ಪೀರಿಯಡ್ಸ್‌ನಿಂದ ಲವ್ ಬ್ರೇಕ್ ಅಪ್, ಪ್ರತಿ ತಿಂಗಳ ಎಕ್ಸ್‌ಟ್ರೀಮ್ ಅನುಭವ ಬಿಚ್ಚಿಟ್ಟ ಜಾಹ್ನವಿ ಕಪೂರ್!

By Chethan Kumar  |  First Published Jul 22, 2024, 7:13 PM IST

ಪ್ರತಿಯೊಬ್ಬರ ಲವ್ ಬ್ರೇಕ್‌ಗೆ ಹಲವು ಕಾರಣಗಳಿರುತ್ತದೆ. ಈ ಪೈಕೆ ಸೆಲೆಬ್ರೆಟಿಗಳು ಹಲವು ಕಾರಣಗಳನ್ನು ಬಹಿರಂಗಪಡಿಸಿದ್ದಾರೆ. ಇದೀಗ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಲವ್ ಬ್ರೇಕ್‌ಗೆ ಪೀರಿಯೆಡ್ಸ್ ಕಾರಣ ಅನ್ನೋದನ್ನು ಸ್ವತಃ ನಟಿಯೇ ಬಹಿರಂಗಪಡಿಸಿದ್ದಾರೆ.


ಮುಂಬೈ(ಜು.22) ಲವ್ ಅಟ್ ಫಸ್ಟ್ ಸೈಟ್ ಹಾಗೂ ಲವ್ ಬ್ರೇಕ್ ಅಪ್ ಎರಡೂ  ಹಲವರ ಜೀವನದಲ್ಲಿ ಮಹತ್ತರ ಬದಲಾವಣೆ ತಂದಿದೆ. ಈ ಪೈಕೆ ಸೆಲಬ್ರೆಟಿಗಳ ಪ್ರೀತಿ ವಿಚಾರ ಭಾರಿ ಸಂಚಲನ ಸೃಷ್ಟಿಸುತ್ತದೆ. ಇದೀಗ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಮೊದಲ ಲವ್ ಬ್ರೇಕ್ ಅಪ್ ಕುರಿತು ಖುದ್ದು ನಟಿ ಮನ ಬಿಚ್ಚಿ ಮಾತನಾಡಿದ್ದಾರೆ. ಪಿರಿಯಡ್ಸ್‌ನಿಂದ ಲವ್ ಬ್ರೇಕ್ ಆಗಿತ್ತು ಎಂದು ಜಾಹ್ನವಿ ಹೇಳಿದ್ದಾರೆ. ಪ್ರತಿ ತಿಂಗಳ ಪೀರಿಯಡ್ಸ್ ವೇಳೆ ಲವ್ ಬ್ರೇಕ್ ಆಗ್ತಿತ್ತು. ಇದು ಎಕ್ಸ್‌ಟ್ರೀಮ್ ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ.

ಹೌಟರ್‌ಫ್ಲೈಗೆ ನೀಡಿದ ಸಂದರ್ಶನದಲ್ಲಿ ಜಾಹ್ನವಿ ಕಪೂರ್ ತಮ್ಮ ಲವ್ ಬ್ರೇಕ್ ಹಾಗೂ ಮುಟ್ಟಿನ ಕುರಿತು ಮಾತನಾಡಿದ್ದಾರೆ. ಮುಟ್ಟಿನ ಆರಂಭದಲ್ಲಿ ನನ್ನ ಮನಸ್ಸಿ ಹಿಡಿತಕ್ಕೆ ಸಿಗುತ್ತಿರಲಿಲ್ಲ. ಪ್ರತಿ ತಿಂಗಳ ಮುಟ್ಟಿನ ವೇಳೆ ಲವ್ ಬ್ರೇಕ್ ಅಪ್ ಆಗುತ್ತಿತ್ತು. ಪ್ರತಿ ತಿಂಗಳು ಈ ರೀತಿ ಯಾಕೆ ಅನ್ನೋದೇ ತಿಳಿಯದಾಗಿತ್ತು. ಈ ಸಂದರ್ಭಗಳು ವಿಪರೀತವಾಗಿತ್ತು ಎಂದು ಜಾಹ್ನವಿ ಹೇಳಿದ್ದಾರೆ. 

Tap to resize

Latest Videos

ವಜ್ರಲೇಪಿತ ಟಾಪ್‌ಲೆಸ್ ಗೌನ್ ಧರಿಸಿ ಪೋಸ್ ಕೊಟ್ಟ ಜಾಹ್ನವಿ ಕಪೂರ್; ನಿನ್ನಂದಕೆ ನಿನ್ನಮ್ಮನೇ ಸರಿಸಾಟಿ ಎಂದ ಫ್ಯಾನ್ಸ್

