Naatu Naatu; ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ RRR ತಂಡಕ್ಕೆ ಪಿಎಂ ನರೇಂದ್ರ ಮೋದಿ ಅಭಿನಂದನೆ

By Shruthi Krishna  |  First Published Jan 11, 2023, 12:17 PM IST

ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ RRR ತಂಡಕ್ಕೆ ಪಿಎಂ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. 


ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ RRR ಸಿನಿಮಾಗೆ ಮತ್ತೊಂದು ಗರಿ ಸಿಕ್ಕಿದೆ. ಈ ಸಿನಿಮಾದ ನಾಟು ನಾಟು ಹಾಡು ಸಿಕ್ಕಾಪಟ್ಟೆ ಖ್ಯಾತಿ ಗಳಿಸಿತ್ತು. ಇದೀಗ ಈ ಹಾಡು ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ 2023ರಲ್ಲಿ ಅತ್ಯುತ್ತಮ ಒರಿಜಿನಲ್ ಸಾಂಗ್(ಮೂಲ ಗೀತೆ)  ಪ್ರಶಸ್ತಿ ಬಾಚಿಕೊಂಡಿದೆ.  80ನೇ ಗೋಲ್ಡನ್ ಗ್ಲೋಬ್ಸ್​ 2023 ಪ್ರಶಸ್ತಿ ಕಾರ್ಯಕ್ರಮ ಇಂದು (ಜನವರಿ 11 ) ಲಾಸ್​ ಏಂಜಲೀಯಸ್​ನಲ್ಲಿ ನಡೆದಿದ್ದು ಆರ್ ಆರ್ ಆರ್ ತಂಡ  ಒಂದು ಪ್ರಶಸ್ತಿ ಗೆದ್ದು ಬೀಗಿದೆ. ಆರ್ ಆರ್ ಆರ್ ತಂಡಕ್ಕೆ ಅಭಿನಂದನೆಗಳ ಸುರಿಮಳೆಯೇ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಮತ್ತು ಅನೇಕ ಸಿನಿಮಾ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ಆರ್ ಆರ್ ಆರ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. 

ಆರ್ ಆರ್ ಆರ್ ಶೇರ್ ಮಾಡಿದ್ದ ಗೋಲ್ಡನ್ ಬ್ಲೋಬ್ಸ್ ಪ್ರಶಸ್ತಿ ಕ್ಷಣದ ವಿಡಿಯೋವನ್ನು ಶೇರ್ ಮಾಡಿ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. 'ಬಹಳ ವಿಶೇಷವಾದ ಸಾಧನೆ.ಎಂ ಎಂ ಕೀರವಾಣಿ, ರಾಹುಲ್ ಸಿಪ್ಲಿಗುಂಜ್, ರಾಜಮೌಳಿ, ಜೂ.ಎನ್ ಟಿ ಆರ್, ರಾಮ್ ಚರಣ್ ಇಡೀ ಆರ್ ಆರ್ ಆರ್ ತಂಡಕ್ಕೆ ಅಭಿನಂದನೆಗಳು. ಪ್ರತಿಷ್ಠಿತ ಗೌರವ ಪ್ರತಿಯೊಬ್ಬ ಭಾರತೀಯನು ತುಂಬಾ ಹೆಮ್ಮೆಪಡುವಂತೆ ಮಾಡಿದೆ' ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಟ್ಟೀಟ್‌ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಮೀಮಿಗಳನ್ನು ಮಾಡಿ ಶೇರ್ ಮಾಡುತ್ತಿದ್ದಾರೆ. ಹೆಮ್ಮೆಯ ಕ್ಷಣ ಎಂದು ಹೇಳುತ್ತಿದ್ದಾರೆ. 

RRR ಚಿತ್ರದ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ..

Tap to resize

Latest Videos

ಆರ್ ಆರ್ ಆರ್ ಸಿನಿಮಾ ‘ಇಂಗ್ಲಿಷ್​ ಹೊರತಾದ ಅತ್ಯುತ್ತಮ ಸಿನಿಮಾ’ ಹಾಗೂ ‘ಅತ್ಯುತ್ತಮ ಹಾಡು’ (ನಾಟು ನಾಟು) ವಿಭಾಗದಲ್ಲಿ ಈ ಚಿತ್ರ ಬೇರೆ ಬೇರೆ ದೇಶಗಳ ಸಿನಿಮಾ ಜೊತೆಗೆ ಸ್ಪರ್ಧಿಸಿತ್ತು. ಇದೀಗ ಅತ್ಯುತ್ತಮ ಹಾಡು ವಿಭಾಗದಲ್ಲಿ ಪ್ರಶಸ್ತಿ ಗೆದ್ದಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ. 

ಪ್ರಶಸ್ತಿ ಸಮಾರಂಭದಲ್ಲಿ ಆರ್‌ಆರ್‌ಆರ್‌ ತಂಡ ಹಾಜರಿತ್ತು. ಚಿತ್ರದ ಸಂಗೀತ ನಿರ್ದೇಶಕ ಎಂ. ಎಂ. ಕೀರವಾಣಿ,    ರಾಜಮೌಳಿ ದಂಪತಿ, ಜೂ. ಎನ್‌ಟಿಆರ್ ದಂಪತಿ  ಮತ್ತು ರಾಮ್ ಚರಣ್ ದಂಪತಿ ಸಹ ಭಾಗಿಯಾಗಿದ್ದರು. ಬ್ಲಾಕ್‌ಬಸ್ಟರ್‌ ಆರ್‌ಆರ್‌ಆರ್‌ ಚಿತ್ರದಲ್ಲಿ ಜೂನಿಯರ್ ಮತ್ತು ರಾಮ್ ಚರಣ್ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಮತ್ತು ಅಲಿಯಾ ಭಟ್ ನಟಿಸಿದ್ದರು.

A very special accomplishment! Compliments to , Prem Rakshith, Kaala Bhairava, Chandrabose, . I also congratulate , , and the entire team of . This prestigious honour has made every Indian very proud. https://t.co/zYRLCCeGdE

— Narendra Modi (@narendramodi)

ಕಾಂತಾರ, ವಿಕ್ರಾಂತ್ ರೋಣ, ಕಾಶ್ಮೀರ್ ಫೈಲ್ಸ್; ಆಸ್ಕರ್ ರೇಸ್‌ನಲ್ಲಿ ಭಾರತದ ಸಿನಿಮಾಗಳೆಷ್ಟು? ಇಲ್ಲಿದೆ ಸಂಪೂರ್ಣ ವಿವರ

ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬಾಚಿಕೊಂಡಿದ್ದ ಈ ಸಿನಿಮಾ ಇದೀಗ ಗೋಲ್ಡನ್ ಗ್ಲೋಬ್ಸ್‌ನಲ್ಲಿ ಪ್ರಶಸ್ತಿ ಗೆದ್ದು ಬೀಗಿದೆ. ಸದ್ಯ ಈ ಸಿನಿಮಾ ಆಸ್ಕರ್ ರೇಸ್ ನಲ್ಲಿಯ ಸ್ಪರ್ಧೆಗಿಳಿದಿದೆ. ಸದ್ಯ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದಿರುವ ಆರ್ ಆರ್ ಆರ್ ಆಸ್ಕರ್ ಮೇಲೆ ಕಣ್ಣಿಟ್ಟಿದೆ.  

click me!