ನಟಿ ಕನಿಹಾಗೆ ಆ್ಯಕ್ಸಿಡೆಂಟ್​? ಫೋಟೋ ನೋಡಿ ಫ್ಯಾನ್ಸ್​ ಶಾಕ್​!

Published : Mar 10, 2023, 05:24 PM IST
ನಟಿ ಕನಿಹಾಗೆ ಆ್ಯಕ್ಸಿಡೆಂಟ್​? ಫೋಟೋ ನೋಡಿ ಫ್ಯಾನ್ಸ್​ ಶಾಕ್​!

ಸಾರಾಂಶ

ಕನ್ನಡದ ಕೆಲವು ಚಿತ್ರ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ನಟಿ ಕನಿಹಾ ಫೋಟೋ ಒಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿ ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರೆ. ಏನಿದು ಫೋಟೋ?  

ಕನ್ನಡದ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡು ಕನ್ನಡಿಗರ ಮನ ಗೆದ್ದಿದ್ದ ಮುದ್ದುಮೊಗದ ನಟಿ ಕನಿಹಾ (Kaniha) ಗೊತ್ತಲ್ಲವೆ? ತಮಿಳುನಾಡಿನಲ್ಲಿ ಹುಟ್ಟಿ ಬೆಳೆದ ಕನಿಹಾ ಅವರ ಮೂಲಕ ಹೆಸರು ಮೂಲ ಹೆಸರು ದಿವ್ಯಾ ವೆಂಕಟಸುಬ್ರಮನಿಯನ್‌. 2002ರಲ್ಲಿ ಚಿತ್ರರಂಗಕ್ಕೆ ಬಂದರು. ಕನ್ನಡ , ತಮಿಳು ಹೊರತುಪಡಿಸಿದರೆ ಕನಿಹಾ ಮಲಯಾಳಂ ಭಾಷೆಗಳಲ್ಲಿ ಹೆಚ್ಚು ನಟಿಸಿದ್ದಾರೆ. ಕನಿಹಾ ಡಬ್ಬಿಂಗ್‌ ಆರ್ಟಿಸ್ಟ್‌, (Dubbing Artist) ಹಿನ್ನೆಲೆ ಗಾಯಕಿಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಕೂಡಾ ಆಕೆ ಗುರುತಿಸಿಕೊಂಡಿದ್ದಾರೆ. ಕನ್ನಡದ ಅಣ್ಣಾವ್ರು ಚಿತ್ರದಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದಾಕೆ. ನಂತರ ಸುದೀಪ್‌ ಅವರ ಜೊತೆ ಸೈ ಹಾಗೂ ಬಾಲಾಜಿ ರವಿಚಂದ್ರನ್‌ ಜೊತೆ ರಾಜಕುಮಾರಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ತಮಿಳಿನ ಚಾಕಲೇಟ್ಚಿತ್ರದ ಮೂಲಕ ಚಿತ್ರ ಪ್ರಪಂಚಕ್ಕೆ ಕಾಲಿಟ್ಟ ಕನಿಹಾ ಇಂಜಿನಿಯರಿಂಗ್ ಪದವಿ ಪಡೆದಿದ್ದರೂ, ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

