
Pawan Kalyan ಪವನ್ ಕಲ್ಯಾಣ್(Pawan Kalyan) ಮತ್ತು ಅನ್ನಾ ಲೆಜ್ನೆವಾ ಅವರ 13 ವರ್ಷಗಳ ದಾಂಪತ್ಯ ಮುರಿದಬಿದ್ದಿದೆ. ನಿನ್ನೆ ಅಂದರೆ ನವೆಂಬರ್ 9, ಸೋಮವಾರ ರಾತ್ರಿ ದಿಢೀರನೇ ಪವನ್ ಕಲ್ಯಾಣ್ ಮತ್ತು ಅನ್ನಾ ಜಂಟಿಯಾಗಿ ಡೈವೋರ್ಸ್ ಘೋಷಣೆ ಮಾಡಿದ್ದಾರೆ. ಹದಿಮೂರು ವರ್ಷಗಳಿಂದ ದಾಂಪತ್ಯದಿಂದ ಹಿಡಿದು, ಇತ್ತೀಚಿನ ಚುನಾವಣೆ ಸಮಯದವರೆಗೂ ಅನ್ಯೋನ್ಯವಾಗಿ ದಂಪತಿ ಇದೀಗ ಏಕಾಏಕಿ ಡೈವೋರ್ಸ್ ಘೋಷಣೆ ಮಾಡಿರುವುದು ಅಭಿಮಾನಿಗಳಿಗೆ ಶಾಕ್ ಆಗಿದೆ.
ಈ ನಡುವೆ ನಿನ್ನೆ ಪವನ್ ಡೈವೋರ್ಸ್ ಘೋಷಣೆ ಮಾಡಿದ ಬೆನ್ನಲ್ಲೇ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ನಿರ್ದೇಶಕಿ ರೇಣು ದೇಸಾಯಿ ಪ್ರತಿಕ್ರಿಯಿಸಿದ್ದು, 'ಗಂಡಸರು ಮೂರು ನಾಲ್ಕು ಮದುವೆಯಾಗಬಹುದು. ಆದರೆ ಹೆಣ್ಣುಮಕ್ಕಳು ಆಗುವಂತಿಲ್ಲ...' ಎಂದು ಪವನ್ ಕಲ್ಯಾಣ್ ಉದ್ದೇಶಿಸಿಯೇ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಏಕೆಂದರೆ ಪವನ್ ಕಲ್ಯಾಣ್‌ಗೆ ಇದು ಮೂರನೇ ಡೈವೋರ್ಸ್ ಆಗಿದೆ. ರೇಣು ದೇಸಾಯಿ ಸೇರಿ ಇಬ್ಬರ ಪತ್ನಿಯ ಜೊತೆಗೂ ಪವನ್ ಕಲ್ಯಾಣ್ ಸಂಬಂಧ ಮುರಿದುಬಿದ್ದಿತ್ತು.
ಇದನ್ನೂ ಓದಿ: ಪವನ್ ಕಲ್ಯಾಣ್ ಅನ್ನ ಕೊನಿಡೇಲಾ 13 ವರ್ಷಗಳ ದಾಂಪತ್ಯ ಅಂತ್ಯ, ಡಿವೋರ್ಸ್‌ಗೆ ನಿಜವಾದ ಕಾರಣಗಳೇನು?
ಪವನ್ ಕಲ್ಯಾಣ್ ಅನ್ನಾ ಲೆಜ್ನೆವಾ ಅವರನ್ನ ಮದುವೆಯಾಗುವ ಮೊದಲು ನಟಿ-ನಿರ್ದೇಶಕಿ ರೇಣು ದೇಸಾಯಿ ಅವರೊಂದಿಗೆ ಮದುವೆಯಾಗಿದ್ದರು. ಆದರೆ 2009ರಲ್ಲಿ ಮದುವೆಯಾಗಿದ್ದ ಪವನ್ ಕಲ್ಯಾಣ್ ಅನಂತರ ಇಬ್ಬರ ನಡುವೆ ದಾಂಪತ್ಯದಲ್ಲಿ ಬಿರುಕು ಮೂಡಿ 2012ರಲ್ಲಿ ವಿಚ್ಛೇದನ ನೀಡಿದ್ದರು. ಅಷ್ಟೇ ಅಲ್ಲದೆ ರೇಣು ದೇಸಾಯಿಗೆ ವಿಚ್ಛೇದನ ನೀಡಿದ ಒಂದೇ ವರ್ಷದೊಳಗೆ ಅಂದರೆ 2013 ರಲ್ಲಿ ರಷ್ಯಾ ಪ್ರಜೆಯಾದ ಅನ್ನಾ ಅವರನ್ನು ಮದುವೆಯಾಗಿದ್ದರು. ರೇಣು ದೇಸಾಯಿಗೆ ಅವರಿಗೆ ಒಬ್ಬ ಮಗ, ಮಗಳು ಇದ್ದಾರೆ. ಪವನ್ ಕಲ್ಯಾಣ್ ಜೊತೆಗಿನ ಸಂಬಂಧ ಮುರಿದುಬಿದ್ದ ನಂತರ ಅವರು ಇಂದಿನವರೆಗೆ ಸೌಹಾರ್ದಯುತ ಸಂಬಂಧ ಹಾಗೆಯೇ ಉಳಿಸಿಕೊಂಡಿದ್ದರೂ ರೇಣು ದೇಸಾಯಿ ತನ್ನ ಹಿಂದಿನ ಮದುವೆಯಿಂದಾಗಿ ಪವನ್ ಫ್ಯಾನ್ಸ್, ನೆಟಿಜನ್ ನಿಂದ ಅನವಶ್ಯವಾಗಿ ಟ್ರೋಲ್‌ಗೆ ಒಳಗಾಗಿದ್ದರು. ಇಂದಿಗೂ ಅವರನ್ನು ಮಾಜಿ ಪತ್ನಿ ಎಂದು ಗುರುತಿಸಿಕೊಳ್ಳದಂತೆ ಪ್ರಯತ್ನ ಪಡುತ್ತಲೇ ಇದ್ದಾರೆ. ಇದರ ಬೆನ್ನಲ್ಲೇ ಇದೀಗ ಅನ್ನಾಳ ಜೊತೆಗೂ ದಾಂಪತ್ಯ ಮುರಿದುಬಿದ್ದಿದೆ.
….
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.