'ಜಾನ್ವಿ ಕಪೂರ್‌ ಕಣ್ಣು-ತುಟಿ ಹೊಗಳಿದ್ರೆ ಸೊಂಟ-ಎದೆ ತೋರಿಸ್ತೀರಾ..': ಪೆದ್ದಿಸಿನಿಮಾದ ಎಡಿಟರ್‌ಗೆ ಕ್ಲಾಸ್ ತಗೊಂಡ ನೆಟ್ಟಿಗರು

Published : Jun 05, 2026, 06:01 PM IST
Peddi Movie janhvi

ಸಾರಾಂಶ

ರಾಮ್ ಚರಣ್ ಅಭಿನಯದ 'ಪೆದ್ದಿ' ಚಿತ್ರವು ನಾಯಕಿ ಜಾನ್ವಿ ಕಪೂರ್ ಅವರ 'ಅಚ್ಚಿಯಮ್ಮ' ಪಾತ್ರದ ಲೈಂಗಿಕೀಕರಣ ಮತ್ತು ವಸ್ತುವಿನಂತೆ ಬಿಂಬಿಸಿದ್ದಕ್ಕಾಗಿ ತೀವ್ರ ವಿವಾದಕ್ಕೆ ಸಿಲುಕಿದೆ. ನಿರ್ದೇಶಕ ಬುಚ್ಚಿಬಾಬು ಸನಾ ಮತ್ತು ನಟ ರಾಮ್ ಚರಣ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರು (ಜೂ.5): ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ಕ್ರೀಡಾ ಆಧಾರಿತ ಅದ್ಧೂರಿ ಚಿತ್ರ 'ಪೆದ್ದಿ' (Peddi) ಈಗ ಭಾರಿ ವಿವಾದದ ಕೇಂದ್ರಬಿಂದುವಾಗಿದೆ. ಚಿತ್ರದ ಬೃಹತ್‌ ಕ್ಯಾನ್‌ವಾಸ್‌ಅನ್ನು ಪಕ್ಕಕ್ಕಿಟ್ಟು, ಇಡೀ ಸಿನಿಮಾದಲ್ಲಿ ನಾಯಕಿ ಜಾನ್ವಿ ಕಪೂರ್‌ ನಿರ್ವಹಿಸಿರುವ 'ಅಚ್ಚಿಯಮ್ಮ' (Achiyyamma) ಪಾತ್ರವನ್ನು ತೋರಿಸಿರುವ ಧಾಟಿ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ನಿರ್ದೇಶಕ ಬುಚ್ಚಿಬಾಬು ಸನಾ ಹಾಗೂ ಮುಖ್ಯ ನಟ ರಾಮ್ ಚರಣ್ ಅವರು ಈ ಮಹಿಳಾ ಪಾತ್ರವನ್ನು ಕೇವಲ ಕಣ್ಣಿನ ಸುಖದ ವಸ್ತು ಅಥವಾ ಲೈಂಗಿಕವಾಗಿ ಬಿಂಬಿಸಿದ್ದಾರೆ (Hypersexualisation & Objectifying) ಎಂದು ಸಿನಿಪ್ರೇಕ್ಷಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಖ್ಯವಾಹಿನಿ ಸಿನಿಮಾಗಳಲ್ಲಿ ಮಹಿಳೆಯರ ಸಮ್ಮತಿ (Consent) ಮತ್ತು ಅವರ ಪಾತ್ರದ ಘನತೆಯ ಕುರಿತಾದ ಚರ್ಚೆ ಈ ಮೂಲಕ ಮತ್ತೆ ಮುನ್ನೆಲೆಗೆ ಬಂದಿದೆ.

