Pawan Kalyan ಇನ್​ಸ್ಟಾದಲ್ಲಿ ಮೊದಲ ಪೋಸ್ಟ್ ಶೇರ್​- ನಾಲ್ವರು ಕನ್ನಡಿಗರಿಗೆ ವಿಶೇಷ ಸ್ಥಾನ

By Suvarna News  |  First Published Jul 16, 2023, 12:49 PM IST

ಈಚೆಗಷ್ಟೇ ಇನ್​ಸ್ಟಾಗ್ರಾಮ್​ ತೆರೆದು ದಾಖಲೆ ಸೃಷ್ಟಿಸಿದ್ದ ನಟ ಪವನ್​ ಕಲ್ಯಾಣ್​, ಇದೀಗ ಮೊದಲ ಪೋಸ್ಟ್​ ಶೇರ್​ ಮಾಡಿದ್ದಾರೆ. ಅದರಲ್ಲಿ ನಾಲ್ವರು ಸ್ಯಾಂಡಲ್​ವುಡ್​ ತಾರೆಯರನ್ನು ನೆನಪಿಸಿಕೊಂಡಿದ್ದಾರೆ. 
 


ಪವರ್ ಸ್ಟಾರ್ ಪವನ್ ಕಲ್ಯಾಣ್ ಇತ್ತೀಚೆಗೆ ಬಿಗ್​ ಸ್ಕ್ರೀನ್​ನಿಂದ ಕಣ್ಮರೆಯಾಗಿದ್ದರೂ, ಸಕತ್​ ಸುದ್ದಿಯಾಗುತ್ತಲೇ ಇದ್ದಾರೆ. ನಟನೆ ಜೊತೆಗೆ ಜನಸೇನಾ ಪಕ್ಷವನ್ನು ಸ್ಥಾಪಿಸಿ ರಾಜಕೀಯವಾಗಿಯೂ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸದ್ದು ಮಾಡುತ್ತಿರುವ  'ಪವರ್ ಸ್ಟಾರ್' ಪವನ್ ಕಲ್ಯಾಣ್​ (Pawan Kalyan) ಚಲನಚಿತ್ರ ನಟ ಮಾತ್ರವಲ್ಲದೇ ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ, ಬರಹಗಾರ ಮತ್ತು ರಾಜಕಾರಣಿ ಕೂಡ.  ಭಾರತದ 2013 ರ ಫೋರ್ಬ್ಸ್ ಟಾಪ್ 100 ಖ್ಯಾತನಾಮರ ಪಟ್ಟಿಯಲ್ಲಿ ಅವರು 26 ನೇ ಸ್ಥಾನ ಪಡೆದ  ನಟ ಇವರು. ಇಷ್ಟೆಲ್ಲಾ ಫೇಮಸ್​  ಆಗಿದ್ರೂ ಮದುವೆಯ ವಿಷಯಕ್ಕೆ ಬಂದಾಗ ಮಾತ್ರ ಸದಾ ಟ್ರೋಲ್​ ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ ಕೂಡ ಮದುವೆಯ ವಿಷಯದಲ್ಲಿ ಕಾಂಟ್ರವರ್ಸಿ (Contraversy) ಆಗಿತ್ತು.  ಇದಾಗಲೇ ಎರಡು ಮಂದಿಗೆ ಡಿವೋರ್ಸ್​ ಕೊಟ್ಟಿದ್ದು, ಮೂರನೆಯ ಮದುವೆಯಾಗಿದ್ದಾರೆ. ಆದರೆ ಇದೀಗ ಮೂರನೆಯ ಪತ್ನಿಯೂ ಡಿವೋರ್ಸ್​ ಕೊಟ್ಟುಬಿಟ್ರಾ ಎಂದು ಸಕತ್​ ಗಾಳಿ ಸುದ್ದಿ ಓಡಾಡುತ್ತಿತ್ತು.  ಆದರೆ  ಈ ಸುದ್ದಿಗೆ ತೆರೆ ಬೀಳಿಸಿದ್ದ ನಟ,  ಪತ್ನಿಯ ಜೊತೆಗಿನ ಫೋಟೋ ಶೇರ್​ ಮಾಡಿದ್ದರು. ಈ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದರು.

