ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿ ಪಾಪವೆಲ್ಲಾ ಹೋಯ್ತು ಎಂದ ಪೂನಂ ಪಾಂಡೆ

Published : Jan 30, 2025, 06:20 PM IST
ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿ ಪಾಪವೆಲ್ಲಾ ಹೋಯ್ತು ಎಂದ ಪೂನಂ ಪಾಂಡೆ

ಸಾರಾಂಶ

ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಪೂನಂ ಪಾಂಡೆ ಗಂಗೆಯಲ್ಲಿ ಪುಣ್ಯಸ್ನಾನ ಮಾಡಿ, 'ಪಾಪ ತೊಳೆದ' ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಭೇಟಿ ನೀಡಿ  ಸಾಮಾನ್ಯ ಜನರಿಂದ ಹಿಡಿದು ಬಾಲಿವುಡ್ ಸೆಲೆಬ್ರಿಟಿಗಳವರೆಗೆ ಬಹುತೇಕ ಎಲ್ಲರೂ ಗಂಗೆ ಹಾಗೂ ಸಂಗಮದಲ್ಲಿ ಮುಳುಗಿ ಪುಣ್ಯಸ್ನಾನದಲ್ಲಿ ಭಾಗಿಯಾಗುತ್ತಿದ್ದಾರೆ. ಅದೇ ರೀತಿ ನಟಿ ಮಾಡೆಲ್ ಪೂನಾಂ ಪಾಂಡೆ ಕೂಡ ಗಂಗೆಯಲ್ಲಿ ಮಿಂದು ಪುಣ್ಯಸ್ನಾನ ಮಾಡಿದ್ದು ಫೋಟೋ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಗಂಗೆಯಲ್ಲಿ ಮುಳುಗೆದ್ದ ಈಕೆ ನಾನು ಮಾಡಿದ ಪಾಪವೆಲ್ಲಾ ತೊಳೆದು ಹೋಯ್ತು ಎಂದು ಬರೆದುಕೊಂಡಿದ್ದಾರೆ. ಈಕೆಯ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಸಾಕಷ್ಟು ಕಾಮೆಂಟ್ ಮಾಡಿದ್ದಾರೆ.

ಮಾಡೆಲ್ ಆಗಿ ಕೆರಿಯರ್ ಆರಂಭಿಸಿದ ಪೂನಂ ಪಾಂಡೆ 'ನಶಾ' ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಆದರೆ ಆಕೆ ಫೇಮಸ್ ಆಗಿರುವುದು ಸಾಮಾಜಿಕ ಜಾಲತಾಣಗಳಿಂದಾಗಿ ಸದಾ ಅರೆಬರೆ ಬಟ್ಟೆ ಧರಿಸುವ ಆಕೆ ಸಾಮಾಜಿಕ ಜಾಲತಾಣಗಳಲ್ಲೂ ಈ ಅರೆಬೆತ್ತಲೆ ಫೋಟೋಗಳನ್ನೇ ಹಾಕುತ್ತಿರುತ್ತಾಳೆ.  ಇದೇ ಕಾರಣಕ್ಕೆ ಈಕೆ ಸಾಕಷ್ಟು ಫೇಮಸ್ ಆಗಿದ್ದಾಳೆ. ಕೆಲ ದಿನಗಳ ಹಿಂದೆ ಗೆಳತಿಯೊಬ್ಬಳು ಎತ್ತಿದ ಪೋರ್ಸ್‌ಗೆ ಈಕೆಯ ಹಿಂಭಾಗವೆಲ್ಲಾ ಪಪಾರಾಜಿ ಕ್ಯಾಮರಾಗಳಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಯಾವುದಕ್ಕೂ ಕ್ಯಾರೇ ಅನ್ನದ ಪೂನಾಂ ಪಾಂಡೆ ನಂತರದಲ್ಲಿ ಈ ವಿಚಾರಕ್ಕೂ ಸ್ಪಷ್ಟನೆ ನೀಡಿದ್ದಳು. ಇಂತಹ ಪೂನಾಂ ಪಾಂಡೆ ನಿನ್ನೆಯ ಮೌನಿ ಅಮವಾಸ್ಯೆ ದಿನವೇ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳಕ್ಕೆ ತೆರಳಿ ಗಂಗೆಯಲ್ಲಿ ಮಿಂದು ಪುಣ್ಯಸ್ನಾನ ಮಾಡಿದ್ದಾಳೆ. ಇದರ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆಕೆ ನನ್ನ ಪಾಪಗಳೆಲ್ಲ ತೊಳೆದು ಹೋದವು ಎಂದು ಬರೆದುಕೊಂಡಿದ್ದಾಳೆ. 

ಈ ಪೋಸ್ಟ್‌ಗೆ ಅನೇಕರು ದೇಹ ತೊಳೆದರೆ ಸಾಲದು ಮನಸ್ಸನ್ನು ತೊಳೆಯಿರಿ ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮಂತವರ ಪಾಪವನ್ನೆಲ್ಲಾ ಗಂಗೆ ತೊಳೆಯೋದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಬೇಗ ಬಂದು ಇನ್ನು ಸ್ವಲ್ಪ ಪಾಪ ಮಾಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಪಾಪವನ್ನು ತೊಳೆಯುವುದು ಇಷ್ಟು ಸುಲಭವಾಗಿದ್ದರ ಮನುಷ್ಯ ದಿನವೂ ಪಾಪ ಮಾಡಿ ಇಲ್ಲಿ ಬಂದು ಸ್ನಾನ ಮಾಡುತ್ತಿದ್ದ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀನು ಪುಣ್ಯಸ್ನಾನ ಮಾಡಿ ಏನು ಪ್ರಯೋಜನ ಮತ್ತದೇ ಪಾಪ ಮಾಡುವೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅಯ್ಯೋ ಗಂಗೆಯೇ ಮಲಿನವಾದಳು ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.  ಒಟ್ಟಿನಲ್ಲಿ ಈಕೆಯ ವೀಡಿಯೋ ಫೋಟೋಗಳಿಗೆ ತರಹೇವಾರಿ ಕಾಮೆಂಟ್‌ಗಳು ಬರ್ತಿದೆ. ಅದೇನೆ ಇರಲಿ ಪೂನಾಂ ಪಾಂಡೆ ಗಂಗಾಸ್ನಾನದ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ...
 

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?