ಇಂತಿಪ್ಪ ಕನಿಹಾ ಈಗ ಏಕಾಏಕಿ ಶಾಕ್​ (Shock) ನೀಡಿದ್ದಾರೆ. ವಾಕರ್​ ಹಿಡಿದುಕೊಂಡು ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ತಮ್ಮ  ಕಾಲಿಗೆ ಪೆಟ್ಟಾಗಿದ್ದು, ನಡೆಯಲಾಗದ ಸ್ಥಿತಿಯಲ್ಲಿದ್ದೇನೆ ಎಂದಿದ್ದಾರೆ. ಕಾಲಿಗೆ ಫ್ಯಾಕ್ಚರ್ ಕಾರಣಕ್ಕೆ ನಡೆಯಲಾಗದ ಸ್ಥಿತಿಯಲ್ಲಿ ಇದ್ದೇನೆ ಎಂದಿದ್ದಾರೆ. ಕೆಲವು ದಿನಗಳಿಂದ  ಕಾಲಿನ ನೋವಿನಿಂದ ಬಳಲುತ್ತಿದ್ದೇನೆ,  ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದಿರುವ ಕನಿಹಾ,  ಸದ್ಯಕ್ಕೆ ಅವರು ಲೆಗ್‌ ಬೂಟ್ಸ್‌ ಧರಿಸಿ ವಾಕರ್‌ ಸಹಾಯದಿಂದ ನಡೆಯುತ್ತಿದ್ದಾರಂತೆ.  'ಒಂದು ವಾರ ಕಳೆಯಿತು, ಸುಧಾರಿಸಿಕೊಳ್ಳಲು ಇನ್ನೂ ಕೆಲವು ದಿನಗಳ ಕಾಲ ಬೇಕಾಗುತ್ತದೆ' ಎಂದು ಅವರು ಬರೆದುಕೊಂಡಿದ್ದಾರೆ.  ಇದನ್ನು ನೋಡಿದ ಅಭಿಮಾನಿಗಳು ಬೇಗ ಗುಣಮುಖರಾಗಿ ಎಂದು ಹಾರೈಕೆಗಳ ಸುರಿಮಳೆಗೈದಿದ್ದಾರೆ. 

ಗರ್ಭಪಾತ ಮಾಡಿಸಿಕೊಳ್ಳಲು 75 ಲಕ್ಷ ಡಿಮ್ಯಾಂಡ್ ಮಾಡಿದ್ರಾ ರಮ್ಯಾ ಕೃಷ್ಣ?

'ಅಣ್ಣಾವ್ರು' (Annavru) ಚಿತ್ರದಲ್ಲಿ ಲಂಗಾ ದಾವಣಿ ತೊಟ್ಟ ಕನಿಹಾ ಮಾಡಿದ ಮೋಡಿಯಿಂದ ಅಭಿಮಾನಿಗಳು ಫಿದಾ ಆಗಿದ್ದಾರೆ.  ಅಂದಹಾಗೆ ಕನಿಹಾ ಡಬ್ಬಿಂಗ್‌ ಆರ್ಟಿಸ್ಟ್‌, ಹಿನ್ನೆಲೆ ಗಾಯಕಿಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಕೂಡಾ ಆಕೆ ಗುರುತಿಸಿಕೊಂಡಿದ್ದಾರೆ. 2008 ರಲ್ಲಿ ಕನಿಹಾ, ಶ್ಯಾಮ್‌ ರಾಧಾಕೃಷ್ಣನ್‌ ಎಂಬುವರನ್ನು ಮದುವೆಯಾದರು. ಸಿನಿಕರಿಯರ್‌ನ ಉತ್ತುಂಗದಲ್ಲಿ ಇದ್ದಾಗಲೇ ಮದುವೆ ಆಗಿದ್ದರು.  ಈ ದಂಪತಿಗೆ ಸಾಯಿ ರಿಷಿ ಎಂಬ 13 ವರ್ಷದ ಮಗ ಇದ್ದಾನೆ. ಮದುವೆ ನಂತರ ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿ ಕೆಲವು ದಿನಗಳ ಕಾಲ ಯುಎಸ್‌ನಲ್ಲಿ ನೆಲೆಸಿದ್ದ ಕನಿಹಾ ಮತ್ತೆ ಕಮ್‌ ಬ್ಯಾಕ್‌ ಮಾಡಿದ್ದಾರೆ. ಸಾಕಷ್ಟು ಜಾಹೀರಾತುಗಳಲ್ಲಿ ಕನಿಹಾ ಮಿಂಚಿದ್ದಾರೆ. ಸಚಿನ್ ಚಿತ್ರದಲ್ಲಿ ಜೆನಿಲಿಯಾಗೆ, ಅನ್ನಿಯನ್ (Anniyan) ಚಿತ್ರದಲ್ಲಿ ಸದಾಗೆ ಹಾಗೂ ಶಿವಾಜಿ ಚಿತ್ರದಲ್ಲಿ ಶ್ರಿಯಾ ಶರಣ್‌ಗೆ ಈಕೆ ವಾಯ್ಸ್ ಡಬ್ ಮಾಡಿದ್ದರು. ಸಾಕಷ್ಟು ಕಿರುತೆರೆ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ, ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. 