ಕಣ್ಣು-ತುಟಿಗಳ ಹೊಗಳಿಕೆಗೆ ಸೊಂಟ-ಎದೆಯ ದೃಶ್ಯಗಳು: ಎಡಿಟರ್ ವಿರುದ್ಧ ಕಿಡಿ

ಚಿತ್ರದಲ್ಲಿ ಅಚ್ಚಿಯಮ್ಮ ಪಾತ್ರಕ್ಕೆ ಕಥೆಯಲ್ಲಿ ಯಾವುದೇ ಸ್ವತಂತ್ರ ಅಸ್ತಿತ್ವ ಅಥವಾ ಪ್ರಾಮುಖ್ಯತೆ ನೀಡಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. 'ನಾಯಕಿಗೆ ಒಂದು ಯೋಗ್ಯವಾದ ಪಾತ್ರ ಸಿಗಬೇಕಿತ್ತು. ಆದರೆ ಅದರ ಬದಲಿಗೆ ಕೇವಲ ಅಶ್ಲೀಲ, ಅವಮಾನಕರ ಮತ್ತು ವಸ್ತುವಿನಂತೆ ಬಿಂಬಿಸುವ ದೃಶ್ಯಗಳನ್ನು ಒಟ್ಟಿಗೆ ಪೋಣಿಸಿ ಅದಕ್ಕೊಂದು ಪಾತ್ರ ಎಂದು ಹೆಸರಿಡಲಾಗಿದೆ' ಎಂದು ಯೂಸರ್‌ ಒಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಸಿನಿಮಾದ ಪ್ರಮುಖ ದೃಶ್ಯವೊಂದರ ತಾಂತ್ರಿಕ ಲೋಪವನ್ನು ಎತ್ತಿಹಿಡಿಯಲಾಗಿದೆ. 'ನಾಯಕ ನಟ ಚಿತ್ರದಲ್ಲಿ ನಾಯಕಿಯ ಕಣ್ಣು ಹಾಗೂ ತುಟಿಗಳನ್ನು ಹೊಗಳುತ್ತಾ ವರ್ಣಿಸುತ್ತಾನೆ. ಆದರೆ ಕ್ಯಾಮೆರಾ ಮಾತ್ರ ಆಕೆಯ ಎದೆ ಮತ್ತು ಸೊಂಟದ ಭಾಗದ ಮೇಲೆ ಕಟ್ ಆಗುತ್ತದೆ. ಕಣ್ಣು ಎಲ್ಲಿರುತ್ತೆ, ತುಟಿ ಎಲ್ಲಿರುತ್ತೆ ಅಂತ ಗೊತ್ತಿಲ್ಲದಷ್ಟು ನಮ್ಮ ಎಡಿಟರ್ ಮದ್ದಬುದ್ದಿಯವರೇ' ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ನಟನೆಯೇ ಬರಲ್ಲ, ಆದ್ರೂ ಪ್ರತಿ ಸಿನಿಮಾದಲ್ಲಿದ್ದಾರೆ: ಜಾನ್ವಿ ಕಪೂರ್ ಮೇಲೂ ಮುನಿಸು

ಈ ವಿವಾದದಲ್ಲಿ ಕೇವಲ ಚಿತ್ರತಂಡ ಮಾತ್ರವಲ್ಲದೆ, ಸ್ವತಃ ಜಾನ್ವಿ ಕಪೂರ್ ಅವರೂ ಕೂಡ ಟೀಕೆಗೆ ಒಳಗಾಗಿದ್ದಾರೆ. ಆಕೆ ಇಂತಹ ಲೈಂಗಿಕ ಪ್ರಚೋದಕ ಪಾತ್ರವನ್ನು ಒಪ್ಪಿಕೊಳ್ಳಬಾರದಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

'ಜಾನ್ವಿಗೆ ಸರಿಯಾಗಿ ನಟನೆಯಾಗಲಿ ಅಥವಾ ನೃತ್ಯವಾಗಲಿ ಬರುವುದಿಲ್ಲ, ಈಗಾಗಲೇ 20 ಕ್ಕೂ ಹೆಚ್ಚು ಫ್ಲಾಪ್ ಸಿನಿಮಾಗಳನ್ನು ಕೊಟ್ಟಿದ್ದರೂ ಪ್ರತಿ ಎರಡನೇ ಸಿನಿಮಾದಲ್ಲಿ ಆಕೆಯೇ ಇರುತ್ತಾಳೆ' ಎಂದು ಎಕ್ಸ್‌ನಲ್ಲಿ ಒಬ್ಬರು ಬರೆದುಕೊಂಡಿದ್ದಾರೆ.