ಇದಾದ ಬಳಿಕ ಪವನ್​ ಕಲ್ಯಾಣ್​ ಅವರ ಕುರಿತು ದೊಡ್ಡದೊಂದು ಸುದ್ದಿ ಸದ್ದು ಮಾಡಿತ್ತು. ಅದೇನೆಂದರೆ, ಅವರ ಇನ್​ಸ್ಟಾಗ್ರಾಮ್​ ಖಾತೆ. ಹೊಸದಾಗಿ ಇನ್​ಸ್ಟಾಗ್ರಾಮ್​ ಖಾತೆ ಓಪನ್​ ಮಾಡಿದ್ದ ನಟ,   ದಿಢೀರ್ ಅಂತ ಇನ್‌ಸ್ಟಾಗ್ರಾಂಗೆ(Instagram) ಎಂಟ್ರಿ ಕೊಟ್ಟರು. ಅಚ್ಚರಿಯ ಸಂಗತಿ ಎಂದರೆ,  ಇವರು ಇನ್‌ಸ್ಟಾಗ್ರಾಂಗೆ ಬಂದ ಕೇವಲ ಒಂದೂವರೆ ಗಂಟೆಯಲ್ಲಿ 10 ಲಕ್ಷ ಮಂದಿ ಫಾಲೋವಸ್​ಗಳನ್ನು  (Followers) ಗಳಿಸಿ ದಾಖಲೆಯನ್ನೇ ಮಾಡಿದರು.  ಈ ದಾಖಲೆಯನ್ನು ತೆಲುಗಿನ ಇನ್ಯಾವುದೇ ನಟರೂ ಮಾಡಿಲ್ಲ ಎನ್ನುವುದು ವಿಶೇಷ. ನಟ ಪ್ರಭಾಸ್ ಇನ್​ಸ್ಟಾಗ್ರಾಮ್​ಗೆ  ಬಂದಾಗ ಹತ್ತು ಲಕ್ಷ ಫಾಲೋವರ್ ಗಳಿಸಲು 23 ದಿನ ಹಿಡಿದಿತ್ತು. ಮಹೇಶ್ ಬಾಬುಗೂ ಹೀಗೆಯೇ  ಆಗಿತ್ತು. ಆದರೆ ಪವನ್​ ಅವರಿಗೆ 10 ಲಕ್ಷ ಮಂದಿ ಫಾಲೋವರ್‌ಗಳು ಕೇವಲ ಒಂದೂವರೆ ಗಂಟೆಯಲ್ಲಿ ಸಿಕ್ಕಿಬಿಟ್ಟರು.

Tap to resize

Latest Videos

ಮೂರನೇ ಪತ್ನಿ ಜೊತೆ ಪೂಜೆಯಲ್ಲಿ ಪಾಲ್ಗೊಂಡ ಪವನ್ ಕಲ್ಯಾಣ್: ಡಿವೋರ್ಸ್ ಗಾಳಿಸುದ್ದಿಗೆ ತೆರೆ 

ಆದರೆ ವಿಚಿತ್ರ ಅಂದ್ರೆ ಪವನ್ ಕಲ್ಯಾಣ್ ಈ ವರೆಗೆ ಒಂದೂ ಪೋಸ್ಟ್ ಮಾಡಿಲ್ಲ. ಪವನ್ ಕಲ್ಯಾಣ್ ಯಾರನ್ನೂ ಫಾಲೋ ಮಾಡುತ್ತಿಲ್ಲ ಎನ್ನುವ ಕೊರಗು ಅಭಿಮಾನಿಗಳನ್ನು ಕಾಡುತ್ತಿತ್ತು. ಇದೀಗ ನಟ, ಅಭಿಮಾನಿಗಳ ಕುತೂಹಲವನ್ನು ತಣಿಸಿದ್ದಾರೆ. ಮೊದಲ  ಇನ್​ಸ್ಟಾಗ್ರಾಂ ಪೋಸ್ಟ್​ ಶೇರ್​ ಮಾಡಿದ್ದಾರೆ. ಇದರಲ್ಲಿ ಹಲವಾರು ನಟರು ಹಾಗೂ ಸಿನಿ ದಿಗ್ಗಜರ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ. ಆದರೆ ಇದರಲ್ಲಿ ವಿಶೇಷವಾಗಿ ಕಂಡಿರುವುದು ತಮ್ಮ ಮೊದಲ ಇನ್​ಸ್ಟಾಗ್ರಾಮ್​ ಪೋಸ್ಟ್​ನಲ್ಲಿ (Instagram post) ಪವನ್​ ಅವರು ನಾಲ್ವರು  ಕನ್ನಡದ ನಟರನ್ನು ನೆನಪಿಸಿಕೊಂಡಿರುವುದು! ಹೌದು. ನಟ ಪವನ್​ ಕಲ್ಯಾಣ್​ ನಾಲ್ವರು ಸ್ಯಾಂಡಲ್​ವುಡ್​ ನಟರನ್ನು ತಮ್ಮ ಮೊದಲ ಪೋಸ್ಟ್​ನಲ್ಲಿ ನೆನಪಿಸಿಕೊಂಡಿದ್ದಾರೆ. ಇವರ ಜೊತೆಗಿನ ಒಟನಾಡದ ವಿಡಿಯೋ ಶೇರ್​ ಮಾಡಿದ್ದಾರೆ. ಚಿತ್ರರಂಗದ ಭಾಗವಾಗಿರುವುದಕ್ಕೆ ಹಾಗೂ ಅತ್ಯುತ್ತಮ, ಪ್ರತಿಭಾವಂತ ನಟರೊಟ್ಟಿಗೆ ಕೆಲಸ ಮಾಡಿರುವುದಕ್ಕೆ ಸಂತೋಷವಿದೆ ಎಂಬ ಶೀರ್ಷಿಕೆ ಜೊತೆಗೆ ಈ ವಿಡಿಯೋ ಶೇರ್​ ಮಾಡಲಾಗಿದೆ. 'ನಮ್ಮ ಬಂಧ ಹೀಗೆಯೇ ಮುಂದುವರೆಯುತ್ತಿರಲಿ, ಇಂಥ ಇನ್ನೂ ಹಲವು ನೆನಪುಗಳನ್ನು ನಾವು ಸೃಷ್ಟಿಸಿಕೊಳ್ಳೋಣ' ಎಂಬ ಸಾಲುಗಳೊಂದಿಗೆ ವಿಡಿಯೊ ಅಂತ್ಯವಾಗಿದೆ.  ವಿಡಿಯೋ ಹಂಚಿಕೊಂಡ ಕೇವಲ ಮೂರು ಗಂಟೆಯಲ್ಲಿ ಸುಮಾರು 6.70 ಲಕ್ಷ ಜನ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

