ಮೊದಲ ಸಂಭಾವನೆ ಚಾರಿಟಿಗೆ ನೀಡಿದ ಮಹೇಶ್ ಬಾಬು ಪುತ್ರಿ ಸಿತಾರಾ: ಫ್ಯಾನ್ಸ್ ಮೆಚ್ಚುಗೆ

Published : Jul 16, 2023, 10:39 AM ISTUpdated : Jul 17, 2023, 03:35 PM IST
ಮೊದಲ ಸಂಭಾವನೆ ಚಾರಿಟಿಗೆ ನೀಡಿದ ಮಹೇಶ್ ಬಾಬು ಪುತ್ರಿ ಸಿತಾರಾ: ಫ್ಯಾನ್ಸ್ ಮೆಚ್ಚುಗೆ

ಸಾರಾಂಶ

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಪುತ್ರಿ ಸಿತಾರಾ ತನ್ನ ಮೊದಲ ಸಂಭಾವನೆಯನ್ನು ಚಾರಿಗೆ ದೇಣಿಗೆ ನೀಡಿದ್ದಾರೆ. ಸಿತಾರಾ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ತೆಲುಗು ಸ್ಟಾರ್ ಮಹೇಶ್ ಬಾಬು ಮತ್ತು ನಮ್ರತಾ ಪುತ್ರಿ ಸಿತಾರಾ ಘಟ್ಟಮನೇನಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಮೊದಲೇ ಸಿತಾರಾ ಸ್ಟಾರ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಸಿತಾರಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸಿತಾರಾ ಚಿಕ್ಕ ವಯಸ್ಸಿನಲ್ಲೇ ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಸಿತಾರಾ ಜ್ಯುವೆಲ್ಲರಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಸಿತಾರಾ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದರು. 

ಸಿತಾರಾ ಫೋಟೋಗಳು ಅಮೆರಿಕಾದ ನ್ಯೂಯಾರ್ಕ್ ಸಿಟಿಯಲ್ಲಿರುವ ಟೈಮ್ಸ್ ಸ್ಕ್ರೇರ್‌ನಲ್ಲಿ ರಾರಾಜಿಸಿತ್ತು. ಜ್ಯುವೆಲ್ಲರಿ ಬ್ರಾಂಡ್ ಒಂದರ ಪ್ರಚಾರ ರಾಯಭಾರಿ ಆಗಿರುವ ಸಿತಾರಾ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದರು. ಸ್ಟಾರ್ ಕಿಡ್ ಇಷ್ಟು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಮೊತ್ತದ ಹಣ ಪಡೆಯುವ ಮೂವಕ ಅಚ್ಚರಿ ಮೂಡಿಸಿದ್ದರು. ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ತನ್ನ ಮೊದಲ ಸಂಭಾವನೆಯನ್ನು ಸಿತಾರಾ ದಾನ ಮಾಡಿದ್ದಾರಂತೆ. ಹೌದು ಜಾಹೀರಾತಿನಿಂದ ಬಂದ ದೊಡ್ಡ ಮೊತ್ತದ ಹಣವನ್ನು ಚಾರಿಟಿಗೆ ನೀಡಿದ್ದಾರೆ. 

ಸಿತಾರಾ ಅವರ ಅಭರಣ ಬ್ರಾಂಡ್‌ಗೆ ಪ್ರಿನ್ಸೆಸ್ ಎನ್ನುವ ಕಿರುಚಿತ್ರದ ಮುನ್ನೊಟ ರಿಲೀಸ್ ಮಾಡಲಾಗಿದೆ. ಈ ಸಮಾರಂಭದಲ್ಲಿ ಸಿತಾರಾ ತಾಯಿ ನಮ್ರತಾ ಜೊತೆ ಕಾಣಿಸಿಕೊಂಡಿದ್ದರು. ಮಾಧ್ಯಮದ ಜೊತೆ ಮಾತನಾಡಿದ ನಮ್ರತಾ ಮಗಳ ಮೊದಲ ಸಂಭಾವನೆಯನ್ನು ಚಾರಿಟಿಗೆ ಕೊಟ್ಟಿರುವುದಾಗಿ ಹೇಳಿದ್ದಾರೆ. ಬಳಿಕ ಸಿತಾರಾ ಮಾತನಾಡಿ ತನಗೆ ಸಿನಿಮಾಗಳನ್ನು ನೋಡುವುದು ತುಂಬಾ ಇಷ್ಟ ಮತ್ತು ಅದರಲ್ಲಿ ನಟಿಸಲು ತುಂಬಾ ಆಸಕ್ತಿಯಿದೆ ಮತ್ತು ತನ್ನ ತಾಯಿಯಿಂದ ವಿಶ್ವಾಸವನ್ನು ಪಡೆದುಕೊಂಡಿದ್ದೇನೆ ಎಂದು ಅವರು ಹೇಳಿದರು.

ಅಮೆರಿಕಾದ ಟೈಮ್ಸ್ ಸ್ಕ್ವೇರ್‌ನಲ್ಲಿ ಸಿತಾರಾ: ಮಗಳ ನೋಡಿ ಮಹೇಶ್ ಬಾಬು ಭಾವುಕ

ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಸಿಗ್ನೇಚರ್ ಜ್ಯುವೆಲ್ಲರಿ ಸಂಗ್ರಹವನ್ನು ನೋಡಿ ತನ್ನ ತಂದೆ ತುಂಬಾ ಸಂತೋಷಪಟ್ಟರು ಮತ್ತು ಜಾಹೀರಾತು ವೀಡಿಯೊವನ್ನು ನೋಡಿದಾಗ ಭಾವುಕರಾದರು ಎಂದು ಸಿತಾರಾ ಹೇಳಿದರು. ಅದೇ ವೇಳೆ ನಮ್ರತಾ ಮಾತನಾಡಿ ತಮ್ಮ ಮಗ ಗೌತಮ್ ಚಿತ್ರರಂಗಕ್ಕೆ ಪ್ರವೇಶಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸದ್ಯ ಗೌತಮ್ ಉನ್ನತ ವ್ಯಾಸಂಗದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು. ಮಹೇಶ್ ಬಾಬು ಪುತ್ರ ಗೌತಮ್ ವಿದೇಶದಲ್ಲಿ ಓದುತ್ತಿದ್ದಾರೆ.

ಮಹೇಶ್ ಬಾಬು ಜೊತೆ ನಟಿಸುವುದೇ ತನ್ನ ದೊಡ್ಡ ಕನಸು: ಮನದಾಸೆ ಬಿಚ್ಚಿಟ್ಟ ನಟಿ ಮೃಣಾಲ್ ಠಾಕೂರ್

ಸಿತಾರಾಗೆ ಇನ್ನು 11 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಬ್ರಾಂಡ್‌ಗೆ ರಾಯಭಾರಿಯಾಗಿದ್ದು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ. ಮಗಳ ಸಾಧನೆ ಬಗ್ಗೆ ಮಹೇಶ್ ಬಾಬು ಕೂಡ ಹೆಮ್ಮೆ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮಗಳ ಸಾಧನೆಯನ್ನು ಕೊಂಡಾಡಿದ್ದರು. ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಸಿತಾರಾ ಸದ್ಯದಲ್ಲೇ ನಾಯಕಿಯಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು ಅಚ್ಚರಿ ಇಲ್ಲ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!