ಹಿಂದಿ ಭಾಷೆಯಲ್ಲಿ ಪೋಸ್ಟ್ ಮಾಡಿರುವ ಮತ್ತೊಬ್ಬರು, ಜಾನ್ವಿ ಕಪೂರ್ ಅವರ ಬಾಹ್ಯ ನೋಟದ ಬಗ್ಗೆ ವೈಯಕ್ತಿಕವಾಗಿ ಟೀಕಿಸುತ್ತಾ, 'ಇದು ದಕ್ಷಿಣ ಅಥವಾ ಬಾಲಿವುಡ್ ಚಿತ್ರರಂಗದ ತಪ್ಪಲ್ಲ. ಜಾನ್ವಿ ಬಳಿ ಯಾವುದೇ ನಟನಾ ಕೌಶಲ್ಯ ಅಥವಾ ವೈವಿಧ್ಯತೆ ಇಲ್ಲ. ಕಥೆಯಲ್ಲಿ ಒಳ್ಳೆಯ ಕಂಟೆಂಟ್ ಇಲ್ಲದೆ ಕೇವಲ 1000 ಕೋಟಿ ಗಳಿಸುವ ಇಂತಹ ಬಾಕ್ಸ್ ಆಫೀಸ್ ಹುಚ್ಚುತನ ಹೇಗೆ ನಡೆಯುತ್ತೆ?" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ನಟಿಯರು ಇಂತಹ ವಿಷಯಗಳಲ್ಲಿ ಕಠಿಣ ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ. ಜಾನ್ವಿ ಈ ಅನುಭವದಿಂದ ಕಲಿಯಬೇಕಿದೆ' ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಮೇಕರ್ಸ್ ಕಳಪೆ ಪಾತ್ರ ಬರೆಯುವುದನ್ನು ನಿಲ್ಲಿಸಬೇಕು ಮತ್ತು ನಟಿಯರು ಕೂಡ ತಮಗೆ ಗೌರವಯುತ ಪಾತ್ರ ಸಿಗುವಂತೆ ಡಿಮ್ಯಾಂಡ್ ಮಾಡಬೇಕು ಎಂದು ಚರ್ಚೆ ನಡೆದಿದೆ.

ನಾಯಕ ಬೈದರೆ ನಾಯಕಿ ಪ್ರೀತಿಸಬೇಕಾ?: ನಿರ್ದೇಶಕ ಬುಚ್ಚಿಬಾಬುಗೆ ಪ್ರಶ್ನೆ

ಚಿತ್ರದ ಮತ್ತೊಂದು ಆಕ್ಷೇಪಾರ್ಹ ದೃಶ್ಯದ ಬಗ್ಗೆ ನಿರ್ದೇಶಕ ಬುಚ್ಚಿಬಾಬು ಸನಾ ಅವರನ್ನು ತರಾಟೆಗೆ ತೆಗೆದುಕೊಂಡಿರುವ ನೆಟ್ಟಿಗರು, 'ಚಿತ್ರದಲ್ಲಿ ನಾಯಕಿಯ ಸೌಂದರ್ಯ ತೋರಿಸುವುದು ಅಥವಾ ಆಕೆ ನಡೆಯುವ ಶೈಲಿಯ ಬಗ್ಗೆ ನನಗೆ ಆಕ್ಷೇಪವಿಲ್ಲ. ಆದರೆ ನಾಯಕ ರಾಮ್ ಚರಣ್ ಚಿತ್ರದಲ್ಲಿ ನಾಯಕಿಯನ್ನು ನಿಂದಿಸುತ್ತಾನೆ (Abuse) ಮತ್ತು ಅದಕ್ಕೆ ನಾಯಕಿ ಆತನ ಪ್ರೀತಿಯಲ್ಲಿ ಬೀಳುತ್ತಾಳೆ. ಕ್ಷಮಿಸಿ ಬುಚ್ಚಿಬಾಬು ಸನಾ, ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ನಾನು ಈ ಚಿತ್ರವನ್ನು ಬಲವಾಗಿ ವಿರೋಧಿಸುತ್ತೇನೆ" ಎಂದು ಬರೆದಿದ್ದಾರೆ. ಇನ್ನೊಬ್ಬರು ಜಾನ್ವಿ ಕಪೂರ್ ಪರಿಸ್ಥಿತಿ ನೋಡಿ ಮರುಕ ವ್ಯಕ್ತಪಡಿಸಿದ್ದಾರೆ. ಈ ವಿವಾದಿತ ಚಿತ್ರದಲ್ಲಿ ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಹೊರತಾಗಿ ವಿಜಯ್ ಸೇತುಪತಿ, ಬೋಮನ್ ಇರಾನಿ, ದಿವ್ಯೇಂದು ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ವೈರಲ್ ಆದ ಜಾನ್ವಿ ಕಪೂರ್ ಹಳೇ ಇಂಟರ್ವ್ಯೂ ವಿಡಿಯೋ

ಈ ಇಡೀ ವಿವಾದದ ನಡುವೆ, ಈ ಹಿಂದೆ ಏಪ್ರಿಲ್ ತಿಂಗಳಲ್ಲಿ ರಾಜ್ ಶಮಾನಿ ಅವರ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಜಾನ್ವಿ ಕಪೂರ್ ಮಾತನಾಡಿದ್ದ ಹಳೇ ವಿಡಿಯೋ ತುಣುಕೊಂದು ಈಗ ಮತ್ತೆ ಭಾರಿ ವೈರಲ್ ಆಗುತ್ತಿದೆ.

