಕ್ಷಕರನ್ನು ಹುಟ್ಟಿಸಿಕೊಳ್ಳುವುದು ಮುಖ್ಯ. ಅದರೊಂದಿಗೆ ಕ್ರಿಪ್ಟೊಕರೆನ್ಸಿಯ ಆಮಿಷವನ್ನೂ ಸೇರಿಸಿದರೆ ವೀಕ್ಷಕರು ಪೋರ್ನ್‌ಗೆ ಇನ್ನಷ್ಟು ಅಡಿಕ್ಟ್ ಆಗುತ್ತಾರೆ ಎಂಬುದು ಅವರ ಅಂದಾಜು.
ಇದರಲ್ಲಿ ಇನ್ನೊಂದು ಲಾಜಿಕ್ ಕೂಡ ಇದೆ. ಪೋರ್ನ್‌ನ ವೀಕ್ಷಕರಲ್ಲಿ ಹೆಚ್ಚಿನವರು ಗಂಡಸರು, ಇವರು ತಮ್ಮ ಸಂಗಾತಿ ಅಥವಾ ಪತ್ನಿಯರಿಂದ ತಾವು ಪೋರ್ನ್ ವೀಕ್ಷಣೆ ಮಾಡುವುದನ್ನು ಮುಚ್ಚಿಡಲು ಬಯಸುತ್ತಾರೆ. ಪೋರ್ನ್‌ನಲ್ಲೂ ಹೈ ಕ್ವಾಲಿಟಿ ಪೋರ್ನ್ ಬೇಕೆಂದರೆ ಸಾಕಷ್ಟು ದುಡ್ಡು ಕೊಡಬೇಕು. ಆದರೆ ತಮ್ಮ ಬ್ಯಾಂಕ್ ಖಾತೆಯಿಂದ ಅಥವಾ ಡಿಜಿಟಲ್ ಪಾವತಿ ಖಾತೆಯಿಂದ ಹಣ ಪೋರ್ನ್ ಸಂಸ್ಥೆಗೆ ಪಾವತಿಯಾದರೆ ಒಂದಲ್ಲ ಒಂದು ಸಲ ಸಂಗಾತಿಗೆ ಸಿಕ್ಕಿ ಬೀಳುವುದು ಖಚಿತ. ಇದು ಇವರಿಗೆ ಇಷ್ಟವಿಲ್ಲ. ಕ್ರಿಪ್ಟೊಕರೆನ್ಸಿಯಲ್ಲಿ ಆ ಭಯವಿಲ್ಲ. ಇಂಟರ್‌ನೆಟ್ ಲೋಕದಲ್ಲೇ ಇದರ ಎಲ್ಲ ವ್ಯವಹಾರ. ವಾಸ್ತವಿಕ ನಗದಿಗೂ ಅದಕ್ಕೂ ಸಂಬಂಧವಿಲ್ಲ. ಅಲ್ಲೇ ತೆಗೆದುಕೊಳ್ಳುವುದು- ಅಲ್ಲೇ ಕೊಡುವುದು ನಡೆಯುತ್ತದೆ.
#Feelfree: ಮೊದಲ ರಾತ್ರಿ ಅವಳನ್ನು ಗೆಲ್ಲುವೆನೋ ಇಲ್ವೋ ಎಂಬ ಭಯ!
ಪೋರ್ನ್ ವೆಬ್‌ಸೈಟ್‌ಗಳು ಇಂಥ ಹಲವು ಆಮಿಷಗಳನ್ನು ನೋಡುಗರಿಗೆ ಒಡ್ಡುತ್ತವೆ. ಈ ಸೈಟ್‌ಗಳಲ್ಲಿ ಆಗುವ ಸುಲಿಗೆಯನ್ನು ಗ್ರಾಹಕರು ಬೇರೆ ಕಡೆ ಹೇಳಿಕೊಳ್ಳುವುದಿಲ್ಲ ಎಂಬುದು ಅವುಗಳಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಅವು ಗ್ರಾಹಕರಿಂದ ಹಣ ಸೆಳೆಯವ ಅನೇಕ ಕೊಕ್ಕೆಗಳನ್ನು ಇಟ್ಟಿರುತ್ತವೆ. ಪೋರ್ನ್ ಸೈಟ್‌ಗಳಲ್ಲಿ ಮೊದಮೊದಲು ಹೋಗುವವನಿಗೆ ಎಲ್ಲ ವಿಡಿಯೋಗಳು ಸಿಕ್ಕಂತೆ ಅನಿಸುತ್ತವೆ. ಆದರೆ ಅವುಗಳಲ್ಲಿ ಹಣ ಕೊಡದ ಸಾಮಾನ್ಯ ನೋಡುಗರಿಗೆ ಸಿಗುವುದು ಅಷ್ಟೇನೂ ಗುಣಮಟ್ಟವಿಲ್ಲದ, ಹೈ ಡೆಫಿನಿಷನ್ ಇಲ್ಲದ, ಮೂರು ನಾಲ್ಕು ನಿಮಿಷಗಳ ವಿಡಿಯೋಗಳು. ಇದರಲ್ಲೂ ಉತ್ತಮ ಕ್ವಾಲಿಟಿ ಇರುವುದಿಲ್ಲ. ಹೆಚ್ಚಿನ ಗುಣಮಟ್ಟದ, ಇನ್ನಷ್ಟು ಉದ್ರೇಕಕಾರಿಯಾದ, ಪೂರ್ಣ ಸಂತೃಪ್ತಿ ನೀಡಬಲ್ಲ ಪೋರ್ನ್‌ಗಳು ಬೇಕಾದರೆ ನೀವು ಹಣ ಕೊಡಲೇಬೇಕು.
