ಶಿಲ್ಪಾ ಶೆಟ್ಟಿ ಪತಿ ಜೊತೆ ಪೋರ್ನ್‌ನಲ್ಲಿ ಪೂನಂ, ಶೆರ್ಲಿನ್ ಚೋಪ್ರಾ!

By Suvarna NewsFirst Published Jul 20, 2021, 4:42 PM IST
Highlights

ಸಾಫ್ಟ್ ಪೋರ್ನ್ ಹಗರಣದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೊತೆ ನಟಿಯರಾದ ಪೋನಂ ಪಾಂಡೆ ಮತ್ತು ಶೆರ್ಲಿನ್ ಚೋಪ್ರಾ ಕೂಡ ಪಾಲ್ಗೊಂಡಿರುವುದು ಗೊತ್ತಾಗಿದೆ.

ನಟ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರನ್ನು ಸೋಮವಾರ ರಾತ್ರಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಚಿತ್ರಗಳನ್ನು ಶೂಟ್ ಮಾಡಿ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಅವುಗಳನ್ನು ಹಂಚಿದ್ದು ಅವರ ಮೇಲಿರುವ ದೂರು.

ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದ ರಾಜ್ ಕುಂದ್ರಾ ಒಬ್ಬರೇ ಆರೋಪಿಯಲ್ಲ. ಇದಕ್ಕೂ ಮುನ್ನ ಟಿವಿ ಸೀರಿಯಲ್ ತಯಾರಕಿ ಏಕ್ತಾ ಕಪೂರ್ ಮಾರ್ಚ್‌ನಲ್ಲಿ ದೂರು ದಾಖಲಿಸಿದ್ದರು.

ಆಗ ಈ ವಿಷಯದಲ್ಲಿ ನಟಿಯರಾದ ಪೂನಮ್ ಪಾಂಡೆ ಮತ್ತು ಶೆರ್ಲಿನ್ ಚೋಪ್ರಾ ಕೂಡ ಸಂಬಂಧ ಹೊಂದಿರುವುದು ಗೊತ್ತಾಗಿತ್ತು. ಅವರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿತ್ತು. ಆಗ ಮಹಾರಾಷ್ಟ್ರ ಸೈಬರ್ ಸೆಲ್‌ನೊಂದಿಗೆ ದಾಖಲಿಸಿದ್ದ ಹೇಳಿಕೆಗಳ ವಿವರಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಇವರಿಬ್ಬರು ಈ ಹಿಂದೆ ಸಾಫ್ಟ್ ಪೋರ್ನ್ ಪ್ರಕರಣದಲ್ಲಿ ರಾಜ್ ಕುಂದ್ರಾ ಜೊತೆ ಸಂಬಂಧ ಹೊಂದಿದ್ದರು ಮತ್ತು ರಾಜ್ ಕುಂದ್ರಾ ತಮ್ಮನ್ನು ಸಾಫ್ಟ್ ಪೋರ್ನ್ ದಂಧೆಗೆ ಕರೆತಂದಿದ್ದಾರೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಪ್ಪೊಪ್ಪಿಕೊಂಡಿದ್ದರು.

ನಾನು ಬಿಟ್ಮೇಲೆ ಅದೆಷ್ಟು ಗರ್ಲ್‌ಫ್ರೆಂಡ್ಸ್ ಬಂದ್ರೋ ? ಸಲ್ಲು 12 ವರ್ಷ ಹಳೆಯ ಪ್ರೇಯಸಿ ಹೀಗಂದಿದ್ದೇಕೆ ?

ಶೆರ್ಲಿನ್ ಚೋಪ್ರಾಗೆ ಇಂಥ ಒಂದು ಫಿಲಂಗೆ ಸುಮಾರು 30 ಲಕ್ಷ ರೂ. ನೀಡಲಾಗುತ್ತಿತ್ತು ಮತ್ತು ಇದುವರೆಗೆ ರಾಜ್ ಕುಂದ್ರಾ ಅವರಿಗೆ ಸುಮಾರು 15ರಿಂದ 20 ಸಾಫ್ಟ್ ಪೋರ್ನ್ ಫಿಲಂಗಳನ್ನು ಮಾಡಿಕೊಟ್ಟಿದ್ದರಂತೆ. ಏತನ್ಮಧ್ಯೆ, ಪೂನಂ ಪಾಂಡೆ ಅವರು ರಾಜ್ ಕುಂದ್ರಾ ಅವರ ಸಂಸ್ಥೆ ಆರ್ಮ್ಸ್ಪ್ರೈಮ್ ಮೀಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಈ ಸಂಸ್ಥೆ ಹಲವಾರು ರೀತಿಯ ಮೊಬೈಲ್ ಆಪ್‌ಗಳಲ್ಲಿ ಪೋರ್ನ್ ಮತ್ತು ಸಾಫ್ಟ್ ಪೋರ್ನ್ ಅಪ್‌ಲೋಡ್ ಮಾಡುತ್ತಿತ್ತು- ಪೂನಂ ಪಾಂಡೆ ರಾಜ್ ಸಂಸ್ಥೆಯ ಪ್ರಮುಖ ಉದ್ಯೋಗಿಗಳಲ್ಲಿ ಒಬ್ಬರು.