ಇಲ್ಲಿ ಮಾತನಾಡಿದ್ದ ಜಾನ್ವಿ, 'ಚಿತ್ರನಿರ್ಮಾಪಕರು ನಿಮ್ಮನ್ನು ಅತಿಹೆಚ್ಚು ಲೈಂಗಿಕವಾಗಿ (Oversexualised) ಬಿಂಬಿಸಿದಾಗ ನಿಮಗೆ ಬೇಸರವಾಗುತ್ತದೆಯೇ?' ಎನ್ನುವ ಪ್ರಶ್ನೆಗೆ, 'ಅದು ನಾನು ಯಾವುದಕ್ಕೆ ಸಮ್ಮತಿ (Consent) ನೀಡಿದ್ದೇನೆ ಎಂಬುದರ ಮೇಲೆ ಆಧಾರಿತವಾಗಿರುತ್ತದೆ. ಉದಾಹರಣೆಗೆ, ನಾನು 'ಪರಮ್ ಸುಂದರಿ' ಚಿತ್ರದಲ್ಲಿ 'ಭೀಗಿ ಸಾರಿ' (Bheegi Saree) ಎಂಬ ಹಾಡನ್ನು ಮಾಡಿದ್ದೆ. ಅಲ್ಲಿ ನಾನು ಒದ್ದೆ ಸೀರೆಯಲ್ಲಿ ಅತ್ಯಂತ ಮಾದಕವಾಗಿ ನರ್ತಿಸಿದ್ದೇನೆ. ಅದು ಲೈಂಗಿಕವಾಗಿ ಪ್ರಚೋದಿಸುವುದಕ್ಕಾಗಿ ಅಲ್ಲದಿದ್ದರೂ ಅದೊಂದು ಮಾದಕ ಹಾಡಾಗಿತ್ತು. ಆ ಹಾಡನ್ನು ನೋಡಿ ಯಾರಾದರೂ ಆಕೆಗೆ ಗ್ಲಾಮರ್ ಇಲ್ಲ ಎಂದರೆ ನನಗೆ ಬೇಸರವಾಗಬಹುದು. ಆದರೆ, ಒಬ್ಬ ವ್ಯಕ್ತಿಯ ಸಮ್ಮತಿ ಇಲ್ಲದೆ ಆಕೆಯನ್ನು ಲೈಂಗಿಕ ವಸ್ತುವಿನಂತೆ ನೋಡುವುದು ಸಂಪೂರ್ಣವಾಗಿ ಬೇರೆ ವಿಷಯ. ಯಾವುದೇ ರೂಪದಲ್ಲೂ ಸಮ್ಮತಿ ಇಲ್ಲದ ಇಂತಹ ಲೈಂಗಿಕೀಕರಣವನ್ನು ನಾನು ಒಪ್ಪುವುದಿಲ್ಲ ಮತ್ತು ಅದು ನನಗೆ ತೀವ್ರ ಮುಜುಗರ ಉಂಟುಮಾಡುತ್ತದೆ' ಎಂದು ಹೇಳಿದ್ದರು.

ಪ್ರಸ್ತುತ 'ಪೆದ್ದಿ' ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದರೂ, ಇಂಟರ್ನೆಟ್‌ನಲ್ಲಿ ಮಾತ್ರ ಸಿನಿಮಾಗಳಲ್ಲಿ ಸೆನ್ಶುವಾಲಿಟಿ (ಮಾದಕತೆ) ಮತ್ತು ಸೆಕ್ಷುಅಲೈಸೇಶನ್ (ಲೈಂಗಿಕೀಕರಣ) ನಡುವಿನ ಗೆರೆ ಎಲ್ಲಿರಬೇಕು ಎನ್ನುವ ಗಂಭೀರ ಚರ್ಚೆ ಇನ್ನೂ ಮುಂದುವರಿದಿದೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಿಎಂ ಮಗನ ಬಗ್ಗೆ ಅಮ್ಮ ಶೋಭಾ ಚಂದ್ರಶೇಖರ್ ಹೇಳಿದ್ದೇನು? ಈ ಸೀಕ್ರೆಟ್ ಇನ್ನೂತನಕ ಹೊರಬಿದ್ದಿರಲಿಲ್ಲ!
ದೇವಿಯ ರೌದ್ರಾವತಾರದಂತೆ ಇರುತ್ತೆ: 'ಬ್ಲಾಸ್ಟ್' ಚಿತ್ರದ ಸೀರೆ ಫೈಟ್ ಬಗ್ಗೆ ದರ್ಶನ್ ಹೀರೋಯಿನ್ ಮಾತು!