ಅಮೆರಿಕದಲ್ಲಿ ಬೈಯ್ಯೋ ಪೋರ್ನ್ ಈಗ ಸಖತ್ ಟ್ರೆಂಡಿಂಗ್, ಏನಿದು?
ಕೆಲವೊಮ್ಮೆ ಈ ಪೋರ್ನ್ ಸೈಟ್‌ಗಳ ಮೂಲಕವೇ ಫಿಶಿಂಗ್, ಹ್ಯಾಕಿಂಗ್ ಇವೆಲ್ಲ ನಡೆಯುವುದು ಉಂಟು. ಫಿಶಿಂಗ್ ಅಂದರೆ ಇದರಲ್ಲಿ ನೀಡಲಾದ ಲಿಂಕ್‌ಗಳನ್ನು ಬಳಸಿ ನಿಮ್ಮ ಖಾತೆಯಿಂದ ಹಣ ಸೆಳೆಯುವ ಉಪಾಯ. ಹ್ಯಾಕಿಂಗ್ ಅಂದರೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನ ವ್ಯವಸ್ಥೆಯನ್ನು ಜಾಮ್ ಮಾಡಿ ನಿಮ್ಮನ್ನು ಬ್ಲ್ಯಾಕ್‌ಮೇಲ್ ಮಾಡುವುದು. ಇನ್ನು ಪೋರ್ನ್ ಸೈಟ್‌ಗಳಲ್ಲಿ ಬರುವ ಮಸಾಜ್, ಪೋರ್ನ್ ವಿಡಿಯೋ ಗೇಮ್‌ಗಳ ಲಿಂಕ್ ಕೂಡ ಸಾಕಷ್ಟು. ಲೈವ್ ಸೆಕ್ಸ್ ಚಾಟ್ ಮಾಡಬೇಕಾದರೆ ಮತ್ತೊಂದು, ಲೈವ್ ಸೆಕ್ಸ್ ಸಂಗಾತಿ ಬೇಕಾದರೆ ಮತ್ತೊಂದು ಲಿಂಕ್- ಹೀಗೆ ನೂರಾರು ಆಕರ್ಷಣೆಗಳು. ಇವೆಲ್ಲದರಲ್ಲಿ ನಿಜವೆಷ್ಟು, ಬೋಗಸ್ ಎಷ್ಟು ಎಂಬುದು ಬಲೆಗೆ ಬಿದ್ದ ಮೇಲೆಯೇ ಗೊತ್ತಾಗುವುದು.
ಸೆಕ್ಸ್‌ನಲ್ಲೂ ಆತ್ಮನಿರ್ಭರತೆ ಸಾಧಿಸಿದವರು!
ಭಾರತದಂಥ ದೇಶಗಳಲ್ಲಿ ಪೋರ್ನ್ ವಿಡಿಯೋ ಕ್ವಾಲಿಟಿಯ ಬಗ್ಗೆ ಜನರಿಗೆ ಅಷ್ಟೇನೂ ತಕರಾರು ಇರುವುದಿಲ್ಲ. ಇಲ್ಲಿನ ಸೆಕ್ಸ್ ಕುತೂಹಲಿಗಳು ಕದ್ದು ನೋಡುವುದರಲ್ಲೇ ತೃಪ್ತರು. ಬಿಟ್ಟಿಯಾಗಿ ಪೋರ್ನ್ ಸಿಕ್ಕಿದರೆ ಅದಕ್ಕಿಂತ ಹೆಚ್ಚಿನ ತೃಪ್ತಿ ಅವರಿಗೆ ಮತ್ತೊಂದಿಲ್ಲ. ಹೀಗಾಗಿ ಅವರಿಗೆ ಎಚ್‌ಡಿ ವಿಡಿಯೋಗಳು ಬೇಕಿಲ್ಲ. ಸಾಮಾನ್ಯ ವಿಡಿಯೋಗಳೇ ಸಾಕಾಗುತ್ತವೆ. ವಿದೇಶಿಗರಂತೆ ಹೆಚ್ಚಿನ ದುಡ್ಡು ಸುರಿದು ಪೋರ್ನ್ ನೋಡಲು ಇಷ್ಟಪಡುವುದಿಲ್ಲ. ಹೀಗಾಗಿ ನಾವೂ ಭಾರತದ ಮಾರುಕಟ್ಟೆ ಬಗ್ಗೆ ಅಷ್ಟೊಂದು ನಂಬಿಕೊಂಡಿಲ್ಲ ಎನ್ನುತ್ತಾರೆ ಪೋರ್ನ್ ಮಾರ್ಕೆಟ್ ತಜ್ಞರು.