ಅಷ್ಟಕ್ಕೂ ವಿಡಿಯೋದಲ್ಲಿ,  ಅಣ್ಣ ಮೆಗಾಸ್ಟಾರ್ ಚಿರಂಜೀವಿ (Chiranjeevi) ಪವನ್​ಗೆ ಮುತ್ತು ಕೊಡುತ್ತಿರುವ ಚಿತ್ರದ ಮೂಲಕ ವಿಡಿಯೋ ಶುರುವಾಗುತ್ತದೆ. ನಂತರ  ತೆಲುಗು ಚಿತ್ರರಂಗದ ಸ್ಟಾರ್​ಗಳಾದ ಬಾಲಕೃಷ್ಣ, ನಾಗಾರ್ಜುನ್, ವೆಂಕಟೇಶ್ ಅವರೊಟ್ಟಿಗಿನ ಪವನ್​ರ ಚಿತ್ರಗಳಿವೆ, ಜೊತೆಗೆ ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಅವರ ಚಿತ್ರವೂ ಇದೆ. ಇದೇ ವಿಡಿಯೋದಲ್ಲಿ  ಪವನ್ ಕಲ್ಯಾಣ್ ಅವರು ನಟ ಶಿವರಾಜ್ ಕುಮಾರ್ ಅವರ ಜೊತೆಗಿನ ಕ್ಷಣಗಳನ್ನು ಶೇರ್​ ಮಾಡಿದ್ದಾರೆ. ಅದಾದ ಬಳಿಕ ನಟ ಸುದೀಪ್ ಜೊತೆಗಿನ ಚಿತ್ರ, ಬಳಿಕ  ನಟ, ಸಾಹಿತಿ ಗಿರೀಶ್ ಕಾರ್ನಾಡ್ ಜೊತೆಗೆ ಕಳೆದಿರುವ ಕ್ಷಣಗಳು ಹಾಗೂ ಕೊನೆಯಲ್ಲಿ ನಟ  ಪ್ರಕಾಶ್ ರೈ (Prakash Rai) ಅವರೊಟ್ಟಿಗಿನ ಚಿತ್ರಗಳನ್ನೂ ವಿಡಿಯೋದಲ್ಲಿ ತೋರಿಸಿದ್ದಾರೆ. ಈ ಮೂಲಕ ಸ್ಯಾಂಡಲ್​ವುಡ್​ ಮೇಲಿನ ಪ್ರೀತಿಯನ್ನು ಪವನ್​ ತೋರಿಸಿದ್ದಾರೆ. 

ಪ್ರಭಾಸ್, ಮಹೇಶ್ ಬಾಬು ದಾಖಲೆ ದೂಳಿಪಟ ಮಾಡಿದ ಪವನ್ ಕಲ್ಯಾಣ್: ಅದೇನು ಗೊತ್ತಾ?

click me!