ಮುಟ್ಟಿನ ಆರಂಭಿಕ ದಿನಗಳಲ್ಲಿ ಜಾಹ್ನವಿ ಕಪೂರ್ ಅನುಭವಿಸಿದ ಮಾನಸಿಕ ಚಂಚಲತೆ ಕುರಿತು ಮಾತನಾಡಿದ್ದಾರೆ. ಪ್ರತಿ ತಿಂಗಳು ಮುಟ್ಟಿನ ಸಂದರ್ಭದಲ್ಲಿ ನನ್ನ ಮನಸ್ಸು ಬದಲಾಗುತ್ತಿತ್ತು. ಈ ಸಂದರ್ಭವನ್ನು ಎದುರಿಸಲು ಕಷ್ಟವಾಗುತ್ತಿತ್ತು. ಮುಟ್ಟಿನ ಸಂದರ್ಭದಲ್ಲಿ ಈ ಪ್ರೀತಿ ಯಾಕೆ ? ಬ್ರೇಕ್ ಅಪ್ ಮಾಡಿಕೊಳ್ಳಬೇಕು ಎನಿಸುತ್ತಿತ್ತು. ಹೀಗಾಗಿ ಆತನೊಂದಿಗೆ ಬ್ರೇಕ್ ಮಾಡಿಕೊಳ್ಳುತ್ತಿದ್ದೆ. ಮುಟ್ಟಾದ ಕೆಲ ದಿನಗಳ ವರೆಗೆ ನನ್ನ ಯಾವುದರಲ್ಲಿ ಆಸಕ್ತಿ ಇಲ್ಲದೆ ಮೂಡಿಯಾಗಿರುತ್ತಿದ್ದೆ. ಹೀಗಾಗಿ ಆತನೊಂದಿಗೆ ಬ್ರೇಕ್ ಅಪ್ ಮಾಡಿಕೊಳ್ಳುತ್ತಿದೆ.

ಮುಟ್ಟಿನ ಪರಿಣಾನ ನನ್ನಲ್ಲಿ ಹಲವು ಬದಲಾವಣೆ ತರುತ್ತಿತ್ತು. ಕನಿಷ್ಠ 2 ರಿಂದ 3 ತಿಂಗಳು ಸಮಸ್ಯೆ ಎದುರಾಗುತ್ತಿತ್ತು. ವಿಪರ್ಯಾಸ ಎಂದರೆ ಪ್ರತಿ ತಿಂಗಳ ಮುಟ್ಟಿನ ವೇಳೆ ಇದೇ ರೀತಿ ಆಗುತ್ತಿತ್ತು. ಬಳಿಕ ಕೊಂಚ ಸುಧಾರಿಸಿಕೊಂಡ ಬಳಿಕ ಮತ್ತೆ ಆತನ ಬಳಿ ಸಾರಿ ಕೇಳುತ್ತಿದ್ದೆ. ಆರಂಭಿಕ ಕೆಲ ವರ್ಷಗಳ ಕಾಲ ಹೀಗೆ ಮಂದುವರಿದಿತ್ತು. ಮುಟ್ಟು ಎಂದರೆ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ವ್ಯತಿರಿಕ್ತ ಪರಿಣಾಮ ಸಂಬಂಧದ ಮೇಲೆ ಬಿರುಕು ಮೂಡುವಂತೆ ಮಾಡಿತ್ತು ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ.

 

 

ಮುಟ್ಟು ಹಾಗೂ ಲವ್ ಬ್ರೇಕ್ ಕುರಿತು ಮಾತನಾಡಿದ ಜಾಹ್ನವಿ ಕಪೂರ್ ಇದೇ ವೇಳೆ ತಾವು ಒಮ್ಮೆ ಮಾತ್ರ ಪ್ರೀತಿಯಿಂದ ನೋವು ಅನುಭವಿಸಿರುವುದಾಗಿ ಹೇಳಿದ್ದಾರೆ. ಒಂದು ಬಾರಿ ಬ್ರೇಕ್ ಲವ್ ಬ್ರೇಕ್ ಅಪ್ ಆಗಿದೆ. ಬಳಿಕ ಆತನೇ ನನ್ನ ಬಳಿ ಪ್ರೀತಿ ಅರಸಿದ್ದ. ಒಂದು ಬಾರಿ ಪ್ರೀತಿಯ ನೋವು ಅನುಭವಿಸಿದ್ದೇನೆ ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ.

ಜಾಹ್ನವಿ ಕಪೂರ್ ಸದ್ಯ ಶಿಖರ್ ಪಹಾಡಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಲೇ ಇದೆ. ಹಲವು ಬಾರಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದೆ. ಶಿಖರ್ ಪಹಾಡಿಯಾ ಜೊತೆಗಿನ ಡೇಟಿಂಗ್ ಕುರಿತು ಜಾಹ್ನವಿ ಕೆಲ ಬಾರಿ ಮಾತನಾಡಿದ್ದಾರೆ.

ಶ್ರೀದೇವಿ ಮೂರನೇ ಮಗಳ ಬಗ್ಗೆ ನಿಮಗೆ ಗೊತ್ತಿದೆಯಾ? ಈ ಸೀಕ್ರೆಟ್ ರಿವೀಲ್ ಆಗಿದ್ದೇಗೆ?
 

click me!