ಪೂನಮ್ ಅವರ ಆಪ್ ವಯಸ್ಕರ ಅಪ್ಲಿಕೇಶನ್ ಆಗಿದೆ. ಈ ಒಪ್ಪಂದ 8 ತಿಂಗಳ ಹಿಂದೆ ಕೊನೆಗೊಂಡಿದೆ. ಆದರೆ ಪೂನಂ ಪಾಂಡೆ, ರಾಜ್ ಕುಂದ್ರಾ ಅವರ ಸಂಸ್ಥೆ ತನ್ನ ಚಲನಚಿತ್ರಗಳು ಮತ್ತು ವಿಡಿಯೋಗಳನ್ನು ತನ್ನ ಅನುಮತಿಯಿಲ್ಲದೆ ಬಳಸುತ್ತಿದೆ ಎಂದು ಹೇಳಿದ್ದಾರೆ. ಪೂನಮ್ 2020ರಲ್ಲಿ ಸಂಸ್ಥೆ ಮತ್ತು ರಾಜ್ ವಿರುದ್ಧ ದೂರು ದಾಖಲಿಸಿದ್ದರು, ರಾಜ್ ಕುಂದ್ರಾ ಮತ್ತು ಅವರ ಸಹಚರರು ಒಪ್ಪಂದವನ್ನು ಮುಕ್ತಾಯಗೊಳಿಸಿದ ನಂತರವೂ ಅವಳನ್ನು ಒಳಗೊಂಡ ವಿಡಿಯೋಗಳನ್ನು ಕಾನೂನುಬಾಹಿರವಾಗಿ ಬಳಸುತ್ತಿದ್ದಾರಂತೆ.

ಅಶ್ಲೀಲ ಚಲನಚಿತ್ರ ಶೂಟಿಂಗ್ ಹಾಗೂ ಹಂಚಿಕೆ; ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಬಂಧನ!

ಅಶ್ಲೀಲ ಚಿತ್ರಗಳ ತಯಾರಿಕೆ ಮತ್ತು ಅವುಗಳನ್ನು ಕೆಲವು ಆಪ್‌ಗಳ ಮೂಲಕ ಹರಿಬಿಡುವ ಬಗ್ಗೆ ಫೆಬ್ರವರಿ 2021ರಲ್ಲಿ ಮುಂಬೈನ ಕ್ರೈಂ ಬ್ರಾಂಚ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಸೈಬರ್ ಪೊಲೀಸರು ಕಳೆದ ವರ್ಷ ಐಪಿಸಿಯ ಸೆಕ್ಷನ್ 292, ಮಾಹಿತಿ ತಂತ್ರಜ್ಞಾನದ ಸೆಕ್ಷನ್ 67, 67 ಎ ಮತ್ತು ಅಶ್ಲೀಲ ಕಂಟೆಂಟ್ ನಿಯಮಗಳು 3 ಮತ್ತು 4ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಮಹಾರಾಷ್ಟ್ರ ಸೈಬರ್ ಕಳೆದ ವರ್ಷ ಹಲವಾರು ಜನರನ್ನು ಬಂಧಿಸಿತ್ತು, ಅವರಲ್ಲಿ ಕೆಲವರು ರಾಜ್ ಕುಂದ್ರಾ ಅವರೊಂದಿಗೆ ಸಂಪರ್ಕ ಹೊಂದಿರುವುದು ಕಂಡುಬಂದಿದೆ. ಕೆಲವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ತಮ್ಮ ವೆಬ್ ಸರಣಿಯ ಭಾಗವಾಗಿ ಅಶ್ಲೀಲ ವಿಡಿಯೋಗಳನ್ನು ಪ್ರಕಟಿಸುತ್ತಿರುವ ದೂರಿನ ಆಧಾರದ ಮೇಲೆ ರಾಜ್ ಅವರನ್ನು ವಿಚಾರಿಸಲಾಗಿತ್ತು.

"ಅಶ್ಲೀಲ ಚಿತ್ರಗಳ ತಯಾರಿಕೆ ಮತ್ತು ಕೆಲವು ಆಪ್‌ಗಳ ಮೂಲಕ ಅವುಗಳನ್ನು ಪ್ರಸಾರ ಮಾಡುವ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಪರಾಧ ಶಾಖೆ ಬಂಧಿಸಿದೆ. ಅವರು ಪ್ರಮುಖ ಸಂಚುಕೋರರಾಗಿದ್ದಾರೆ. ಈ ಬಗ್ಗೆ ನಮಗೆ ಸಾಕಷ್ಟು ಪುರಾವೆಗಳಿವೆ" ಎಂದು ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗ್ರೇಲ್ ಹೇಳಿದ್ದಾರೆ. ರಾಜ್ ಮಂಗಳವಾರ ಮುಂಬೈ ಪೊಲೀಸರ ಕ್ರೈಂ ಬ್ರಾಂಚ್ ಶಾಖೆಯ ಪ್ರಾಪರ್ಟಿ ಸೆಲ್ ಮುಂದೆ ಹಾಜರಾಗಿದ್ದಾರೆ.

click me!