ಇತ್ತೀಚೆಗೆ ಕನಿಹಾ ಬಟ್ಟೆಗಳ ವಿಷಯದಲ್ಲಿಯೂ ಬಹಳ ಫೇಮಸ್​ ಆಗಿದ್ದರು. ಯಾರೋ ಏನೋ ಅಂದುಕೊಳ್ಳುತ್ತಾರೆ ಎಂಬ ಕಾರಣದಿಂದ ಪ್ರತಿ ಬಾರಿ ಬೇರೆ ಬೇರೆ ಬಟ್ಟೆ ಧರಿಸಿದರೆ ಅದರಿಂದ ಅನಗತ್ಯ ಖರ್ಚ ಆಗುತ್ತದೆ. ಅಗತ್ಯಕ್ಕಿಂತ ಹೆಚ್ಚಿನದನ್ನು ಖರೀದಿಸಿದರೆ ಪರಿಸರಕ್ಕೂ ಹಾನಿ ಆಗುತ್ತದೆ. ಹಾಗಾಗಿ ಬಟ್ಟೆಯನ್ನು ರಿಪೀಟ್​ ಮಾಡುವುದರಲ್ಲಿ ತಪ್ಪೇನೂ ಇಲ್ಲ ಎಂದಿದ್ದರು. ‘ ನಾನು ಬಟ್ಟೆಗಳನ್ನು ರಿಪೀಟ್​ ಮಾಡುತ್ತೇನೆ. ಬಟ್ಟೆಗಳನ್ನು ಮರುಬಳಕೆ ಮಾಡುತ್ತೇನೆ. ಬ್ರ್ಯಾಂಡೆಡ್​ ಮತ್ತು ಡಿಸೈನರ್​ ಬಟ್ಟೆಗಳನ್ನು ಒಳಗೊಂಡ ಫ್ಯಾನ್ಸಿ ವಾರ್ಡ್​ರೋಬ್​ ನನ್ನ ಬಳಿ ಇಲ್ಲ. ಹಳೇ ಸೂತ್ರಗಳನ್ನು ನಾನು ಮುರಿಯುತ್ತೇನೆ. ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಜನಪ್ರಿಯ ವ್ಯಕ್ತಿಗಳು ಹೀಗೆಯೇ ಡ್ರೆಸ್​ ಮಾಡಿಕೊಳ್ಳಬೇಕು ಅಂತ ಹೇಳಿದ್ದು ಯಾರು? ನಿಮಗೆ ಕಂಫರ್ಟ್​ ಎನಿಸುವಂತಹ ಮತ್ತು ಆತ್ಮವಿಶ್ವಾಸ ನೀಡುವಂತಹ ಬಟ್ಟೆಗಳನ್ನೇ ಧರಿಸಿ' ಎಂದು  ಹೇಳುವ ಮೂಲಕ ಭೇಷ್​ ಎನಿಸಿಕೊಂಡಿದ್ದರು. 

ಶುಭ್‌ಮನ್ ಗಿಲ್‌ಗೆ ರಶ್ಮಿಕಾ ಮೇಲೆ ಕ್ರಶ್: ಹೀಗಂತ ಎಲ್ಲಿ ಹೇಳಿದೆ ಕೇಳಿದ ಕ್ರಿಕೆಟಿಗ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!